Viral News: ಎಂಥಾ ಕಾಲ ಬಂತು ನೋಡಿ: ಕೇಕ್‌ ನಲ್ಲಿ ತನ್ನ ಗಂಡನ ವೀರ್ಯ ಬೆರೆಸಿ ಮಕ್ಕಳಿಗೆ ತಿನ್ನಲು ನೀಡಿದ ಶಿಕ್ಷಕಿ!

ಅಮೆರಿಕದ ಲೂಸಿಯಾನಾ (Livingston in Louisiana, US) ಪ್ರದೇಶದ ವೆಸ್ಟ್ ಸೈಡ್ ಜೂನಿಯರ್ ಹೈಸ್ಕೂಲಿನ ಶಿಕ್ಷಕಿ(High school Teacher)ಯಾಗಿರುವ 36ರ ಪ್ರಾಯದ ಸಿಂಥಿಯಾ ಪರ್ಕಿನ್ಸ್ ಎಂಬ ವಿಕೃತ ಮನಸ್ಸಿನ ಶಿಕ್ಷಕಿಯೇ ಈ 'ಮಹಾನ್' ಕಾರ್ಯ ಮಾಡಿದ್ದಾರೆಂಬುದಾಗಿ ವರದಿಯಾಗಿದೆ.

ಶಿಕ್ಷಕಿ ಮತ್ತು ಆಕೆಯ ಗಂಡ

ಶಿಕ್ಷಕಿ ಮತ್ತು ಆಕೆಯ ಗಂಡ

  • Share this:
ಆಗಾಗ ನಾವು ಜಗತ್ತಿನ ಮೂಲೆ ಮೂಲೆಗಳಿಂದ ಚಿತ್ರ ವಿಚಿತ್ರವಾದ ಘಟನೆಗಳು ನಡೆಯುವುದನ್ನು ನೋಡುತ್ತಲೇ ಇರುತ್ತೇವೆ. ಕೆಲವು ಘಟನೆಗಳು ಅಚ್ಚರಿ ಪಡಿಸಿದರೆ, ಇನ್ನೂ ಕೆಲವು ಘಟನೆಗಳು ಬೇಸರ ಮೂಡಿಸುವಂತಿರುತ್ತವೆ. ಆದರೆ ಮಗದೊಮ್ಮೆ ಕೆಲ ಘಟನೆಗಳು ಬೇಸರ, ಕೋಪ ಹಾಗೂ ಅಸಹ್ಯ ಮೂರನ್ನೂ ಮೂಡಿಸುವಂತಿರುತ್ತವೆ. ಸದ್ಯ ಇಂಥದ್ದೇ ಒಂದು ಅಸಹ್ಯಕರ ಘಟನೆಯೊಂದು ದೂರದ ಅಮೆರಿಕ(America)ದಿಂದ ವರದಿಯಾಗಿದೆ. ಈ ಘಟನೆಯಾದರೂ ಏನು ಅಂತೀರಾ? ಶಾಲೆಯ ಶಿಕ್ಷಕಿ(Teacher)ಯೊಬ್ಬರು ತನ್ನ ಗಂಡನ ವೀರ್ಯ(Sperm)ವನ್ನು ಕೇಕ್‌ ನಲ್ಲಿ 'ಸೀಸನಿಂಗ್' ಆಗಿ ಬಳಸಿ ಅದನ್ನು ಮಕ್ಕಳಿಗೆ ತಿನ್ನಿಸಿರುವ ಅಸಹ್ಯಕರ ಘಟನೆ ಇದಾಗಿದೆ. ಅಮೆರಿಕದ ಲೂಸಿಯಾನಾ (Livingston in Louisiana, US) ಪ್ರದೇಶದ ವೆಸ್ಟ್ ಸೈಡ್ ಜೂನಿಯರ್ ಹೈಸ್ಕೂಲಿನ ಶಿಕ್ಷಕಿ(High school Teacher)ಯಾಗಿರುವ 36ರ ಪ್ರಾಯದ ಸಿಂಥಿಯಾ ಪರ್ಕಿನ್ಸ್ ಎಂಬ ವಿಕೃತ ಮನಸ್ಸಿನ ಶಿಕ್ಷಕಿಯೇ ಈ 'ಮಹಾನ್' ಕಾರ್ಯ ಮಾಡಿದ್ದಾರೆಂಬುದಾಗಿ ವರದಿಯಾಗಿದೆ.

ಮಕ್ಕಳ ಮೇಲೆ ಲೈಂಗಿಕ ಅಪರಾಧ ಎಸಗಿರುವ ಪ್ರಕರಣದಡಿ ಈಗ ಸಿಂಥಿಯಾಳನ್ನು ಬಂಧಿಸಲಾಗಿದ್ದು ಅವಳಿಗೆ 41 ವರ್ಷಗಳ ಸೆರೆವಾಸದ ಶಿಕ್ಷೆಯನ್ನು ವಿಧಿಸಲಾಗಿರುವುದಾಗಿ ತಿಳಿದು ಬಂದಿದೆ. ಸೋಮವಾರದಂದು ಈ ಸಂಬಂಧ ಸಿಂಥಿಯಾ ಅವರು ತಮ್ಮ ಮಾಜಿ ಪತಿ ಡೆನ್ನಿಸ್ ವಿರುದ್ಧ ಸಾಕ್ಷಿ ಹೇಳುವ ಬದಲಾಗಿ ಮನವಿ ಒಪ್ಪಂದವನ್ನು ಸ್ವೀಕರಿಸಿದರೆನ್ನಲಾಗಿದೆ.

ಕಪ್ ಕೇಕ್ ಗಳಲ್ಲಿ ವೀರ್ಯ ಬೆರೆಸಿದ ಶಿಕ್ಷಕಿ

ಆಕೆಯ ಮೇಲೆ ವಿಧಿಸಲಾಗಿರುವ ಆರೋಪದಲ್ಲಿ, "ಅವರು ವೆಸ್ಟ್ ಸೈಡ್ ಶಾಲೆಯ ಮಕ್ಕಳಿಗೆ ತಿನ್ನಲು ನೀಡಲೆಂದು ಮಾಡಲಾಗಿದ್ದ ಕಪ್ ಕೇಕ್‌ಗಳಲ್ಲಿ ಸೀಸನಿಂಗ್ ಆಗಿ ತನ್ನ ಗಂಡನ ವೀರ್ಯವನ್ನು ಬಳಸಿದ್ದು ಅದನ್ನು ಮಕ್ಕಳಿಗೆ ತಿನ್ನಲು ನೀಡಿದ್ದಳು" ಎಂದು ಹೇಳಲಾಗಿರುವುದಾಗಿ ತಿಳಿದು ಬಂದಿದೆ.

ಇದನ್ನೂ ಓದಿ:  Viral Video: ಮಗನ ಮದುವೆಯಲ್ಲಿ ಕುಣಿಯುತ್ತಲೇ ಪ್ರಾಣಬಿಟ್ಟ ಅಮ್ಮ! ಕಣ್ಣಲ್ಲಿ ನೀರು ತರಿಸೋ ದೃಶ್ಯ ಇಲ್ಲಿದೆ

ಡೆನ್ಹ್ಯಾಮ್ ಸ್ಪ್ರಿಂಗ್ ಮೂಲದ ಈ ದಂಪತಿ ಜೋಡಿಯನ್ನು ಅಕ್ಟೋಬರ್ 2019ರಲ್ಲಿ ಬಂಧಿಸಲಾಗಿದ್ದು ಅವರ ವಿರುದ್ಧ 60 ದೋಷಾರೋಪಗಳನ್ನು ಪಟ್ಟಿ ಮಾಡಲಾಗಿದೆ. 13ರ ಪ್ರಾಯದ ಮಗುವನ್ನು ಬಳಸಿ ಪೋರ್ನೋಗ್ರಫಿ ವಿಷಯಗಳ ನಿರ್ಮಾಣ ಮಾಡಿರುವ ಸಂಬಂಧ ದೋಷಾರೋಪಗಳನ್ನು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಅಲ್ಲದೆ ಜೋಡಿ ವಿರುದ್ಧ ಮೊದಲನೇ ದರ್ಜೆಯ ಅತ್ಯಾಚಾರದ ಆರೋಪ ಹಾಗೂ ಸಿಂಥಿಯಾಳ ಮಾಜಿ ಗಂಡ ಡೆನಿಸ್ ವಿರುದ್ಧ ಅಬ್ಸಿನಿಟಿಗೆ ಸಂಬಂಧಿಸಿದಂತೆ ಎರಡು ಆರೋಪ ಪಟ್ಟಿಗಳನ್ನು ಸಲ್ಲಿಸಲಾಗಿತ್ತೆನ್ನಲಾಗಿದೆ.

ತಾನು ಮುಗ್ಧ ಎಂದು ಹೇಳಿಕೊಳ್ಳುತ್ತಿರುವ ಶಿಕ್ಷಕಿ

ಮಾಧ್ಯಮವೊಂದರ ವರದಿಯಂತೆ, ಸಿಂಥಿಯಾಳನ್ನು ಬಂಧಿಸಿದ ನಂತರ ಅವಳು ಶಿಕ್ಷಕಿ ಹುದ್ದೆಯಿಂದ ಕೆಳಗಿಳಿದು ತನ್ನ ಗಂಡನ ವಿರುದ್ಧ ವಿವಾಹ ವಿಚ್ಛೇದನ ಅರ್ಜಿ ಸಲ್ಲಿಸಿ, ಈ ರೀತಿಯ ಅಪರಾಧಗಳನ್ನು ಮಾಡುವಂತೆ ಆಕೆಯ ಗಂಡ ಆಕೆಯನ್ನು ಪುಸಲಾಯಿಸಿದ್ದನೆಂದು ಹೇಳಿಕೊಂಡಿದ್ದಾಳೆ. ಇದಕ್ಕೂ ಮೊದಲು ಸಿಂಥಿಯಾ ಅವರ ವಿರುದ್ಧ ಹೊರಿಸಲಾಗಿರುವ 72 ದೋಷಾರೋಪಗಳಲ್ಲಿ ತಾನು ಮುಗ್ಧಳಾಗಿರುವುದಾಗಿ ಅಲವತ್ತುಕೊಂಡಿದ್ದಳೆನ್ನಲಾಗಿದೆ.

ಆದರೆ, ಕಳೆದ ವಾರ ಎರಡನೇ ದರ್ಜೆಯ ಅತ್ಯಾಚಾರ, ಮಕ್ಕಳ ಪಾರ್ನೋಗ್ರಫಿ ನಿರ್ಮಾಣ ಹಾಗೂ ಆಹಾರದಲ್ಲಿ ಬೆರಕೆ ಆರೋಪಗಳಲ್ಲಿ ಅವಳನ್ನು ಆರೋಪಿ ಎಂದು ಪರಿಗಣಿಸಲಾಗಿದೆ. ಸಿಂಥಿಯಾ ಕುರಿತು ಅಟಾರ್ನಿ ಜನರಲ್ ಈ ರೀತಿ ಹೇಳಿದ್ದಾರೆ. ಈ ಅಪರಾಧಗಳ ಮೂಲಕ ಸಿಂಥಿಯಾ ತಮ್ಮ ಮೇಲ್ಮನವಿಯ ಅಧಿಕಾರವನ್ನಷ್ಟೇ ಕಳೆದುಕೊಳ್ಳಲಿಲ್ಲ, ಈ ಪ್ರಕರಣ ನಡೆಯುತ್ತಿದ್ದ ಸಂಪೂರ್ಣ ಅವಧಿಯಲ್ಲಿ ಮಕ್ಕಳು ಅವಳ ಭಯಾನಕ ಕೃತ್ಯಗಳಿಂದ ಮುಕ್ತರೂ ಆಗಿದ್ದರು.

ಇದನ್ನೂ ಓದಿ:  Grandmother Spirit: 79ರ ವಯಸ್ಸಲ್ಲಿ AK-47 ಹಿಡಿದ ಉಕ್ರೇನ್‌ ಅಜ್ಜಿ..! ಇದರ ಹಿಂದಿದೆ ಇಂಟ್ರೆಸ್ಟಿಂಗ್ ಕಹಾನಿ

ಶಿಕ್ಷೆ ಪ್ರಮಾಣ

ಹಾಗೆ ನೋಡಿದರೆ ಸಿಂಥಿಯಾಗೆ 70ಕ್ಕೂ ಅಧಿಕ ವರ್ಷಗಳ ಶಿಕ್ಷೆಯಾಗುವ ಸಾಧ್ಯತೆಯಿತ್ತು. ಆದರೆ ಒಪ್ಪಂದದ ಪ್ರಕಾರ, ಅವಳ ಮೇಲಿದ್ದ 68 ಆರೋಪಗಳನ್ನು ತೆರವುಗೊಳಿಸಿ 40 ವರ್ಷಗಳ ಕಾರಾಗೃಹ ವಾಸದ ಶಿಕ್ಷೆಯನ್ನು ವಿಧಿಸಲಾಗಿದೆ.

ಕೇಕ್‌ ನಲ್ಲಿ ವೀರ್ಯ ಬೆರೆಸಿದ ಆರೋಪದಡಿ ಒಂದು ವರ್ಷದ ಸೆರೆವಾಸ ವಿಧಿಸಲಾಗಿರುವುದಾಗಿ ತಿಳಿದುಬಂದಿದೆ. ಈ ಪ್ರಮಾಣದ ಶಿಕ್ಷೆಗೆ ಸಿಂಥಿಯಾ ಗುರಿಯಾಗಿರುವುದರಿಂದ ಅವಳಿಗೆ ಪರೋಲ್ ಸಿಗುವ ಸಾಧ್ಯತೆಯೂ ಅತಿ ಕಡಿಮೆ ಎನ್ನಲಾಗಿದೆ.
Published by:Mahmadrafik K
First published: