HOME » NEWS » National-international » TEHELKA FOUNDER TARUN TEJPAL ACQUITTED IN RAPE CASE RELIEVED ITS OVER MAK

Tarun Tejpal: ಅತ್ಯಾಚಾರ ಪ್ರಕರಣದಿಂದ ತೆಹೆಲ್ಕಾ ಸಂಸ್ಥಾಪಕ ತರುಣ್ ತೇಜ್​ಪಾಲ್​ ರನ್ನು ಖುಲಾಸೆಗೊಳಿಸಿದ ಗೋವಾ ಕೋರ್ಟ್​!

ತರುಣ್ ತೇಜ್​ಪಾಲ್ ವಿರುದ್ಧ ಲೈಂಗಿಕ ದೌರ್ಜನ್ಯದ ಸುಳ್ಳು ಆರೋಪವನ್ನು ಹೊರಿಸಲಾಗಿತ್ತು. ಆದರೆ, ಕೊನೆಗೂ ನಮಗೆ ನ್ಯಾಯ ದೊರಕಿದೆ. ಸುಳ್ಳು ಬಯಲಾಗಿದೆ ಎಂದು ತರುಣ್ ಮಗಳಾದ ಕ್ಯಾರಾ ತೇಜ್‌ಪಾಲ್ ತಿಳಿಸಿದ್ದಾರೆ.

news18-kannada
Updated:May 21, 2021, 4:07 PM IST
Tarun Tejpal: ಅತ್ಯಾಚಾರ ಪ್ರಕರಣದಿಂದ ತೆಹೆಲ್ಕಾ ಸಂಸ್ಥಾಪಕ ತರುಣ್ ತೇಜ್​ಪಾಲ್​ ರನ್ನು ಖುಲಾಸೆಗೊಳಿಸಿದ ಗೋವಾ ಕೋರ್ಟ್​!
ತರುಣ್ ತೇಜ್​ಪಾಲ್.
  • Share this:
ಗೋವಾ (ಮೇ 21); ಎರಡು ದಶಕಗಳ ಹಿಂದೆ ಸರ್ಕಾರದ ಹಗರಣಗಳನ್ನು ಬಯಲಿಗೆ ಎಳೆಯುವ ಪತ್ರಿಕೆ ಎಂದೇ ದೇಶದಾದ್ಯಂಯ ಖ್ಯಾತಿ ಪಡೆದಿದ್ದ ತೆಹೆಲ್ಕಾ ಪತ್ರಿಕೆ ಕಳೆದ ಹಲವು ವರ್ಷಗಳಿಂದ ಬೇರೆಯದೇ ಕಾರಣಕ್ಕೆ ಸುದ್ದಿಯಲ್ಲಿತ್ತು. ತೆಹೆಲ್ಕಾ ನಿಯತಕಾಲಿಕೆಯ ಸಂಸ್ಥಾಪಕ ಸಂಪಾದಕ ತರುಣ್ ತೇಜ್‌ಪಾಲ್ ವಿರುದ್ಧ ಮಹಿಳೆಯೊಬ್ಬರು ಗೋವಾದಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಗೋವಾದ ರೆಸಾರ್ಟ್ ಒಂದರಲ್ಲಿ 2013ರಲ್ಲಿ ನಡೆದ ಸಮಾವೇಶದ ಸಂದರ್ಭದಲ್ಲಿ ಕಿರಿಯ ಸಹೋದ್ಯೋಗಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಅವರ ಮೇಲಿತ್ತು. ಈ ಪ್ರಕರಣ ಇಡೀ ದೇಶದಾದ್ಯಂತ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. ಆದರೆ, ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ನ್ಯಾಯಾಲಯವು ಅತ್ಯಾಚಾರ ಆರೋಪದಿಂದ ತರುಣ್ ತೇಜ್​ಪಾಲ್ ಅವರನ್ನು ಖುಲಾಸೆಗೊಳಿಸಿದೆ.

ಅತ್ಯಾಚಾರ ಪ್ರಕರಣ ಎದುರಿಸುತ್ತಿದ್ದ ತರುಣ್ ತೇಜ್‌ಪಾಲ್, 2014 ರಿಂದ ಜಾಮೀನಿನ ಮೇಲೆ ಹೊರಗಿದ್ದರು. 8 ವರ್ಷಗಳ ಬಳಿಕ ತೀರ್ಪು ಹೊರಬಿದ್ದಿದೆ. 2017 ರಲ್ಲಿ ವಿಚಾರಣಾ ನ್ಯಾಯಾಲಯ ತರುಣ್ ತೇಜ್‌ಪಾಲ್ ವಿರುದ್ಧ ಅತ್ಯಾಚಾರ, ಲೈಂಗಿಕ ಕಿರುಕುಳ ಮತ್ತು ಕಾನೂನುಬಾಹಿರ ಬಂಧನ ಆರೋಪಗಳನ್ನು ದಾಖಲಿಸಿತ್ತು. ಈ ಆರೋಪಗಳ ವಿರುದ್ಧ ತರುಣ್ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಗೋವಾ ನ್ಯಾಯಾಲಯದಲ್ಲಿಯೇ ವಿಚಾರಣೆ ಮುಂದುವರಿಯಬೇಕೆಂದು ಸುಪ್ರೀಂಕೋರ್ಟ್ ಆದೇಶಿಸಿತ್ತು.

ತರುಣ್ ತೇಜ್‌ಪಾಲ್ ಅವರ ಪರವಾಗಿ ನ್ಯಾಯಾಲಯದ ತೀರ್ಪನ್ನು ವಿವರಿಸಿರುವ ಪುತ್ರಿ ಕ್ಯಾರಾ ತೇಜ್‌ಪಾಲ್, "ತರುಣ್ ತೇಜ್​ಪಾಲ್ ವಿರುದ್ಧ ಲೈಂಗಿಕ ದೌರ್ಜನ್ಯದ ಸುಳ್ಳು ಆರೋಪವನ್ನು ಹೊರಿಸಲಾಗಿತ್ತು. ಆದರೆ, ಕೊನೆಗೂ ನಮಗೆ ನ್ಯಾಯ ದೊರಕಿದೆ. ಸುಳ್ಳು ಬಯಲಾಗಿದ್ದು, ನ್ಯಾಯಾಲಯ ವ್ಯವಸ್ಥೆಯ ಮೇಲೆ ಘನತೆ ಹೆಚ್ಚಾಗಿದೆ" ಎಂದು ನ್ಯಾಯಾಲಯಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ನ್ಯಾಯಾಲಯದ ತೀರ್ಪಿನ ಬಗ್ಗೆ ಮಾತನಾಡಿರುವ ನಿರ್ದೂಷಿ ತರುಣ್ ತೇಜ್​ಪಾಲ್, "ಈ ನ್ಯಾಯಾಲಯವು ಕಠಿಣ, ನಿಷ್ಪಕ್ಷಪಾತ ಮತ್ತು ನ್ಯಾಯಯುತ ವಿಚಾರಣೆಗಾಗಿ, ಅಪರಾಧ ನಡೆದಿದೆ ಎಂದು ಉಲ್ಲೇಖಿಸಲಾಗಿದ್ದ ರೆಸಾರ್ಟ್​ನ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಇತರ ಪ್ರಾಯೋಗಿಕ ವಸ್ತುಗಳನ್ನು ದಾಖಲೆಯಲ್ಲಿ ಪರಿಶೀಲಿಸಿದ್ದಕ್ಕಾಗಿ ನಾನು ಧನ್ಯವಾದ ಹೇಳುತ್ತೇನೆ. ಈ ಕ್ರಮದಿಂದಲೇ ಈ ಪ್ರಕರಣದ ಸತ್ಯಾಸತ್ಯತೆ ಬಯಲಾಗಲು ಸಾಧ್ಯವಾಯಿತು” ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ತರುಣ್ ತೇಜ್‌ಪಾಲ್ ಈ ವೇಳೆ ಕೋವಿಡ್‌ನಿಂದ ನಿಧನರಾದ ತಮ್ಮ ವಕೀಲ ರಾಜೀವ್ ಗೋಮ್ಸ್ ಅವರಿಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

"ಕಳೆದ ಏಳೂವರೆ ವರ್ಷಗಳಿಂದ ಈ ಸುಳ್ಳು ಆರೋಪದ ಪರಿಣಾಮವನ್ನು ನಮ್ಮ ವೈಯಕ್ತಿಕ, ವೃತ್ತಿಪರ ಮತ್ತು ಸಾರ್ವಜನಿಕ ಜೀವನದ ಪ್ರತಿಯೊಂದು ಹಂತಗಳಲ್ಲೂ ಅನುಭವಿಸಿದ್ದೇವೆ. ಈ ದಿನಗಳು ನಮ್ಮ ಕುಟುಂಬಕ್ಕೆ ಅಘಾತಕಾರಿ ದಿನಗಳಾಗಿದ್ದವು" ಎಂದು ಅವರು ವಿಷಾಧ ವ್ಕಕ್ತಪಡಿಸಿದ್ದಾರೆ.

ಇದನ್ನೂ ಓದಿ: Black Fungus: ಯಾವ ದೇಶದಿಂದಾದರೂ ಔಷಧಿ ತಂದು ಬ್ಲಾಕ್ ಫಂಗಸ್ ರೋಗಿಗಳಿಗೆ ನೀಡಿ; ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ಸೂಚನೆ

ಗೋವಾದಲ್ಲಿನ ಸೆಷನ್ಸ್ ನ್ಯಾಯಾಲಯವು ಬುಧವಾರ ತನ್ನ ತೀರ್ಪನ್ನು ಘೋಷಿಸಬೇಕಾಗಿತ್ತು. ಆದರೆ ತೌತೆ ಚಂಡಮಾರುತದಿಂದಾಗಿ ವಿದ್ಯುತ್ ವೈಫಲ್ಯವನ್ನು ಉಲ್ಲೇಖಿಸಿ ತೀರ್ಪನ್ನು ಮುಂದೂಡಲಾಗಿತ್ತು. ಈ ಹಿಂದೆಯೂ ಕೊರೋನಾ ವೈರಸ್ ಬಿಕ್ಕಟ್ಟು ಸೇರಿದಂತೆ ವಿವಿಧ ಕಾರಣಗಳಿಗಾಗಿ ತೀರ್ಪು ವಿಳಂಬವಾಗಿತ್ತು.ಇದನ್ನೂ ಓದಿ: Explained: ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ, ರಕ್ಷಣೆ ಹೇಗೆ? ಕಾನೂನು ಏನು ಹೇಳುತ್ತದೆ?

ಅತ್ಯಾಚಾರ ಆರೋಪ ದಾಖಲಾದ ಕೂಡಲೇ ತೆಹಲ್ಕಾ ಸಂಪಾದಕ ಸ್ಥಾನದಿಂದ ತೇಜ್‌ಪಾಲ್ ಹೊರಬಂದಿದ್ದರು. ಆದರೆ, ಆರು ತಿಂಗಳ ಬಳಿಕ ತರುಣ್ ತೇಜ್​ಪಾಲ್ ಮತ್ತೆ ಆ ಸ್ಥಾನಕ್ಕೆ ಮರಳಿದ್ದರು. 2013ರ ನವೆಂಬರ್‌ನಲ್ಲಿ ಬಂಧನಕ್ಕೆ ಒಳಗಾಗಿದ್ದ ಅವರು, 2014ರ ಮೇ ತಿಂಗಳಿನಿಂದ ಜಾಮೀನಿನ ಮೇಲೆ ಹೊರ ಬಂದಿದ್ದರು.
Youtube Video

ಗೋವಾ ತ್ವರಿತ ವಿಚಾರಣಾ ನ್ಯಾಯಾಲಯದಲ್ಲಿ 2,684 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದ ಪೊಲೀಸರು, ಅವರ ವಿರುದ್ಧ ಸಾಕಷ್ಟು ಪುರಾವೆಗಳಿವೆ ಎಂದು ತಿಳಿಸಿದ್ದರು. 2017 ರಲ್ಲಿ ಬಾಂಬೆ ಹೈಕೋರ್ಟ್ ಈ ಪ್ರಕರಣವನ್ನು ರದ್ದುಗೊಳಿಸುವ ಮನವಿಯನ್ನು ತಳ್ಳಿಹಾಕಿತ್ತು.
Published by: MAshok Kumar
First published: May 21, 2021, 4:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories