HOME » NEWS » National-international » TEJASVI SURYA TROLLED BY HYDERABADIS AND IT BECOMES TOP TRENDING IN TWITTER SNVS

ಹೈದರಾಬಾದಿಗಳ ಕೈಲಿ ಭಾರೀ ಟ್ರೋಲ್ ಆದ ತೇಜಸ್ವಿ ಸೂರ್ಯ; ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್

ಹೈದರಾಬಾದ್ ಅನ್ನು ಭಾಗ್ಯನಗರವನ್ನಾಗಿ ಹೆಸರು ಬದಲಾವಣೆ ಮಾಡಬೇಕೆಂದು ಹೇಳಿದ್ದು, ಹೈದರಾಬಾದ್ ಭಯೋತ್ಪಾದಕರ ಕೇಂದ್ರ ಎಂದು ಹೇಳಿದ್ದು ತೇಜಸ್ವಿ ಸೂರ್ಯ ಅವರನ್ನ ಟ್ರೋಲ್ ಮಾಡಲು ಪ್ರಮುಖ ಕಾರಣವಾಗಿದೆ.

news18
Updated:November 23, 2020, 4:04 PM IST
ಹೈದರಾಬಾದಿಗಳ ಕೈಲಿ ಭಾರೀ ಟ್ರೋಲ್ ಆದ ತೇಜಸ್ವಿ ಸೂರ್ಯ; ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್
ತೇಜಸ್ವಿ ಸೂರ್ಯ
  • News18
  • Last Updated: November 23, 2020, 4:04 PM IST
  • Share this:
ಬೆಂಗಳೂರು: ಹೈದರಾಬಾದ್ ಜಿಹೆಚ್​ಎಂಸಿ ಚುನಾವಣೆಯಲ್ಲಿ ಬಿಜೆಪಿ ಪ್ರಚಾರದಲ್ಲಿ ನಿರತವಾಗಿರುವ ತೇಜಸ್ವಿ ಸೂರ್ಯ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್​ಗೆ ಒಳಗಾಗಿದ್ದಾರೆ. ಹೈದರಾಬಾದ್​ನ ನೆಟ್ಟಿಗರು ತೇಜಸ್ವಿ ಸೂರ್ಯರನ್ನ ಅಶ್ಲೀಲವಾಗಿ ಟ್ರೋಲ್ ಮಾಡಿದ್ದಾರೆ. #DengeyTejasviSurya ಈಗ ಭಾರತದ ಟ್ವಿಟ್ಟರ್​ನಲ್ಲಿ ಟಾಪ್ ಟ್ರೆಂಡಿಂಗ್ ಆಗಿದೆ. ಕೆಲವೇ ಹೊತ್ತಿನಲ್ಲಿ ಈ ಹ್ಯಾಷ್​ಟ್ಯಾಗ್ ಉಪಯೋಗಿಸಿ 5 ಸಾವಿರಕ್ಕೂ ಹೆಚ್ಚು ಟ್ವೀಟ್​ಗಳು ಬಂದಿವೆ.

ಯಾಕೆ ಟ್ರೋಲಿಂಗ್?: ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಹೈದರಾಬಾದ್​ನ ಪಾಲಿಕೆ ಚುನಾವಣೆಯ ಪ್ರಚಾರದಲ್ಲಿ ಕೆಲವಾರು ವಿವಾದಾತ್ಮಕ ಹೇಳಿಕೆಗಳನ್ನ ನೀಡಿದ್ದಾರೆ. ಒವೈಸಿ ಅವರ ಎಐಎಂಐಎಂ ಪಕ್ಷದ ಹಿಡಿತದಲ್ಲಿರುವ ಹೈದರಾಬಾದ್ ಪಾಲಿಕೆ ಇನ್ನೂ ಅಭಿವೃದ್ಧಿ ಆಗಿಲ್ಲ. ರೋಹಿಂಗ್ಯ ಮುಸ್ಲಿಮರನ್ನು ಕರೆತಂದು ಸೇರಿಸಿದ್ದು ಬಿಟ್ಟರೆ ಒವೈಸಿ ಸಹೋದರರಿಂದ ಹೈದರಾಬಾದ್​ಗೆ ಯಾವುದೇ ಪ್ರಯೋಜನ ಆಗಿಲ್ಲ ಎಂದು ತೇಜಸ್ವಿ ಸೂರ್ಯ ಹೇಳಿದ್ದರು. ಅದಕ್ಕಿಂತ ಹೆಚ್ಚಾಗಿ, ಹೈದರಾಬಾದ್ ನಗರವನ್ನು ಭಾಗ್ಯ ನಗರವನ್ನಾಗಿ ಮಾಡಬೇಕೆಂದು ತೇಜಸ್ವಿ ಸೂರ್ಯ ಮಾಡಿದ ಪ್ರಸ್ತಾಪ ಅಲ್ಲಿಯವರನ್ನು ರೊಚ್ಚಿಗೆಬ್ಬಿಸಿದಂತಿದೆ. ಅಲ್ಲಿಯ ಬಿಜೆಪಿಯೇತರ ಪಕ್ಷಗಳವರೆಲ್ಲರೂ ಒಂದಾಗಿ ಸೋಷಿಯಲ್ ಮೀಡಿಯಾದಲ್ಲಿ ತೇಜಸ್ವಿ ಸೂರ್ಯ ಅವರನ್ನ ಕೆಟ್ಟದಾಗಿ ಟ್ರೋಲ್ ಮಾಡಲು ನಗರದ ಹೆಸರು ಬದಲಾವಣೆಯೇ ಪ್ರಮುಖ ಕಾರಣವಾಗಿದೆ.
ಇಲ್ಲಿ ತೇಜಸ್ವಿ ಸೂರ್ಯರನ್ನು ಟ್ರೋಲ್ ಮಾಡಲು ಬಳಸುತ್ತಿರುವ ಹ್ಯಾಷ್​ಟ್ಯಾಗ್​ನಲ್ಲಿರುವ ಪದಗಳು ಅಶ್ಲೀಲವಾಗಿದೆ. ಕಾಲೇಜು ಹುಡುಗರು ಬಳಸುವ ಪೋಲಿ ಪದ ಅದು.
Published by: Vijayasarthy SN
First published: November 23, 2020, 4:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading