VK Sasikala| ದಿವಂಗತ ಮಾಜಿ ಸಿಎಂ ಜಯಲಲಿತಾ ಸ್ಮಾರಕಕ್ಕೆ ಭೇಟಿ ನೀಡಿದ ಚಿನ್ನಮ್ಮ ವಿ.ಕೆ. ಶಶಿಕಲಾ

ಇದು ಚಿನ್ನಮ್ಮ ವಿ.ಕೆ. ಶಶಿಕಲಾ ಅವರ ರಾಜಕೀಯ ಜೀವನವನ್ನು ಪುನರುತ್ಥಾನಗೊಳಿಸುವ ಪ್ರಯತ್ನ ಎಂದು ಕೆಲವು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಜಯಲಲಿತಾ ಸಮಾಧಿಗೆ ಭೇಟಿ ನೀಡಿರುವ ವಿಕೆ ಶಶಿಕಲಾ.

ಜಯಲಲಿತಾ ಸಮಾಧಿಗೆ ಭೇಟಿ ನೀಡಿರುವ ವಿಕೆ ಶಶಿಕಲಾ.

  • Share this:
ಚೆನ್ನೈ: ಮಾರ್ಚ್ ತಿಂಗಳಲ್ಲಿ  ರಾಜಕೀಯ ಮತ್ತು ಸಾರ್ವಜನಿಕ ಜೀವನದಿಂದ ದೂರ ಇರುವುದಾಗಿ” ಘೋಷಿಸಿದ್ದ ವಿ ಕೆ ಶಶಿಕಲಾ ಅವರು , ಎಐಎಡಿಎಂಕೆ ಯ ಪಕ್ಷದ ಸ್ಥಾಪನೆಯ ಸುವರ್ಣ ಮಹೋತ್ಸವಕ್ಕೆ , ಒಂದು ದಿನ ಮುಂಚಿತವಾಗಿ ಇಂದು ಮರೀನಾದಲ್ಲಿರುವ ಜೆ ಜಯಲಲಿತಾ (J Jayalalitha), ಎಂ.ಜಿ. ರಾಮಚಂದ್ರನ್ (MG Ramachandran) ಮತ್ತು ಸಿ ಎನ್ ಅಣ್ಣಾದೊರೈ (CN Annadurai) ಅವರ ಸ್ಮಾರಕಗಳಿಗೆ ಭೇಟಿ ನೀಡಿದರು. ಎಐಎಡಿಎಂಕೆಯ (AIADMK) ಉಚ್ಛಾಟಿತ ನಾಯಕಿ ಶಶಿಕಲಾ (VK Sasikala), ತನ್ನ ಹಿಂದಿನ ಪಕ್ಷದ ಧ್ವಜ ಹೊಂದಿದ್ದ ಕಾರ್‌ನಲ್ಲಿ ಸ್ಮಾರಕಕ್ಕೆ ಭೇಟಿ ನೀಡಿದರು. ಈ ವರ್ಷದ ಆರಂಭದಲ್ಲಿ ಜೈಲಿನಿಂದ ಬಿಡುಗಡೆ ಆದ ಬಳಿಕ, ಇದು ಸ್ಮಾರಕಕ್ಕೆ ಶಶಿಕಲಾ ಅವರ ಮೊದಲ ಭೇಟಿಯಾಗಿದೆ. ವಿಧಾನ ಸಭೆ ಮತ್ತು ಸ್ಥಳಿಯ ಸಂಸ್ಥೆಗಳ ಚುನಾವಣೆಗಳಲ್ಲಿ ಎಐಎಡಿಎಂಕೆ ಸೋತ ಬಳಿಕ ಈ ಬೆಳವಣಿಗೆ ನಡೆದಿದೆ.

‘ಎಂಜಿಆರ್ ಮತ್ತು ಜಯಲಲಿತಾ ಅವರು ಕಾರ್ಯಕರ್ತರನ್ನು ಮತ್ತು ಪಕ್ಷವನ್ನು ರಕ್ಷಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ಒಳ್ಳೆಯ ಭವಿಷ್ಯವಿದೆ” ಎಂದು ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಾಧ್ಯಮದವರಿಗೆ ತಿಳಿಸಿದರು.

ಜಯಲಲಿತಾ ಸಮಾಧಿಗೆ ಭೇಟಿ:

ಜಯಲಲಿತಾ ಸ್ಮಾರಕದ ಮುಂದೆ, ಬೆಂಬಲಿಗರ ನಡುವೆ ಕ್ಷಣ ಕಾಲ ಹಾಗೆಯೇ ನಿಂತಿದ್ದ, ಅವರ ಕಣ್ಣಾಲಿಗಳು ತುಂಬಿ ಬಂದಿದ್ದವು. “ನಾನು ಅಮ್ಮನ ಸ್ಮಾರಕದಲ್ಲಿ ಹೃದಯದ ಭಾರವನ್ನು ಇಳಿಸಿಕೊಂಡಿದ್ದೇನೆ. ಅಮ್ಮಾ, ಪಕ್ಷ ಮತ್ತು ತಮಿಳು ನಾಡಿನ ಜನರಿಗಾಗಿ ಬದುಕಿದ್ದರು” ಎಂದು ಅವರು ಹೇಳಿದರು.

ಇದು ಆಕೆಯ ರಾಜಕೀಯ ಜೀವನವನ್ನು ಪುನರುತ್ಥಾನಗೊಳಿಸುವ ಪ್ರಯತ್ನ ಎಂದು ಕೆಲವು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈ ವರ್ಷದ ಆರಂಭದಲ್ಲಿ, ತಮಿಳುನಾಡು ರಾಜ್ಯ ಚುನಾವಣೆಗೆ ಮುನ್ನ ಪತ್ರವೊಂದರಲ್ಲಿ , “ಜಯ ಬದುಕಿದ್ದಾಗಲೂ ಕೂಡ ನಾನು ಅಧಿಕಾರ ಮತ್ತು ಸ್ಥಾನದ ಹಿಂದ ಬಿದ್ದಿರಲಿಲ್ಲ. ಆಕೆ ಮರಣಾನಂತರವೂ ಅದನ್ನು ಮಾಡುವುದಿಲ್ಲ. ತಮಿಳುನಾಡಿನಲ್ಲಿ ಎಐಎಡಿಎಂಕೆಯ ‘ಸುವರ್ಣ ಆಡಳಿತ’ ಮುಂದುವರಿಯುವುದನ್ನು ಖಚಿತಪಡಿಸಲು ನಾನು ರಾಜಕೀಯದಿಂದ ದೂರ ಇರುತ್ತೇನೆ” ಎಂದು ಶಶಿಕಲಾ ಹೇಳಿದ್ದರು.

ಶಶಿಕಲಾ ಮುಂದಿನ ರಾಜಕೀಯ ನಡೆ ಏನು?

ಶಶಿಕಲಾ ಅವರು ರಾಜಕೀಯದಿಂದ ಹಿಂದೆ ಸರಿದಿದ್ದರ ಹಿಂದಿನ ಉದ್ದೇಶ, ಒಂದು ವೇಳೆ ಚುನಾವಣಾ ಫಲಿತಾಂಶಗಳು ವಿರೋಧ ಪಕ್ಷಕ್ಕೆ ಅನುಕೂಲವಾಗಿದ್ದರೆ, ಡಿಎಂಕೆ ಅಧಿಕಾರ ಹಿಡಿಯಲು ಸಹಾಯ ಮಾಡಿದ ಸಂಭಾವ್ಯ ಟೀಕೆಗಳಿಂದ ತನ್ನನ್ನು ರಕ್ಷಿಸಿಕೊಳ್ಳುವ ಪ್ರಯತ್ನ ಎಂದು ಪರಿಗಣಿಸಲಾಗಿತ್ತು.

ಇದನ್ನೂ ಓದಿ: Ban on Firecrackers| 'ಪಟಾಕಿ ಮೇಲಿನ ನಿಷೇಧವನ್ನು ಪರಿಶೀಲಿಸಿ'; 4 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಎಂ.ಕೆ. ಸ್ಟಾಲಿನ್!

ಶಶಿಕಲಾ ಅವರನ್ನು ಪಕ್ಷದಿಂದ ಹೊರ ಹಾಕಿರುವ ಎಐಎಡಿಎಂಕೆ , ಅವರಿಗೆ ಪಕ್ಷದಲ್ಲಿ ಸ್ಥಳವಿಲ್ಲ ಎಂದು ಮರು ಉಚ್ಚರಿಸಿದೆ.2016 ರಲ್ಲಿ ಜಯಲಲಿತಾ ಅವರು ನಿಧನರಾದಾಗ, ಶಶಿಕಲಾ ಅವರು ಪಕ್ಷದ ಮುಖ್ಯಸ್ಥೆಯಾಗಿ ಅಧಿಕಾರ ವಹಿಸಿಕೊಂಡರು. ಆದರೆ, ಜಯಲಲಿತಾ ಅವರು ಮುಖ್ಯ ಆರೋಪಿ ಆಗಿದ್ದ, ಅಕ್ರಮ ಆಸ್ತಿ ಪ್ರಕರಣದಲ್ಲಿ, ಭ್ರಷ್ಟಾಚಾರದ ಆರೋಪದ ಮೇಲೆ ನಾಲ್ಕು ವರ್ಷ ಜೈಲು ಶಿಕ್ಷೆ ಅನುಭವಿಸಿದ ಕಾರಣ, ಶಶಿಕಲಾ ಮುಖ್ಯಮಂತ್ರಿ ಆಗುವ ಪ್ರಯತ್ನದಲ್ಲಿ ವಿಫಲರಾದರು.

ಇದನ್ನೂ ಓದಿ: Trending| ಸಹೋದರಿಗೆ ಹೆಣ್ಣು ಮಗು ಹುಟ್ಟಿದ್ದಕ್ಕೆ ಉಚಿತ ಪೆಟ್ರೋಲ್ ನೀಡಿದ ಕಲಿಯುಗ ಕರ್ಣ!

ಅವರು ಜೈಲಿಗೆ ಹೋಗುವ ಮುನ್ನ , ಅವರು ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದ್ದರು. ಅವರು, ಶಶಿಕಲಾ ಅವರು ಅಧಿಕಾರ ವಹಿಸಿಕೊಳ್ಳುವುದರ ವಿರುದ್ಧ ಬಂಡಾಯ ಎದ್ದಿದ್ದ ಆಗಿನ ಉಪಮುಖ್ಯಮಂತ್ರಿ ಓ ಪನ್ನೀರ್‍ಸೆಲ್ವಂ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದರು.ಆದರೆ, ಶಶಿಕಲಾ ಅವರ ಅನುಪಸ್ಥಿತಿಯಲ್ಲಿ, ಅವರಿಬ್ಬರು ಪರಸ್ಪರ ಕೈ ಜೋಡಿಸಿ, ಆಕೆಯನ್ನೇ ಹುದ್ದೆಯಿಂದ ತೆಗೆದು ಹಾಕಿದ್ದರು.ಶಶಿಕಲಾ ಈ ವರೆಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ- ತನ್ನ ಹಿಂದಿನ ಪಕ್ಷದೊಳಗಿನ ಯಾವುದೇ ಚುನಾವಣೆಯಲ್ಲೂ ಕೂಡ ಸ್ಪರ್ಧಿಸಿಲ್ಲ.
First published: