Viral News: 5 ವರ್ಷದ ವಿದ್ಯಾರ್ಥಿ ಹೊಡೆದಿದ್ದಕ್ಕೆ ಶಿಕ್ಷಕಿ ಪ್ರಜ್ಞೆ ತಪ್ಪಿ ಬಿದ್ದೇ ಹೋದ್ರಂತೆ! ಯಾರಪ್ಪ ಆ ಶಿಷ್ಯ?

ಶಿಕ್ಷಕರು ಅಂದ್ರೆ ದೇವರು ಅಂತಾರೆ. ಆದ್ರೆ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರ ಮೇಲೆ ಭಯವೂ ಇಲ್ಲ, ಭಕ್ತಿಯೂ ಇಲ್ಲ. ಮೊನ್ನೆ ಮೊನ್ನೆಯಷ್ಟೇ ಪುಟ್ಟ ಬಾಲಕ ಶಿಕ್ಷಕಿ ವಿರುದ್ಧ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದ. ಆದರೆ ಇಲ್ಲಿ ಈ ವಿದ್ಯಾರ್ಥಿ ಒಂದು ಹೆಜ್ಜೆ ಮುಂದೆ ಹೋಗಿ, ಶಿಕ್ಷಕಿಯೇ ಪ್ರಜ್ಞೆ ತಪ್ಪಿ ಬೀಳುವಂತೆ ಹೊಡೆದಿದ್ದಾನೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಶಾಲೆಯಲ್ಲಿ (School) ಪಾಠ ಹೇಳುವ ಶಿಕ್ಷಕ (Teacher), ಶಿಕ್ಷಕಿಯರು ದೇವರ (God) ಸಮಾನ ಅಂತಾರೆ. ವಿದ್ಯಾರ್ಥಿಗಳು (Students) ತಪ್ಪು ಮಾಡಿದಾಗ, ಪಾಠ (Lesson) ಸರಿಯಾಗಿ ಕಲಿಯದೇ ಇದ್ದಾಗ ಶಿಕ್ಷಕರು ಬೈಯ್ಯುವುದು, ಹೊಡೆಯುವುದು ಕಾಮನ್ (Common). ಆದಾಗ್ಯೂ ಇತ್ತೀಚಿನ ದಿನಗಳಲ್ಲಿ ಶಿಕ್ಷಕರು ಮಕ್ಕಳನ್ನು ಬಯ್ಯುವುದು, ಹೊಡೆಯುವುದು ಕಡಿಮೆ ಆಗಿದೆ. ದಂಡಿಸುವ ವಿಧಾನವೂ ಬದಲಾಗಿದೆ. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರ ಮೇಲೆ ಭಯವೂ ಇಲ್ಲ, ಭಕ್ತಿಯೂ ಇಲ್ಲ. ಕೆಲ ತಿಂಗಳ ಹಿಂದಷ್ಟೇ ವಿದ್ಯಾರ್ಥಿಗಳು ಶಿಕ್ಷಕನ ತಲೆಗೆ ಕಸದ ಬುಟ್ಟಿ (Dust Bean) ಹಾಕಿ , ಅವರನ್ನು ಗೋಳಾಡಿಸಿದ್ದರು. ಮೊನ್ನೆ ಮೊನ್ನೆಯಷ್ಟೇ ಪುಟ್ಟ ಬಾಲಕ (Boy) ಶಿಕ್ಷಕಿ ವಿರುದ್ಧ ಪೊಲೀಸ್‌ ಠಾಣೆ (Police Station) ಮೆಟ್ಟಿಲೇರಿದ್ದ. ಆದರೆ ಇಲ್ಲಿ ಈ ವಿದ್ಯಾರ್ಥಿ ಒಂದು ಹೆಜ್ಜೆ ಮುಂದೆ ಹೋಗಿ, ಶಿಕ್ಷಕಿಯೇ ಪ್ರಜ್ಞೆ ತಪ್ಪಿ ಬೀಳುವಂತೆ (Unconsciousness) ಹೊಡೆದಿದ್ದಾನೆ!

 5 ವರ್ಷದ ಬಾಲಕನ ಹೊಡೆತಕ್ಕೆ ಪ್ರಜ್ಞೆ ತಪ್ಪಿ ಬಿದ್ದ ಶಿಕ್ಷಕಿ

ಐದು ವರ್ಷದ ವಿದ್ಯಾರ್ಥಿಯ ಹೊಡೆತಕ್ಕೆ ಶಿಕ್ಷಕಿಯೊಬ್ಬರು ಪ್ರಜ್ಞಾಹೀನರಾಗಿ ಬಿದ್ದ ಆಘಾತಕಾರಿ ಘಟನೆ ಅಮೆರಿಕದಲ್ಲಿ ನಡೆದಿದೆ. ದಕ್ಷಿಣ ಫ್ಲೋರಿಡಾದಲ್ಲಿ ಕಳೆದ ವಾರ ಈ ಘಟನೆ ನಡೆದಿದ್ದು, ಐದು ವರ್ಷದ ಪುಟಾಣಿಯಿಂದ ಏಟು ತಿಂದ ಶಿಕ್ಷಕಿ, ಪ್ರಜ್ಞೆ ತಪ್ಪಿ ಬಿದ್ದಿದ್ದಾರಂತೆ. ಘಟನೆ ಬಳಿಕ ಆಕೆ ಆಘಾತಕ್ಕೆ ಒಳಗಾಗಿದ್ದು, ಯಾವುದಕ್ಕೂ ಸ್ಪಂದಿಸುತ್ತಿರಲಿಲ್ಲ. ಈಗ ಅವರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ನಡೆದಿದ್ದು ಎಲ್ಲಿ?

ಅಮೆರಿಕಾದ ದಕ್ಷಿಣ ಫ್ಲೋರಿಡಾದ ಪೈನ್ಸ್ ಲೇಕ್ಸ್ ಎಲಿಮೆಂಟರಿ ಶಾಲೆಯಲ್ಲಿ ಇಂಥದ್ದೊಂದು ಆಘಾತಕಾರಿ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ. ಶಿಕ್ಷಕಿ ಗೋಡೆಗೆ ಒರಗಿಕೊಂಡು ನೆಲದ ಮೇಲೆ ಕುಸಿದು ಬಿದ್ದಿದ್ದರು. ಅವರು ತೀವ್ರ ಅಸ್ವಸ್ಥ ಸ್ಥಿತಿಯಲ್ಲಿ ಸಿಕ್ಕಿದ್ದರು ಎಂದು ಪೆಂಬ್ರೋಕ್ ಪೈನ್ಸ್ ಪೊಲೀಸ್ ಇಲಾಖೆ ತಿಳಿಸಿದೆ. ಆರಂಭದಲ್ಲಿ ಅವರು ಯಾವುದೇ ಮಾತಿಗೆ ಸ್ಪಂದಿಸುತ್ತಿರಲಿಲ್ಲ ಮತ್ತು ಚೇತರಿಕೆ ಲಕ್ಷಣಗಳು ಕೂಡ ಕಂಡುಬಂದಿರಲಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: Video: ಶಿಕ್ಷಕಿ ವಿರುದ್ಧವೇ ಕಂಪ್ಲೇಂಟ್ ಕೊಟ್ಟ ಶಾಲಾ ಬಾಲಕ! ಪುಟ್ಟ ಪೋರನ ಕಷ್ಟ ಏನು ಅಂತ ನೀವೇ ನೋಡಿ

ಬಾಲಕನ ಹೊಡೆತದಿಂದ ಶಿಕ್ಷಕಿ ತಲೆಗೆ ದೊಡ್ಡ ಪೆಟ್ಟು

ಶಿಕ್ಷಕಿ 30 ರಿಂದ 40 ವರ್ಷದ ಪ್ರಾಯದವರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅವರನ್ನು ಸ್ಟ್ರಚರ್‌ನಲ್ಲಿ ಇರಿಸಿಕೊಂಡು ಹಾಲಿವುಡ್‌ನಲ್ಲಿನ ಮೆಮೋರಿಯಲ್ ರೀಜನಲ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಬಳಿಕ ಅವರು ಡಿಸ್ಚಾರ್ಜ್ ಆಗಿದ್ದಾರೆ. ಘಟನೆಯಲ್ಲಿ ಅವರ ತಲೆಗೆ ಪೆಟ್ಟಾಗಿದೆ. ಬಾಲಕ ಕೈಗಳು ಮತ್ತು ಕಾಲುಗಳಿಂದ ಶಿಕ್ಷಕಿ ಮೇಲೆ ತೀವ್ರ ಸ್ವರೂಪದ ಹಲ್ಲೆ ನಡೆಸಿದ್ದಾನೆ.

ಗಲಾಟೆ ಮಾಡುತ್ತಿದ್ದಾಗ ಬುದ್ಧಿ ಹೇಳಿದ್ದಕ್ಕೆ ಥಳಿತ

ವಿದ್ಯಾರ್ಥಿ ಶಿಕ್ಷಣ ವಿಭಾಗದ (ಇಎಸ್‌ಇ) ವಿದ್ಯಾರ್ಥಿಗಳಾಗಿರುವ ಐದು ಮತ್ತು ನಾಲ್ಕು ವರ್ಷದ ಇಬ್ಬರು ಮಕ್ಕಳು ತರಗತಿಯೊಳಗೆ ವಸ್ತುಗಳನ್ನು ಎಸೆಯುತ್ತಿದ್ದರು. ಅವರನ್ನು ಶಾಂತಗೊಳಿಸಲು ಶಿಕ್ಷಕಿ ಅವರಿಬ್ಬರನ್ನು ವಿಶೇಷವಾಗಿ ರಚಿಸಲಾಗಿರುವ 'ಕೂಲ್ ಡೌನ್' ಎಂಬ ಕೊಠಡಿಗೆ ಕರೆದೊಯ್ದಿದ್ದರು. ಅಲ್ಲಿ ಐದು ವರ್ಷದ ಹುಡುಗ ತನ್ನ ಕೈಮುಷ್ಟಿ ಮತ್ತು ಕಾಲಿನಿಂದ ಶಿಕ್ಷಕಿ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾನೆ.

ಇದನ್ನೂ ಓದಿ: Puttur: ಶಾಲೆ ಉಳಿಸಲು PM ಮೊರೆ ಹೋದ ಗ್ರಾಮಸ್ಥರು; ಸಂಸದರ ದತ್ತು ಗ್ರಾಮದಲ್ಲಿ ಶಾಲೆ ಜಾಗ ಒತ್ತುವರಿ

ಯಾರಿದು ಇಎಸ್ಇ ವಿದ್ಯಾರ್ಥಿಗಳು?

ಫ್ಲೋರಿಡಾದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿರುವ ಸೂಚನೆಗಳು ಮತ್ತು ಅದಕ್ಕೆ ಸಂಬಂಧಿಸಿದ ಸೇವೆಗಳ ಅಗತ್ಯವಿರುವ ವಿಶೇಷ ಚೇತನ ಮಕ್ಕಳನ್ನು ಫ್ಲೋರಿಡಾದಲ್ಲಿ ಇಎಸ್‌ಇ ವಿದ್ಯಾರ್ಥಿಗಳು ಎಂದು ಕರೆಯುತ್ತಾರೆ. ಶಾಲೆಗಳಲ್ಲಿ ಮಕ್ಕಳಿಗೆ ದೈಹಿಕ ಅಸಾಮರ್ಥ್ಯದ ನಡುವೆ ಕಲಿಕೆ ಮತ್ತು ಶಾಲೆ ಬಳಿಕದ ಜೀವನಕ್ಕೆ ಸಿದ್ಧಗೊಳಿಸುವುದು ಇಎಸ್‌ಇ ಉದ್ದೇಶವಾಗಿದೆ.
Published by:Annappa Achari
First published: