ಪ್ರೇಯಸಿಯೊಂದಿಗೆ ಸಲುಗೆಯಿಂದಿದ್ದ ಎಂದು ಸೋದರಳಿಯನ ಕೊಲೆ; 3 ವರ್ಷಗಳ ಬಳಿಕ ಆರೋಪಿ ಬಂಧನ

ಘಟನೆ ನಡೆದ ಒಂದು ವಾರದ ಬಳಿಕ ಯಾರಿಗೂ ಅನುಮಾನ ಬರಬಾರದೆಂದು ಬಿಜಯ್​ ತನ್ನ ಸೋದರಳಿಯ ಪ್ರಕಾಶ್​​ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡುತ್ತಾನೆ.  ಎರಡು ತಿಂಗಳ ಬಳಿಕ ಬಿಜಯ್ ದ್ವಾರಕಾದಿಂದ ನಂಗೋಲಿಗೆ ಸ್ಥಳಾಂತರಗೊಂಡು, 2017 ರಲ್ಲಿ ​ ಹೈದರಾಬಾದ್​ಗೆ ತೆರಳುತ್ತಾನೆ.

Latha CG | news18india
Updated:January 11, 2019, 12:32 PM IST
ಪ್ರೇಯಸಿಯೊಂದಿಗೆ ಸಲುಗೆಯಿಂದಿದ್ದ ಎಂದು ಸೋದರಳಿಯನ ಕೊಲೆ; 3 ವರ್ಷಗಳ ಬಳಿಕ ಆರೋಪಿ ಬಂಧನ
ಪ್ರಾತಿನಿಧಿಕ ಚಿತ್ರ
Latha CG | news18india
Updated: January 11, 2019, 12:32 PM IST
ನವದೆಹಲಿ,(ಜ.11): ಹೊಟ್ಟೆಕಿಚ್ಚು, ಸ್ವಾರ್ಥ ಮನುಷ್ಯನನ್ನು ಎಂತಹ ಕ್ರೂರ ಮಟ್ಟಕ್ಕಾದರೂ ಕರೆದೊಯ್ಯುತ್ತದೆ ಎಂಬುದಕ್ಕೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿರುವ ಒಂದು ಘಟನೆ ಸಾಕ್ಷಿಯಾಗುತ್ತದೆ. ತನ್ನ ಪ್ರಿಯತಮೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಅನುಮಾನಿಸಿ ಸ್ವಂತ ಸೋದರಳಿಯನನ್ನೇ ಕೊಲೆ ಮಾಡಿದ್ದ ಆರೋಪಿಯನ್ನು ಮೂರು ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ಧಾರೆ.

ಹೌದು, ಒರಿಸ್ಸಾದ ಗಂಜಂನ ನಿವಾಸಿಯಾಗಿದ್ದ ಬಿಜಯ್​ ಕುಮಾರ್​ ಮಹಾರಾಣ ಬಂಧಿತ ಆರೋಪಿ. ಈತ 2012 ರಲ್ಲಿ ತನ್ನ ಪ್ರೇಯಸಿ ನವದೆಹಲಿಗೆ ತೆರಳಿದಳೆಂದೂ ತಾನೂ ಸಹ ಹೋಗುತ್ತಾನೆ. ಮೂರು ವರ್ಷಗಳ ಬಳಿಕ ಅಂದರೆ 2015 ರಲ್ಲಿ ಬಿಜಯ್​ನ ಸೋದರಳಿಯ ಜೈ ಪ್ರಕಾಶ್​ ಹೈದರಾಬಾದ್​ನಿಂದ ದೆಹಲಿಗೆ ತೆರಳುತ್ತಾನೆ. ಈತ ಟೆಕ್ಕಿಯಾಗಿದ್ದು, ಮಾವ ಸೋದರಳಿಯ ಇಬ್ಬರೂ ಸಹ ದ್ವಾರಕಾ ನಗರದಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು.

ಸ್ವಲ್ಪ ದಿನಗಳ ಬಳಿಕ ಬಿಜಯ್​ ತನ್ನ ಪ್ರೇಯಸಿಯನ್ನು ಜೈಪ್ರಕಾಶ್​ಗೆ ಪರಿಚಯ ಮಾಡಿಸಿದ್ದ. ದಿನ ಕಳೆದಂತೆ ಮೂವರ ಮಧ್ಯೆ ಉತ್ತಮ ಸ್ನೇಹ ಸಂಬಂಧ ಬೆಳೆದಿತ್ತು. ಆದರೆ ಬಿಜಯ್​​ನ ಪ್ರೇಯಸಿ ಜೊತೆ ಸೋದರಳಿಯ ಜೈಪ್ರಕಾಶ್​​ ತುಂಬಾ ಸಲುಗೆಯಿಂದ ಇದ್ದ. ಇದು ಬಿಜಯ್​ಗೆ ಅನುಮಾನ ಮೂಡಿಸಿತ್ತು.

ಇದನ್ನೂ ಓದಿ: ಉತ್ತರಪ್ರದೇಶ: ಪೊಲೀಸ್ ಠಾಣೆಯ ಎದುರೇ ಗುಂಡಿಕ್ಕಿ ವ್ಯಕ್ತಿಯ ಹತ್ಯೆ!

ತನ್ನ ಪ್ರೇಯಸಿ ಜೊತೆ ಈತ ಸಂಬಂಧ ಹೊಂದಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಿ ಜೈ ಪ್ರಕಾಶ್​​ನನ್ನು ಕೊಲೆ ಮಾಡಲು ಬಿಜಯ್ ಸಂಚು ಮಾಡಿದ್ದ. ಅಂದು 2016 ಫೆ. 6 ನೇ ತಾರೀಖು. ಇಬ್ಬರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರಿಂದ ಬಿಜಯ್​ಗೆ ಪ್ರಕಾಶ್​ನನ್ನು ಕೊಲೆ ಮಾಡಲು ಸುಲಭವಾಯಿತು ಎನಿಸುತ್ತದೆ.

ಅಂದು ರಾತ್ರಿ ಪ್ರಕಾಶ್​ ಮಲಗಿದ್ದ ಕೋಣೆಗೆ ತೆರಳಿದ ಬಿಜಯ್​ ಸೀಲಿಂಗ್​ ಫ್ಯಾನ್​ನ ಮೋಟಾರ್​ನಿಂದ ಆತನ ತಲೆಯನ್ನು ಜಜ್ಜಿ ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಬಾಲ್ಕನಿಗೆ ಎಳೆದುಕೊಂಡು ಹೋಗಿ ಅಲ್ಲೇ ಹೂತು ಹಾಕಿ, ಅನುಮಾನ ಬಾರದಿರಲೆಂದು ಅದರ ಮೇಲೆ ಗಿಡ ನೆಟ್ಟಿದ್ದಾನೆ.

ಘಟನೆ ನಡೆದ ಒಂದು ವಾರದ ಬಳಿಕ ಯಾರಿಗೂ ಅನುಮಾನ ಬರಬಾರದೆಂದು ಬಿಜಯ್​ ತನ್ನ ಸೋದರಳಿಯ ಪ್ರಕಾಶ್​​ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡುತ್ತಾನೆ.  ಎರಡು ತಿಂಗಳ ಬಳಿಕ ಬಿಜಯ್ ದ್ವಾರಕಾದಿಂದ ನಂಗೋಲಿಗೆ ಸ್ಥಳಾಂತರಗೊಂಡು, 2017 ರಲ್ಲಿ ​ ಹೈದರಾಬಾದ್​ಗೆ ತೆರಳುತ್ತಾನೆ.
Loading...

ಇದನ್ನೂ ಓದಿ: ತುಚ್ಛವಾಗಿ ಮಾತನಾಡಿದ ರಣವೀರ್​ಗೆ ಕ್ಲಾಸ್​ ತೆಗೆದುಕೊಂಡ ಅನುಷ್ಕಾ ಶರ್ಮಾ, ವಿಡಿಯೋ ವೈರಲ್

ಕಳೆದ ವರ್ಷ ಅಕ್ಟೋಬರ್​ನಲ್ಲಿ ಬಿಜಯ್​ ವಾಸವಿದ್ದ ಮನೆ ನವೀಕರಣ ಮಾಡುವಾಗ, ಅಸ್ಥಿಪಂಜರವೊಂದು ಪತ್ತೆಯಾಗಿತ್ತು. ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಇದು ಕೊಲೆ ಎಂಬುದು ಖಚಿತವಾಗಿತ್ತು. ನೀಲಿ ಬಣ್ಣದ ಜಾಕೆಟ್​, ಶರ್ಟ್​, ಹಾಸಿಗೆ ಮತ್ತು ಕಂಬಳಿಗಳ ಸಮೇತ ಪ್ರಕಾಶ್​ನನ್ನು ಸಮಾಧಿ ಮಾಡಿದ್ದು ಬಹಿರಂಗವಾಗುತ್ತದೆ.

ಬಿಜಯ್​ಗೆ ಬಾಡಿಗೆ ನೀಡಿದ್ದ ಮನೆ ಮಾಲೀಕನನ್ನು ವಿಚಾರಣೆ ನಡೆಸಿದಾಗ, ಬಿಜಯ್​ ಮತ್ತು ಪ್ರಕಾಶ್​ ಒಟ್ಟಿಗೆ ವಾಸಿಸುತ್ತಿದ್ದರು ಎಂಬ ಅಂಶ ತಿಳಿದುಬಂದಿತು.  ಬಿಜಯ್​ ಹೈದರಾಬಾದ್​ಗೆ ತೆರಳಿದ ಮೇಲೆ ಯಾರೊಂದಿಗೂ ಸಂಪರ್ಕದಲ್ಲಿರಲಿಲ್ಲ. ಗೆಳೆಯರು, ಕುಟುಂಬಸ್ಥರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ತನ್ನ ಮೊಬೈಲ್​ ನಂಬರ್​ ಬದಲಾಯಿಸಿಕೊಂಡು, ಬ್ಯಾಂಕ್​ ಖಾತೆಯಲ್ಲಿನ ಹಣವನ್ನೆಲ್ಲಾ ತೆಗೆದುಕೊಂಡು, ಅಕೌಂಟ್​ ಬಳಸುವುದನ್ನು ನಿಲ್ಲಿಸಿದ್ದ.

ಪೊಲೀಸರು ಬಿಜಯ್​ಗಾಗಿ ಹುಡುಕಾಟ ನಡೆಸಿದ್ದರು. ದೆಹಲಿ ಪೊಲೀಸ್​ ತಂಡ ಡಿಸೆಂಬರ್​ 26 ರಂದು ಮೊದಲು ವಿಶಾಖಪಪಪಟ್ಟಣಂಗೆ ತೆರಳಿದ್ದರು. ನಂತರ ಜನವರಿ 1 ರಂದು ಹೈದರಾಬಾದ್​ಗೆ ತೆರಳಿದ್ದರು. ಬಿಜಯ್​ಗಾಗಿ ಹುಟುಕಾಟ ನಡೆಸಿದ್ದ ಪೊಲೀಸರು ಕೊನೆಯದಾಗಿ ಭಾನುವಾರ ಹೈದರಾಬಾದ್​ನಲ್ಲಿ ಬಂಧಿಸಿದ್ದಾರೆ. ಬಿಜಯ್​ ಈಗ ಪೊಲೀಸರ ವಶದಲ್ಲಿದ್ದು, ವಿಚಾರಣೆ ನಡೆಯುತ್ತಿದೆ.
First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ