TCS ಉದ್ಯೋಗಿಗಳಿಗೆ Work From Home ಇಂದಿಗೆ ಮುಕ್ತಾಯ; ಕಚೇರಿಗೆ ಮರಳುವಂತೆ ಕರೆ

ಕಚೇರಿಗೆ ಮರಳಿ ಕರೆಯಿಸಿಕೊಳ್ಳುವ ಯೋಜನೆಯನ್ನು ಟಿಸಿಎಸ್ ಅಕ್ಟೋಬರ್‌ನಲ್ಲೇ ನಿರ್ಧರಿಸಿತ್ತು. ಏಕೆಂದರೆ ತಮ್ಮ ಉದ್ಯೋಗಿಗಳಲ್ಲಿ ಸುಮಾರು 70%ದಷ್ಟು ಜನರು ಸಂಪೂರ್ಣ ಲಸಿಕೆ ಹಾಕಿಕೊಂಡಿದ್ದು 95% ದಷ್ಟು ಉದ್ಯೋಗಿಗಳು ಲಸಿಕೆಯ ಒಂದನೇ ಡೋಸ್ ಅನ್ನು ಪಡೆದುಕೊಂಡಿರುವುದಾಗಿ ಕಂಪನಿ ತಿಳಿಸಿತ್ತು

ಟಿಸಿಎಸ್ ಕಂಪನಿ

ಟಿಸಿಎಸ್ ಕಂಪನಿ

  • Share this:
ಆದಾಯದ ದೃಷ್ಟಿಯಿಂದ ಭಾರತದ ಅತಿದೊಡ್ಡ ಐಟಿ(IT) ಸೇವೆಗಳನ್ನೊದಗಿಸುವ ಟಿಸಿಎಸ್ (Tata Consultancy Services-TCS) ನವೆಂಬರ್ 15(ಇಂದಿನಿಂದ) ಕಚೇರಿಗೆ ಮರಳುವ ತನ್ನೆಲ್ಲಾ ಉದ್ಯೋಗಿಗಳನ್ನು ಸ್ವಾಗತಿಸಿದೆ. ದೇಶದಲ್ಲಿ ಕೋವಿಡ್-19 ಪ್ರಕರಣಗಳು ಇಳಿಕೆಯಾಗಿರುವುದರಿಂದ ಸಂಸ್ಥೆ ಮರಳಿ ಕಚೇರಿಗೆ ತನ್ನ ಉದ್ಯೋಗಿಗಳನ್ನು ಕರೆಯಿಸಿಕೊಂಡಿದೆ. 500 ದಿನಗಳಲ್ಲಿ ಸಕ್ರಿಯ ಕೊರೋನಾ ಪ್ರಕರಣಗಳ(Active Corona cases) ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಇದೇ ಸಂದರ್ಭದಲ್ಲಿ ಶಾಲೆ, ಕಾಲೇಜು ಅಂತೆಯೇ ಬೇರೆ ಬೇರೆ ಕಚೇರಿಗಳು ಹಿಂದಿನಂತೆಯೇ ಯಥಾಸ್ಥಿತಿಗೆ ನಿಧಾನವಾಗಿ ಮರಳುತ್ತಿದ್ದು ಕಚೇರಿಗಳು ಕೂಡ ದೀರ್ಘವಾಗಿ ನಡೆಯುತ್ತಿದ್ದ ವರ್ಕ್ ಫ್ರಮ್ ಹೋಮ್(Work From Home) (ಮನೆಯಿಂದೇ ಕೆಲಸ) ಅಧ್ಯಾಯಕ್ಕೆ ಮುಕ್ತಿ ಹಾಡುವ ಪ್ರಕ್ರಿಯೆಯನ್ನು ನಡೆಸುತ್ತಿವೆ. ವರದಿಗಳು ತಿಳಿಸಿರುವಂತೆ ಟಾಟಾ ಕನ್ಸಲ್ಟೆನ್ಸಿ(Tata Consultancy) ತನ್ನ ಉದ್ಯೋಗಿಗಳಿಗೆ ನವೆಂಬರ್ 15 ರಿಂದ ನಿಯೋಜಿಸಲಾದ ಉದ್ಯೋಗ ಸ್ಥಳಕ್ಕೆ ದಾಖಲಾಗುವಂತೆ ತಿಳಿಸಿದೆ.

ಎಕನಾಮಿಕ್ ಟೈಮ್ಸ್‌ಗೆ ಈ ಹಿಂದೆ ಕಂಪನಿಯು ನೀಡಿರುವ ಹೇಳಿಕೆಯಂತೆ, ಆರಂಭದಲ್ಲಿ ತನ್ನ ಉದ್ಯೋಗಿಗಳಿಗೆ ನಿಯೋಜಿತ ಬ್ರ್ಯಾಂಚ್‌ಗಳಿಗೆ ಮರಳುವಂತೆ ತಿಳಿಸಲಿದ್ದು ತದನಂತರವಷ್ಟೇ ತನ್ನ 25/25 ಮಾಡೆಲ್ ಅನ್ನು ಅಳವಡಿಸುವ ತೀರ್ಮಾನವನ್ನು ಕೈಗೊಳ್ಳಲಿದೆ ಎಂದು ಹೇಳಿದೆ.

ಮರಳಿ ಕಚೇರಿಗೆ ಬರುವಂತೆ ಉದ್ಯೋಗಿಗಳಿಗೆ ಸೂಚನೆ

2021 ರ ಅಂತ್ಯದೊಳಗೆ ಕನಿಷ್ಠ ಪಕ್ಷ ಆರಂಭ ಹಂತದಂತೆ ಸಂಸ್ಥೆಯ ಉದ್ಯೋಗಿಗಳನ್ನು ಮರಳಿ ಕಚೇರಿಗೆ ಕರೆಯಿಸಿಕೊಳ್ಳುತ್ತಿದ್ದು, ನಂತರವಷ್ಟೇ ನಾವು 25/25 ಮಾಡೆಲ್‌ಗೆ ಬದಲಿಸಿಕೊಳ್ಳಲಿದ್ದೇವೆ. ಇದನ್ನು ವ್ಯವಸ್ಥಿತವಾದ ಹಂತದಲ್ಲಿ ರೂಪಿಸಲಿದ್ದು ಸಂಬಂಧಿತ ಟೀಮ್ ಲೀಡರ್‌ಗಳು ಹಾಗೂ ಪ್ರತಿಯೊಂದು ತಂಡಕ್ಕೆ/ಪ್ರಾಜೆಕ್ಟ್‌ಗೆ ಅಗತ್ಯವಿರುವಂತೆ ಅಳವಡಿಸಲಾಗುವುದು ಎಂಬುದಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ನಾವು 25/25 ಮಾಡೆಲ್‌ಗೆ ಬದ್ಧರಾಗಿದ್ದೇವೆ ಆದರೆ ಈ ಮಾಡೆಲ್‌ಗೆ ಬದಲಿಸಿಕೊಳ್ಳುವ ಮುನ್ನ ಕಚೇರಿಗೆ ಉದ್ಯೋಗಿಗಳನ್ನು ಪೂರ್ಣ ಪ್ರಮಾಣದಲ್ಲಿ ಕರೆಯಿಸಿಕೊಳ್ಳಬೇಕಾಗಿದೆ ತದನಂತರವಷ್ಟೇ ಈ ಮಾಡೆಲ್‌ಗೆ ಉದ್ಯೋಗಿಗಳನ್ನು ಅಳವಡಿಸಿಕೊಳ್ಳಲಾಗುತ್ತದೆ ಎಂದು ಹೇಳಿಕೆ ತಿಳಿಸಿದೆ.

ಇದನ್ನೂ ಓದಿ: TCS is Hiring: ಟಿಸಿಎಸ್​ ನೇಮಕಾತಿ; ಪದವೀಧರರು ಈಗಲೇ ಅರ್ಜಿ ಸಲ್ಲಿಸಿ​

ಕಳೆದ ವಾರದ ಅಂಕಿ-ಅಂಶದ ಪ್ರಕಾರ ಕಂಪನಿಯ 5% ಉದ್ಯೋಗಿಗಳು ಮಾತ್ರವೇ ತಮ್ಮ ತಮ್ಮ ನಿರ್ದಿಷ್ಟ ಕಚೇರಿಗಳಿಗೆ ಕೆಲಸ ಮಾಡಿದೆ ಎಂದು ಕಂಪನಿ ತಿಳಿಸಿದೆ. ಟಿಸಿಎಸ್ 5,28,748 ಉದ್ಯೋಗಿಗಳನ್ನು ಹೊಂದಿದ್ದು ಭಾರತ ಹಾಗೂ ವಿಶ್ವದಾದ್ಯಂತದ ಉದ್ಯೋಗಿ ಸಂಖ್ಯೆಗಳನ್ನು ಈ ಮಾಹಿತಿ ಒಳಗೊಂಡಿದೆ. ಟಿಸಿಎಸ್ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಮಾನವ ಸಂಪನ್ಮೂಲಗಳ ಜಾಗತಿಕ ಮುಖ್ಯಸ್ಥ ಮಿಲಿಂದ್ ಲಕ್ಕಡ್ ಉದ್ಯೋಗಿಗಳನ್ನು ಮರಳಿ ಕಚೇರಿಗೆ ಕರೆಯಿಸಿಕೊಳ್ಳುವ ಸಂವಹನವನ್ನು ನಡೆಸಿದ್ದಾರೆ.

ಅಕ್ಟೋಬರ್​​ನಲ್ಲೇ ಕಚೇರಿಗೆ ಕರೆಸಿಕೊಳ್ಳುವ ಯೋಚನೆ ಇತ್ತು

ಕಚೇರಿಗೆ ಮರಳಿ ಕರೆಯಿಸಿಕೊಳ್ಳುವ ಯೋಜನೆಯನ್ನು ಟಿಸಿಎಸ್ ಅಕ್ಟೋಬರ್‌ನಲ್ಲೇ ನಿರ್ಧರಿಸಿತ್ತು. ಏಕೆಂದರೆ ತಮ್ಮ ಉದ್ಯೋಗಿಗಳಲ್ಲಿ ಸುಮಾರು 70%ದಷ್ಟು ಜನರು ಸಂಪೂರ್ಣ ಲಸಿಕೆ ಹಾಕಿಕೊಂಡಿದ್ದು 95% ದಷ್ಟು ಉದ್ಯೋಗಿಗಳು ಲಸಿಕೆಯ ಒಂದನೇ ಡೋಸ್ ಅನ್ನು ಪಡೆದುಕೊಂಡಿರುವುದಾಗಿ ಕಂಪನಿ ತಿಳಿಸಿತ್ತು. ಹೀಗಾಗಿ ಈ ವರ್ಷದ ಅಂತ್ಯದ ವೇಳೆಗೆ ಉದ್ಯೋಗಿಗಳನ್ನು ಮರಳಿ ಕಚೇರಿಗೆ ಕರೆಯಿಸಿಕೊಳ್ಳುವುದಾಗಿ ಲಕ್ಕಡ್ ತಿಳಿಸಿದ್ದರು.

ಮನೆಯಿಂದ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು ಕಚೇರಿಗೆ ಮರಳಲು ತಯಾರಾಗುತ್ತಿರುವಂತೆಯೇ ಉದ್ದೇಶ-ನೇತೃತ್ವದ ಮತ್ತು ಹೊಂದಿಕೊಳ್ಳುವ ಉದ್ಯಮವನ್ನು ನಿರ್ಮಿಸುವ ನಿಟ್ಟಿನಲ್ಲಿ ಕಚೇರಿಗಳು ಸಿದ್ಧಗೊಳ್ಳಬೇಕು. ಅದೇ ರೀತಿ ಉದ್ಯೋಗಿಗಳ ಸುರಕ್ಷತೆ, ಭದ್ರತೆ ಹಾಗೂ ಮೂಲಭೂತ ಆರೋಗ್ಯಕ್ಕೆ ಕೂಡ ಒತ್ತು ನೀಡಬೇಕು ಎಂದು ಕಂಪನಿಯ ವೆಬ್‌ಸೈಟ್‌ನಲ್ಲಿರುವ ಹೇಳಿಕೆಯು ತಿಳಿಸಿದೆ.

ಇದನ್ನೂ ಓದಿ: TCS Recruitment 2021: ಮಹಿಳಾ ಉದ್ಯೋಗಿಗಳ ನೇಮಕಕ್ಕೆ ಮುಂದಾದ ಟಿಸಿಎಸ್; ಅರ್ಜಿ ಸಲ್ಲಿಸಲು ಹೀಗೆ ಮಾಡಿ

ಉದ್ಯೋಗಿಗಳಿಗೆ ಉತ್ತಮ ವಾತಾವರಣ ನಿರ್ಮಾಣ

ಟಿಸಿಎಸ್ ಉದ್ಯೋಗಕ್ಕೆ ಸಂಬಂಧಿಸಿದಂತೆ ಉತ್ತಮ ವಾತಾವರಣವನ್ನು ಉದ್ಯೋಗಿಗಳಿಗೆ ಕಲ್ಪಿಸಲಿದ್ದು ಸುರಕ್ಷಿತ ಮಾನದಂಡಗಳನ್ನು ಕಚೇರಿಯಲ್ಲಿ ಅಳವಡಿಸುವ ಮೂಲಕ ಉದ್ಯೋಗಿಗಳ ಸಂಪೂರ್ಣ ಸಂರಕ್ಷಣೆಯ ಹೊಣೆ ಹೊರುವುದಾಗಿ ತಿಳಿಸಿದೆ.ನಾಸ್ಕಾಮ್‌ನ ವರದಿಯ ಪ್ರಕಾರ, ವಿಶೇಷವಾಗಿ ಐಟಿ ವಲಯದ ಕಂಪನಿಗಳು ವಾರಕ್ಕೆ ಐದು ದಿನಗಳಿಗಿಂತ ವಾರಕ್ಕೆ ಮೂರು ದಿನಗಳ ಕಾಲ ಕೆಲಸದ ಸಮಯವನ್ನು ಉದ್ಯೋಗಿಗಳಿಗೆ ಸೀಮಿತಗೊಳಸಲು ಹೆಚ್ಚು ಉತ್ಸುಕವಾಗಿವೆ ಎಂದು ತಿಳಿಸಿದೆ. ವರದಿಯು ತಿಳಿಸಿರುವಂತೆ 25 ವರ್ಷಕ್ಕಿಂತ ಮೇಲ್ಪಟ್ಟವರು ನವೆಂಬರ್‌ನೊಳಗೆ ಕಚೇರಿಗೆ ಮರಳುತ್ತಾರೆ ಅಂತೆಯೇ ನಂತರದ ವಯಸ್ಸಿನವರನ್ನು ಶ್ರೇಣಿಯ ಆಧಾರದ ಮೇಲೆ ಕಚೇರಿಗೆ ಕರೆಯಿಸಿಕೊಳ್ಳಲಾಗುತ್ತದೆ.

  
Published by:Latha CG
First published: