• Home
 • »
 • News
 • »
 • national-international
 • »
 • ತೆಲಂಗಾಣ, ಆಂಧ್ರದಲ್ಲಿ ಅವಾಂತರ ಸೃಷ್ಟಿಸಿದ ಮಳೆ; ಪ್ರವಾಹಕ್ಕೆ ಕೊಚ್ಚಿ ಹೋಗುತ್ತಿರುವ ಜನರು, ವಾಹನಗಳು

ತೆಲಂಗಾಣ, ಆಂಧ್ರದಲ್ಲಿ ಅವಾಂತರ ಸೃಷ್ಟಿಸಿದ ಮಳೆ; ಪ್ರವಾಹಕ್ಕೆ ಕೊಚ್ಚಿ ಹೋಗುತ್ತಿರುವ ಜನರು, ವಾಹನಗಳು

ತೆಲಂಗಾಣದಲ್ಲಿ ಪ್ರವಾಹ ಉಂಟು ಮಾಡಿರುವ ಮಳೆ

ತೆಲಂಗಾಣದಲ್ಲಿ ಪ್ರವಾಹ ಉಂಟು ಮಾಡಿರುವ ಮಳೆ

Telangana, Andhra Pradesh Floods : ವರಣುನ ಅಬ್ಬರಕ್ಕೆ 2 ತಿಂಗಳ ಹಸುಗೂಸು ಸೇರಿದಂತೆ 12 ಮಂದಿ ಸಾವನ್ನಪ್ಪಿದ್ದಾರೆ. ಮಳೆಯಿಂದ ಗೋಡೆ ಕುಸಿದ ಪರಿಣಾಮ 9 ಜನ ಸಾವನ್ನಪ್ಪಿದ್ದಾರೆ.

 • Share this:

  ತೆಲಂಗಾಣ (ಅ.14): ಪಶ್ಚಿಮ ಬಂಗಾಳದಲ್ಲಿ ವಾಯುಭಾರ ಕುಸಿತದಿಂದ  ಉತ್ತರ ಕರ್ನಾಟಕದ 11 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇನ್ನು ನೆರೆಯ ತೆಲಂಗಾಣದಲ್ಲಿಯೂ ಈ ಮಳೆ ಸಾಕಷ್ಟು ಹಾನಿಯನ್ನುಂಟು ಮಾಡಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಈ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಅದರಲ್ಲೂ ರಾತ್ರಿ ಸುರಿದ ಭರ್ಜರಿ ಮಳೆ ಸಂಪೂರ್ಣ ಜನಜೀವನ ಅಸ್ತವ್ಯಸ್ತವಾಗಿದೆ. ವರಣುನ ಅಬ್ಬರಕ್ಕೆ 2 ತಿಂಗಳ ಹಸುಗೂಸು ಸೇರಿದಂತೆ 12 ಮಂದಿ ಸಾವನ್ನಪ್ಪಿದ್ದಾರೆ. ಮಳೆಯಿಂದ ಗೋಡೆ ಕುಸಿದ ಪರಿಣಾಮ 9 ಜನ ಸಾವನ್ನಪ್ಪಿದ್ದಾರೆ. ಹೈದ್ರಾಬಾದ್​ನ ಅನೇಕ ಪ್ರದೇಶಗಳು ಪ್ರವಾಹಕ್ಕೆ ಒಳಗಾಗಿದ್ದು, ಜನರ ರಕ್ಷಣೆಗಾಗಿ ರಕ್ಷಣಾ ತಂಡ ಕಾರ್ಯಾಚರಣೆ ಕೈಗೊಂಡಿದೆ. 19 ಜಿಲ್ಲೆಗಳಲ್ಲಿ ಪ್ರವಾಹದ ಅಬ್ಬರವಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಭಾರೀ ಮಳೆಗೆ ಹಿಮಾಯತ್ಸಾಗರ ಅಣೆಕಟ್ಟಿಗೆ ಒಳಹರಿವಿನ ಪ್ರಮಾಣ ಹೆಚ್ಚಿದೆ. ಈ ಹಿನ್ನೆಲೆ 1.300ಕ್ಯೂಸೆಕ್ಸ್​ ನೀರು ಹೊರಬಿಡಲಾಗಿದೆ, ಇದರಿಂದಾಗಿ ಮೌಸಿ ನದಿ ಉಕ್ಕಿ ಹರಿಯುತ್ತಿದೆ.  ಹೈದ್ರಾಬಾದ್​, ಕಾಕಿನಾಡ, ಶ್ರೀಕಾಕುಳಂ, ವಿಜಿನಗರಂ, ವಿಶಾಖಪಟ್ಟಣಂ, ಕೃಷ್ಣ, ಪೂರ್ವ ಮತ್ತು ಪಶ್ಚಿಮ ಗೋದಾವರಿಯಲ್ಲಿ ದಾಖಲೆ ಮಳೆಯಾಗಿದೆ. ಗೋದಾವರಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಇಂದು ಕೂಡ ಮಳೆಯಬ್ಬರ ಮುಂದುವರೆಯಲಿದೆ.


  ಹೈದ್ರಾಬಾದ್​ನಲ್ಲಿ ಯೆಲ್ಲೋ ಆಲರ್ಟ್​ ಘೋಷಣೆ ಮಾಡಲಾಗಿದ್ದು, ರಸ್ತೆಗಳು ನದಿಗಳಂತೆ ಆಗಿವೆ. ಅನೇಕ ಕಡೆ ಮನೆಗೆ ನೀರು ನುಗ್ಗಿದ್ದು, ನದಿಯಾವುದು, ರಸ್ತೆಯಾವುದು ಎಂಬಂತೆ ಆಗಿದೆ. ಭಾರೀ ಮಳೆಗೆ ಸಾಕಷ್ಟು ಪ್ರಾಣ, ಆಸ್ತಿ ಹಾನಿಯಾಗುತ್ತಿದ್ದು, ಜನರಿಗೆ ಮನೆಯಿಂದ ಹೊರಬರದಂತೆ ಪೊಲೀಸ್​ ಅಧಿಕಾರಿಗಳು  ಮನವಿ ಮಾಡಿದ್ದಾರೆ.


  ರಾಜ್ಯದಲ್ಲಿ ವರುಣನ ಅಬ್ಬರದಿಂದ ಸಾಕಷ್ಟು ನಷ್ಟವಾಗಿದ್ದು, ಜನರ ರಕ್ಷಣೆಗೆ ಮುಂದಾಗಿರುವ ಸರ್ಕಾರ ತುರ್ತು ಸಭೆ ಕರೆದಿದೆ, ರಾಜ್ಯ ಸಚಿವ ಕೆಟಿ ರಾಮರಾವ್​ ಮತ್ತು ತಲಸನಿ ಶ್ರೀನಿವಾಸ್​ ನೇತೃತ್ವದಲ್ಲಿ ಅಧಿಕಾರಿಗಳು ಸಭೆ ನಡೆಸಿದ್ದು, ಯಾವ ರೀತಿ ರಕ್ಷಣಾ ಕಾರ್ಯ ಕೈಗೊಳ್ಳಬೇಕು ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ.


  ರಾಜ್ಯದಲ್ಲಿ ದಾಖಲೆ ಮಳೆಯಾಗಿದ್ದು, ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ತುರ್ತು ಕಾರ್ಯಾಚರಣೆಗಾಗಿ ಸಿಎಂ ಜಗನ್​ ಮೋಹನ್​ ರೆಡ್ಡಿ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ, ರಾಜ್ಯ ಸರ್ಕಾರಕ್ಕೆ ಎರಡು ದಿನ ರಜೆ ಘೋಷಣೆ ಮಾಡಲಾಗಿದೆ.


  ಮಳೆ ಪ್ರವಾಹಕ್ಕೆ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರುಗಳು ಕೊಚ್ಚಿ ಹೋಗುತ್ತಿರುವ ದೃಶ್ಯಗಳು ಕಂಡು ಬರುತ್ತಿದೆ. ಬರ್ಕಾಸ್​ನಲ್ಲಿ ವ್ಯಕ್ತಿಯೊಬ್ಬ ಮಳೆ ನೀರಿಗೆ ಕೊಚ್ಚಿ ಹೋಗಿರವ ದೃಶ್ಯ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

  Published by:Seema R
  First published: