Rape Case: ಶಿಕ್ಷಕನಿಂದಲೇ 11 ವರ್ಷದ ಬಾಲಕಿ ಮೇಲೆ ರೇಪ್​; ಚೈಲ್ಡ್​ ಹೆಲ್ಪ್​ಲೈನ್​ ನಂಬರ್​ಗೆ ಕರೆ ಮಾಡಿದ ವಿದ್ಯಾರ್ಥಿನಿ

Teacher Raped Student: ಈ ಘಟನೆಗೂ ಕೆಲ ದಿನಗಳಿಂದ ವಿದ್ಯಾರ್ಥಿನಿ ಫೋನ್​ಗೆ ಅಸಭ್ಯ ಫೋಟೋ, ವಿಡಿಯೋಗಳನ್ನ ಶಿಕ್ಷಕ ಕಳುಹಿಸುತ್ತಿದ್ದನಂತೆ. ಹೀಗೆ ಮೆಸೇಜ್​ ಮಾಡದಂತೆ ಶಿಕ್ಷಕನಿಗೆ ಹೇಳಲು ಬೆದರಿದ ವಿದ್ಯಾರ್ಥಿನಿ ಸುಮ್ಮನಾಗಿದ್ದಳು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ದೇಶದಲ್ಲಿ ಕಾಮುಕರ ಅಟ್ಟಹಾಸ ಮಿತಿಮೀರಿದೆ. ಹೆಣ್ಣುಮಕ್ಕಳನ್ನ(Girls) ಕೆಟ್ಟ ದೃಷ್ಟಿಯಲ್ಲಿ ನೋಡುವುದೇ ತಪ್ಪು, ಅದರಲ್ಲಿ ತನ್ನ ಕಾಮ ತೀಟೆಗೆ ಅವರನ್ನ ಬಲಿಪಶುಮಾಡಿಕೊಳ್ಳುವುದು ಮಹಾತಪ್ಪು. ದೇಶದಲ್ಲಿ ಈ ಬಗ್ಗೆ ಅದೆಷ್ಟೋ ಕಾನೂನುಗಳು ಇವೆ. ಆದರೂ ರೇಪ್ (Rape) ಕೇಸ್​​ಗಳ ಸಂಖ್ಯೆ ಕಡಿಮೆಯಾಗಿಲ್ಲ. ಪ್ರತಿದಿನ ಚಿತ್ರ, ವಿಚಿತ್ರ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಕೆಲವೊಂದು ಕೇಸ್​ಗಳನ್ನ ನೋಡಿದರೆ, ಈ ಪ್ರಪಂಚದಲ್ಲಿ ಹೆಣ್ಣುಮಕ್ಕಳಾಗಿ ಹುಟ್ಟುವುದೇ ತಪ್ಪಾ ಎಂದು ಅನಿಸಲು ಶುರುವಾಗುತ್ತೆ.

    ಯಾವ ಮಟ್ಟಕ್ಕೆ ಕಾಮುಕರು ಇಳಿದಿದ್ದಾರೆ ಅಂದರೆ. ಏನೂ ಅರಿಯದ ಶಾಲಾ ಮಕ್ಕಳ(School childrens) ಮೇಲೆ ಎರಗಿ ಬೀಳುತ್ತಿದ್ದಾರೆ.ಅದು ಬೇರೆ ಯಾರೋ ಅಲ್ಲ. ಸ್ವತಃ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರೇ (Teachers)ಕಂಡ ಕಂಡಲ್ಲಿ ತಮ್ಮ ಕಾಮ ದಾಹವನ್ನು ತೀರಿಸಿಕೊಳ್ಳುತ್ತಿದ್ದಾರೆ. ರಾಜಸ್ಥಾನ(Rajasthan)ದಲ್ಲೊಂದು ಮನಕಲುಕುವ ಘಟನೆ ನಡೆದಿದೆ. 7ನೇ ಕ್ಲಾಸ್​ ವಿದ್ಯಾರ್ಥಿನಿ(7th standard student)ಮೇಲೆ ಶಿಕ್ಷಕ(Teacher)ನಿಂದಲೇ ರೇಪ್​ ಆಗಿದೆ. ಅತ್ಯಾಚಾರವೆಸಗಿ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಸಾಯಿಸುವುದಾಗಿ ಬೆದರಿಕೆ ಒಡ್ಡಿದ್ದಾನೆ.

    ಘಟನೆ ನಡೆದಿದ್ದು ಎಲ್ಲಿ? ಯಾವಾಗ?

    ಇದನ್ನೂ ಓದಿ: ದುರ್ಗಾ ಭಕ್ತರ ಮೇಲೆ ಹರಿದ ಕಾರು; ಒಬ್ಬ ಸಾವು, 26 ಮಂದಿ ಗಾಯ; CCTVಯಲ್ಲಿ ದೃಶ್ಯ ಸೆರೆ

    ರಾಜಸ್ಥಾನದ ಜೈಪುರದ ಜುಂಜುನು ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ. ಅಕ್ಟೋಬರ್​ 5ರಂದು ಸರ್ಕಾರಿ ಶಾಲೆಯೊಂದರ ಶಿಕ್ಷಕ 7ನೇ ಕ್ಲಾಸ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಶಾಲೆ ಮುಗಿದ ಬಳಿಕ ವಿದ್ಯಾರ್ಥಿನಿಗೆ ಇನ್ನು ಕೆಲ ಕಾಲ ಇಲ್ಲೇ ಇರುವಂತೆ ಶಿಕ್ಷಕ ಹೇಳಿದ್ದ. ಗುರುಗಳ ಮಾತಿಗೆ ಬೆಲೆ ಕೊಟ್ಟು ವಿದ್ಯಾರ್ಥಿನಿ ಶಾಲೆಯಲ್ಲಿ ಇದ್ದಳು.

    ಈ ಘಟನೆಗೂ ಕೆಲ ದಿನಗಳಿಂದ ವಿದ್ಯಾರ್ಥಿನಿ ಫೋನ್​ಗೆ ಅಸಭ್ಯ ಫೋಟೋ, ವಿಡಿಯೋಗಳನ್ನ ಶಿಕ್ಷಕ ಕಳುಹಿಸುತ್ತಿದ್ದನಂತೆ. ಹೀಗೆ ಮೆಸೇಜ್​ ಮಾಡದಂತೆ ಶಿಕ್ಷಕನಿಗೆ ಹೇಳಲು ಬೆದರಿದ ವಿದ್ಯಾರ್ಥಿನಿ ಸುಮ್ಮನಾಗಿದ್ದಳು. ಶಾಲೆಯಿಂದ ಎಲ್ಲರೂ ಹೊರಟ ಮೇಲೆ ವಿದ್ಯಾರ್ಥಿನಿ ಮೇಲೆ ಶಿಕ್ಷಕ ಅತ್ಯಾಚಾರವೆಸಗಿದ್ದಾನೆ.ಬಳಿಕ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ, ಜೊತೆಗೆ ಆತ ಕಳಿಸಿದ್ದ ಸಂದೇಶಗಳನ್ನ ವಿದ್ಯಾರ್ಥಿನಿ ಮೊಬೈಲ್​ನಿಂದ ಡಿಲೀಟ್​ ಮಾಡಿಸಿದ್ದನಂತೆ.

    ಪುಸ್ತಕದಲ್ಲಿದ್ದ ಚೈಲ್ಡ್​ ಹೆಲ್ಪ್​ ಲೈನ್​ ಕರೆ ಮಾಡಿದ ವಿದ್ಯಾರ್ಥಿನಿ
    ಘಟನೆ ನಡೆದು 9 ದಿನಗಳ ಕಾಲ ಬಾಲಕಿ ಸುಮ್ಮನಾಗಿದ್ದಳು. ಯಾರ ಬಳಿಯೂ ಏನು ಹೇಳಿಕೊಳ್ಳದೇ ಒಬ್ಬಳೇ ಕಷ್ಟಪಡುತ್ತಿದ್ದಳು. ಶಿಕ್ಷಕ ಬೇರೆ ಯಾರಿಗಾದರೂ ಹೇಳಿದರೆ ಕೊಂದು ಬಿಡುವ ಬೆದರಿಕೆ ಹಾಕಿದ್ದ. ಆದರೆ ಅಕ್ಟೋಬರ್​ 14ರಂದು ವಿದ್ಯಾರ್ಥಿನಿ ಶಾಲೆಗೆ ತೆರಳಿದ್ದಾಳೆ. ಯಾರ ಬಳಿ ತನಗಾದ ಅನ್ಯಾಯವನ್ನು ಹೇಳಿಕೊಳ್ಳಬೇಕೆಂದು ತಿಳಿಯದೆ ಬುಕ್​ ಓಪನ್​ ಮಾಡಿದ್ದಾಳೆ. ಪುಸ್ತಕದಲ್ಲಿ ಚೈಲ್ಡ್​ ಹೆಲ್ಪ್​ಲೈನ್​ ನಂಬರ್​ಗೆ ಕರೆ ಮಾಡಿ ಘಟನೆಯನ್ನ ವಿವರಿಸಿದ್ದಳು ಬಾಲಕಿ. ಕೂಡಲೇ ವಿದ್ಯಾರ್ಥಿನಿ ಇದ್ದ ಕಡೆಗೆ ಮಕ್ಕಳ ಕ್ಷೇಮ ಸಮಿತಿ ಅಧಿಕಾರಿಗಳು ಬಂದಿದ್ದಾರೆ. ಬಳಿಕ ವಿದ್ಯಾರ್ಥಿನಿಯನ್ನ ಪೊಲೀಸ್​ ಠಾಣೆಗೆ ಕರೆದುಕೊಂಡು ಹೋಗಿ ದೂರು ದಾಖಲಿಸಿದ್ದಾರೆ.

    ಕಾಮುಕನ ಕುಟುಂಬಸ್ಥರೆಲ್ಲ ಶಿಕ್ಷಕರೇ
    ಇನ್ನು ದೂರು ದಾಖಲಾಗುತ್ತದ್ದಂತೆ, ಆಕ್ಟೀವ್​ ಆದ ಪೊಲೀಸರು ಶಿಕ್ಷಕ ಆಳ್ವಾರ್​ ಜಿಲ್ಲೆಯಲ್ಲಿ ಇರುವುದನ್ನ ಪತ್ತೆ ಹಚ್ಚಿದ್ದರು. ಕೂಡಲೇ ಪೊಲೀಸರ ತಂಡ ಅಲ್ಲಿಗೆ ತೆರಳಿ ಆತನನ್ನ ಬಂಧಿಸಿದ್ದಾರೆ. ಇನ್ನೂ ಈತನ ಪತ್ನಿ ಕೂಡ ಸರ್ಕಾರಿ ಶಿಕ್ಷಕರೇ.

    ಇದನ್ನೂ ಓದಿ: ಸೌರಶಕ್ತಿಗಾಗಿ ಕಡಿಮೆ-ವೆಚ್ಚದ ತಂತ್ರಜ್ಞಾನ ಹೊಂದಿರುವ NexWafe ಜತೆ RIL ಹೂಡಿಕೆ

    ಅಷ್ಟೇ ಅಲ್ಲದೆ ಈತನ ತಂದೆ ಕೂಡ ನಿವೃತ್ತ ಶಿಕ್ಷಕರು. ಅಕ್ಕ-ಭಾವ ಕೂಡ ಸರ್ಕಾರಿ ಕಾಲೇಜುಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಹೀಗೆ ಶಿಕ್ಷಕ ಕುಟುಂಬದಿಂದ ಬಂದು, ತಾನೂ ಓದಿ ಶಿಕ್ಷಕನಾಗಿದ್ದವ ಪುಟ್ಟ ವಿದ್ಯಾರ್ಥಿನಿ ಮೇಲೆ ಎರಗಿ ಜೈಲು ಸೇರಿದ್ದಾನೆ. ಮಕ್ಕಳ ಭವಿಷ್ಯ ರೂಪಿಸಬೇಕಿದ್ದ ಶಿಕ್ಷಕನ ಈ ರೀತಿಯ ಕೃತ್ಯ ಎಸಗಿರುವುದು ನಿಜಕ್ಕೂ ಖಂಡನೀಯ.

    ವರದಿ - ವಾಸುದೇವ್​​.ಎಂ
    Published by:Sandhya M
    First published: