Teachers' Day 2022: ಶಿಕ್ಷಕರ ಶ್ರಮ ಶ್ಲಾಘಿಸಿದ ಪ್ರಧಾನಿ ಮೋದಿ; ಪ್ರಶಸ್ತಿ ವಿಜೇತರೊಂದಿಗೆ ಸಂವಾದ

ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ 2022 ಸಮಾರಂಭವನ್ನು ನವದೆಹಲಿಯ ವಿಜ್ಞಾನ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ. ಈ ಬಾರಿ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿದ 46 ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

 • Share this:
  ದೆಹಲಿ: ಶಿಕ್ಷಕರ ದಿನಾಚರಣೆಯ (Teachers' Day 2022) ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ (Dr Sarvepalli Radhakrishnan) ನಮನ ಸಲ್ಲಿಸಿದ್ದಾರೆ.  ಯುವ ಮನಸ್ಸುಗಳನ್ನು ಪೋಷಿಸುವಲ್ಲಿ ಶಿಕ್ಷಕರ ಪಾತ್ರವನ್ನು ಅವರು ಶ್ಲಾಘಿಸಿದ್ದಾರೆ. "ಶಿಕ್ಷಕರ ದಿನದ ಶುಭಾಶಯಗಳು, ವಿಶೇಷವಾಗಿ ಯುವ ಮನಸ್ಸುಗಳಲ್ಲಿ ಶಿಕ್ಷಣದ ಸಂತೋಷವನ್ನು ಹರಡುವ ಎಲ್ಲಾ ಶ್ರಮಜೀವಿ-ಸೃಜನಶೀಲ ಶಿಕ್ಷಕರಿಗೆ ಶುಭಾಶಯಗಳು. ನಾನು ನಮ್ಮ ಮಾಜಿ ರಾಷ್ಟ್ರಪತಿ ಡಾ. ರಾಧಾಕೃಷ್ಣನ್ ಅವರ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸುತ್ತೇನೆ" ಎಂದು ಪ್ರಧಾನಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.  ಅಲ್ಲದೆ, ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ 2022 ಸಮಾರಂಭವನ್ನು ನವದೆಹಲಿಯ ವಿಜ್ಞಾನ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ. ಈ ಬಾರಿ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿದ 46 ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಶಿಕ್ಷಕರಿಗೆ 2022 ರ ರಾಷ್ಟ್ರೀಯ ಪ್ರಶಸ್ತಿಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರದಾನ ಮಾಡಲಿದ್ದಾರೆ. ಇಂದು ನಡೆಯುವ ಸಮಾರಂಭದಲ್ಲಿ, ದೇಶದ ವಿವಿಧ ಭಾಗಗಳಿಂದ ಆಯ್ಕೆಯಾದ ಆಯ್ಕೆಯಾದ ಅಭ್ಯರ್ಥಿಗಳಿಗೆ ಭಾರತದ ರಾಷ್ಟ್ರಪತಿಗಳು ಈ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.

  ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ವಿಜೇತರೊಂದಿಗೆ ಸಂವಾದ
  ವರದಿಗಳ ಪ್ರಕಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಪೂರ್ಣಗೊಳಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ವಿಜೇತರೊಂದಿಗೆ ತಮ್ಮ ನಿವಾಸದಲ್ಲಿ ಸಂವಾದ ನಡೆಸುವ ನಿರೀಕ್ಷೆಯಿದೆ. ಎಲ್ಲಾ ಪ್ರಶಸ್ತಿ ವಿಜೇತರು ದೇಶಾದ್ಯಂತ ವಿವಿಧ ಶಾಲೆಗಳನ್ನು ಪ್ರತಿನಿಧಿಸಿದ್ದಾರೆ. ಈ ಶಿಕ್ಷಕರು ನೀಡಿದ ಗಮನಾರ್ಹ ಕೊಡುಗೆಗಳನ್ನು ಪರಿಗಣಿಸಿ  ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

  ಕರ್ನಾಟಕ ಸರ್ಕಾರ ಉತ್ತಮ ಶಿಕ್ಷಕ, ಉತ್ತಮ ಶಿಕ್ಷಕಿಯರ ಪಟ್ಟಿ ಬಿಡುಗಡೆ ಮಾಡಿದೆ. ಪ್ರಾಥಮಿಕ ಶಾಲೆ ವಿಭಾಗದಿಂದ 20 ಮಂದಿ ಶಿಕ್ಷಕರು ಹಾಗೂ ಪ್ರೌಢಶಾಲಾ ವಿಭಾಗದಿಂದ 11 ಸೇರಿ ಒಟ್ಟು 31 ಶಿಕ್ಷಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

  ರಾಜ್ಯಸರ್ಕಾರ ಉತ್ತಮ ಶಿಕ್ಷಕ, ಶಿಕ್ಷಕಿಯರ ಪಟ್ಟಿಯನ್ನು ರಿಲೀಸ್ ಮಾಡಿದೆ. ಉತ್ತಮ ಶಿಕ್ಷಕ, ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ರಾಜ್ಯ ಪ್ರಶಸ್ತಿ ಪಟ್ಟಿ ಬಿಡುಗಡೆಯಾಗಿದೆ. ಪ್ರಾಥಮಿಕ ಶಾಲೆ ವಿಭಾಗದಿಂದ 20 ಹಾಗೂ ಪ್ರೌಢ ಶಾಲಾ ವಿಭಾಗದಿಂದ 11 ಸೇರಿ ಒಟ್ಟು 31 ಶಿಕ್ಷಕರು ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಶಿವಕುಮಾರ್ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.

  ಇದನ್ನೂ ಓದಿ: YouTubers Village: ಈ ಊರಿನ ಜನರೆಲ್ಲ ಯೂಟ್ಯೂಬರ್ಸ್​; ಎಲ್ರದ್ದೂ ಒಂದೊಂದು ಚಾನಲ್! ಸರ್ಕಾರಿ ಕೆಲಸವೂ ಬೇಡ್ವಂತೆ

  ಪ್ರಾಥಮಿಕ ಶಾಲಾ ಶಿಕ್ಷಕರ ವಿಭಾಗ
  1. ಮಂಜುನಾಥ್ ಶಂಕ್ರಪ್ಪ - ಸ.ಹಿ.ಪ್ರಾ. ಶಾಲೆ ಬೆನ್ನೂರ್, ಧಾರವಾಡ
  2. ಅಮಿತಾನಂದ ಹೆಗಡೆ - ಸ.ಹಿ.ಪ್ರಾ. ಶಾಲೆ ಬಂಗಾಡಿ, ಬೆಳ್ತಂಗಡಿ
  3. ಚಂದ್ರಶೇಖರ್ HL - ಸ.ಹಿ.ಪ್ರಾ. ಶಾಲೆ ರಾಗಿಮಾಕಲ, ಚಿಕ್ಕಬಳ್ಳಾಪುರ
  4. ಅಪ್ಪಾ ಸಾಹೇಬ್ ವಸಂತಪ್ಪ ಗಿರಿವಣ್ಣನರ - ಸ.ಹಿ.ಪ್ರಾ. ಶಾಲೆ ತುಕ್ಕಾನಟ್ಟಿ, ಚಿಕ್ಕೋಡಿ
  5. ಶಿವಾನಂದಪ್ಪ ಬಿ - ಸ.ಹಿ.ಪ್ರಾ. ಶಾಲೆ ಹರಗುವಳ್ಳಿ, ಶಿವಮೊಗ್ಗ
  6. ಹುಸೇನ್ ಸಾಬ್ - ಸ.ಮಾ.ಹಿ.ಪ್ರಾ. ಶಾಲೆ ಬಸನಾಳ, ಕಲಬುರ್ಗಿ
  7. ಸುದರ್ಶನ್ ಕೆವಿ - ಕನ್ನಡ ಮತ್ತು ತಮಿಳು ಸ.ಮಾ.ಪ್ರಾ. ಶಾಲೆ ಬೆಂಗಳೂರು
  8. ಕೊಟ್ರಪ್ಪ ವಿರೂಪಾಕ್ಷಪ್ಪ ಮೇಲ್ಮುರಿ - ಬಾಲಕರ ಕನ್ನಡ ಸ.ಹಿ.ಪ್ರಾ. ಶಾಲೆ ಹಂದಿಗನೂರು, ಹಾವೇರಿ
  9. ಸಂಜೀವ ದೇವಾಡಿಗ - ಸ.ಕಿ.ಪ್ರಾ. ಶಾಲೆ ಮಿಯೂರು, ಕಾರ್ಕಳ
  10. ಫಿರೆಂಗಪ್ಪ ಸಿದ್ದಪ್ಪ ಕಟ್ಟಿಮನಿ - ಸ.ಹಿ.ಪ್ರಾ. ಶಾಲೆ ತೊದಲಬಾಗಿ, ಬಾಗಲಕೋಟೆ
  11. ಚಂದ್ರಕಲಾ - ಸ.ಹಿ.ಪ್ರಾ. ಶಾಲೆ ಹಾಲಭಾವಿ, ಯಾದಗಿರಿ
  12. ನಿರಂಜನ ಪಿಜೆ - ಸ.ಹಿ.ಪ್ರಾ. ಶಾಲೆ ವೆಂಕಟಾಪುರ, ಹೊಸಪೇಟೆ
  13. ಸುಶೀಲಭಾಯಿ ಲಕ್ಷ್ಮೀಕಾಂತ್ ಗುರುವ - ಸ.ಹಿ.ಪ್ರಾ. ಶಾಲೆ ವಡಗಾವಿ, ಬೆಳಗಾವಿ
  14. ವಿದ್ಯಾ ಕಂಪಾಪೂರ ಮಠ - ಸ.ಹಿ.ಪ್ರಾ. ಶಾಲೆ ನೆರೆಬೆಂಚಿ, ಕೊಪ್ಪಳ
  15. ಬಸವರಾಜ ಜಾಡರ - ಸ.ಹಿ.ಪ್ರಾ. ಶಾಲೆ ಮುಳ್ಳೂರು, ರಾಯಚೂರು
  16. ಗಂಗಾಧರಪ್ಪ ಬಿಆರ್ - ಸ.ಮಾ.ಹಿ.ಪ್ರಾ. ಶಾಲೆ ಮೆಣಸೆ, ಚಿಕ್ಕಮಗಳೂರು
  17. ಚಂದ್ರಶೇಖರ್ ರೆಡ್ಡಿ - ಸ.ಕಿ.ಪ್ರಾ. ಶಾಲೆ ಕೆ.ರಾಂಪುರ, ಮಧುಗಿರಿ
  18. ಸುಧಾಕರ ಗಣಪತಿ ನಾಯಕ - ಸ.ಹಿ.ಪ್ರಾ. ಶಾಲೆ ಕಂಚನಹಳ್ಳಿ, ಶಿರಸಿ
  19. ಈಶ್ವರಪ್ಪ ಅಂದಾನಪ್ಪ ರೇವಡಿ - ಸ.ಹಿ.ಪ್ರಾ. ಶಾಲೆ ಹಿರೇಕೊಪ್ಪ, ಗದಗ
  20. ಕವಿತ ಈ - ಸ.ಕಿ.ಪ್ರಾ. ಶಾಲೆ ಬೋರಪ್ಪನಗುಡಿ, ಚಿತ್ರದುರ್ಗ

  ಇದನ್ನೂ ಓದಿ: Teachers' Day: ಅಕ್ಷರ ಕಲಿಸಿಕೊಟ್ಟ ಗುರುಗಳಿಗೆ ಸಲಾಂ, ಶಿಕ್ಷಕರ ದಿನದ ಇತಿಹಾಸ, ಮಹತ್ವ ತಿಳಿಯೋಣ

  ಪ್ರೌಢಶಾಲಾ ಶಿಕ್ಷಕರ ವಿಭಾಗ
  21. ಮಹೇಶ್ ಕೆಎನ್ - ಶ್ರೀ ಆಂಜನೇಯಾ ಪ್ರೌಢ ಶಾಲೆ ಕಡ್ಲೇಗುದ್ದು, ಚಿತ್ರದುರ್ಗ
  22. ಇಬ್ರಾಹಿಂ ಎಸ್ಎಂ - ಸ.ಪ್ರೌ.ಶಾಲೆ ನೇರುಗಳಲೆ, ಸೋಮವಾರಪೇಟೆ
  23. ರಘು ಬಿಎಂ - ರಾಷ್ಟ್ರೀಯ ಪದವಿ ಪೂರ್ವ ಕಾಲೇಜು, ಶಿವಮೊಗ್ಗ
  24. ಭೀಮಪ್ಪ - ಬಾಲಕಿಯರ ಸ.ಪ್ರೌ. ಶಾಲೆ ಮಸ್ಕಿ, ರಾಯಚೂರು
  25. ರಾಧಾಕೃಷ್ಣ ಟಿ - ಸ.ಪ.ಪೂ.ಕಾಲೇಜು, ಕೆಯ್ಯೂರು ಬೆಳ್ತಂಗಡಿ
  26. ನಾರಾಯಣ ಪರಮೇಶ್ವರ ಭಾಗವತ - ಮಾರಿಕಾಂಬಾ ಸ.ಪ.ಪೂ.ಕಾಲೇಜು ಶಿರಸಿ
  27. ಅರುಣ ಜೂಡಿ - ಸ.ಪ.ಪೂ.ಕಾಲೇಜು ಕಿನ್ನಾಳ, ಕೊಪ್ಪಳ
  28. ಸುನೀಲ ಪರೀಟ - ಸ.ಪ್ರೌ.ಶಾಲೆ ಲಕ್ಕುಂಡಿ, ಬೆಳಗಾವಿ
  29. ಬಾಲಸುಬ್ರಹ್ಮಣ್ಯ ಎಸ್ಟಿ - ಸ.ಪ್ರೌ.ಶಾಲೆ ಕೊಕ್ಕರೆ ಬೆಳ್ಳೂರು, ಮಂಡ್ಯ
  30. ಡಾ. ಚೇತನ್ ಬಣಕಾರ - ಬಾಲಕಿಯರ ಸ.ಪ್ರೌ.ಶಾಲೆ ಹರಪ್ಪನಹಳ್ಳಿ, ವಿಜಯನಗರ
  31. ಕೀರ್ತಿ ಬಸಪ್ಪ ಲಗಳಿ - ಸ.ಪ್ರೌ.ಶಾಲೆ ಮಿಟ್ಟೇಮರಿ, ಚಿಕ್ಕಬಳ್ಳಾಪುರ
  Published by:guruganesh bhat
  First published: