6 ವರ್ಷದ ವಿದ್ಯಾರ್ಥಿನಿ ಮೇಲೆ ತರಗತಿಯಲ್ಲೇ ಅತ್ಯಾಚಾರ ನಡೆಸಿದ 51 ವರ್ಷದ ಶಿಕ್ಷಕ

ಡಾರ್ಜಲಿಂಗ್​ನಲ್ಲಿ ಈ ಘಟನೆ ನಡೆದಿದೆ. 51 ವರ್ಷದ ಚಂದ್ರಮನ್​ ಕಾವಸ್​ ಬಂಧಿತ ಆರೋಪಿ. ಪೋಕ್ಸೋ ಕಾಯ್ದೆ ಅಡಿಯಲ್ಲಿ ಈತನ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.

news18-kannada
Updated:December 4, 2019, 10:31 AM IST
6 ವರ್ಷದ ವಿದ್ಯಾರ್ಥಿನಿ ಮೇಲೆ ತರಗತಿಯಲ್ಲೇ ಅತ್ಯಾಚಾರ ನಡೆಸಿದ 51 ವರ್ಷದ ಶಿಕ್ಷಕ
ಸಾಂದರ್ಭಿಕ ಚಿತ್ರ.
  • Share this:
ಕೋಲ್ಕತ್ತಾ (ಡಿ.4): ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಹೈದರಾಬಾದ್​ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣದ ನಂತರ ದೇಶಾದ್ಯಂತ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಈ ಮಧ್ಯೆ ಶಾಲಾ ಶಿಕ್ಷಕನೇ ತರಗತಿಯಲ್ಲಿ 6 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಡಾರ್ಜಲಿಂಗ್​ನಲ್ಲಿ ಈ ಘಟನೆ ನಡೆದಿದೆ. 51 ವರ್ಷದ ಚಂದ್ರಮನ್​ ಕಾವಸ್​ ಬಂಧಿತ ಆರೋಪಿ. ಪೋಕ್ಸೋ ಕಾಯ್ದೆ ಅಡಿಯಲ್ಲಿ ಈತನ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.

6 ವರ್ಷದ ಬಾಲಕಿ ತರಗತಿಯಲ್ಲಿ ಕುಳಿತಿದ್ದಳು. ಉಳಿದವರು ಮೈದಾನದಲ್ಲಿ ಆಟವಾಡಲು ತೆರಳಿದ್ದರು. ಈ ವೇಳೆ ತರಗತಿಗೆ ಬಂದ ಚಂದ್ರಮನ್​ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಅಷ್ಟೇ ಅಲ್ಲ ಯಾರಿಗೂ ಇದನ್ನು ಹೇಳದಂತೆ ಬಾಲಕಿಗೆ ಬೆದರಿಕೆ ಹಾಕಿದ್ದ.

ಮನೆಗೆ ಬಂದ ನಂತರ ಬಾಲಕಿ ಅಮ್ಮನ ಬಳಿ ಈ ವಿಚಾರ ಹೇಳಿದ್ದಾಳೆ. ಆದರೆ, ಬಾಲಕಿಯ ತಾಯಿ ಇದನ್ನು ನಂಬಿರಲಿಲ್ಲ. ನಂತರ ಗುಪ್ತಾಂಗದಲ್ಲಿ ನೋವು ಕಾಣಿಸಿಕೊಂಡ ಬಗ್ಗೆ ಬಾಲಕಿ ದೂರಿದಾಗ, ಆಕೆಯ ತಾಯಿ ಪೊಲೀಸ್​ ಠಾಣೆಗೆ ದೂರು ನೀಡಿದ್ದಳು.

ವಿದ್ಯಾರ್ಥಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆಕೆಯ ಮೇಲೆ ಅತ್ಯಾಚಾರ ನಡೆದಿರುವ ವಿಚಾರ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಚಂದ್ರಮನ್​ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
First published: December 4, 2019, 9:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading