• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Bangladesh: ಕಣ್ಣಾಮುಚ್ಚಾಲೆ ವೇಳೆ ಅಡಗಿಕೊಂಡ ಬಾಂಗ್ಲಾದ ಬಾಲಕ 6 ದಿನಗಳ ಬಳಿಕ ಮಲೇಷ್ಯಾದಲ್ಲಿ ಪತ್ತೆ!

Bangladesh: ಕಣ್ಣಾಮುಚ್ಚಾಲೆ ವೇಳೆ ಅಡಗಿಕೊಂಡ ಬಾಂಗ್ಲಾದ ಬಾಲಕ 6 ದಿನಗಳ ಬಳಿಕ ಮಲೇಷ್ಯಾದಲ್ಲಿ ಪತ್ತೆ!

ಕಂಟೈನರ್​ನಲ್ಲಿ ಪತ್ತೆಯಾದ ಬಾಲಕ

ಕಂಟೈನರ್​ನಲ್ಲಿ ಪತ್ತೆಯಾದ ಬಾಲಕ

ಈ ಆಘಾತಕಾರಿ ಘಟನೆ ಬಾಂಗ್ಲಾದೇಶದ ಚಿತ್ತಗಾಂಗ್‌ನಲ್ಲಿ ನಡೆದಿದೆ. ಕಣ್ಣಾಮುಚ್ಚಾಲೆ ಆಡುವಾಗ, ಅಡಗಿಕೊಳ್ಳಲು ತಪ್ಪಾದ ಸ್ಥಳವನ್ನು ಆಯ್ಕೆ ಮಾಡಿದ್ದೇ ಇದಕ್ಕೆ ಕಾರಣವಾಗಿದೆ.

 • Share this:

  ಢಾಕಾ(ಜ.30): ನಾವೆಲ್ಲರೂ ನಮ್ಮ ಬಾಲ್ಯದಲ್ಲಿ ಸಾಕಷ್ಟು ಬಾರಿ ಕಣ್ಣಾಮುಚ್ಚಾಲೆ (Hide And Seek) ಆಟ ಆಡಿದ್ದೇವೆ. ಈಗಲೂ ಹಳ್ಳಿಗಳಲ್ಲಿ ಈ ಆಟವನ್ನು ಹೆಚ್ಚಾಗಿ ಆಡುತ್ತಾರೆ. ಇದರಲ್ಲಿ ಕೆಲವರು ಹಲವೆಡೆ ತಲೆಮರೆಸಿಕೊಂಡರೆ ಮತ್ತೆ ಕೆಲವರು ಅಡಗಿ ಕುಳಿತುಕೊಳ್ಳುತ್ತಾರೆ. ಬಹುಶಃ ಎಲ್ಲರಿಗೂ ಈ ಆಟಕ್ಕೆ ಸಂಬಂಧಿಸಿದಂತೆ ಕೆಲವು ನೆನಪುಗಳಿರುತ್ತವೆ. ಆದರೆ ಇಲ್ಲೊಬ್ಬ ಬಾಲಕ ಕಣ್ಣಾಮುಚ್ಚಾಲೆ ಆಡುತ್ತಾ, 6 ದಿನಗಳ ಕಾಲ ಪ್ರಯಾಣಿಸಿ ಬೇರೆ ದೇಶವನ್ನು ತಲುಪಿದ್ದಾನೆ. ಹೌದು ಈತ ಅಡಗಿಕೊಳ್ಳಲು ಆಯ್ಕೆ ಮಾಡಿದ ಸ್ಥಳವೇ ಹಾಗಿತ್ತು.


  ಅಧಿಕಾರಿಗಳ ಪ್ರಕಾರ, ಬಾಲಕನನ್ನು ಫಹೀಮ್ ಎಂದು ಗುರುತಿಸಲಾಗಿದ್ದು, ಅವನು ಕಣ್ಣಾಮುಚ್ಚಾಲೆ ಆಡುವಾಗ ಕಂಟೈನರ್‌ನಲ್ಲಿ ಮಲಗಿದ್ದಾಗಿ ಹೇಳಿದ್ದಾನೆ. ಆದರೆ, ಎದ್ದು ಹೊರಗೆ ಹೋಗಲು ಯತ್ನಿಸಿದಾಗ ಕಂಟೈನರ್ ಲಾಕ್ ಆಗಿತ್ತು. ಅವನು ಕಿರುಚಿದ್ದಾನೆ, ಅತ್ತಿದ್ದಾನೆ, ಆದರೆ ತನ್ನ ಧ್ವನಿ ಯಾರಿಗೂ ಕೇಳಿಸಲಿಲ್ಲ ಎಂದು ಮಗು ಹೇಳಿದೆ. ಈ ಕಂಟೈನರ್​ಲ್ಲಿ ಮಗು 6 ದಿನಗಳ ಕಾಲ ಏನನ್ನೂ ತಿನ್ನದೆ, ಕುಡಿಯದೆ ಜೀವಂತವಾಗಿತ್ತು. ಆ ಮಗು ಇಷ್ಟು ದಿನ ತಿನ್ನದೇ ಬದುಕಿದ್ದು ಅವನ ಅದೃಷ್ಟ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಲೇಷಿಯಾದ ಅಧಿಕಾರಿಗಳು ಮಗುವನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು.


  ಇದನ್ನೂ ಓದಿ: Weekend Story: ಹಣಕ್ಕಿಂತ ಸಂಬಂಧ ಮುಖ್ಯ, ಚಿಕ್ಕಪ್ಪ ತಿಳಿಸಿದ ಬಾಂಧವ್ಯದ ಮಹತ್ವ


  ಇದು ಮಾನವ ಕಳ್ಳಸಾಗಣೆ ಪ್ರಕರಣವಲ್ಲ, ಮಗು ಹೇಳಿದ್ದು ನಿಜ, ಫಹೀಂನನ್ನು ಆತನ ಮನೆಗೆ ಕಳುಹಿಸಲು ನಾವು ಬಾಂಗ್ಲಾದೇಶದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.


  ಹೌದು, ಈ ಮಗು ಕಣ್ಣಾಮುಚ್ಚಾಲೆ ಆಡುತ್ತಲೇ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ತಲುಪಿದೆ. ಅಚ್ಚರಿಯ ಸಂಗತಿ ಎಂದರೆ ಅವರ ಮನೆಯವರಿಗೂ ಈ ವಿಚಾರ ಗೊತ್ತಿರಲಿಲ್ಲ. ಈ ಮಗು ಕಣ್ಣಾಮುಚ್ಚಾಲೆ ಆಡುತ್ತಾ ಸಾಗರ ದಾಟಿದೆ. ವಾಸ್ತವವಾಗಿ, ಜನವರಿ 11 ರಂದು, ಬಾಂಗ್ಲಾದೇಶದಲ್ಲಿ ಮಗುವೊಂದು ಇದ್ದಕ್ಕಿದ್ದಂತೆ ಕಣ್ಮರೆಯಾಗಿತ್ತು. ಮೊದಲು ಆತ ತನ್ನ ಸ್ನೇಹಿತರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದ. ಎಲ್ಲಾ ಕಡೆ ಹುಡುಕಾಡಿದರೂ ಮಗು ಪತ್ತೆಯಾಗಿಲ್ಲ. ಈ ಘಟನೆ ನಡೆದು 6 ದಿನಗಳ ನಂತರ ಮಲೇಷ್ಯಾದಲ್ಲಿ ಆ ಮಗು ಪತ್ತೆಯಾಗಿದೆ. ಇದು ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ.


  ತಕ್ಷಣ ಮಗು ಆಸ್ಪತ್ರೆಗೆ


  ಫಹೀಮ್ 6 ದಿನಗಳ ಕಾಲ ಕಂಟೇನರ್ ಒಳಗೆ ಇದ್ದ. ಈ ಸಮಯದಲ್ಲಿ ಅವರು ಸುಮಾರು 2000 ಮೈಲುಗಳಷ್ಟು ಸಮುದ್ರಯಾನ ಮಾಡಿದರು ಮತ್ತು ಅದರ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಮಲೇಷ್ಯಾದಲ್ಲಿ ಈ ಮಗುವನ್ನು ಸಿಬ್ಬಂದಿ ಪತ್ತೆ ಹಚ್ಚಿದಾಗ ಆತನ ಸ್ಥಿತಿ ಸರಿ ಇರಲಿಲ್ಲ. ನಂತರ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈಗ ಆತನ ಆರೋಗ್ಯ ಸುಧಾರಿಸಿದ್ದು,ಆತನನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿದ್ದಾರೆ.


  ಮಾಧ್ಯಮ ವರದಿಗಳ ಪ್ರಕಾರ, ಜನವರಿ 11 ರಂದು ಬಾಂಗ್ಲಾದೇಶದಿಂದ ನಾಪತ್ತೆಯಾಗಿದ್ದ ಮಗುವನ್ನು ಜನವರಿ 17 ರಂದು ಮಲೇಷ್ಯಾದ ಪೋರ್ಟ್ ಕ್ಲಾಂಗ್‌ನಲ್ಲಿ ಪತ್ತೆಯಾಗಿದೆ. ಬಾಂಗ್ಲಾದೇಶದಿಂದ ಬಂದಿದ್ದ ಸಮುದ್ರ ಹಡಗಿನ ಕಂಟೈನರ್ ಗಳನ್ನು ಇಲ್ಲಿನ ಸಿಬ್ಬಂದಿ ಇಳಿಸಿದಾಗ ಕಂಟೈನರ್ ನೋಡಿ ಬೆಚ್ಚಿಬಿದ್ದಿದ್ದಾರೆ. ಸ್ಥಳೀಯ ಭಾಷೆ ಮಾತನಾಡಲು ಅಥವಾ ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಮಗು ಕಂಟೇನರ್ ಒಳಗಿನಿಂದ ಸರಕುಗಳೊಂದಿಗೆ ಹೊರಬಂದಿದೆ. ಅಂತಹ ಪರಿಸ್ಥಿತಿಯಲ್ಲಿ, ಮಗುವನ್ನು ಮೊದಲು ನೋಡಿದ ಜನರು ಅವನ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಾಗಲಿಲ್ಲ.


  ಇದನ್ನೂ ಓದಿ: Explained: ಆರ್ಥಿಕತೆಯಲ್ಲಿ ಕುಸಿತ; ಹಣ ಸಹಾಯಕ್ಕಾಗಿ IMF ಮೊರೆ ಹೋದ ಬಾಂಗ್ಲಾದೇಶ


  ಬಹುಶಃ ಈ ಮಗು ಮಾನವ ಕಳ್ಳಸಾಗಣೆಗೆ ಬಲಿಯಾಗಿರಬಹುದು ಎಂದು ಹಲವರು ಆರಂಭದಲ್ಲಿ ಊಹಿಸಿದ್ದಾರೆ, ಈ ಅನುಮಾನದ ನಂತರ ತಕ್ಷಣವೇ ಪೊಲೀಸರನ್ನು ಕರೆಯಲಾಯಿತು. ಅಧಿಕಾರಿಗಳು ಮಗುವನ್ನು ವಿಚಾರಣೆಗೆ ಒಳಪಡಿಸಿದಾಗ, ಅವರು ಬಾಂಗ್ಲಾದೇಶದ ಚಿತ್ತಗಾಂಗ್ ನಿವಾಸಿಯಾಗಿದ್ದು, 6 ದಿನಗಳಿಂದ ಶಿಪ್ಪಿಂಗ್ ಕಂಟೈನರ್‌ನಲ್ಲಿ ಲಾಕ್ ಆಗಿದ್ದ ಎಂದು ತಿಳಿದುಬಂದಿದೆ.


  .
  ಆರಂಭದಲ್ಲಿ ಕಳ್ಳಸಾಗಣೆ ಪ್ರಕರಣ


  ಈ ಹಡಗು ಕಂಟೈನರ್ 6 ದಿನಗಳ ಪ್ರಯಾಣದ ನಂತರ ಮಲೇಷ್ಯಾ ತಲುಪಿದಾಗ, ಬಂದರು ಸಿಬ್ಬಂದಿ ಅದನ್ನು ಹೊರತೆಗೆದರು. ಆರಂಭದಲ್ಲಿ ಕಳ್ಳಸಾಗಾಣಿಕೆ ವಿಚಾರವಾಗಿರಬಹುದು ಎಂದುಕೊಂಡ ಅಧಿಕಾರಿಗಳು ವಿಚಾರಣೆ ವೇಳೆ ಸಂಪೂರ್ಣ ವಿಷಯ ಬಯಲಾಗಿದೆ. ಮಗುವಿನ ಹೆಸರು ಫಹೀಮ್ ಮತ್ತು ಅವನು ಬಾಂಗ್ಲಾದೇಶದವನು ಎಂದು ತನಿಖೆಯಿಂದ ತಿಳಿದುಬಂದಿದೆ.

  Published by:Precilla Olivia Dias
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು