’’ಮನಸ್ಸಿಗೆ ಶಾಂತಿ ಬೇಕು’’ ಎಂದು ಮಥುರಾಕ್ಕೆ ಹೊರಟ ಲಾಲು ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್

ಯಾದವ್ ತಾವು ಹಿಂದೆ ಸ್ಪರ್ಧಿಸುತ್ತಿದ್ದ ಮಹುವ ಸೀಟನ್ನು ತೊರೆದು ಸಮಸ್ತಿಪುರ ಜಿಲ್ಲೆಯ ಹೊಸ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದರು. 2015 ರಲ್ಲಿ ಚುನಾವಣೆಗೆ ಪದಾರ್ಪಣೆ ಮಾಡಿದ ನಂತರ ರಾಜ್ಯ ವಿಧಾನಸಭೆಯಲ್ಲಿ ಅವರು ಎರಡನೇ ಅವಧಿಗೆ ಆಯ್ಕೆಯಾಗಿದ್ದರು.

ಲಾಲು ಹಿರಿಯ ಪುತ್ರ ತೇಜ್​ ಪ್ರತಾಪ್​ ಯಾದವ್​ Pic: HT

ಲಾಲು ಹಿರಿಯ ಪುತ್ರ ತೇಜ್​ ಪ್ರತಾಪ್​ ಯಾದವ್​ Pic: HT

 • Share this:
  ಬಿಹಾರದ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಒಂದಾದ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) (Rashtriya Janata Dal, RJD) ಪಕ್ಷದಲ್ಲಿ ಆಂತರಿಕ ಜಗಳ ಮುಂದುವರಿದಿದ್ದು, ಲಾಲು ಪ್ರಸಾದ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ (Tej Pratap Yadav)  ' ಮನಸ್ಸಿಗೆ ಶಾಂತಿ ಬೇಕು ಎಂದು ಅದರ ಹುಡುಕಾಟ'ದಲ್ಲಿ ಮಥುರೆಗೆ ತೆರಳಿದ್ದಾರೆ ಎಂದು ವರದಿಯಾಗಿದೆ.

  ಮೂಲಗಳ ಪ್ರಕಾರ ಅವರು ತಮ್ಮ ಗುರುಗಳ ಜೊತೆ ಕೌಟುಂಬಿಕ ಕಲಹವನ್ನು ಚರ್ಚಿಸಿದ್ದಾರೆ ಮತ್ತು ಸದ್ಯಕ್ಕೆ ಆಧ್ಯಾತ್ಮಿಕತೆಯನ್ನು ಸ್ವೀಕರಿಸಲು ನಿರ್ಧರಿಸಿದ್ದಾರೆ. ಈ ದಿನಗಳಲ್ಲಿ ಅವರು ಉತ್ತರಪ್ರದೇಶದ ಮಥುರಾ (Mathura) ಯಾತ್ರಾ ಸ್ಥಳಕ್ಕೆ ಧಾರ್ಮಿಕ ಪ್ರವಾಸದಲ್ಲಿದ್ದಾರೆ ಎಂದು ಹೇಳಲಾಗಿದೆ.

  ಆದರೆ, ಅವರು ಈ ಬಾರಿ ಎಲ್ಲಾ ರೀತಿಯ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ತೇಜ್ ಪ್ರತಾಪ್ ಕಳೆದ ಎರಡು ದಿನಗಳಿಂದ ಮಥುರಾದಲ್ಲಿರುವ ತನ್ನ ಧಾರ್ಮಿಕ ಗುರುವಿನ ನಿವಾಸದಲ್ಲಿ ತಂಗಿದ್ದಾರೆ ಎಂದು ಹೇಳಲಾಗಿದೆ. ತೇಜ್ ಪ್ರತಾಪ್ ಯಾದವ್ ಧಾರ್ಮಿಕ ಗುರುಗಳಿಂದ ಆಶೀರ್ವಾದ ಪಡೆಯುತ್ತಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಆರ್‌ಜೆಡಿಯಲ್ಲಿನ ಆಂತರಿಕ ಕಲಹಗಳು ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿಯಾಗುತ್ತಿದ್ದು. ತೇಜ್ ಪ್ರತಾಪ್ ಯಾದವ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಜಗದಾನಂದ್ ಸಿಂಗ್ (Jagdanand Singh) ಅವರನ್ನು ಪದಚ್ಯುತಗೊಳಿಸುವಂತೆ ಒತ್ತಾಯಿಸುತ್ತಿದ್ದರು. ಅವರ ಸಹೋದರ ಹಾಗೂ ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಶ್ವಿ ಯಾದವ್ ತನ್ನ ಸಹೋದರನ ಈ ನಿರ್ಣಯಕ್ಕೆ ಬೆಂಬಲ ನೀಡುತ್ತಿಲ್ಲ. ಈ ಹಿಂದೆ ಕೂಡ ತೇಜ್ ಪ್ರತಾಪ್ ತನ್ನ ಪತ್ನಿಯೊಂದಿಗೆ ಜಗಳವಾಡಿದಾಗ ಮಥುರಾಕ್ಕೆ 'ಮನಸ್ಸಿಗೆ ಶಾಂತಿ ಬೇಕು ಎಂದು' ಹೋಗಿದ್ದರು.

  "ಮಥುರಾದಿಂದ ದೆಹಲಿಗೆ ಹೋಗುವ ಎಲ್ಲ ಸಾಧ್ಯತೆಗಳಿವೆ" ಎಂದು ಹೇಳಲಾಗುತ್ತಿದೆ.

  ಜೆಡಿಯು ನಾಯಕ ತೇಜ್ ಪ್ರತಾಪ್ ಯಾದವ್ 21,139 ಮತಗಳಿಂದ ಹಸನ್ ಪುರ್ ಸ್ಥಾನವನ್ನು ಗೆದ್ದಿದ್ದರು. ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಅವರ ಹಿರಿಯ ಪುತ್ರ ಯಾದವ್ ತಮ್ಮ ಹತ್ತಿರದ ಜೆಡಿಯು ಪ್ರತಿಸ್ಪರ್ಧಿ ರಾಜ್ ಕುಮಾರ್ ಅವರನ್ನು ಸೋಲಿಸಿದ್ದರು.

  ಯಾದವ್ ತಾವು ಹಿಂದೆ ಸ್ಪರ್ಧಿಸುತ್ತಿದ್ದ ಮಹುವ ಸೀಟನ್ನು ತೊರೆದು ಸಮಸ್ತಿಪುರ ಜಿಲ್ಲೆಯ ಹೊಸ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದರು. 2015 ರಲ್ಲಿ ಚುನಾವಣೆಗೆ ಪದಾರ್ಪಣೆ ಮಾಡಿದ ನಂತರ ರಾಜ್ಯ ವಿಧಾನಸಭೆಯಲ್ಲಿ ಅವರು ಎರಡನೇ ಅವಧಿಗೆ ಆಯ್ಕೆಯಾಗಿದ್ದರು.

  ಇದನ್ನೂ ಓದಿ: farm laws: ಮೂರು ಕೃಷಿ ಕಾನೂನುಗಳ ವಿರುದ್ದ ನಿರ್ಣಯ ಮಂಡಿಸಿದ ತಮಿಳುನಾಡು ಸರ್ಕಾರ

  ಲಾಲು ಪ್ರಸಾದ್​ ಯಾದವ್​ ಅವರ ಹಿಡಿತದಲ್ಲೇ ಇದ್ದ ಪಕ್ಷವು ತೇಜಸ್ವಿ ಯಾದವ್​ ಅವರ ಹಿಡಿತಕ್ಕೆ ಹೋಗಿದ್ದು ಅವರ ಕುಟುಂಬದಲ್ಲಿ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿತ್ತು. ಸಹೋದರಿ ಮೀಸಾ ಭಾರತಿ, ತೇಜ್​ ಪ್ರತಾಪ್​ ಯಾದವ್​ ಹಾಗೂ ತೇಜಸ್ವಿ ಯಾದವ್​ ಅವರ ನಡುವಿನ ಶೀತಲ ಸಮರ ಸಧ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ತಂದೆ ಲಾಲು ಜೈಲಿನಿಂದ ಹೊರಗೆ ಬಂದ ನಂತರ ಕುಟುಂಬದ ಒಳಗೆ ನಡೆಯುತ್ತಿರುವ ಈ ತಿಕ್ಕಾಟ ಇದೇ ಮೊದಲ ಬಾರಿಗೆ ಹೊರಗೆ ಬಂದಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.  Published by:HR Ramesh
  First published: