ಈ ಕಂಪನಿಗೆ ಸೇರುವ freshers ತಮಗೆ ಎಷ್ಟು ಸಂಬಳ ಬೇಕೆಂದು ತಾವೇ ನಿರ್ಧರಿಸಬಹುದು!

TCS HR Head Milind Lakkad : ಮಿಲಿಂದ್ ಲಕ್ಕಡ್ ನೀಡಿದ ಸಂದರ್ಶನದಲ್ಲಿಹೆಚ್ಚು ಮಹಿಳಾ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದು, ಉನ್ನತ ಪ್ರತಿಭೆ ಇರುವ ಉದ್ಯೋಗಿಗಳು ಯೋಗ್ಯತೆಯನ್ನು ನಿರ್ವಹಿಸುವಲ್ಲಿ ಹೇಗೆ ಪ್ರಮುಖ ಪಾತ್ರ ವಹಿಸುತ್ತಾರೆ ಮೊದಲಾದ ಅಂಶಗಳನ್ನು ಹಂಚಿಕೊಂಡಿದ್ದಾರೆ.

TCS

TCS

 • Share this:
  ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಭಾರತದ ಅತಿದೊಡ್ಡ ಸಾಫ್ಟ್‌ವೇರ್ ದಿಗ್ಗಜ ಎಂದೆನಿಸಿಕೊಂಡಿದ್ದು ಕಂಪನಿಯ ಸೇವೆಗಳಿಗೆ ಇರುವ ಬಲವಾದ ಬೇಡಿಕೆ ಹಾಗೂ ಹೆಚ್ಚಿನ ಉದ್ಯೋಗಿ ಕ್ಷೀಣತೆಗೆ ಕಾರಣವಾಗುತ್ತಿರುವ ಟೆಕ್ ಪ್ರತಿಭೆಗಳಿಗೆ ಇರುವ ಅಭೂತಪೂರ್ವ ಸ್ಪರ್ಧೆಯಿಂದಾಗಿ ಆರ್ಥಿಕ ವರ್ಷ 2022ರಲ್ಲಿ ಕಂಪನಿಯು 77,000 ಫ್ರೆಶರ್‌ಗಳನ್ನು ನೇಮಿಸಿಕೊಳ್ಳುತ್ತಿದ್ದು ಆರಂಭಿಕ ಅಂದಾಜು ನೇಮಕಾತಿ 40,000ಕ್ಕಿಂತ ಏರಿಕೆಯಾಗಿದೆ.ಈ ದಿಸೆಯಲ್ಲಿ ಮನಿ ಕಂಟ್ರೋಲ್‌ಗೆ ಕಂಪನಿಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ (ಚೀಫ್ ಹ್ಯೂಮನ್ ರಿಸೋರ್ಸ್ ಆಫೀಸರ್) ಮಿಲಿಂದ್ ಲಕ್ಕಡ್ ನೀಡಿದ ಸಂದರ್ಶನದಲ್ಲಿ ಕಂಪನಿಯು ಉದ್ದೇಶಿಸಿರುವ ಕೆಲವೊಂದು ಯೋಜನೆಗಳನ್ನು ಪ್ರಸ್ತಾವಿಸಿದ್ದು, ಟೆಕ್ ಪ್ರತಿಭೆಗೆ ಇರುವ ಬೇಡಿಕೆ, ಪ್ರೋತ್ಸಾಹಕಗಳು, ಉದ್ಯೋಗಿಗಳನ್ನು ಮರಳಿ ಕ್ಯಾಂಪಸ್‌ಗೆ ಕರೆತರುವುದು, ಹೆಚ್ಚು ಮಹಿಳಾ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದು, ಉನ್ನತ ಪ್ರತಿಭೆ ಇರುವ ಉದ್ಯೋಗಿಗಳು ಯೋಗ್ಯತೆಯನ್ನು ನಿರ್ವಹಿಸುವಲ್ಲಿ ಹೇಗೆ ಪ್ರಮುಖ ಪಾತ್ರ ವಹಿಸುತ್ತಾರೆ ಮೊದಲಾದ ಅಂಶಗಳನ್ನು ಹಂಚಿಕೊಂಡಿದ್ದಾರೆ.

  ಸಂದರ್ಶನದ ಮುಖ್ಯಾಂಶಗಳು:

  ಟಿಸಿಎಸ್ ಈ ವರ್ಷ 75,000ಕ್ಕಿಂತಲೂ ಹೆಚ್ಚಿನ ಫ್ರೆಶರ್‌ಗಳನ್ನು ನೇಮಕ ಮಾಡಿಕೊಳ್ಳುತ್ತಿದೆ, ನೀವು ಈ ಹಿಂದೆ ಹಂಚಿಕೊಂಡಿದ್ದ 40,000ಕ್ಕಿಂತ ಈ ಸಂಖ್ಯೆ ಹೆಚ್ಚಾಗಿದೆ. ನೀವು ಇದನ್ನು 1 ಲಕ್ಷದವರೆಗೆ ತಲುಪಿಸುವ ಗುರಿಯನ್ನಿಟ್ಟುಕೊಂಡಿದ್ದೀರಾ?

  ಕ್ಯಾಂಪಸ್ ನೇಮಕಾತಿಗಾಗಿ ನಾವು ಈಗಾಗಲೇ 43,000 ನೇಮಕಾತಿಗಳನ್ನು ನಡೆಸಿದ್ದೇವೆ. ನಾವು ಇನ್ನೂ 34,000 ನೇಮಕಾತಿಗಳನ್ನು ನಡೆಸುವ ಉದ್ದೇಶವನ್ನು ಹೊಂದಿದ್ದೇವೆ. ಹಾಗಾಗಿ 77,000 ಸಮೀಪ ಇದು ತಲುಪಬಹುದು. ಇನ್ನು ಪರಿಸ್ಥಿತಿ ನೋಡಿಕೊಂಡು ಬೇಡಿಕೆಗಳಿಗೆ ತಕ್ಕಂತೆ ನೇಮಕಾತಿ ಸಂಖ್ಯೆಗಳನ್ನು ಹೆಚ್ಚಿಸಿಕೊಳ್ಳುತ್ತೇವೆ.

  ಉದ್ಯೋಗಿ ಕ್ಷೀಣತೆಯು ಆರು ತ್ರೈಮಾಸಿಕದಷ್ಟು ಹೆಚ್ಚಾಗಿದೆ.. ನಾಲ್ಕನೇ ತ್ರೈಮಾಸಿಕದಲ್ಲಿ ಕ್ಷೀಣತೆಯು 7.2% ಆಗಿದೆ ಹಾಗೂ ಮೊದಲನೇ ತ್ರೈಮಾಸಿಕದಲ್ಲಿ 8.6% ಆಗಿದೆ. ನೀವು ತೆಗೆದುಕೊಂಡಿರುವ ಕ್ರಮಗಳೇನು?

  ಸಾಂಕ್ರಾಮಿಕದಿಂದಾಗಿ ಕ್ಷೀಣತೆಯು 7.2%ನಷ್ಟು ಕಡಿಮೆಯಾಗಿದೆ. ನಾವು ಸಾಮಾನ್ಯವಾಗಿ ಹಲವಾರು ವರ್ಷಗಳಿಂದ 10-11% ಉದ್ಯೋಗಿ ಕ್ಷೀಣತೆಯನ್ನು ನಿರ್ವಹಿಸಿಕೊಂಡು ಬರುತ್ತಿದ್ದೇವೆ. ನಮ್ಮ ಸೌಕರ್ಯದ ಮಟ್ಟ 12-13% ಆಗಿದೆ. ನಿಜಕ್ಕೂ ಇದು ಗಂಭೀರ ವಿಷಯವಾಗಿದೆ. ನಮ್ಮ ದೃಢವಾದ ಉದ್ಯೋಗದಾತರ ಬ್ರ್ಯಾಂಡಿಗ್, ಪ್ರತಿಭಾ ಸ್ವಾಧೀನ ಹಾಗೂ ಪ್ರಗತಿಯೊಂದಿಗೆ ಮುಂದಿನ ಎರಡು ಹಾಗೂ ಮೂರು ತ್ರೈಮಾಸಿಕಗಳಲ್ಲಿ ಈ ಹಂತದಲ್ಲಿ ನಾವಿರುತ್ತೇವೆ ಎಂದು ನಾವು ನಂಬುತ್ತೇವೆ.

  ಪಾರ್ಶ್ವ ನೇಮಕಾತಿಯ ಕುರಿತಾಗಿ ಡ್ರಾಪ್‌ಔಟ್ ದರಗಳು ಸರಾಸರಿಯಾಗಿರುವ 40-50% ಕ್ಕಿಂತ ಹೆಚ್ಚಿದೆ. ನೇಮಕಾತಿದಾರರಿಗೆ ನೀಡುತ್ತಿರುವ ಪ್ರಾಶಸ್ತ್ಯವೇನು?

  ಬದಲಾವಣೆ ದರವು ಇದೀಗ ಸ್ವಲ್ಪ ಕಡಿಮೆಯಾಗಿದೆ. ಇದು ನಮಗೆ 50% ಲಾಭದಾಯಕವಾಗಿದೆ ಎಂದು ನಾನು ಹೇಳುವುದಿಲ್ಲ. ಇದರ ಸುಧಾರಣೆಗಾಗಿ ನಾವು ನಿರಂತರವಾಗಿ ಪ್ರಯತ್ನಗಳನ್ನು ನಡೆಸುತ್ತೇವೆ. ಪಾರ್ಶ್ವ ನೇಮಕಾತಿಗಳನ್ನು ನೇಮಿಸುವ ನಿಟ್ಟಿನಲ್ಲಿ ಪರಿಹಾರವು ಸ್ವಲ್ಪ ಹೆಚ್ಚಾಗಿದೆ. ನಾವು ಉತ್ತಮವಾಗಿ ನಿರ್ವಹಿಸಿದ್ದೇವೆ.

  ಕಂಪನಿ ಈ ವರ್ಷ ದಾಖಲೆಯ ಮಟ್ಟದಲ್ಲಿ 77,000 ಫ್ರೆಶರ್‌ಗಳನ್ನು ನೇಮಿಸಿಕೊಳ್ಳುತ್ತಿದೆ. ಕಳೆದ ಕೆಲವು ವರ್ಷಗಳಿಂದ ಪ್ರತಿ ವರ್ಷ ಈ ಸಂಖ್ಯೆ 40,000ರಲ್ಲಿದೆ. ನೀವು ಈ ಪ್ರಕ್ರಿಯೆಯ ನಿರ್ವಹಣೆಯನ್ನು ಹೇಗೆ ಕೈಗೊಳ್ಳಲಿದ್ದೀರಿ. ಏಕೆಂದರೆ ಬೇಡಿಕೆ ಹೆಚ್ಚಾಗಿರುವುದರಿಂದ ಫ್ರೆಶರ್‌ಗಳನ್ನು ನಿಯೋಜಿಸುವುದಕ್ಕೆ ಸಮಯ ತೆಗೆದುಕೊಳ್ಳುತ್ತದೆಯೇ..?

  ಏಳನೇ ಸೆಮಿಸ್ಟರ್‌ನಲ್ಲಿರುವ ವಿದ್ಯಾರ್ಥಿಗಳನ್ನು ಎಕ್ಸ್‌ಪ್ಲೋರ್ ಪ್ರೊಗ್ರಾಂಗೆ ನಿಯೋಜಿಸುವ ಯೋಜನೆ ಇದೆ. ಈ ಸಮಯದಲ್ಲಿ ತಂತ್ರಜ್ಞಾನ, ಕೌಶಲ್ಯ, ಸಾಫ್ಟ್ ಸ್ಕಿಲ್ಸ್, ಕ್ಲೌಡ್, ಸೆಕ್ಯುರಿಟಿಯಂತಹ ಯುನಿಟ್-ನಿರ್ದಿಷ್ಟ ತರಬೇತಿಯನ್ನು ಒದಗಿಸಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳು 18 ತಿಂಗಳ ಸಮಯ ತೆಗೆದುಕೊಳ್ಳುತ್ತದೆ. ಸಾಂಕ್ರಾಮಿಕದ ನಂತರವೂ ಈ ಯೋಜನೆ ಹೀಗೆಯೇ ಮುಂದುವರಿಯುತ್ತದೆ ಹಾಗೂ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬರುತ್ತಿದ್ದಂತೆ ನಾವು ಭೌತಿಕ ಅಂಶಗಳಿಗೆ ಪ್ರಾಶಸ್ತ್ಯ ನೀಡುತ್ತೇವೆ. ಪ್ರತಿ ವಾರ ಸುಮಾರು 1,500 ವಿದ್ಯಾರ್ಥಿಗಳು ಡಿಜಿಟಲ್ ಪ್ರಮಾಣಪತ್ರವನ್ನು ಪಡೆದುಕೊಳ್ಳುತ್ತಿದ್ದಾರೆ. ಸಾಮರ್ಥ್ಯ ಆಧರಿಸಿ ಪ್ರೋತ್ಸಾಹಕ ನೀಡುತ್ತೇವೆ. ಅರ್ಹ ಸಮಯದಲ್ಲಿ ಹಾಗೂ ಸಂಪೂರ್ಣವಾಗಿ ಸಿದ್ಧವಾಗಿದ್ದರೆ ಇನ್‌ಸೆಂಟೀವ್ಸ್ ಪಡೆಯುತ್ತಾರೆ. ಇದರಿಂದ ಪಾವತಿಗೆ ಉತ್ತಮ ಮೊತ್ತ ಸೇರ್ಪಡೆಯಾಗುತ್ತದೆ ಹಾಗೂ ಈ ಪ್ರೋತ್ಸಾಹಕವನ್ನು ಹೆಚ್ಚಿಸುವತ್ತ ಕೂಡ ನಾವು ಗಮನ ಹರಿಸುತ್ತಿದ್ದೇವೆ.

  ಇದನ್ನೂ ಓದಿ: FSSAI Recruitment 2021: ತಾಂತ್ರಿಕ ಅಧಿಕಾರಿಗಳು, ಹಿಂದಿ ಅನುವಾದಕರು ಹುದ್ದೆಗಳಿಗೆ ಅರ್ಜಿ ಆಹ್ವಾನ; ಆಸಕ್ತರು ನ.7ರೊಳಗೆ ಅರ್ಜಿ ಸಲ್ಲಿಸಿ

  ಪ್ರತಿಭಾ ಸ್ಪರ್ಧೆಯ ನಿಟ್ಟಿನಲ್ಲಿ ನೀವು ಇನ್ನೊಂದು ಹೈಕ್ ನೀಡಲು ಉದ್ದೇಶಿಸಿರುವಿರಾ?

  ವರ್ಷದಲ್ಲಿ ಎರಡು ಬಾರಿ ಹೈಕ್‌ ಘೋಷಿಸಿದ ಕಂಪನಿ ನಮ್ಮದಾಗಿದೆ. ಈ ವರ್ಷ ನಮ್ಮ ನಿಯಮಿತ ಹೈಕ್ ಪ್ರಕ್ರಿಯೆಗೆ ಮರಳುತ್ತೇವೆ ಹಾಗೂ ಏಪ್ರಿಲ್‌ನಲ್ಲಿ ಮುಂದಿನ ಹೈಕ್ ಪ್ರಕ್ರಿಯೆ ಮಾಡಲಿದ್ದೇವೆ.

  ಪೂರೈಕೆಯನ್ನು ಹೆಚ್ಚಿಸಲು ನೀವು ತೊಡಗಿಸಿಕೊಂಡಿರುವ ವಿಭಿನ್ನ ಕೆಲಸಗಳೇನು? ಕಂಪನಿಗೆ ಮರಳಿ ಸೇರಲು ಬಯಸುವ ಮಾಜಿ ಉದ್ಯೋಗಿಗಳನ್ನು ಸಂಪರ್ಕಿಸಲು ಬಯಸುತ್ತೀರಾ? ಮಾಜಿ ಉದ್ಯೋಗಿಗಳು ಮರಳಿ ಸಂಸ್ಥೆಯನ್ನು ಸೇರುವುದು ಕಷ್ಟಕರವಾಗಿರುತ್ತದೆ. ಆದರೂ ಅವರು ಉತ್ಸುಕರಾಗಿದ್ದರೆ ನೀವು ಆದ್ಯತೆ ನೀಡುವಿರಾ?

  ಈ ಎಲ್ಲಾ ಅಂಶಗಳನ್ನು ನಾವು ಕೂಲಂಕುಷವಾಗಿ ಪರಿಶೀಲಿಸುತ್ತಿದ್ದೇವೆ. ಕಂಪನಿ ಅರ್ಹತಾ ಪರೀಕ್ಷೆಯನ್ನು ಮಿಸ್ ಮಾಡಿಕೊಂಡ ಹಾಗೂ ಸಂದರ್ಶನದಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳದ ಉದ್ಯೋಗಿಗಳ ಅಂಕಿಅಂಶಗಳ ವಿವರ ನಮ್ಮ ಬಳಿ ಇದೆ. ನಾವು ಅವರನ್ನು ಸಂಪರ್ಕಿಸಿ, ಅವರಿಗೆ ಇಚ್ಛೆ ಇದ್ದಲ್ಲಿ ಮರಳಿ ಪ್ರಯತ್ನಿಸಲು ತಿಳಿಸುತ್ತೇವೆ.

  ಫ್ರೆಶರ್‌ಗಳಿಗೆ ನೀವು ನೀಡುವ ಸಂಬಳವು ಬಹುತೇಕ 3.5 LPAಯಲ್ಲಿ ಸ್ಥಗಿತಗೊಂಡಿದೆ. ಡಿಜಿಟಲ್ ಕೌಶಲ್ಯ ಹೊಂದಿರುವವರಿಗೆ ಟಿಸಿಎಸ್ ಬೇರೆ ಬೇರೆ ಸಂಬಳ ನಿರ್ಧರಿಸುತ್ತದೆ. ಸಂಬಳವನ್ನು ಏರಿಸುವ ಕುರಿತು ಏನಾದರೂ ಯೋಜನೆ ಇದೆಯೇ?

  ಜನರು ಕಲಿಯಬೇಕು ಹಾಗೂ ಕಲಿಕೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ನಾವು ಅವರಿಗೆ ಒದಗಿಸುತ್ತೇವೆ. ಡಿಜಿಟಲ್ ಕೌಶಲ್ಯವಿರುವವರು ಪ್ರತಿ ವರ್ಷ ಮೂಲ ಸಂಬಳ 3.5 ಲಕ್ಷದಲ್ಲಿ ದುಪ್ಪಟ್ಟು ಏರಿಕೆಪಡೆಯುತ್ತಾರೆ. ಉದ್ಯೋಗಿಯು ಈ ಮಟ್ಟ ತಲುಪಲು ಮೂರು ವರ್ಷಗಳಲ್ಲಿ ನಾವು ಮೂರು ಅವಕಾಶಗಳನ್ನು ನೀಡುತ್ತೇವೆ.

  ಡಿಸೆಂಬರ್‌ನಿಂದಲೇ ಉದ್ಯೋಗಿಗಳನ್ನು ಮರಳಿ ಕಚೇರಿಗೆ ತರುವ ಪ್ರಯತ್ನವನ್ನು ಟಿಸಿಎಸ್ ಮಾಡುತ್ತಿದೆ. 50% ಸಾಮರ್ಥ್ಯದಲ್ಲಿ ಕಂಪನಿ ನಡೆಸುವ ಯೋಜನೆಯಲ್ಲಿ ಹಂತ ಹಂತವಾಗಿ ನೀವು ಇದನ್ನು ಜಾರಿಗೊಳಿಸಲಿದ್ದೀರಾ? ರಿಮೋಟ್ ಕೆಲಸ (ವರ್ಕ್ ಫ್ರಮ್ ಹೋಮ್) ಮಾಡುವಿಕೆ ಶಾಶ್ವತ ಪರಿಹಾರವಾಗಿ ರೂಪುಗೊಳ್ಳಲಿದೆಯೇ?

  100% ರಿಮೋಟ್ ಕೆಲಸಕ್ಕೆ ನಾವು ಆದ್ಯತೆ ನೀಡುವುದಿಲ್ಲ. ನಾವು ಸಾಮಾನ್ಯ ಸ್ಥಿತಿಗೆ ಶೀಘ್ರದಲ್ಲೇ ಮರಳಲಿದ್ದೇವೆ. ಸಾಮಾನ್ಯ ಸ್ಥಿತಿಗೆ ಮರಳುವುದು ಎಂದರೆ ನಮ್ಮ ಹೆಚ್ಚಿನ ಉದ್ಯೋಗಿಗಳನ್ನು ಮರಳಿ ಕಚೇರಿಗೆ ಬರುವಂತೆ ಮಾಡುವುದು. ನಮ್ಮ ಕಂಪನಿಯ ಹೆಚ್ಚಿನ ಹಿರಿಯ ಉದ್ಯೋಗಿಗಳು ವಾರದಲ್ಲಿ ಕನಿಷ್ಠ ಎರಡು ಅಥವಾ ಮೂರು ಬಾರಿ ಕಚೇರಿಗೆ ಬರುತ್ತಿದ್ದಾರೆ. ಈ ವರ್ಷದ ಅಂತ್ಯಕ್ಕೆ ನಮ್ಮ ಕಚೇರಿಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಉದ್ಯೋಗಿಗಳನ್ನು ಕರೆತರಲಿದ್ದೇವೆ.

  ಕಳೆದ 1.5 ವರ್ಷಗಳಿಂದ ಸರಿಯಾದ ಪ್ರತಿಭೆಯನ್ನು ನೇಮಿಸಿಕೊಳ್ಳಲು ಸ್ಥಳವು ಇನ್ನುಮುಂದೆ ಮಾನದಂಡವಾಗಿರುವುದಿಲ್ಲ. ರಿಮೋಟ್ ಕೆಲಸದಿಂದಾಗಿ ನೀವು ಅಭ್ಯರ್ಥಿಗಳನ್ನು ನಗರದಿಂದಲೇ ನಿಯೋಜಿಸಬೇಕಾಗಿಲ್ಲ. ಇದು ಬದಲಾಗಲಿದೆಯೇ? ನೀವು ಉದ್ಯೋಗಿಗಳನ್ನು ಮರಳಿ ಕಚೇರಿಕೆ ತರುವ ಪ್ರಯತ್ನದಲ್ಲಿದ್ದೀರಿ? ಇದು ಬದಲಾವಣೆಗಳನ್ನುಂಟು ಮಾಡಲಿದೆಯೇ?

  ನಮ್ಮ ಗ್ರಾಹಕರು ಹಾಗೂ ನಮ್ಮದೇ ಜನರಿಗೆ ಸಾಂಕ್ರಾಮಿಕದಿಂದ ಹೊರಬರುವ ಮನಸ್ಥಿತಿಯು ಮಾರ್ಪಟ್ಟಿದೆ. ಸರಿಯಾದ ಪ್ರತಿಭೆಯನ್ನು ನಾವು ಕಂಡುಕೊಳ್ಳುವವರೆಗೂ ಬೇರೆ ಬೇರೆ ಸ್ಥಳಗಳಲ್ಲಿ ಪ್ರತಿಭಾ ಅನ್ವೇಷಣೆಯ ನಡೆಸಲಿದ್ದೇವೆ. ಉದ್ಯೋಗಿಯು ಪುಣೆ, ಹೈದ್ರಾಬಾದ್, ಲಂಡನ್ ಅಥವಾ ನ್ಯೂಯಾರ್ಕ್‌ನಲ್ಲಿಯೇ ಇರಲಿ ನಾವು ಕಂಪನಿಗೆ ಸೂಕ್ತವಾದ ಪ್ರತಿಭೆಯ ಅನ್ವೇಷಣೆಗೆ ಪ್ರಪಂಚದ ಯಾವುದೇ ಮೂಲೆಯನ್ನು ಶೋಧಿಸುತ್ತೇವೆ. ಈ ಬದಲಾವಣೆಯು ಗಮನಾರ್ಹ ಗ್ರಾಹಕ ಮೌಲ್ಯಕ್ಕೆ ಸಾಕ್ಷಿಯಾಗಲಿದೆ ಹಾಗೂ ಉನ್ನತವಾದ ಪ್ರತಿಭೆಯನ್ನು ಈ ದಿಸೆಯಲ್ಲಿ ನಾವು ಪಡೆದುಕೊಳ್ಳಲಿದ್ದೇವೆ.

  ಕೆಲವು ವರ್ಷಗಳ ಕಾಲ ಉದ್ಯೋಗ ಮಾಡಿ ನಂತರ ಉದ್ಯೋಗ ತ್ಯಜಿಸಿದ ಹಲವಾರು ಮಹಿಳೆಯರಿದ್ದಾರೆ. ಈ ದಿಸೆಯಲ್ಲಿ ಕಂಪನಿ ಯೋಜಿಸಿರುವ ಕ್ರಮಗಳೇನು?

  Rebegin (ರೀಬಿಗಿನ್) ಎಂಬ ಯೋಜನೆಯೊಂದಿಗೆ ನಾವು ಉದ್ಯೋಗ ತ್ಯಜಿಸಿದ ಮಹಿಳೆಯನ್ನು ಪುನಃ ನೇಮಕಾತಿ ಮಾಡುವ ಪ್ರಕ್ರಿಯೆಯಲ್ಲಿದ್ದೇವೆ. ವೃತ್ತಿಜೀವನವನ್ನು ಪುನಃ ಆರಂಭಿಸಲು ಬಯಸುವ ಮಹಿಳೆಯರಿಗೆ ಇದು ಉತ್ತಮ ಅವಕಾಶವಾಗಲಿದೆ. ಇದು ಉದ್ದೇಶಿತ ನೇಮಕಾತಿ ಎಂದೆನಿಸಿದ್ದು, ನಿರ್ದಿಷ್ಟವಾಗಿ ಇಂತಹ ಗುಂಪುಗಳಿಗಾಗಿ ನಾವು ಯೋಜನೆಗಳನ್ನು ರೂಪಿಸಲಿದ್ದೇವೆ. ಪ್ರತಿಭಾ ಅನ್ವೇಷಣೆಯನ್ನು ಈ ದಿಸೆಯಲ್ಲಿ ನಾವು ಕೈಗೊಳ್ಳಲಿದ್ದು ಪ್ರತಿಯೊಬ್ಬರಿಗೂ ಇದು ಗೆಲುವನ್ನು ತಂದುಕೊಡಲಿದೆ.

  ಇದನ್ನೂ ಓದಿ: SBI PO Recruitment 2021: ಎಸ್​ಬಿಐನಲ್ಲಿ 2056 ಪ್ರೊಬೆಷನರಿ ಹುದ್ದೆಗಳು ಖಾಲಿ, ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದು

  ನಮ್ಮೊಂದಿಗೆ ಉದ್ಯೋಗ ಮಾಡಲು ಹಲವಾರು ಪ್ರತಿಭಾವಂತರನ್ನು ನಾವು ಹೊಂದಿದ್ದೇವೆ ಹಾಗೂ ಈ ಸಮಯದಲ್ಲಿ ನಮ್ಮ ತೀರ್ಮಾನಗಳು ಭಿನ್ನತೆಯನ್ನು ಸೃಷ್ಟಿಸಲಿದೆ. ಕಂಪನಿಯಲ್ಲಿ ವೈವಿಧ್ಯತೆ ತರಲು ಬಯಸುವ ಉದ್ಯೋಗಿಗಳಿಗೆ ನಾವು ನಿಜವಾಗಿಯೂ ಮನ್ನಣೆ ನೀಡುತ್ತೇವೆ. ಹಾಗಾಗಿ ಟಿಸಿಎಸ್ ಪುನಾರಂಭ ಯೋಜನೆಯನ್ನು ಆರಂಭಿಸಿದೆ ಹಾಗೂ ಇದರಲ್ಲಿ ನಾವು ಗಮನಾರ್ಹ ಫಲಿತಾಂಶ ದಾಖಲಿಸಿದ್ದೇವೆ. ರೀಬಿಗಿನ್‌ಗಾಗಿ ಇದುವರೆಗೆ ನಾವು 4,807 ಅರ್ಜಿಗಳನ್ನು ಸ್ವೀಕರಿಸಿದ್ದೇವೆ.

  ಗಿಗ್ ವರ್ಕರ್ಸ್ (ತಾತ್ಕಾಲಿಕ ಉದ್ಯೋಗಿಗಳು) ಕುರಿತು ಈ ಪ್ರಶ್ನೆಯಾಗಿದ್ದು, ವಾರದಲ್ಲಿ ಎರಡು ದಿನ ಟಿಸಿಎಸ್‌ಗಾಗಿ ಪ್ರೋಗ್ರಾಂನಂತಹ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಹಾಗೂ ಉಳಿದ ದಿನಗಳಲ್ಲಿ ತಮ್ಮ ಇನ್ನಿತರ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಲು ಬಯಸುವವರಿದ್ದಾರೆ. ತಾತ್ಕಾಲಿಕ ಉದ್ಯೋಗಿಗಳಿಗೆ ನೀವು ಹೇಗೆ ಆದ್ಯತೆ ನೀಡುತ್ತೀರಿ?

  ನಾವು ಭವಿಷ್ಯದಲ್ಲಿ ಬದಲಾವಣೆಗಳನ್ನುಂಟು ಮಾಡುವ ಕೆಲಸದ ಮಾದರಿಯ ಭಾಗವಾಗಿದೆ. ನಮ್ಮ ಆಂತರಿಕ ಪ್ರಾಜೆಕ್ಟ್ ಬೆಂಬಲದೊಂದಿಗೆ ನಾವು ಕೆಲವೊಂದು ಮೂಲ ಮಾದರಿಗಳನ್ನು ನಡೆಸಿದ್ದೇವೆ. ಕೋರ್ ಗ್ರೂಪ್‌ನ ಭಾಗವಾಗಿಲ್ಲದೆ ಯಾರಾದರೂ ಸ್ವತಂತ್ರವಾಗಿ ಕಾರ್ಯನಿರ್ವಹಿಸಬಹುದಾದ ಚಟುವಟಿಕೆಗಳನ್ನು ನಾವು ಗಮನಿಸುತ್ತಿದ್ದೇವೆ. ಮಾರಾಟ ಕ್ರಿಯೆಯಲ್ಲಿ ಗ್ರಾಹಕ-ನಿರ್ದಿಷ್ಟ ಚಟುವಟಿಕೆಯನ್ನು ನಾವು ಗುರುತಿಸುತ್ತಿದ್ದೇವೆ. ಇದರಿಂದ ಗ್ರಾಹಕರು ಅಥವಾ ನಿರ್ದಿಷ್ಟ ಇಂಡಸ್ಟ್ರಿ ಪರಿಸ್ಥಿತಿಗಳಿಗೆ ಅನುಗುಣವಾಗಿರುವ ಮೂಲ ಮಾದರಿಗಳನ್ನು ನಿರ್ಮಿಸಲು ಬಯಸುತ್ತೇವೆ. ಇವುಗಳಲ್ಲಿ ಕೆಲವೊಂದನ್ನು ಸ್ವತಂತ್ರವಾಗಿ ನಿರ್ವಹಿಸಬಹುದಾಗಿದೆ.

  ಇವುಗಳಲ್ಲಿ ಅತಿಪ್ರಮುಖವಾಗಿ ನಡೆಸುವ ಕಾರ್ಯವೆಂದರೆ ಅಂತಹ ಚಟುವಟಿಕೆಗಳನ್ನು ಗುರುತಿಸುವುದಾಗಿದೆ. ಜನರು ತಮ್ಮ ಕೆಲಸದ ಸಮಯಗಳಲ್ಲಿ ನಿಯಮಿತ ಪ್ರಾಜೆಕ್ಟ್‌ಗಳೊಂದಿಗೆ ಇಂತಹ ಚಟುವಟಿಕೆಗಳನ್ನು ನಡೆಸಬಹುದಾಗಿದೆ.
  Published by:Kavya V
  First published: