• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Tragedy: ದೇವಾಲಯ ಉತ್ಸವದ ವೇಳೆ ಬಾಲಕಿ ಜೀವ ತೆಗೆದ ಜನರೇಟರ್​​! ಅಜ್ಜಿ ಆಶ್ರಯದಲ್ಲಿದ್ದ ತಾಯಿ ಇಲ್ಲದ ತಬ್ಬಲಿ ದಾರುಣ ಸಾವು

Tragedy: ದೇವಾಲಯ ಉತ್ಸವದ ವೇಳೆ ಬಾಲಕಿ ಜೀವ ತೆಗೆದ ಜನರೇಟರ್​​! ಅಜ್ಜಿ ಆಶ್ರಯದಲ್ಲಿದ್ದ ತಾಯಿ ಇಲ್ಲದ ತಬ್ಬಲಿ ದಾರುಣ ಸಾವು

ಜನರೇಟರ್​ ಫ್ಯಾನ್​ಗೆ ಸಿಲುಕಿ ಬಾಲಕಿ ಸಾವು

ಜನರೇಟರ್​ ಫ್ಯಾನ್​ಗೆ ಸಿಲುಕಿ ಬಾಲಕಿ ಸಾವು

ಜನರೇಟರ್​ಗೆ ಕೂದಲು ಸಿಲುಕಿಕೊಂಡ ನಂತರ ಸಹಾಯಕ್ಕಾಗಿ ಬಾಲಕಿ ಕೂಗಿಕೊಂಡಿದ್ದಾಳೆ. ಆದರೆ ಸ್ಥಳದಲ್ಲಿ ಧ್ವನಿವರ್ಧಕ ಅಳವಡಿಸಿದ್ದರಿಂದ ಯಾರಿಗೂ ಬಾಲಕಿಯ ಕಿರುಚಾಟ ಕೇಳಿಸಿಲ್ಲ. ಕೊನೆಗೆ ಜನರೇಟರ್ ಸ್ವತಃ ಸ್ಥಗಿತಗೊಂಡ ನಂತರ ಜನರಿಗೆ ಬಾಲಕಿ ಕಿರುಚಾಟ ಕೇಳಿಸಿದೆ. ತಕ್ಷಣವೇ ಬಾಲಕಿಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೂ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಸಾವನ್ನಪ್ಪಿದ್ದಾಳೆ.

ಮುಂದೆ ಓದಿ ...
  • Share this:

ಚೆನ್ನೈ: ತಮಿಳುನಾಡಿನ (Tamil Nadu) ಕಾಂಚೀಪುರಂ (Kancheepuram) ಜಿಲ್ಲೆಯಲ್ಲಿ ದೇವಸ್ಥಾನದ ಉತ್ಸವದ (Temple Festival) ಸಂದರ್ಭದಲ್ಲಿ ಎತ್ತಿನ ಗಾಡಿಯಲ್ಲಿ ಇಟ್ಟಿದ್ದ ಜನರೇಟರ್‌​ಗೆ (Generator) ಕೂದಲು ಸಿಲುಕಿ 13 ವರ್ಷದ ಬಾಲಕಿಯೊಬ್ಬಳು ಸಾವಿಗೀಡಾದ (Girl Death) ದಾರುಣ ಘಟನೆ ನಡೆದಿದೆ. ಮಾರ್ಚ್​ 13ರಂದು ಈ ಘಟನೆ ನಡೆದಿದ್ದು, ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ ವಿಚ್ಚಂತಂಗಲ್ ಗ್ರಾಮದ ಎಸ್ ಲಾವಣ್ಯ ಎಂಬ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಮಾರ್ಚ್​ 12 ರಾತ್ರಿ ಹಬ್ಬದ ಕೊನೆಯ ದಿನದ ಪ್ರಯುಕ್ತ ಮೆರವಣಿಗೆ ನಡೆದಿತ್ತು. ಈ ವೇಳೆ ಡೀಸೆಲ್​ ಜನರೇಟರ್​ ಇಟ್ಟಿದ್ದ ಎತ್ತಿನ ಗಾಡಿಯಲ್ಲಿ ಕೆಲವು ಮಕ್ಕಳು ಕುಳಿತಿದ್ದರು. ಈ ವೇಳೆ 13 ವರ್ಷದ ಬಾಲಕಿ ಲಾವಣ್ಯಳ ಕೂದಲೂ ಜನರೇಟರ್​ನಲ್ಲಿದ್ದ ಫ್ಯಾನ್​ಗೆ ಸಿಲುಕಿಕೊಂಡು ದುರ್ಘಟನೆ ಸಂಭವಿಸಿದೆ.


ಯಾರಿಗೂ ಕೇಳಿಸದ ಬಾಲಕಿ ನರಳಾಟ


ಜನರೇಟರ್​ಗೆ ಕೂದಲು ಸಿಲುಕಿಕೊಂಡ ನಂತರ ಸಹಾಯಕ್ಕಾಗಿ ಬಾಲಕಿ ಕೂಗಿಕೊಂಡಿದ್ದಾಳೆ. ಆದರೆ ಸ್ಥಳದಲ್ಲಿ ಧ್ವನಿವರ್ಧಕ ಅಳವಡಿಸಿದ್ದರಿಂದ ಯಾರಿಗೂ ಬಾಲಕಿಯ ಕಿರುಚಾಟ ಕೇಳಿಸಿಲ್ಲ. ಕೊನೆಗೆ ಜನರೇಟರ್ ಸ್ವತಃ ಸ್ಥಗಿತಗೊಂಡ ನಂತರ ಜನರಿಗೆ ಬಾಲಕಿ ಕಿರುಚಾಟ ಕೇಳಿಸಿದೆ. ತಕ್ಷಣವೇ ಬಾಲಕಿಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ, ನಂತರ ಕಾಂಚೀಪುರಂ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.


ಇದನ್ನೂ ಓದಿ: Crime News: ತುಂಡು ತುಂಡಾಗಿ ಕತ್ತರಿಸಿದ ಮಹಿಳೆಯ ಮೃತದೇಹ ಪತ್ತೆ; ಹೆತ್ತ ತಾಯಿಯನ್ನೇ ಕೊಂದಳಾ ಮಗಳು?


ಬಲವಾದ ಪೆಟ್ಟು ಬಿದ್ದು ಸಾವು


ಜನರೇಟರ್​ ಕೂದಲು ಸಿಲುಕಿ ಲಾವಣ್ಯ ತಲೆಗೆ ಪೆಟ್ಟಾಗಿದ್ದರಿಂದ ಮೊದಲು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ನಂತರ ಕಾಂಚೀಪುರಂ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಲಾವಣ್ಯಳ ತಲೆಗೆ ಗಂಭೀರ ಗಾಯವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಮೃತಪಟ್ಟಿದ್ದಾರೆ. ಮಗರಾಳ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.


ಜನರೇಟರ್​ ಮಾಲೀಕ ಬಂಧನ


ಬಾಲಕಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದಾರೆ. ಪ್ರಕರಣದ ಸಂಬಂಧಿಸಿದಂತೆ ಪೊಲೀಸರು ಜನರೇಟರ್ ಆಪರೇಟರ್ ಮುನುಸಾಮಿಯನ್ನು ಬಂಧಿಸಿ ನಂತರ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.




ಕೆಲವು ತಿಂಗಳ ಹಿಂದೆ ತಾಯಿ ಕಳೆದುಕೊಂಡಿದ್ದ ಬಾಲಕಿ


ಸ್ಥಳೀಯರ ಮಾಹಿತಿಯ ಪ್ರಕಾರ, ಲಾವಣ್ಯ ಇತ್ತೀಚೆಗೆ ತಾಯಿಯನ್ನು ಕಳೆದುಕೊಂಡಿದ್ದಳು. ಅವರ ತಂದೆ ಸರವಣನ್​ ಚೆನ್ನೈನಲ್ಲಿರುವುದರಿಂದ ಕಳೆದ ನಾಲ್ಕು ವರ್ಷಗಳಿಂದ ವಿಚ್ಚಂತಂಗಲ್ ಗ್ರಾಮದಲ್ಲಿ ಬಾಲಕಿ ತನ್ನ ಅಜ್ಜ-ಅಜ್ಜಿಯರಾದ ಕಾಂಡಿಪನ್ ಮತ್ತು ಲತಾ ಅವರ ಆಶ್ರಯದಲ್ಲಿ ಬೆಳೆಯುತ್ತಿದ್ದಳು. ಲಾವಣ್ಯ ಕಲಕತೂರಿನ ಪಂಚಾಯತ್ ಯೂನಿಯನ್ ಮಿಡ್ಲ್ ಸ್ಕೂಲ್​ನಲ್ಲಿ ಏಳನೇ ತರಗತಿ ಓದುತ್ತಿದ್ದಳು. ಲಾವಣ್ಯ ಓದುವುದರಲ್ಲಿ ಮುಂದಿದ್ದಳು ಹಾಗೂ ಅನೇಕ ಶೈಕ್ಷಣಿಕ ಪದಕಗಳನ್ನು ಪಡೆದುಕೊಂಡಿದ್ದಳು ಎಂದು ಶಿಕ್ಷಕರು ತಿಳಿಸಿದ್ದಾರೆ.


ಇದನ್ನೂ ಓದಿ: Husband and Wife: ಮೈತುಂಬಾ ಬಟ್ಟೆ ಧರಿಸಲಿಲ್ಲವೆಂದು ಪತ್ನಿಯ ಕತ್ತು ಸೀಳಿ ಕೊಂದ ಪತಿ!


ಆಟವಾಡುತ್ತಿದ್ದ ಮಗು ಕಟ್ಟಡದಿಂದ ಬಿದ್ದು ಸಾವು


ಆಟ ಆಡುತ್ತಿದ್ದ ಒಂದೂವರೆ ವರ್ಷದ ಮಗುವೊಂದು ಕಟ್ಟಡದ ಮೇಲಿನಿಂದ ಬಿದ್ದು ಸಾವನ್ನಪ್ಪಿದ ಘಟನೆ ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಆಜಾದ್ ನಗರದಲ್ಲಿ ನಡೆದಿದೆ. ನಗರದ 6ನೇ ಕ್ರಾಸ್‍ನ ವಿನಯ್ ಎಂಬುವವರ ಪುತ್ರಿ ದೀಕ್ಷಾ ಎಂಬ ಮಗು ಸಾವನ್ನಪ್ಪಿದೆ. ರಾತ್ರಿ 9 ಗಂಟೆಗೆ ಮಗುವಿಗೆ ತಾಯಿ ಊಟ ಮಾಡಿಸುತ್ತಿದ್ದಾಗ ಆಟವಾಡುತ್ತ ಗ್ರಿಲ್ ಮೇಲೆ ಹತ್ತಿದ್ದು, ನೋಡ ನೋಡುತ್ತಿದ್ದಂತೆ ಮಗು ಜಾರಿ ಕೆಳಗೆ ಬಿದ್ದಿದೆ. ತಕ್ಷಣ ಆಸ್ಪತ್ರೆಗೆ ಸಾಗಿಸಲು ಮುಂದಾದರಾದರೂ ಮಾರ್ಗ ಮಧ್ಯೆಯೇ ಮಗು ಕೊನೆಯುಸಿರೆಳೆದಿದೆ.

Published by:Rajesha M B
First published: