Student Rape: 13 ವಿದ್ಯಾರ್ಥಿನಿಯರನ್ನು ರೇಪ್ ಮಾಡಿದ ಶಿಕ್ಷಕ, 8 ಜನರಿಗೆ ಹೆರಿಗೆಯಾಯ್ತು

ಬೋರ್ಡಿಂಗ್ ಶಾಲೆಯಲ್ಲಿ ಮಕ್ಕಳ ಶಿಕ್ಷಣ ನೋಡಿಕೊಂಡು, ಅವರಿಗೆ ಬೆಂಬಲ ನೀಡಿ ಮುಖ್ಯವಾಗಿ ಅವರನ್ನು ರಕ್ಷಿಸುವ ಸ್ಥಾನದಲ್ಲಿದ್ದರು. ಆ ಜವಾಬ್ದಾರಿಗಳನ್ನು ಹೊತ್ತುಕೊಂಡಿದ್ದ 36 ವರ್ಷದ ಶಿಕ್ಷಕ ತಾನೇ ರಕ್ಷಕನಿಂದ ಭಕ್ಷಕನಾಗಿ ಬದಲಾಗಿದ್ದಾನೆ. ತನ್ನ ಬಳಿ ರಕ್ಷಣೆಗೆ ಬಿಟ್ಟ ಹೆಣ್ಮಕ್ಕಳ ಮೇಲೆ ತಾನೇ ಎರಗಿದ್ದಾನೆ.

ವಿದ್ಯಾರ್ಥಿನಿಯರು

ವಿದ್ಯಾರ್ಥಿನಿಯರು

  • Share this:
ಅಪ್ತಾಪ್ತ ಬಾಲಕಿಯರ ಮೇಲೆ ಅತ್ಯಾಚಾರ (Rape) ನಡೆಯುವಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಬಹಳಷ್ಟು ಪ್ರಕರಣಗಳಲ್ಲಿ ಹೆಣ್ಣು ಮಗು ಹೊಟ್ಟೆ ನೋವೆಂದು ವೈದ್ಯರ ಬಳಿ ಹೋದಾಗಲೇ ಗರ್ಭಿಣಿಯಾಗುವುದು (Pregnant) ಬಯಲಾಗುತ್ತದೆ. ನೆರೆ ಮನೆಯ ವ್ಯಕ್ತಿ, ಶಾಪ್​ಕೀಪರ್, ಸಂಬಂಧಿ ಹೀಗೆ ಬಹಳಷ್ಟು ಸಲ ಅಪ್ರಾಪ್ತೆಯರ ಮೇಲೆ ಅತ್ಯಾಚಾರ ನಡೆಯುತ್ತದೆ. ಇವುಗಳಲ್ಲಿ ಎಷ್ಟೋ ಪ್ರಕರಣಗಳು ಗೊತ್ತೇ ಆಗದೆ ಮುಗಿದು ಹೋಗುತ್ತವೆ. ಇಲ್ಲೊಂದು ಕಡೆ ಪಾಠ ಹೇಳುವ ಶಿಕ್ಷಕನೇ (Teacher) ವಿದ್ಯಾರ್ಥಿನಿಯರ ಮೇಲೆ ಮೃಗವಾಗಿ ಎರಗಿದ್ದಾನೆ. ಶಾಲೆಗೆ ಬಂದ ಪುಟ್ಟ ಹೆಣ್ಮಕ್ಕಳ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅವರು ತಮ್ಮ 36 ವರ್ಷದ ಶಿಕ್ಷಕರಾಗಿದ್ದರು, ಬೋರ್ಡಿಂಗ್ ಶಾಲೆಯಲ್ಲಿ (Boarding School) ಮಕ್ಕಳ ಶಿಕ್ಷಣ ನೋಡಿಕೊಂಡು, ಅವರಿಗೆ ಬೆಂಬಲ ನೀಡಿ ಮುಖ್ಯವಾಗಿ ಅವರನ್ನು ರಕ್ಷಿಸುವ ಸ್ಥಾನದಲ್ಲಿದ್ದರು. ಆ ಜವಾಬ್ದಾರಿಗಳನ್ನು ಹೊತ್ತುಕೊಂಡಿದ್ದ 36 ವರ್ಷದ ಶಿಕ್ಷಕ ತಾನೇ ರಕ್ಷಕನಿಂದ ಭಕ್ಷಕನಾಗಿ ಬದಲಾಗಿದ್ದಾನೆ. ತನ್ನ ಬಳಿ ರಕ್ಷಣೆಗೆ ಬಿಟ್ಟ ಹೆಣ್ಮಕ್ಕಳ ಮೇಲೆ ತಾನೇ ಎರಗಿದ್ದಾನೆ.

ಇಂಡೋನೇಷ್ಯಾದ (Indonesia) ಬಂಡುಂಗ್ ನಗರದ ಕ್ರಿಮಿನಲ್ ನ್ಯಾಯಾಲಯವು (Criminal Court) ಈತನ ಕುರಿತು ಆಘಾತಕಾರಿ ಪ್ರಕರಣವನ್ನು ವಿಚಾರಣೆ ನಡೆಸಬೇಕಾಗಿ ಬಂತು. 2016 ಮತ್ತು 2021 ರ ನಡುವೆ ಬೋರ್ಡಿಂಗ್ ಶಾಲೆಗಳಲ್ಲಿ ತನ್ನ ಆರೈಕೆಯಲ್ಲಿ 13 ಮತ್ತು 16 ರ ನಡುವಿನ ವಯಸ್ಸಿನ 13 ವಿದ್ಯಾರ್ಥಿನಿಯರ ಮೇಲೆ ಈತ ಅತ್ಯಾಚಾರವೆಸಗಿದ್ದಾನೆ.

ಒಂಭತ್ತು ಮಕ್ಕಳಿಗೆ ತಂದೆಯಾದ ಶಿಕ್ಷಕ

ಡಿಸೆಂಬರ್ 7 ರಂದು ನ್ಯಾಯಾಲಯವು ಕೇಳಿದ ವಿವರಣೆಯಲ್ಲಿ, ಪ್ರಕರಣವನ್ನು ಮೊದಲ ಬಾರಿಗೆ ಸಾರ್ವಜನಿಕಗೊಳಿಸಲಾಯಿತು. ಅತ್ಯಾಚಾರದ ಪರಿಣಾಮವಾಗಿ ಕನಿಷ್ಠ ಒಂಬತ್ತು ಮಕ್ಕಳು ಜನಸಿದ್ದು ಸ್ಥಳೀಯ ಮಾಧ್ಯಮಗಳು (Local Media) ಇನ್ನೂ ಎರಡು ಮಕ್ಕಳು ಹುಟ್ಟುವವರಿದ್ದಾರೆ ಎಂದಿದ್ದಾರೆ. ಬಿಬಿಸಿ ಇಂಡೋನೇಷ್ಯಾ ಕನಿಷ್ಠ ಐದು ವರದಿ ಮಾಡಿದರೂ, ಆತನಿಂದಾಗಿ ಗರ್ಭ ಧರಿಸಿದ ಹುಡುಗಿಯರ ನಿಖರ ಸಂಖ್ಯೆ ತಿಳಿದುಬಂದಿಲ್ಲ.

ಇದನ್ನೂ ಓದಿ: Rape Case: ಮಂಗಳೂರಲ್ಲಿ ನಾಚಿಕೆಗೇಡಿನ ಘಟನೆ.. ತಾಯಿಯ ಮೇಲೆ ಮಗನಿಂದಲೇ ಅತ್ಯಾಚಾರ!

ಶಿಕ್ಷಕನ ಗುರುತು ರಿವೀಲಾಯ್ತು

ಈ ಹಿಂದೆ ಆತನ ಐಡೆಂಟಿಟಿ ಮೊದಲಕ್ಷರಗಳಾದ HW ನಿಂದ ಮಾತ್ರ ತಿಳಿದಿತ್ತು. ಅಪರಾಧಿ ಹೆರ್ರಿ ವೈರಿಯಾವಾನ್‌ನ ಸಂಪೂರ್ಣ ಗುರುತನ್ನು ಈ ವಾರ ಬಹಿರಂಗಪಡಿಸಲಾಯಿತು. ಪ್ರಕರಣದ ವಿಚಾರಣೆ ನಡೆಯುತ್ತಿದ್ದು ಈಗ ಶಿಕ್ಷಕ ಇಂಡೋನೇಷ್ಯಾದಲ್ಲಿ ಮಕ್ಕಳ ರಕ್ಷಣೆ ಕಾನೂನುಗಳ ಅಡಿಯಲ್ಲಿ ಅಪ್ರಾಪ್ತ ವಯಸ್ಕರ ವಿರುದ್ಧ ಅತ್ಯಾಚಾರ, ಹಿಂಸಾಚಾರ ಮತ್ತು ಲೈಂಗಿಕ ದೌರ್ಜನ್ಯದ ಬಹು ಆರೋಪಗಳನ್ನು ಎದುರಿಸುತ್ತಿದ್ದಾನೆ.

ಶಾಲೆ, ಆಫೀಸಿನಲ್ಲೇ ನಡೆದಿತ್ತು ಅತ್ಯಾಚಾರ

ಈ ಅತ್ಯಾಚಾರವು ಮೇ ತಿಂಗಳಲ್ಲಿ ಪೊಲೀಸರ (Police) ಗಮನಕ್ಕೆ ಬಂದಿದೆ. ಹೋಟೆಲ್‌ಗಳು (Hotel) ಮತ್ತು ಹೆರಿ ಸ್ಥಾಪಿಸಿದ ಇಸ್ಲಾಮಿಕ್ ಫೌಂಡೇಶನ್‌ಗಳಿಗೆ ಸಂಬಂಧಿಸಿದ ಹಲವಾರು ಶಾಲೆಗಳು ಮತ್ತು ಕಚೇರಿಗಳ ಆವರಣದಲ್ಲಿ ಸೇರಿದಂತೆ ಬಂಡಂಗ್‌ನ ಹಲವಾರು ಸ್ಥಳಗಳಲ್ಲಿ ಅತ್ಯಾಚಾರಗಳು ನಡೆದಿದೆ ಎಂದು ತನಿಖಾಧಿಕಾರಿಗಳು ವರದಿ ಮಾಡಿದ್ದಾರೆ. ಹೆರಿ ನಡೆಸುತ್ತಿರುವ ಇಸ್ಲಾಮಿಕ್ ಬೋರ್ಡಿಂಗ್ ಶಾಲೆಯು (Islamic Boarding School) ಅಧಿಕೃತ ಅನುಮತಿಯಿಲ್ಲದೆ ಮತ್ತು ಅಧಿಕಾರಿಗಳ ಅನುಮತಿಯಿಲ್ಲದೆ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ: Child Rape| ಮಹಾರಾಷ್ಟ್ರದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ; ಆರೋಪಿ ಬಂಧನ

ಶಿಕ್ಷಣದ ಆಸೆಗೆ ಉಚಿತ ಬೋರ್ಡಿಂಗ್ ಸ್ಕೂಲ್ ಸೇರುತ್ತಿದ್ದ ವಿದ್ಯಾರ್ಥಿನಿಯರು

ರೋನಿ ಎಂಬ ಹೆಸರಿನ ಸ್ಥಳೀಯ ನಿವಾಸಿ, ಹೆರಿಯಿಂದ ಅತ್ಯಾಚಾರಕ್ಕೊಳಗಾದ ತನ್ನ ಮೂವರು ಸಹೋದರಿಯರಿಗೆ ಉಚಿತ ಶಿಕ್ಷಣದ (Free Education) ಭರವಸೆಯೊಂದಿಗೆ ಆಮಿಷ ಒಡ್ಡಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇದು ಉಚಿತ ಶಾಲೆಯಾಗಿದೆ. ಹಣವಿಲ್ಲದ ವಿದ್ಯಾರ್ಥಿಗಳು ಶಿಕ್ಷಣದ ಆಸೆಗೆ ಇಲ್ಲಿ ಬಂದು ಸೇರುತ್ತಿದ್ದರು ಎಂದು ಅವರು ಹೇಳಿದರು.

ಮುಟ್ಟಾದರೂ ಬಿಡಲಿಲ್ಲ

ಮಹಿಳೆ ಮತ್ತು ಮಕ್ಕಳ ರಕ್ಷಣೆಗಾಗಿ ಐಕಮತ್ಯ ಸಮಿತಿ ಎಂಬ ಸಂಘಟನೆಯ ಸ್ಥಳೀಯ ಕಾರ್ಯಕರ್ತೆ ಮೇರಿ ಸಿಲ್ವಿತಾ ಸಂತ್ರಸ್ತರಲ್ಲಿ ಒಬ್ಬರಿಗೆ ಸಹಾಯ ಮಾಡಿದ್ದಾರೆ. ಶಿಕ್ಷಕ ವಿದ್ಯಾರ್ಥಿನಿ ಮುಟ್ಟಾಗಿದ್ದಾಗಲೂ (Periods) ಲೈಂಗಿಕ ಸಂಬಂಧ (Sexual Relationship) ಹೊಂದಲು ಒತ್ತಾಯಿಸಿದ್ದಾನೆ ಎಂದು ಪ್ರಾಸಿಕ್ಯೂಟರ್ಗಳು ಹೇಳಿದ್ದಾರೆ.
Published by:Divya D
First published: