Shocking News: ಮದುವೆ ನಿರಾಕರಿಸಿದ ಯುವತಿಯ ಮೇಲೆ ಹಲ್ಲೆ! ತಲೆ ಬೋಳಿಸಿ ವಿಕೃತಿ ಮೆರೆದ ದುರುಳರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವರದಿಗಳ ಪ್ರಕಾರ ಯುವತಿಗೆ ತಂದೆ ತಾಯಿ ಇಲ್ಲವೆಂದು ತಿಳಿದುಬಂದಿದ್ದು, ಸಹೋದರಿಯರು, ಅತ್ತಿಗೆ ಹಾಗೂ ಗ್ರಾಮಸ್ಥರು ಸೇರಿ ಆಕೆಗೆ ಒಪ್ಪಿಗೆ ಇಲ್ಲದಿದ್ದರು ಮದುವೆ ಗೊತ್ತುಪಡಿಸಿದ್ದಾರೆ. ಆದರೆ ಆ ಯುವಕನೊಂದಿಗೆ ಯುವತಿ ಮದುವೆಗೆ ನಿರಾಕರಿಸಿದ್ದಾಳೆ.

  • Share this:

ಜಾರ್ಖಂಡ್​: 19 ವರ್ಷದ ಯುವತಿಯೊಬ್ಬಳು ಮದುವೆಯಾಗಲು (Marriage) ಒಪ್ಪಲಿಲ್ಲ ಎಂದು ಊರಿನ ಜನ ಎಲ್ಲಾ ಸೇರಿ ಆಕೆಯ ತಲೆ ಬೋಳಿಸಿ (Chopped Hair) ಚಪ್ಪಲಿ ಹಾರ ಹಾಕಿ ಊರಲ್ಲೆಲ್ಲಾ ಮೆರವಣಿಗೆ ಮಾಡಿ ಅವಮಾನಿಸಿರುವ ಘಟನೆ ಜಾರ್ಖಂಡ್‌ನ (Jharkhand) ಪಲಮು ಜಿಲ್ಲೆಯಲ್ಲಿ ನಡೆದಿದೆ. ರಾಜಧಾನಿ ರಾಂಚಿಗೆ 185 ಕಿಮೀ ದೂರದಲ್ಲಿ ಭಾನುವಾರ ಸಮಾಜ ತಲೆ ತಗ್ಗಿಸುವ ಘಟನೆ ನಡೆದಿದೆ.


ವರದಿಗಳ ಪ್ರಕಾರ ಯುವತಿಗೆ ತಂದೆ ತಾಯಿ ಇಲ್ಲವೆಂದು ತಿಳಿದುಬಂದಿದ್ದು, ಸಹೋದರಿಯರು, ಅತ್ತಿಗೆ ಹಾಗೂ ಗ್ರಾಮಸ್ಥರು ಸೇರಿ ಆಕೆಗೆ ಒಪ್ಪಿಗೆ ಇಲ್ಲದಿದ್ದರು ಮದುವೆ ಗೊತ್ತುಪಡಿಸಿದ್ದಾರೆ. ಆದರೆ ಆ ಯುವಕನೊಂದಿಗೆ ಯುವತಿ ಮದುವೆಗೆ ನಿರಾಕರಿಸಿದ್ದಾಳೆ. ಆದರೆ ಪಂಚಾಯಿತಿಯಲ್ಲಿ ಮದುವೆ ಆಗಲೇಬೇಕೆಂದು ಯುವತಿಗೆ ಒತ್ತಡ ಏರಲಾಗಿದೆ.


ಇದನ್ನೂ ಓದಿ: Kerala: ವಲಸೆ ಕಾರ್ಮಿಕನನ್ನು ಕಳ್ಳನೆಂದು ಭಾವಿಸಿ 2 ಗಂಟೆ ಥಳಿತ, ಪಾಪಿಗಳ ಏಟಿಗೆ ಪ್ರಾಣಬಿಟ್ಟ ಬಡಪಾಯಿ!


ಇಷ್ಟವಿಲ್ಲದಿದ್ದರೂ ಮದುವೆ ಒತ್ತಾಯ


ಯುವತಿಯ ಪೋಷಕರು ಈ ಹಿಂದೆಯೇ ತೀರಿಕೊಂಡಿದ್ದರು. ಯುವತಿಯ ಮೂವರು ಸಹೋದರಿಯರುವ ವಿವಾಹವಾಗಿ ಗಂಡನ ಮನೆಯಲ್ಲಿದ್ದಾರೆ. ಇರುವ ಒಬ್ಬ ಸಹೋದರ ವಿಕಲಾಂಗನಾಗಿದ್ದು, ಹಾಸಿಗೆ ಹಿಡಿದಿದ್ದಾನೆ. ಈ ವೇಳೆ ಆಕೆಯ ಅತ್ತಿಗೆ, ಒಬ್ಬ ಯುವಕನೊಬ್ಬನ ಜೊತೆ ವಿವಾಹ ಮಾಡಲು ಸಿದ್ಧತೆ ನಡೆಸಿದ್ದಾಳೆ. ಆದರೆ ಯುವತಿ ಆ ಯುವಕನನ್ನು ವರಿಸಲು ನಿರಾಕರಿಸಿದ್ದಾಳೆ. ನಂತರ ಯುವತಿಯ ಕುಟುಂಬಸ್ಥರು ಊರಿನಲ್ಲಿ ಪಂಚಾಯಿತಿ ಸೇರಿಸಿದ್ದಾರೆ. ಅಲ್ಲಿ ಯುವತಿಗೆ ಮದುವೆ ಮಾಡಿಕೊಳ್ಳಲೇ ಬೇಕೆಂದು ಕಟ್ಟಪ್ಪಣೆ ಮಾಡಲಾಗಿದೆ.




ಮದುವೆ ದಿನ ವಿವಾಹ ನಿರಾಕರಿಸಿದ ಯುವತಿ


ಸಹೋದರಿ ಮತ್ತು ಊರಿನವರು ಯುವತಿಗೆ ಏಪ್ರಿಲ್ 20 ರಂದು ಮದುವೆ ನಿಗದಿ ಮಾಡಿದ್ದಾರೆ. ಆದರೆ ವರ ಗ್ರಾಮ ಆ ದಿನದಂದು ಗ್ರಾಮಕ್ಕೆ ತಲುಪುತ್ತಿದ್ದಂತೆ ಯುವತಿ ಮದುವೆಯಾಗುವುದಕ್ಕೆ ನಿರಾಕರಿಸಿದ್ದಾಳೆ. ಅಲ್ಲದೆ ಮನೆ ಬಿಟ್ಟು ಹೋಗಿದ್ದು, 20 ದಿನಗಳ ನಂತರ ಊರಿಗೆ ಬಂದಿದ್ದಾಳೆ. ಯುವತಿ ಭಾನುವಾರ ಊರಿಗೆ ಬಂದ ವಿಷಯ ಗ್ರಾಮಸ್ಥರಿಗೆ ತಿಳಿದಿದ್ದು, ಮತ್ತೆ ಆಕೆಯ ಸಂಬಂಧಿಗಳು ಹಾಗೂ ಕುಟುಂಬದವರನ್ನು ಸೇರಿಸಿ ಪಂಚಾಯಿತಿ ಮಾಡಲಾಗಿದೆ.


ಎಲ್ಲಿದ್ದೆ ಎಂದು ಹೇಳದ್ದಕ್ಕೆ ತಲೆ ಬೋಳಿಸಿ ವಿಕೃತಿ


20 ದಿನಗಳ ನಂತರ ಊರಿಗೆ ಬಂದ ಆಕೆಯನ್ನು ಇಷ್ಟು ದಿನ ಎಲ್ಲಿ ಹೋಗಿದ್ದೆ? ಎಂದು ಪ್ರಶ್ನಿಸಿದ್ದಾರೆ. ಆದರೆ ಆಕೆ ಇವರ ಪ್ರಶ್ನೆಗೆ ಉತ್ತರಿಸಿದೇ ಮೌನವಾಗಿದ್ದಾಳೆ. ಇದರಿಂದ ಕುಪಿತಗೊಂಡ ಜನ ಯುವತಿಯ ಮೇಲೆ ಹಲ್ಲೆ ಮಾಡಿದ್ದಾರೆ. ಪಂಚಾಯಿತಿಯಲ್ಲಿ ಆಕೆಯ ತಲೆ ಬೋಳಿಸುವ ನಿರ್ಧಾರ ಮಾಡಿದ್ದಾರೆ. ನಂತರ ತಲೆ ಬೋಳಿಸಿ, ಆಕೆಗೆ ಚಪ್ಪಲಿ ಹಾರ ಹಾಕಿ ಊರಲ್ಲೆಲ್ಲಾ ಮೆರವಣಿಗೆ ಮಾಡಿದ್ದಾರೆ. ನಂತರ ಆಕೆಯನ್ನು ಊರಿಂದ ಆಚೆಗೆ ಬಿಟ್ಟು ಬಂದಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: Kidnap Case: ಶಿವಮೊಗ್ಗ ವಿದ್ಯಾರ್ಥಿನಿ ಕಿಡ್ನಾಪ್​ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಪೊಲೀಸರಿಂದ ಬಯಲಾಯ್ತು ಯುವತಿಯ ಮಹಾನಾಟಕ

 

ನಾಲ್ವರ ಬಂಧನ


ವಿಷಯ ತಿಳಿದ ಪೊಲೀಸರು ಗ್ರಾಮಕ್ಕೆ ಆಗಮಿಸಿದ್ದಾರೆ. ಅವಮಾನದಿಂದ ಆಕೆ ಮಾನಸಿಕವಾಗಿ ಕುಗ್ಗಿ ಹೋಗಿದ್ದು, ತಕ್ಷಣ ಮೇದಿನಿಗರದ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಯುವತಿಯ ಅತ್ತಿಗೆ, ಮೂವರು ಪಂಚಾಯತಿಯ ಸದಸ್ಯರು ಸೇರಿದಂತೆ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

First published: