Teacher Sent Obscene Messages To Student: ಅಶ್ಲೀಲ ಮೆಸೇಜ್ ಕಳಿಸುತ್ತಿದ್ದ ಶಿಕ್ಷಕನಿಗೆ ಬುದ್ಧಿ ಕಲಿಸಲು ವಿದ್ಯಾರ್ಥಿಗಳು ಮಾಡಿದ್ದೇನು?

ವಿದ್ಯಾರ್ಥಿಗಳಿಗೆ ಎಣ್ಣೆ ಪಾರ್ಟಿಗೆ (Liqupr Party) ಆಹ್ವಾನ ನೀಡಿದರೆ ವಿದ್ಯಾರ್ಥಿನಿಯರಿಗೆ ರಾತ್ರಿ 10 ಗಂಟೆಯಾದರೆ ಅಶ್ಲೀಲ ಮೆಸೇಜ್ ಕಳುಹಿಸಿ ಕಿರುಕುಳ ನೀಡುತ್ತಿದ್ದನು. ಶಾಲಾವಧಿ ಮುಗಿದ್ರೂ ಹೋಮ್ ವರ್ಕ್ (Home Work) ಮಾಡಿಸುವ ನೆಪದಲ್ಲಿ ವಿದ್ಯಾರ್ಥಿನಿಯರಿಗೆ ಹೊರಗೆ ಸಿಗುವಂತೆ ಹೇಳುತ್ತಿದ್ದನು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಜೈಪುರ: ಗುರು ಮತ್ತು ಶಿಷ್ಯರ ನಡುವಿನ ಬಾಂಧವ್ಯಕ್ಕೆ ಬೆಲೆ ಕಟ್ಟಲು ಆಗದು. ಆದ್ರೆ ಕಳೆದ ಕೆಲ ದಿನಗಳಿಂದ ಇಂತಹ ಪವಿತ್ರವಾದ ಬಾಂಧವ್ಯಕ್ಕೆ ಕಳಂಕ ತರುವಂತಹ ಪ್ರಕರಣಗಳು ವರದಿಯಾಗಿದ್ದು, ಸಾರ್ವಜನಿಕರು ತಲೆ ತಗ್ಗಿಸುವಂತಾಗಿದೆ. ಕೆಲವೊಮ್ಮೆ ಶಿಕ್ಷಕರು ಇಂತಹ ಹೀನಕೃತ್ಯಕ್ಕೆ ಮುಂದಾಗುತ್ತಾರೆ. ಅಶ್ಲೀಲ ಮೆಸೇಜ್ ಕಳಿಸುತ್ತಿದ್ದ ಜೈಪುರ (Jaipur Teacher)ದ ಶಿಕ್ಷಕನಿಗೆ ವಿದ್ಯಾರ್ಥಿಗಳೇ ಬುದ್ಧಿ ಕಲಿಸಿದ್ದಾರೆ. ವಿದ್ಯಾರ್ಥಿಗಳಿಗೆ ಮೆಸೇಜ್ ಮಾಡುತ್ತಿದ್ದ ಶಿಕ್ಷಕ ಶಾಲೆಯ ಹೊರಗೆ ಸಿಗುವಂತೆ ಹೇಳುತ್ತಿದ್ದನು.

    ಸೇಂಟ್ ಜೇವಿಯರ್ಸ್ ಶಾಲೆಯ ಶಿಕ್ಷಕ ನಿಖಿಲ್ ಜೋಸ್ ವಿರುದ್ಧ ಅಶ್ಲೀಲ ಸಂದೇಶ ಕಳಿಸುತ್ತಿರುವ ಆರೋಪ ಕೇಳಿ ಬಂದಿದೆ. ಸದ್ಯ ಪೊಲೀಸರು ಆರೋಪಿ ಶಿಕ್ಷಕನನ್ನು ಬಂಧಿಸಿದ್ದು, ಆತನ ಮೊಬೈಲ್ (Mobile) ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಮೊಬೈಲ್ ನಲ್ಲಿ ವಿದ್ಯಾರ್ಥಿಗಳ ಜೊತೆ ಚಾಟ್ ನಡೆಸಿರುವ ಸ್ಕ್ರೀನ್ ಶಾಟ್ಸ್ ಲಭ್ಯವಾಗಿದೆ ಎಂದು ವರದಿಯಾಗಿದೆ.

    ವಾಟ್ಸಪ್ ಗ್ರೂಪ್ ನಿಂದ ನಂಬರ್ ಪಡೆದು ಪ್ರೈವೇಟ್ ಚಾಟಿಂಗ್:

    ಬಂಧನದ ಬಳಿಕ ಹೇಳಿಕೆ ನೀಡಿರುವ ನಿಖಿಲ್ ಜೋಸ್, ಒಂದು ದಿನ ಮುಂಚೆಯೇ ತನ್ನ ಐಡಿಯಿಂದ ಮೆಸೇಜ್ ಹೋಗುತ್ತಿರುವ ವಿಷಯ ತಿಳಿದಿದೆ ಎಂದು ಹೇಳಿದ್ದಾನೆ. ನಿಖಿಲ್ ಸಿ-ಸ್ಕೀಮ್ ಮತ್ತು ಎನ್‍ಸಿಸಿ ಶಿಕ್ಷಕನಾಗಿದ್ದನು. ಕೊರೋನಾದಿಂದ ಶಾಲೆಗಳು ಬಂದ್ ಆಗಿದ್ದರಿಂದ ಆನ್‍ಲೈನ್ ಕ್ಲಾಸ್ (online Class) ಕುರಿತು ಚರ್ಚೆ ನಡೆಸಲು ವಾಟ್ಸಪ್ ಗ್ರೂಪ್ (Whatsapp Group) ರಚನೆ ಮಾಡಲಾಗಿತ್ತು. ಈ ಗ್ರೂಪ್ ನಿಂದಲೇ ತನಗೆ ಬೇಕಾದ ವಿದ್ಯಾರ್ಥಿಗಳ ನಂಬರ್ ಪಡೆದುಕೊಂಡು ಪ್ರೈವೇಟ್ ಚಾಟ್ ಮಾಡಲಾರಂಭಿಸಿದ್ದನು. ಪ್ರಾರಂಭದಲ್ಲಿ ವಿದ್ಯಾರ್ಥಿಗಳು ಹೆಚ್ಚು ಪ್ರತಿಕ್ರಿಯೆ ನೀಡದೇ ಸುಮ್ಮನಾಗಿದ್ದರು. ಆದ್ರೆ ಟೀಚರ್ ಕೊನೆಗೆ ಮದ್ಯದ ಪಾರ್ಟಿಗೆ ಆಹ್ವಾನ ನೀಡುತ್ತಿದ್ದನು ಎಂಬುವುದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ.

    ವಿದ್ಯಾರ್ಥಿನಿಯರಿಗೂ ಅಶ್ಲೀಲ ಮೆಸೇಜ್ ಕಳಿಸುತ್ತಿದ್ದ

    ವಿದ್ಯಾರ್ಥಿಗಳಿಗೆ ಎಣ್ಣೆ ಪಾರ್ಟಿಗೆ (Liqupr Party) ಆಹ್ವಾನ ನೀಡಿದರೆ ವಿದ್ಯಾರ್ಥಿನಿಯರಿಗೆ ರಾತ್ರಿ 10 ಗಂಟೆಯಾದರೆ ಅಶ್ಲೀಲ ಮೆಸೇಜ್ ಕಳುಹಿಸಿ ಕಿರುಕುಳ ನೀಡುತ್ತಿದ್ದನು. ಶಾಲಾವಧಿ ಮುಗಿದ್ರೂ ಹೋಮ್ ವರ್ಕ್ (Home Work) ಮಾಡಿಸುವ ನೆಪದಲ್ಲಿ ವಿದ್ಯಾರ್ಥಿನಿಯರಿಗೆ ಹೊರಗೆ ಸಿಗುವಂತೆ ಹೇಳುತ್ತಿದ್ದನು. ಇದರ ಜೊತೆಗೆ ಹಳೆ ವಿದ್ಯಾರ್ಥಿಗಳಿಗೂ ಮೆಸೇಜ್ ಕಳಿಸುತ್ತಿದ್ದನು. ಹಳೆ ವಿದ್ಯಾರ್ಥಿಗಳ ಸೋಶಿಯಲ್ ಮೀಡಿಯಾ (Social Media Account) ಖಾತೆಗಳನ್ನು ಪತ್ತೆ ಮಾಡಿ ಸ್ನೇಹ ಬೆಳೆಸಿಕೊಳ್ಳುತ್ತಿದ್ದನು. ವಿದ್ಯಾರ್ಥಿಗಳು ಸಹ ತಮ್ಮ ಶಿಕ್ಷಕನೆಂದು ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿಕೊಳ್ಳುತ್ತಿದ್ದರು. ನಂತರ ಪರ್ಸನಲ್ ಆಗಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದನು.

    ಶಿಕ್ಷಕನಿಗೆ ಬುದ್ಧಿ ಕಲಿಸಿದ್ದು ಹೇಗೆ?

    ಶಿಕ್ಷಕ ಕಳುಹಿಸುವ ಮೆಸೇಜ್ ಬಗ್ಗೆ ವಿದ್ಯಾರ್ಥಿಗಳಲ್ಲೇ ಚರ್ಚೆ ನಡೆದಿದೆ. ಎಲ್ಲರೂ ಒಟ್ಟಾಗಿ ಶಿಕ್ಷಕ ನಿಖಿಲ್ ಜೋಸ್ ವಿರುದ್ಧ ಆನ್‍ಲೈನ್ ಕ್ಯಾಂಪೇನ್ ಆರಂಭಿಸಿದ್ದಾರೆ. ವಿದ್ಯಾರ್ಥಿಯೋರ್ವ ಇನ್‍ಸ್ಟಾಗ್ರಾಂನಲ್ಲಿ 27 ನಿಮಿಷ 13 ಸೆಕೆಂಡ್ ವಿಡಿಯೋ ಹಂಚಿಕೊಂಡು ಶಿಕ್ಷಕನ ಕರ್ಮಕಾಂಡ ರಿವೀಲ್ ಮಾಡಿದ್ದನು. ಇದರಲ್ಲಿ ಶಿಕ್ಷಕ ಹೇಗೆ ಮತ್ತು ಯಾವ ರೀತಿ ಸಂದೇಶ ಮತ್ತು ವಿಡಿಯೋ ಕಳಿಸುತ್ತಿದ್ದ ಎಂಬುದರ ಮಾಹಿತಿಯನ್ನು ಹಂಚಿಕೊಳ್ಳಲಾಗಿತ್ತು.

    ಇದನ್ನು ಓದಿ: Goa Assembly Election 2022: ಸೆಲಬ್ರಿಟಿಗಳಿಗೆ ಗಾಳ ಹಾಕುತ್ತಿರುವ ಟಿಎಂಸಿ!

    ಆನ್‍ಲೈನ್ ಕ್ಲಾಸ್‍ನಲ್ಲಿ ಶಿಕ್ಷಕಿಯ ಸೆಕ್ಸ್

    ಶಿಕ್ಷಕರು- ವಿದ್ಯಾರ್ಥಿಗಳ ಕಾನ್ಫರೆನ್ಸ್ ವೇಳೆ ತನ್ನ ಸಂಗಾತಿಯೊಂದಿಗೆ ಶಿಕ್ಷಕಿ ಸೆಕ್ಸ್ ಮಾಡಿದ್ದು, ಅದು ಕ್ಯಾಮರಾ ಮೂಲಕ ಎಲ್ಲರಿಗೂ ಕಾಣಿಸಿದೆ. ಜಮೈಕಾ ಟೀಚರ್ಸ್ ಅಸೋಸಿಯೇಶನ್ನ ಸಮ್ಮೇಳನದ ಮಧ್ಯದಲ್ಲಿ ಶಿಕ್ಷಕರೊಬ್ಬರು ಲೈಂಗಿಕ ಸಂಭೋಗ ನಡೆಸುತ್ತಿರುವ ದೃಶ್ಯವು ಕ್ಯಾಮರಾದಲ್ಲಿ ಸೆರೆಯಾದ ಪ್ರಕರಣವು ಬೆಳಕಿಗೆ ಬಂದಿತ್ತು. ದಿ ಸನ್ ಪತ್ರಿಕೆಯ ವರದಿಯ ಪ್ರಕಾರ, ಎರಡು ನಿಮಿಷಗಳ ಕ್ಲಿಪ್ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಶಿಕ್ಷಕಿಯು ತನ್ನ ಸಂಗಾತಿಯೊಂದಿಗೆ ಸೆಕ್ಸ್ ಮಾಡುತ್ತಿರುವ ದೃಶ್ಯ ಸೆರೆಯಾಗಿತ್ತು.

    ವರದಿ: ಮೊಹ್ಮದ್​​ ರಫೀಕ್ಕೆ
    Published by:HR Ramesh
    First published: