ಹೆಂಡತಿ, ಮೂವರು ಮಕ್ಕಳನ್ನು ಕೊಂದ ಟೆಕ್ಕಿ; ವಾಟ್ಸಾಪ್​ನಲ್ಲಿ ವಿಡಿಯೋ ಹಾಕಿ ತಪ್ಪೊಪ್ಪಿಕೊಂಡ ಆರೋಪಿ

ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದ ಸುಮಿತ್ ಕುಮಾರ್​ಗೆ ತನ್ನ ಕುಟುಂಬವನ್ನು ಸಾಕುವುದು ಕಷ್ಟಕರವಾಗಿತ್ತು. ಕಳೆದ ಡಿಸೆಂಬರ್​ನಲ್ಲಿ ಬೆಂಗಳೂರಿನ ತನ್ನ ಕೆಲಸಕ್ಕೆ ಸುಮಿತ್  ರಾಜೀನಾಮೆ ನೀಡಿದ್ದರು.

Sushma Chakre | news18
Updated:April 22, 2019, 9:36 PM IST
ಹೆಂಡತಿ, ಮೂವರು ಮಕ್ಕಳನ್ನು ಕೊಂದ ಟೆಕ್ಕಿ; ವಾಟ್ಸಾಪ್​ನಲ್ಲಿ ವಿಡಿಯೋ ಹಾಕಿ ತಪ್ಪೊಪ್ಪಿಕೊಂಡ ಆರೋಪಿ
ಸಾಂದರ್ಭಿಕ ಚಿತ್ರ
Sushma Chakre | news18
Updated: April 22, 2019, 9:36 PM IST
ನವದೆಹಲಿ (ಏ. 22): 34 ವರ್ಷದ ಸಾಫ್ಟ್​ವೇರ್​ ಇಂಜಿನಿಯರ್ ತನ್ನ ಹೆಂಡತಿ, ಮೂವರು ಮಕ್ಕಳನ್ನು ಕೊಲೆ ಮಾಡಿ ವಾಟ್ಸಾಪ್​ನಲ್ಲಿ ತಪ್ಪೊಪ್ಪಿಕೊಂಡಿರುವ ಆಘಾತಕಾರಿ ಘಟನೆ ಘಜಿಯಾಬಾದ್​ನಲ್ಲಿ ನಡೆದಿದೆ.

ನಿನ್ನೆ ಈ ಘಟನೆ ನಡೆದಿದ್ದು, ಈ ಕುರಿತು ಗಂಡನೇ ವಾಟ್ಸಾಪ್​ನಲ್ಲಿ ತಪ್ಪೊಪ್ಪಿಕೊಂಡು ವಿಡಿಯೋ ಮಾಡಿ ಕುಟುಂಬಸ್ಥರಿಗೆ ಸುದ್ದಿ ತಲುಪಿಸಿದ್ದಾರೆ. ಅಲ್ಲದೆ, ಪೊಟ್ಯಾಸಿಯಂ ಸೈನೈಡ್​ ಸೇವಿಸಿ ತಾನೂ ಸಾಯುವುದಾಗಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಹಿಂದುಸ್ತಾನ್​ ಟೈಮ್ಸ್​ನಲ್ಲಿ ಈ ಬಗ್ಗೆ ವರದಿ ಮಾಡಲಾಗಿದ್ದು, ಸುಮಿತ್ ಕುಮಾರ್ ಎಂಬ ಟೆಕ್ಕಿ ಈ ಕೃತ್ಯವೆಸಗಿದ್ದು, ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

ರಜೆ ಕಳೆಯಲು ಬಂದಿದ್ದ ಶ್ರೀಮಂತ ಉದ್ಯಮಿಯ ಮಕ್ಕಳು ಬಾಂಬ್ ದಾಳಿಗೆ ಬಲಿ

ತನ್ನ ಅಣ್ಣ ಕಳುಹಿಸಿದ ವಿಡಿಯೋ ನೋಡುತ್ತಿದ್ದಂತೆ ಸುಮಿತ್ ಕುಮಾರ್ ಅವರ ತಂಗಿ ತನ್ನ ಭಾವನಿಗೆ ವಿಷಯ ತಿಳಿಸಿದ್ದಾರೆ. ಅವರು ಕೂಡ ತಕ್ಷಣ ಸ್ಥಳಕ್ಕೆ ಧಾವಿಸಿದ್ದು, ಬಾಗಿಲು ತೆರೆದೇ ಇರುವುದು ಕಂಡು ಒಳಗೆ ಹೋಗಿದ್ದಾರೆ. ಅಲ್ಲಿ ನಾಲ್ಕು ದೇಹಗಳೂ ಚಾಕುವಿನಲ್ಲಿ ಇರಿಯಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಕಂಡುಬಂದಿದೆ. ಸುಮಿತ್ ಕುಮಾರ್ ಅವರ ಹೆಂಡತಿ ಅನ್ಷು ಬಾಲಾ, ಅವರ 5 ವರ್ಷದ ಮಗ ಪ್ರಥಮೇಶ್​, 4 ವರ್ಷದ ಅವಳಿ ಮಕ್ಕಳಾದ ಆರವ್ ಹಾಗೂ ಆಕೃತಿ ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ.

ಆಂಧ್ರದಲ್ಲಿ ಈ ಬಾರಿ 10 ಸಾವಿರ ಕೋಟಿ ರೂ. ಕೊಟ್ಟು ಮತಗಳ ಖರೀದಿ; ಟಿಡಿಪಿ ಸಂಸದ ಬಿಚ್ಚಿಟ್ಟ ಸತ್ಯ

ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದ ಸುಮಿತ್ ಕುಮಾರ್​ಗೆ ತನ್ನ ಕುಟುಂಬವನ್ನು ಸಾಕುವುದು ಕಷ್ಟಕರವಾಗಿತ್ತು. ಕಳೆದ ಡಿಸೆಂಬರ್​ನಲ್ಲಿ ಬೆಂಗಳೂರಿನ ತನ್ನ ಕೆಲಸಕ್ಕೆ ಸುಮಿತ್  ರಾಜೀನಾಮೆ ನೀಡಿದ್ದರು. ಅವರ ಹೆಂಡತಿ ಅನ್ಷು ಬಾಲಾ ಟೀಚರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ, ಅದರಿಂದ ಬರುವ ಹಣ ಸಂಸಾರವನ್ನು ನಡೆಸಲು ಸಾಕಾಗುತ್ತಿರಲಿಲ್ಲ. ರಾಜೀನಾಮೆ ನೀಡಿದ ನಂತರ ಬೆಂಗಳೂರಿನಿಂದ ಘಜಿಯಾಬಾದ್​ಗೆ ಸುಮಿತ್ ಕುಮಾರ್​ ಮನೆಯನ್ನು ಬದಲಾಯಿಸಿದ್ದರು.
First published:April 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ