Crime News: ವಿಶೇಷಚೇತನ ಬಾಲಕಿ ಮೇಲೆ ಎರಗಿಬಿದ್ದ ಕಾಮಾಂಧ: 16 ವರ್ಷದ ಅಪ್ರಾಪ್ತೆ ಮೇಲೆ ವೈದ್ಯನಿಂದ ಅತ್ಯಾಚಾರ

Crime News: 40 ವರ್ಷದ ವೈದ್ಯ ಈಕೆಗೆ ಚಿಕಿತ್ಸೆ ನೀಡುತ್ತಿದ್ದ. ಈಕೆಯ ಸಮಸ್ಯೆಗಳನ್ನ ಅರಿತ ವೈದ್ಯ ಮಾಡಿದ್ದು ಮಾತ್ರ ಹೇಯ ಕೃತ್ಯ. ಸರಿಯಾಗಿ ಮಾತನಾಡಲು ಬಾರದ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಎತ್ತ ಸಾಗುತ್ತಿದೆ ನಮ್ಮ ಭಾರತ(India)? ಪ್ರತಿದಿನ ಅತ್ಯಾಚಾರ(Rape) ಪ್ರಕರಣಗಳೇ ಹೆಚ್ಚು ಬೆಳಕಿಗೆ ಬರುತ್ತಿವೆ. ಭಾರತ ದೇಶವು ಸಂಸ್ಕೃತಿ ಮತ್ತು ನಾಗರಿಕತೆಯ ಶ್ರೀಮಂತಿಕೆಗೆ ವಿಶ್ವಕ್ಕೆ ಮಾದರಿಯಾಗಿದೆ. ಶ್ರೀರಾಮ(Sri Rama)ನ ಸ್ತ್ರೀ ಗೌರವ, ಲಕ್ಷ್ಮಣ ನ ಮಾತೃಭಕ್ತಿ, ಸರ್ವರಲ್ಲೂ ತಾಯಿ(Mother)ಯನ್ನೇ ಕಾಣುವ ವಿವೇಕಾನಂದ(Vivekananda) ರಂಥ ಆದರ್ಶಪ್ರಾಯರು ನಾಡಿನ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದಾರೆ. ಮನು ಸೃತಿಯಲ್ಲೂ `ಸಹ ಯತ್ರ ನಾರ್ಯಂತು ಪೂಜ್ಯತೇ, ರಮಂತೇ ತತ್ರ ದೇವತಾ’ ಎಂದು ಉಲ್ಲೇಖಿಸಲಾಗಿದೆ. ಇಷ್ಟಿದ್ದರೂ ಈ ದೇಶದ ಸದ್ಯದ ಪರಿಸ್ಥಿತಿ ನಿಜಕ್ಕೂ ಶೋಚನಿಯ. ಪ್ರತಿದಿನ(Everyday) ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಹೇಯ ಕೃತ್ಯಗಳು ನಡೆಯುತ್ತಲೇ ಇದೆ. ಇದಕ್ಕೆಲ್ಲ ಕೊನೆಯೇ ಇಲ್ವಾ? ಹಸುಳೆಗಳ ಮೇಲೆ ಎರಗುವ ಈ ಕಾಮ ಪಿಶಾಚಿಗಳ ಹುಟ್ಟಡಗಿಸುವುದು ಯಾರು? ಈ ಪ್ರಶ್ನೆಗಳಿಗೆ ಉತ್ತರ ಇಲ್ಲ. ಮುಂಬೈ(Mumbai)ನಲ್ಲಿ ಕಾಮಾಂಧ ವೈದ್ಯ(Doctor)ನೊಬ್ಬ ವಿಶೇಷಚೇತನ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ.

ಚಿಕಿತ್ಸೆಗೆಂದು ಹೋದಾಗೆಲ್ಲ ಅತ್ಯಾಚಾರ!

16 ವರ್ಷದ ಬಾಲಕಿ ಮಾತಿನ ದುರ್ಬಲತೆ ಹಾಗೂ ಕೆಲ ದೈಹಿಕ ಅಂಗವೈಕಲ್ಯದ ಸಮಸ್ಯೆಯಿಂದ ಬಳಲುತ್ತಿದ್ದಳು. ಹೀಗಾಗಿ ಮುಂಬೈನ ಕ್ಲಿನಿಕ್​ವೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. 40 ವರ್ಷದ ವೈದ್ಯ ಈಕೆಗೆ ಚಿಕಿತ್ಸೆ ನೀಡುತ್ತಿದ್ದ. ಈಕೆಯ ಸಮಸ್ಯೆಗಳನ್ನ ಅರಿತ ವೈದ್ಯ ಮಾಡಿದ್ದು ಮಾತ್ರ ಹೇಯ ಕೃತ್ಯ. ಸರಿಯಾಗಿ ಮಾತನಾಡಲು ಬಾರದ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಆದರೆ ಯುವತಿ ಮೊದಲು ಚಿಕಿತ್ಸೆಗಾಗಿ ಈ ರೀತಿಯ ವರ್ತನೆ ತೋರಿದ್ದಾನೆ ಎಂದು ಸುಮ್ಮನಾಗಿದ್ದಳು. ಆದರೆ ಕ್ಲಿನಿಕ್​ಗೆ ಬಂದಾಗಲೆಲ್ಲ ಆತನ ದುರ್ವತನೆ ಮಿತಿಮೀರಿತ್ತು. ಮೊನ್ನೆ ಕೂಡ ಚಿಕಿತ್ಸೆಗೆ ಬಂದಾಗ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಬಳಿಕ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ.

ಇದನ್ನು ಓದಿ :20 ರೂ. ಕದ್ದ ಆರೋಪ; 7 ವರ್ಷದ ಬಾಲಕಿಯನ್ನು ತಳ್ಳುವ ಗಾಡಿಗೆ ಕಟ್ಟಿ ಎಳೆದೊಯ್ದು ಚಿತ್ರಹಿಂಸೆ!

ಮನೆಯವರಿಗೆ ಮೆಸೇಜ್​ ಮಾಡಿದ್ದ ಬಾಲಕಿ

ಫಿಸಿಯೋ ಥೆರಪಿಸ್ಟ್​ ಆಗಿದ್ದ ವೈದ್ಯ ಈಕೆಯ ಮೇಲೆ ಹಲವು ಬಾರಿ ಅತ್ಯಾಚಾರ ಮಾಡಿದ್ದಾನೆ. ಆದರೆ ಈಕೆ ಯಾರ ಬಳಿಯೂ ಹೇಳಿಕೊಂಡಿಲ್ಲ. ನಿನಗೆ ಇರುವ ಸಮಸ್ಯೆಯನ್ನು ನಾನು ಬಗೆಹರಿಸುತ್ತೆನೆ. ಎಲ್ಲರಂತೆ ಎದ್ದು ಓಡಾಡಲು, ನಮ್ಮಂತೆ ಮಾತನಾಡಲು ಮಾಡುತ್ತೇನೆ ಎಂದು ವಿಶೇಷಚೇತನ ಬಾಲಕಿಗೆ ವೈದ್ಯ ಭರವಸೆ ನೀಡಿದ್ದ. ಮೊದಲೇ ಸಮಸ್ಯೆಗಳಿಂದ ಬಳಲುತ್ತಿದ್ದ ಆಕೆಯೂ ಕೂಡ ಸುಮ್ಮನಾಗಿದ್ದಳು. ಪ್ರತಿ ಬಾರಿ ಚಿಕಿತ್ಸೆಗೆಂದು ಕ್ಲಿನಿಕ್​ಗೆ ಬಂದಾಗೆಲ್ಲ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಇದರಿಂದ ರೋಸಿಹೋಗಿದ್ದ ಬಾಲಕಿ, ಈ ಬಗ್ಗೆ ತನ್ನ ಪೋಷಕರಿಗ ಮೆಸೇಜ್​ ಮಾಡಿ ಮಾಹಿತಿ ನೀಡಿದ್ದಾಳೆ.

ಕ್ಲಿನಿಕ್ ಹೊರಗೆ ಇರುತ್ತಿದ್ದ ಪೋಷಕರು

ಇನ್ನೂ ಮಗಳನ್ನು ಇದೇ ಕ್ಲಿನಿಕ್​​ಗೆ ಕರೆದುಕೊಂಡು ಬರುತ್ತಿದ್ದ ಪೋಷಕರು, ಆಕೆಯನ್ನು ಒಳಗೆ ಕಳುಹಿಸಿ, ತಾವು ಹೊರಗೆ ಕೂರುತ್ತಿದ್ದರು. ಈ ಘಟನೆಯ ಬಗ್ಗೆ ಅವರಿಗೆ ಕಿಂಚಿತ್ತು ತಿಳಿದಿಲ್ಲ. ಒಂದು ವರ್ಷದಿಂದ ಇದೇ ವೈದ್ಯನ ಬಳಿ ಮಗಳಿಗೆ ಚಿಕಿತ್ಸೆ ಕೊಡಿಸುತ್ತಿದ್ದರು. ಮೊನ್ನೆ ಅತ್ಯಾಚಾರದ ಬಳಿಕ ಕೂಡಲೇ ಹೊರಗಡೆ ಇದ್ದ ಪೋಷಕರಿಗೆ  ಬಾಲಕಿ ಮೆಸೇಜ್​ ಮಾಡಿದ್ದಳು. ಒಳಗೆ ಬಂದು ನೋಡಿದಾಗ ಪೋಷಕರಿಗೆ ಈ ವಿಚಾರ ತಿಳಿದಿದ್ದು, ಪೊಲೀಸರನ್ನು ಕರೆಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ವೈದ್ಯನನ್ನು ಬಂಧಿಸಿದ್ದಾರೆ.

ಇದನ್ನು ಓದಿ : ಅಪ್ರಾಪ್ತ ಹುಡುಗರ ನೀಲಿ ಚಿತ್ರದ ಚಟಕ್ಕೆ ಬಲಿಯಾದ 6 ವರ್ಷದ ಬಾಲಕಿ

ಎದೆ ಬಡಿದುಕೊಂಡು ತಂದೆ-ತಾಯಿಯ ಗೋಳಾಟ 

ತಮ್ಮ ಮಗಳ ಮೇಲೆ ನಡೆದ ಅತ್ಯಾಚಾರವನ್ನು ನೆನೆದು ತಂದೆ-ತಾಯಿ ಕಣ್ಣೀರು ಹಾಕಿದ್ದಾರೆ. `ಈ ದೇಶದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲವಾ? ನಮ್ಮ ಮಗಳ ಮೇಲೆ ಅತ್ಯಾಚಾರ ಮಾಡಿದ್ದಾರೆ. ಇದನ್ನು ನಂಬುಲು ನನ್ನಿಂದ ಆಗುತ್ತಿಲ್ಲ. ನನ್ನ ಮಗಳು ಎಷ್ಟು ನೋವು ಅನುಭವಿಸಿದ್ದಾಳೋ, ಆತನನ್ನು ಮಾತ್ರ ಸುಮ್ಮನೆ ಬಿಡಬೇಡಿ ಎಂದು’ ಎದೆ ಬಡಿದುಕೊಂಡು ಗೋಳಾಡಿದ್ದಾರೆ.
Published by:Vasudeva M
First published: