ಚೆನ್ನೈ: ತಮಿಳುನಾಡಿನ (Tamil Nadu) ತೂತುಕುಡಿ ಜಿಲ್ಲೆಯಲ್ಲಿ ಏಳು ವರ್ಷದ ಮಗಳಿಗೆ ಹೊಡೆದರೆಂದು ಮಗುವಿನ ಪೋಷಕರು (Parents) ಶಿಕ್ಷಕನನ್ನು (Teacher) ಅಟ್ಟಾಡಿಸಿ ಅಮಾನುಷವಾಗಿ ಥಳಿಸಿದ (Brutally Thrashed) ಘಟನೆ ನಡೆದಿದೆ. ಶಾಲೆಯಲ್ಲಿ (School) ಎರಡನೆ ತರಗತಿ ಓದುತ್ತಿದ್ದ ವಿದ್ಯಾರ್ಥಿಯ ಪೋಷಕರನ್ನು ಬಂಧಿಸಲಾಗಿದೆ. ತಮ್ಮ ಮಗುವಿಗೆ ಹೊಡೆದಿದ್ದಾರೆಂಬ ಕೋಪದಲ್ಲಿ ಪೋಷಕರು ಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಶಿಕ್ಷಕ ಮಗುವಿನ ಮೇಲೆ ಹಲ್ಲೆ ಮಾಡಿಲ್ಲ ಎಂದು ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದಾರೆ.
ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸರ್ಕಾರಿ ಅನುದಾನಿತ ಶಾಲೆಯಲ್ಲಿ ಈ ಘಟನೆ ನಡೆದಿದೆ. ಹಲ್ಲೆಗೆ ಒಳಗಾದ ಶಿಕ್ಷಕನನ್ನು ಆರ್ ಭರತ್ ಎಂದು ಗುರುತಿಸಲಾಗಿದೆ. ಮೂರು ನಿಮಿಷಗಳ ವೈರಲ್ ವೀಡಿಯೊದಲ್ಲಿ ದಂಪತಿಗಳು ತರಗತಿಗೆ ನುಗ್ಗಿ ತಮ್ಮ ಮಗುವಿಗೆ ಹೊಡೆದಿದ್ದನ್ನು ಪ್ರಶ್ನಿಸಿ ಶಿಕ್ಷಕನ ಜೊತೆ ಜಗಳಕ್ಕೆ ಇಳಿದಿದ್ದಾರೆ. ಮಗುವನ್ನು ಹೊಡೆಯುವುದು ಕಾನೂನುಬಾಹಿರ ಎಂದು ವಿದ್ಯಾರ್ಥಿ ತಾಯಿ ಸೆಲ್ವಿ ಎಂಬುವವರು ಹೇಳುತ್ತಾರೆ. ಮಗುವಿಗೆ ಹೊಡೆಯುವುದು ಕಾನೂನು ಬಾಹಿರ, ನಿಮಗೆ ಈ ಹಕ್ಕನ್ನು ಕೊಟ್ಟವರು ಯಾರು? ನಾನು ನನ್ನ ಚಪ್ಪಲಿಯಿಂದ ನಿಮಗೆ ಹೊಡೆಯುತ್ತೇನೆ ಎಂದು ಶಿಕ್ಷಕನಿಗೆ ಜೋರು ಮಾಡುತ್ತಿರುವುದು ವಿಡಿಯೋದಲ್ಲಿ ಕಾಣಬಹುದು.
ಶಾಲಾ ಆವರಣದಲ್ಲೇ ಹಲ್ಲೆ
ಶಿಕ್ಷಕ ಕೊಠಡಿಯಿಂದ ಹೊರಬರುತ್ತಿದ್ದಂತೆ ವಿದ್ಯಾರ್ಥಿಯ ತಂದೆ ಶಿವಲಿಂಗಂ ಶಿಕ್ಷಕನನ್ನು ಶಾಲಾ ಆವರಣದಲ್ಲೆಲ್ಲಾ ಅಟ್ಟಾಡಿಸಿ ಹಲ್ಲೆ ಮಾಡಲು ಶುರು ಮಾಡಿದ್ದಾನೆ. ಶಿಕ್ಷಕನ ಮೇಲೆ ಅವನು ಇಟ್ಟಿಗೆ, ಕಲ್ಲುಗಳನ್ನು ಹೊಡೆದಿದ್ದಾನೆ. ದಂಪತಿಗಳು ವಿದ್ಯಾರ್ಥಿಗಳ ಮುಂದೆಯೇ ಭರತ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಶಿಕ್ಷಕಿಯೊಬ್ಬರು ಸಹಾಯಕ್ಕಾಗಿ ಕಿರುಚುತ್ತಿರುವುದು ಈ ವಿಡಿಯೋದಲ್ಲಿ ಕಾಣಬಹುದು.
ದಂಪತಿಗಳ ಬಂಧನ
ಶಾಲೆಗೆ ನುಗ್ಗಿ ಶಿಕ್ಷಕನ ಮೇಲೆ ಹಲ್ಲೆ ಮಾಡಿದ ದಂಪತಿ ಹಾಗೂ ವಿದ್ಯಾರ್ಥಿನಿಯ ಅಜ್ಜ ಮುನುಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ. " ನಾವು ವಿದ್ಯಾರ್ಥಿನಿಯ ಪೋಷಕರು ಹಾಗೂ ಅಜ್ಜನ ಮೇಲೆ ಹಲ್ಲೆ, ಕ್ರಿಮಿನಲ್ ಬೆದರಿಕೆ, ಪಿತೂರಿ ಮತ್ತು ಸರ್ಕಾರಿ ನೌಕರ ಕರ್ತವ್ಯ ನಿರ್ವಹಿಸದಂತೆ ತಡೆದಿದ್ದಕ್ಕಾಗಿ ಪ್ರಕರಣ ದಾಖಲಿಸಿದ್ದೇವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ " ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ ಎಲ್ ಬಾಲಾಜಿ ಸರವಣನ್ ತಿಳಿಸಿದ್ದಾರೆ.
ತರಗತಿಯಲ್ಲಿ ಜಾಗ ಬದಲಿಸುವ ವಿಚಾರಕ್ಕೆ ನಡೆದ ಅವಾಂತರ
ಬಂಧಿತರಾಗಿರುವ ಪಂಪತಿಯ ಪುತ್ರಿ ತರಗತಿಯಲ್ಲಿ ಇತರೆ ವಿದ್ಯಾರ್ಥಿಗಳೊಂದಿಗೆ ಜಗಳ ಮಾಡುತ್ತಿದ್ದಳು, ಪಾಠ ಸರಿಯಾಗಿ ಕೇಳುತ್ತಿರಲಿಲ್ಲ, ಅದಕ್ಕಾಗಿ ಶಿಕ್ಷಕ ಜಾಗ ಬದಲಿಸುವಂತೆ ಹೇಳಿದ್ದಾರೆ. ಜಾಗ ಬದಲಿಸುವ ವೇಳೆ ಆಯತಪ್ಪಿ ಬಿದ್ದಿದ್ದಾಳೆ. ಆದರೆ ಮನೆಗೆ ಹೋದ ನಂತರ ಆ ಬಾಲಕಿ ಶಿಕ್ಷಕರು ತನಗೆ ಹೊಡೆದರು ಎಂದು ದೂರು ನೀಡಿದ್ದಾಳೆ. ಇದರಿಂದ ಕುಪಿತಗೊಂಡ ಪೋಷಕರು ಶಿಕ್ಷಕನ ಮೇಲೆ ಹಲ್ಲೆ ಮಾಡಿದ್ದಾರೆ.
ಕುಡಿದುಬಂದು ಶಾಲೆಯಲ್ಲಿ ಕಿರಿಕ್ ಮಾಡುವ ಹಳೇ ವಿದ್ಯಾರ್ಥಿ
ಹೊಸಪೇಟೆಯ ಊರಮ್ಮ ಬಯಲು ಪ್ರದೇಶದಲ್ಲಿರೋ ಶ್ರೀಮತಿ ಕಟ್ಟಾ ಕೃಷ್ಣವೇಣಮ್ಮ ಸ್ಮಾರಕ ಕನ್ನಡ ಮಾಧ್ಯಮ ಶಾಲೆಯಲ್ಲಿ ಹಳೇ ವಿದ್ಯಾರ್ಥಿಯೊಬ್ಬ ಶಾಲೆಗೆ ನುಗ್ಗಿ ಅನುಚಿತ ವರ್ತಿಸಿ ಶಿಕ್ಷಕರಿಗೆ ಕಾಟ ಕೊಡುತ್ತಿದ್ದಾನೆ. ಸ್ಟೂಡೆಂಟ್ಸ್ ಬಳಿ ಬಂದು ಕುಳಿತು ಮದ್ಯ ಮಿಶ್ರೀತ ಜ್ಯೂಸ್ ಸೇವಿಸುವುದು ನನಗೂ ಪಾಠ ಮಾಡಿ ಎಂದು ಶಿಕ್ಷಕರಿಗೆ ತೊಂದರೆ ನೀಡುತ್ತಿದ್ದಾನೆ. ರಾಮು ಎಂಬ ಹಳೆ ವಿದ್ಯಾರ್ಥಿ ವಿರುದ್ಧ ಶಾಲಾ ಶಿಕ್ಷಕರು ದೂರು ನೀಡುತ್ತಿದ್ದಾರೆ. ಪ್ರತಿ ನಿತ್ಯವೂ ಈತನದ್ದು ಒಂದೇ ಗೋಳು. ಶಾಲೆಗೆ ಬರುವುದು ಕುಡಿಯುವುದು. ಶಾಲೆಯ ಒಳಗೆ ತರಗತಿಗೇ ಒಂದು ಮಧ್ಯಪಾನ ಮಾಡ್ತಾನೆ ಎಂದು ಶಿಕ್ಷಕರೆಲ್ಲಾ ಬೇಸತ್ತು ಹೋಗಿದ್ದಾರೆ.
ವಿದ್ಯಾರ್ಥಿಗಳು ಈತನ ವರ್ತನೆಯಿಂದ ರೋಸಿ ಹೋಗಿದ್ದಾರೆ. 1 ರಿಂದ 10 ತರಗತಿಯವರೆಗೆ 300 ಮಕ್ಕಳಿರೋ ಶಾಲೆಯಲ್ಲಿ ನಿತ್ಯವೂ ಕಿರಿಕ್ ಮಾಡ್ತಾರೆ. ಸೆಕ್ಯುರಿಟಿ ಇಲ್ಲದಿರುವುದೂ ಇದಕ್ಕೆ ಒಂದು ಕಾರಣವಾಗಿದೆ ಅಂತಲೇ ಹೇಳಹುದು. ಯಾರೂ ಇಲ್ಲದಾಗ ಶಾಲಾ ಆವರಣದಲ್ಲಿ ಕುಡಿಯೋದು ನ್ಯೂಸನ್ಸ್ ಮಾಡ್ತಾನೆ ಆದ್ರೆ ಶಾಲೆ ಇದ್ದಾಗಲೇ, ಶಾಲೆಗೆ ನುಗ್ಗಿ ಕ್ಲಾಸ್ ರೂಂಗೆ ನುಗ್ಗಿ ಪಾಠ ಮಾಡೋ ಮೇಷ್ಟ್ರುಗಳಿಗೆ ಆವಾಜ್ ಹಾಕ್ತಾನೆ. ವಿದ್ಯಾರ್ಥಿಗಳು ಪಾಠ ಕೇಳೋ ಹೊತ್ತಲ್ಲೇ ಡೆಸ್ಕ್ ನಲ್ಲಿ ಕೂತಿರ್ತಾನೆ. ಪೊಲೀಸ್ ಠಾಣೆಗೆ ದೂರು ಕೊಟ್ರು ಪ್ರಯೋಜನವಿಲ್ಲಾ ಎಂದು ಶಿಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ