PUBG ಆಡಲು ಪೋಷಕರ ಖಾತೆಯಿಂದ 10 ಲಕ್ಷ ಡ್ರಾ ಮಾಡಿ ಮನೆ ತೊರೆದ ಬಾಲಕ

ಪಬ್ ಜೀ ಗೇಮ್​ ಹೊಸ ಮಾದರಿಯಲ್ಲಿ ಹದಿಹರೆಯದ ವಿದ್ಯಾರ್ಥಿಗಳನ್ನು ಸೆಳೆಯುತ್ತಿದೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಮುಂಬೈ (ಆ. 27):  ಪಬ್​​ಜಿ ಗೇಮ್ (PUBG)​ ಆಟದ ಗೀಳು ಯಾವ ಮಟ್ಟಿಗೆ ಮಕ್ಕಳನ್ನು ಆವರಿಸುತ್ತದೆ ಎಂಬುದನ್ನು ಈಗಾಗಲೇ ಅನೇಕ ಪ್ರಕರಣಗಳಲ್ಲಿ ದಾಖಲಾಗಿದೆ. ಇದೇ ರೀತಿ ಈ ಪಬ್​ಜಿ ಆಟವಾಡಲು ಮುಂಬೈನ ಅಂಧೇರಿಯ (Mumbai Andheri) 16 ವರ್ಷದ ಯುವಕ ತನ್ನ ಪೋಷಕರ ಬ್ಯಾಂಕ್​ನಿಂದ ಬರೋಬ್ಬರಿ 10 ಲಕ್ಷ ರೂಪಾಯಿ ಹಣವನ್ನು ತೆಗೆದುಕೊಂಡಿದ್ದಾರೆ. ಪಬ್​ಜಿ ಗೇಮ್​ಗಾಗಿ ಐಡಿ (PUBG Game ID) ಪಡೆಯಲು ಈತ ಇಷ್ಟೊಂದು ಮೊತ್ತದ ಹಣವನ್ನು ಪಡೆದಿದ್ದಾನೆ. ಇದಾದ ಬಳಿಕ ಬೆದರಿದ ಬಾಲಕ ಮನೆಬಿಟ್ಟು ಓಡಿ ಹೋಗಿದ್ದಾನೆ. ಈ ವೇಳೆ ಪತ್ರವೊಂದನ್ನು ಬರೆದು ಮನೆತೊರೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

  ಈ ಕುರಿತು ಪೋಷಕರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಬಾಲಕನ ಪತ್ತೆಗೆ ಅಪರಾಧ ವಿಭಾಗದ ವಿಶೇಷ ತಂಡ ರಚಿಸಲಾಗಿತ್ತು. ಆತನನ್ನು ಪತ್ತೆ ಮಾಡಿದ ತಂಡ ಹೆತ್ತವರೊಂದಿಗೆ ಆತನನ್ನು ಸೇರಿಸಲು ಯಶಸ್ವಿಯಾಗಿದ್ದಾರೆ.

  ಮನೆಗೆ ಬರುವುದಿಲ್ಲ ಎಂದು ಪತ್ರ ಬರೆದಿದ್ದ ಬಾಲಕ

  ಘಟನೆ ಕುರಿತು ಮಾತನಾಡಿದ ಮುಂಬೈನ ಅಂಧೇರಿಯ ಅಪರಾಧ ವಿಭಾಗದ ಪೊಲೀಸರು, ಬುಧವಾರ ಬಾಲಕ ಮನೆಯಲ್ಲಿ ಪತ್ರವನ್ನು ಬರೆದು, ನಾನು ಮನೆ ಬಿಟ್ಟು ಹೋಗುತ್ತಿದ್ದು, ಮತ್ತೆ ಎಂದು ಬರುವುದಿಲ್ಲ ಎಂದು ಉಲ್ಲೇಖಿಸಿದ್ದ. ತಕ್ಷಣಕ್ಕೆ ಪೋಷಕರು ದೂರು ನೀಡಿದ್ದು, ಆತನ ಕುರಿತ ಮಾಹಿತಿ ಪಡೆದ ಬಳಿಕ ಆತನ ಪತ್ತೆಗೆ ಮುಂದಾಗಲಾಯಿತು. ಆತನ ಸ್ನೇಹಿತರು, ಸಹಪಾಠಿಗಳನ್ನು ವಿಚಾರಣೆ ನಡೆಸಿದೆವು. ಇದಾದ ಬಳಿಕ ಪೋಷಕರು ಪಬ್​ಜಿ ಗೇಮ್​ಗಾಗಿ ಬಾಲಕ 10 ಲಕ್ಷ ಹಣವನ್ನು ತಮ್ಮ ಖಾತೆಯಿಂದ ಬಾಲಕ ಹಣ ಡ್ರಾ ಮಾಡಿಕೊಂಡಿರುವುದನ್ನು ತಿಳಿಸಿದ್ದಾರೆ.

  ಇದನ್ನು ಓದಿ: ಕೇಂದ್ರ ಸಚಿವರ ಮಗಳ ಮದುವೆ; ಚುನಾವಣಾ ನೀತಿ ಸಂಹಿತೆ ನಡುವೆಯೂ ರಸ್ತೆಗೆ ಡಾಂಬರು

  ಆತ ಮನೆ ಬಿಟ್ಟು ಹೋದ ತಕ್ಷಣದಿಂದ ಸ್ಥಳೀಯ ಸಿಸಿಟಿವಿ ಮುಖಾಂತರ ಆತನ ಚಲನವಲನ ಪತ್ತೆಗೆ ಮುಂದಾಗಲಾಯಿತು. ಬಳಿಕ ಆತನ ಅಂಧೇರಿಯ ಮಹಾಕಾಳಿ ಗುಹೆ ಬಳಿ ಪತ್ತೆಯಾಗಿದ್ದಾನೆ. ಆತನನ್ನು ಕುಟುಂಬದೊಂದಿಗೆ ಸೇರಿಸಿದ್ದು, ಸಮಾಲೋಚನೆ ನಡೆಸಿದ್ದೇವೆ. ಪೋಷಕರಿಗೂ ಸಮಾಲೋಚನೆ ನಡೆಸಲಾಗಿದೆ ಎಂದರು.

  ದಕ್ಷಿಣ ಕನ್ನಡದಲ್ಲಿ ಆಟಕ್ಕಾಗಿ ತಲೆ ಕೂದಲಿಗೆ ಕತ್ತರಿ ಹಾಕಿದ್ದ ಬಾಲಕ

  ಕಳೆದ ಎರಡು ತಿಂಗಳ ಹಿಂದೆ ಇದೇ ಪಬ್​ ಜಿ ಹುಚ್ಚಿಗೆ ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ  ಪಬ್ ಜೀ ಗೇಮ್ ನಿಂದಾಗಿ ಬಾಲಕನೋರ್ವನ ಕೊಲೆ ನಡೆದ ಘಟನೆ ಮಾಸುವ ಮೊದಲೇ ಪಬ್ ಜೀ ಗೇಮ್ ಆಧಾರಿತ ಇಂಥಹುದೇ ಒಂದು ಘಟನೆ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಎಂಬಲ್ಲಿ ನಡೆದಿದೆ. ಉಪ್ಪಿನಂಗಡಿಯ ಪ್ರೌಢ ಶಾಲಾ ವಿದ್ಯಾರ್ಥಿಯೋರ್ವ ಪಬ್ ಜೀ ಪ್ರೀ ಪೈಯರ್ ಗೇಮ್ ಆಡಿಕೊಂಡು ಕಲೆಕೂದಲನ್ನು ಕತ್ತರಿಸಿಕೊಂಡ ಘಟನೆ ವರದಿಯಾಗಿತ್ತು.

  ಪಬ್ ಜೀ ಗೇಮ್​ ಹೊಸ ಮಾದರಿಯಲ್ಲಿ ಹದಿಹರೆಯದ ವಿದ್ಯಾರ್ಥಿಗಳನ್ನು ಸೆಳೆಯುತ್ತಿದ್ದ, ಹೆಚ್ಚಾಗಿ ಮಕ್ಕಳೇ ಇದಕ್ಕೆ ಬಲಪಶುವಾಗುತ್ತಿರುವ ಪ್ರಕರಣ ಆಗ್ಗಿಂದ ಆಗೆ ವರದಿ ಆಗುತ್ತಲೇ ಇರುತ್ತದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
  Published by:Seema R
  First published: