• Home
  • »
  • News
  • »
  • national-international
  • »
  • Offer Letter Rejection: ಫ್ರೆಶರ್‌ಗಳಿಗೆ ನೀಡಿದ್ದ ಆಫರ್ ಲೆಟರ್‌ ರದ್ದುಗೊಳಿಸಿದ ಟೆಕ್ ಕಂಪನಿಗಳು! ಕಾರಣ ಏನಿರಬಹುದು?

Offer Letter Rejection: ಫ್ರೆಶರ್‌ಗಳಿಗೆ ನೀಡಿದ್ದ ಆಫರ್ ಲೆಟರ್‌ ರದ್ದುಗೊಳಿಸಿದ ಟೆಕ್ ಕಂಪನಿಗಳು! ಕಾರಣ ಏನಿರಬಹುದು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿಪ್ರೋ, ಇನ್ಫೋಸಿಸ್ ಮತ್ತು ಟೆಕ್ ಮಹೀಂದ್ರಾ ಆನ್‌ಬೋರ್ಡಿಂಗ್ ಪ್ರಕ್ರಿಯೆಯಲ್ಲಿ ತಿಂಗಳುಗಳ ಕಾಲ ವಿಳಂಬ ಮಾಡಿದ ನಂತರ ಹಲವಾರು ಅಭ್ಯರ್ಥಿಗಳ ಆಫರ್ ಲೆಟರ್‌ಗಳನ್ನು ರದ್ದುಗೊಳಿಸಿದೆ ಎಂದು ವರದಿಯಾಗಿದೆ.

  • Share this:

ದೈತ್ಯ ಐಟಿ ಕಂಪನಿಗಳಾದ ವಿಪ್ರೋ, ಇನ್ಫೋಸಿಸ್ ಮತ್ತು ಟೆಕ್ ಮಹೀಂದ್ರಾದಲ್ಲಿ ಸಂಚಲನ ಮೂಡಿಸುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸುದ್ದಿಯ ಪ್ರಕಾರ, ಈ ಟೆಕ್ ಕಂಪನಿಗಳು ಹೆಚ್ಚಿನ ಅನುಭವವಿಲ್ಲದ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು (Recruitment) ನಿರಾಕರಿಸಿವೆ.ಸುದ್ದಿಯ ಪ್ರಕಾರ, ಈ ಮೊದಲು ಈ ಕಂಪನಿಗಳು ತಮ್ಮ ಫ್ರೆಶರ್‌ಗಳಿಗೆ ಆಫರ್ ಲೆಟರ್‌ಗಳನ್ನು (Offer Letter) ನೀಡಿದ್ದರು, ಆದರೆ ನಂತರ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿವೆ. ವಿಪ್ರೋ, ಇನ್ಫೋಸಿಸ್ ಮತ್ತು ಟೆಕ್ ಮಹೀಂದ್ರಾ ಆನ್‌ಬೋರ್ಡಿಂಗ್ (Onboarding) ಪ್ರಕ್ರಿಯೆಯಲ್ಲಿ ತಿಂಗಳುಗಳ ಕಾಲ ವಿಳಂಬ ಮಾಡಿದ ನಂತರ ಹಲವಾರು ಅಭ್ಯರ್ಥಿಗಳ ಆಫರ್ ಲೆಟರ್‌ಗಳನ್ನು ರದ್ದುಗೊಳಿಸಿದೆn(Canceled) ಎಂದು ವರದಿಯಾಗಿದೆ.


ವರದಿಗಳ ಪ್ರಕಾರ, ಆನ್‌ಬೋರ್ಡಿಂಗ್ ಪ್ರಕ್ರಿಯೆಯಲ್ಲಿ ಸುಮಾರು 3-4 ತಿಂಗಳ ವಿಳಂಬದ ನಂತರ ಟೆಕ್ ಕಂಪನಿಗಳಿಂದ ಆಫರ್‌ಗಳನ್ನು ಪಡೆದ ನೂರಾರು ಹೊಸ ಅಭ್ಯರ್ಥಿಗಳ ಆಫರ್ ಲೆಟರ್‌ಗಳನ್ನು ರದ್ದುಗೊಳಿಸಲಾಗಿದೆ. ಸುಮಾರು 3-4 ತಿಂಗಳ ಹಿಂದೆ ಉನ್ನತ ಟೆಕ್ ಕಂಪನಿಗಳಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿರುವುದಾಗಿ ಅಭ್ಯರ್ಥಿಗಳು ಹೇಳಿಕೊಂಡಿದ್ದು, ಸಂದರ್ಶನದ ನಂತರ ಅವರಿಗೆ ಆಫರ್ ಲೆಟರ್ ನೀಡಲಾಯಿತು. ಇದಾದ ನಂತರ ಅಭ್ಯರ್ಥಿಗಳು ತಮ್ಮ ಪ್ರವೇಶ ಪ್ರಕ್ರಿಯೆಗಾಗಿ ಕಾಯುತ್ತಿದ್ದರು. ಆದರೆ ಈ ಕಂಪನಿಗಳು ಅಭ್ಯರ್ಥಿಗಳನ್ನು 3-4 ತಿಂಗಳ ಕಾಲ ಹೀಗೆ ಕಾಯಿಸಿಕೊಂಡು ನಂತರ ಅವರ ಆಫರ್ ಲೆಟರ್ ಗಳನ್ನು ರದ್ದುಗೊಳಿಸಿವೆ.


ಆರ್ಥಿಕ ಹಿನ್ನಡೆ


ಶೈಕ್ಷಣಿಯ ಅರ್ಹತೆಯ ಮಾನದಂಡಗಳನ್ನು ಅಭ್ಯರ್ಥಿಗಳು ಪೂರೈಸುತ್ತಿಲ್ಲ ಹಾಗೂ ನಿಮ್ಮ ಕೊಡುಗೆಯು ಶೂನ್ಯ ಮತ್ತು ಅನೂರ್ಜಿತವಾಗಿದೆ ಈ ಕಾರಣಕ್ಕಾಗಿ ಆಫರ್ ಲೆಟರ್‌ಗಳನ್ನು ರದ್ದುಗೊಳಿಸಲಾಗುತ್ತಿದೆ ಎಂದು ತಿಳಿಸಿರುವ ಪತ್ರಗಳನ್ನು ಅಭ್ಯರ್ಥಿಗಳು ಪಡೆದುಕೊಂಡಿದ್ದಾರೆ.


ವಿಪ್ರೋ ಆಫರ್ ಲೆಟರ್ ಅನ್ನು ರದ್ದುಗೊಳಿಸಿರುವುದರ ಕಾರಣವನ್ನು ಲಿಂಕ್ಡ್‌ನ್‌ನಲ್ಲಿ ಒಬ್ಬ ಅಭ್ಯರ್ಥಿಯು ಹಂಚಿಕೊಂಡಿದ್ದು ಸಂಸ್ಥೆಯ ಮೌಲ್ಯಮಾಪನ ಮಾರ್ಗಸೂಚಿಗಳನ್ನು ಅನುಸರಿಸದೇ ಇರುವ ಕಾರಣ ನಿಮ್ಮ ನೇಮಕಾತಿಯನ್ನು ಮುಂದಿನ ಹಂತಗಳಿಗೆ ನಾವು ಕೊಂಡೊಯ್ಯುತ್ತಿಲ್ಲ ಎಂಬುದಾಗಿ ತಿಳಿಸಿದೆ. ಆಕ್ಸೆಂಚರ್ ತನ್ನ ಅಭ್ಯರ್ಥಿಗಳಿಗೆ ಪರಿಶೀಲನೆಗಳನ್ನು ಪೂರೈಸಲಾಗುತ್ತಿಲ್ಲ, ಹೀಗಾಗಿ ಆಫರ್ ಲೆಟರ್ ಅನ್ನು ಹಿಂತೆಗೆದುಕೊಳ್ಳುತ್ತಿದ್ದೇವೆ ಹಾಗೂ ನೇಮಕಾತಿ ಅವಕಾಶವನ್ನು ಇಲ್ಲಿಗೆ ಕೊನೆಗೊಳಿಸುತ್ತಿದ್ದೇವೆ ಎಂಬ ಸಬೂಬು ನೀಡಿದೆ. ಕ್ಯಾಪ್‌ಜೆಮಿನಿ ಕೂಡ ಉದ್ಯೋಗಿಯೊಂದಿಗೆ ಕಾಯ್ದಿರಿಸಿಕೊಂಡಿದ್ದ ನೋಟೀಸ್ ಬದಲಿಗೆ ಪಾವತಿಯನ್ನು ನೀಡುವುದಾಗಿ ತಿಳಿಸಿದೆ.


ಇದನ್ನೂ ಓದಿ: ಮದ್ಯ ಹಗರಣದಲ್ಲಿ ದೆಹಲಿ-ಪಂಜಾಬ್-ಹೈದರಾಬಾದ್‌ನ 35 ಸ್ಥಳಗಳ ಮೇಲೆ ಇಡಿ ದಾಳಿ, ಕೇಜ್ರಿವಾಲ್ ಕಿಡಿ!


ಹೊಸ ನೇಮಕಾತಿ ತಡೆಹಿಡಿದ ಕಂಪೆನಿಗಳು


ಇದಕ್ಕೂ ಮುನ್ನ ಐಟಿ ಸಂಸ್ಥೆಗಳು ಉದ್ಯೋಗಿಗಳ ನೇಮಕಾತಿಯನ್ನು ವಿಳಂಬಗೊಳಿಸುತ್ತಿದ್ದಾರೆ ಎಂಬ ಸುದ್ದಿ ವರದಿಯಾಗಿತ್ತು. ಆರ್ಥಿಕ ಕುಸಿತದಂತಹ ಕಾರಣಗಳಿಂದಾಗಿ, ಅನೇಕ ಟೆಕ್ ಕಂಪನಿಗಳು ನೇಮಕಾತಿಯನ್ನು ಸ್ಥಗಿತಗೊಳಿಸಿವೆ. ಗೂಗಲ್, ಫೇಸ್‌ಬುಕ್ ಮತ್ತು ಮೈಕ್ರೋಸಾಫ್ಟ್‌ನಂತಹ ದೈತ್ಯನಾಮರು ಕೂಡ ಹೊಸ ನೇಮಕಾತಿಯನ್ನು ತಡೆಹಿಡಿದಿದ್ದಾರೆ ಮತ್ತು ಲಭ್ಯವಿರುವ ಸಂಪನ್ಮೂಲಗಳನ್ನು ಉತ್ತಮವಾಗಿ ಬಳಸಿಕೊಳ್ಳಲು ತಂಡಗಳಿಗೆ ಆದೇಶಿಸಿದ್ದಾರೆ ಎಂಬುದು ತಿಳಿದು ಬಂದಿದೆ.


ಕಂಪೆನಿಗಳು ನೀಡಿರುವ ಪ್ರತಿಕ್ರಿಯೆ ಏನು?


ಇತ್ತೀಚೆಗೆ ರದ್ದಾದ ನೇಮಕಾತಿಗಳಿಗೆ ಸಂಬಂಧಿಸಿದಂತೆ, ವಿಪ್ರೋ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, "ವಿಪ್ರೋ ಅರ್ಹ ಅಭ್ಯರ್ಥಿಗಳಿಗೆ ನೀಡಿರುವ ಎಲ್ಲಾ ಆಫರ್ ಲೆಟರ್‌ಗಳನ್ನು ಹಂತ ಹಂತವಾಗಿ ಗೌರವಿಸುತ್ತದೆ ಎಂದು ಖಚಿತಪಡಿಸುತ್ತದೆ" ಎಂದು ತಿಳಿಸಿದೆ.


ಆದಾಗ್ಯೂ, ಈ ಕುರಿತು ಇನ್ಫೋಸಿಸ್ ಮತ್ತು ಟೆಕ್ ಮಹೀಂದ್ರಾ ಇನ್ನಿತರ ಯಾವುದೇ ಕಂಪೆನಿಗಳು ಮಾಹಿತಿಯನ್ನು ನೀಡಿಲ್ಲ. ನೇಮಕಾತಿ ಪ್ರಕ್ರಿಯೆ ವಿಳಂಬಗೊಂಡಿರುವುದು ಹಾಗೂ ಫ್ರೆಶರ್‌ಗಳಿಗೆ ನೀಡಿದ್ದ ಆಫರ್ ಲೆಟರ್‌ಗಳನ್ನು ರದ್ದುಗೊಳಿಸಿರುವುದರ ಕುರಿತು ಯಾವುದೇ ಟೆಕ್ ಕಂಪೆನಿಗಳು ಅಭಿಪ್ರಾಯ ಹಂಚಿಕೊಂಡಿಲ್ಲ. ಈ ವಿಷಯದ ಬಗ್ಗೆ ಇನ್ನೂ ಮಾತನಾಡಿಲ್ಲ.


ಇದನ್ನೂ ಓದಿ: ಆಫರ್ ಲೆಟರ್ ಕೊಟ್ಟು ಸುಮ್ಮನಾದ ಟೆಕ್ ಕಂಪನಿ! ಕಾರಣ ಏನು?


ಸಂಸ್ಥೆಗಳನ್ನು ತೊರೆಯುತ್ತಿರುವ ಅಭ್ಯರ್ಥಿಗಳು


ಏತನ್ಮಧ್ಯೆ ಐಟಿ ಸಂಸ್ಥೆಗಳು ಆಫರ್ ಲೆಟರ್‌ಗಳನ್ನು ರದ್ದುಗೊಳಿಸಿದ ಸುದ್ದಿಯು ಪ್ರಪಂಚದಾದ್ಯಂತ ಐಟಿ ಉದ್ಯಮದ ಆರ್ಥಿಕತೆಯ ಕುಸಿತದ ಬಗ್ಗೆ ಮಾತನಾಡುತ್ತಿದ್ದರೆ ಕಂಪೆನಿಗಳನ್ನು ತೊರೆದು ಹೋಗುತ್ತಿರುವ ಉದ್ಯೋಗಿಗಳ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದಾರೆ. ಐಟಿ ದೈತ್ಯರಾದ ವಿಪ್ರೋ, ಟಿಸಿಎಸ್, ಟೆಕ್ ಮಹೀಂದ್ರಾ ಮೊದಲಾದ ಟೆಕ್ ದೈತ್ಯರು ಆರ್ಥಿಕ ವರ್ಷ 23 ರ ಜೂನ್ ತ್ರೈಮಾಸಿಕದಲ್ಲಿ ಹೆಚ್ಚಿನ ಅಟ್ರಿಷನ್ (ಉದ್ಯೋಗಿಗಳು ಕಂಪೆನಿಗಳು ತೊರೆಯುವುದು) ದರಗಳಿಗೆ ಸಾಕ್ಷಿಯಾಗಿದೆ.

First published: