ಉತ್ತರ ಪ್ರದೇಶ: ಶಿಕ್ಷಕರು (Teacher) ಅಂದ್ರೆ ದೇವರಿಗೆ (God) ಸಮಾನ ಅಂತಾರೆ. ಮಕ್ಕಳ (Children) ಮೇಲೆ ತಾಯಿಯಂತೆ (Mother) ಪ್ರೀತಿ (Love) ತೋರುವವರು, ತಪ್ಪು ಮಾಡಿದಾಗ ತಾಯಿಯಂತೆ ಶಿಕ್ಷೆ (Punishment) ನೀಡುವವರು ಶಿಕ್ಷಕರು. ಆದರೆ ತಿದ್ದಿ, ಬುದ್ದಿ ಹೇಳಬೇಕಾದ ಶಿಕ್ಷಕಿಯರು, ತಪ್ಪು ಮಾಡದಂತೆ ತಡೆಯಬೇಕಾದ ಶಿಕ್ಷಕಿಯರೇ ತಪ್ಪು ಮಾಡಿದ್ರೆ ಹೇಗೆ ಹೇಳಿ? ಇಲ್ಲಿ ಆಗಿದ್ದೂ ಅದೇ, ಶಿಕ್ಷಕಿಯರು ಇಬ್ಬರು ತಮ್ಮ ಶಾಲೆಯ (School) ಬರೋಬ್ಬರಿ 24 ವಿದ್ಯಾರ್ಥಿಗಳನ್ನು (Students) ಕಿಡ್ನಾಪ್ (Kidnap) ಮಾಡಿ, ಅವರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದು. ಕೊನೆಗೆ ಏನಾಯ್ತು? ವಿದ್ಯಾರ್ಥಿಗಳು ಸುರಕ್ಷಿತವಾಗಿ ಬಂದರೇ? ಶಿಕ್ಷಕಿಯರ ಈ ದುಷ್ಕೃತ್ಯಕ್ಕೆ ಕಾರಣವೇನು? ಈ ಎಲ್ಲ ವಿವರಗಳು ಇಲ್ಲಿವೆ ನೋಡಿ…
ಉತ್ತರ ಪ್ರದೇಶದಲ್ಲಿ ನಡೆಯಿತು ಆತಂಕಕಾರಿ ಘಟನೆ
ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಬಾಲಕಿಯರ ವಸತಿ ಶಾಲೆಯ ಇಬ್ಬರು ಮಹಿಳಾ ಶಿಕ್ಷಕಿಯರು ವಿದ್ಯಾರ್ಥಿನಿಯರನ್ನು ಅಪರಹರಣ ಮಾಡಿದ ಆರೋಪ ಹೊತ್ತಿದ್ದಾರೆ. ತಮ್ಮದೇ ಶಾಲೆಯ 24 ವಿದ್ಯಾರ್ಥಿನಿಯರನ್ನು ಇಬ್ಬರು ಶಿಕ್ಷಕಿಯರು ಅಪಹರಿಸಿ, ಅವರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದರಂತೆ. ಆರೋಪಿ ಶಿಕ್ಷಕಿಯರನ್ನು ಮನೋರಮಾ ಮಿಶ್ರಾ ಮತ್ತು ಗೋಲ್ಡಿ ಕಟಿಯಾರ್ ಎಂದು ಗುರುತಿಸಲಾಗಿದೆ.
ತಮ್ಮ ವರ್ಗಾವಣೆ ವಿರೋಧಿಸಿ ವಿದ್ಯಾರ್ಥಿಗಳ ಕಿಡ್ನಾಪ್
ಶಿಕ್ಷಕಿಯರಾದ ಮನೋರಮಾ ಮಿಶ್ರಾ ಮತ್ತು ಗೋಲ್ಡಿ ಕಟಿಯಾರ್ ಇಬ್ಬರನ್ನೂ ಬೇರೆ ಶಾಲೆಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ಇದು ಅವರಿಗೆ ಇಷ್ಟ ಇರಲಿಲ್ಲ. ತಮ್ಮ ವರ್ಗಾವಣೆ ಆದೇಶ ಬರುತ್ತಿದ್ದಂತೆ ಮನೋರಮಾ ಮಿಶ್ರಾ ಹಾಗೂ ಗೋಲ್ಡಿ ಕಟಿಯಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರಂತೆ.
ಇದನ್ನೂ ಓದಿ: UGC Announcement: ಪಾಕಿಸ್ತಾನಕ್ಕೆ ಕಲಿಯೋಕೆ ಹೋಗ್ಬೇಡಿ, ಭಾರತದಲ್ಲಿ ಮತ್ತೆ ಕಲಿಯೋಕಾಗಲ್ಲ, ಕೆಲಸಾನೂ ಸಿಗಲ್ಲ
ತಮ್ಮ ಪರವಾಗಿ ವಿದ್ಯಾರ್ಥಿನಿಯರನ್ನು ಬಳಸಿಕೊಳ್ಳುವ ಯತ್ನ
ಈ ಇಬ್ಬರು ಶಿಕ್ಷಕಿಯರು ವರ್ಗಾವಣೆಯಿಂದ ತಪ್ಪಿಸಿಕೊಳ್ಳಲು ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ಯೋಚಿಸಿದ್ದಾರೆ. ವಿದ್ಯಾರ್ಥಿಗಳ ಮೂಲಕ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಇಲ್ಲೇ ಉಳಿಯುವ ಪ್ರಯತ್ನ ಮಾಡಿದ್ದಾರೆ. ಆದರೆ ಅದು ಫಲ ನೀಡದೇ ಇರುವುದಕ್ಕೆ ಬೇರೆ ಪ್ಲಾನ್ ಮಾಡಿದ್ದಾರೆ.
ಶಾಲೆ ಟೆರೇಸ್ ಮೇಲೆ ವಿದ್ಯಾರ್ಥಿನಿಯರಿಗೆ ದಿಗ್ಬಂಧನ
ವಿದ್ಯಾರ್ಥಿಗಳನ್ನೇ ಕಿಡ್ನಾಪ್ ಮಾಡಲು ಈ ಶಿಕ್ಷಕಿಯರು ಯೋಚಿಸಿದ್ದಾರೆ. ರಾತ್ರಿ 7 ಗಂಟೆಗೆ ಊಟದ ನಂತರ ಇಬ್ಬರೂ ಶಿಕ್ಷಕಿಯರು ಸುಮಾರು 24 ವಿದ್ಯಾರ್ಥಿಗಳನ್ನು ಶಾಲೆಯ ಛಾವಣಿಗೆ ಕರೆದೊಯ್ದು ತಮ್ಮ ವರ್ಗಾವಣೆಯ ವಿಚಾರವನ್ನು ತಿಳಿಸಿದ್ದರು. ನಂತರ ಮೇಲಿಂದ ಕೆಳಗೆ ಬಾರದಂತೆ ಬಾಗಿಲು ಹಾಕಿ ಕೂಡಿಹಾಕಿದ್ದರು.
ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ
ತಮ್ಮ ಪರವಾಗಿ ನೀವು ಮಾತನಾಡಲೇ ಬೇಕು, ಇಲ್ಲವಾದರೆ ನಿಮ್ಮನ್ನು ಬಿಡುವುದಿಲ್ಲ ಅಂತ ಶಿಕ್ಷಕಿಯರು ವಿದ್ಯಾರ್ಥಿನಿಯರನ್ನು ಹೆದರಿಸಿದ್ದಾರೆ. ಇದರಿಂದ ಭಯಭೀತರಾದ ವಿದ್ಯಾರ್ಥಿಗಳು ಸಹಾಯಕ್ಕಾಗಿ ಕೂಗಿಕೊಳ್ಳಲಾರಂಭಿಸಿದರು. ಇದನ್ನು ಗಮನಿಸಿದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
4 ಗಂಟೆ ಕಾರ್ಯಾಚರಣೆ ನಡೆಸಿದ ಪೊಲೀಸರು
24 ವಿದ್ಯಾರ್ಥಿಗಳನ್ನು ಕಸ್ತೂರಬಾ ಗಾಂಧಿ ಬಾಲಕಿಯರ ಶಾಲೆಯ ಟೆರೇಸ್ ಮೇಲೆ ಕೂಡಿ ಹಾಕಲಾಗಿತ್ತು. ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಮಧ್ಯರಾತ್ರಿ ಹೊತ್ತಿಗೆ ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ. ಸತತ ನಾಲ್ಕು ಗಂಟೆಗಳ ನಂತರ ಪೊಲೀಸರು ವಿದ್ಯಾರ್ಥಿಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ.
ಶಿಕ್ಷಕಿಯರ ವಿರುದ್ಧ ತನಿಖೆಗೆ ತಂಡ ರಚನೆ
ಇಬ್ಬರು ಮಹಿಳಾ ಶಿಕ್ಷಕಿಯರ ಮೇಲೆ ವಿದ್ಯಾರ್ಥಿನಿಯರನ್ನು ಪ್ರಚೋದಿಸಿದ ಮತ್ತು ವಾರ್ಡನ್ ಜೊತೆ ಅನುಚಿತವಾಗಿ ವರ್ತಿಸಿದ ಆರೋಪ ಹೊರಿಸಲಾಗಿದೆ. ಇಲಾಖಾ ತನಿಖೆಗೂ ಆದೇಶಿಸಲಾಗಿದೆ ಎಂದು ಶಿಕ್ಷಣಾಧಿಕಾರಿ ತಿಳಿಸಿದ್ದಾರೆ. ಇನ್ನು ಘಟನೆ ಕುರಿತು ತನಿಖೆ ನಡೆಸಲು ನಾಲ್ವರು ಸದಸ್ಯರ ತನಿಖಾ ತಂಡವನ್ನು ರಚಿಸಲಾಗಿದೆ. ಇಬ್ಬರು ಶಿಕ್ಷಕರು ತಪ್ಪಿತಸ್ಥರೆಂದು ಕಂಡುಬಂದರೆ ಅವರನ್ನು ಸೇವೆಯಿಂದ ವಜಾಗೊಳಿಸಲಾಗುತ್ತದೆ.
ಇದನ್ನೂ ಓದಿ: Exams: ಆನ್ಸರ್ ಪೇಪರ್ನಲ್ಲಿ ರಾಜಕೀಯ ಪಕ್ಷದ ಘೋಷಣೆ, ಸಿಂಬಲ್ ಮಾಡಿದ್ರೆ ಬೀಳುತ್ತೆ ದುಬಾರಿ ದಂಡ
ಪೊಲೀಸರಿಂದ ತನಿಖೆ ಆರಂಭ
ಇನ್ನು ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಘಟನೆ ಇಂದ ಇಡೀ ಲಖಿಂಪುರ ಖೇರಿ ಜನ ಬೆಚ್ಚಿ ಬಿದ್ದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ