500,000 ದಾಟಿದ ಟಿಸಿಎಸ್ ಉದ್ಯೋಗಿಗಳ ಸಂಖ್ಯೆ : ಐಟಿ ಉದ್ಯೋಗಾಕಾಂಕ್ಷಿಗಳಲ್ಲಿ ಹೊಸ ಭರವಸೆ..!

ಹಲವಾರು ವೈವಿಧ್ಯತೆಯನ್ನು ಒಳಗೊಂಡ ಉದ್ಯೋಗಿಗಳಿದ್ದು, 155 ರಾಷ್ಟ್ರೀಯತೆ ಮತ್ತು ಶೇಕಡಾ 36.2 ರಷ್ಟು ಮಹಿಳಾ ಉದ್ಯೋಗಿಗಳು ಟಿಸಿಎಸ್​​ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿ ಕೊಂಡಿದ್ದಾರೆ' ಎಂದು ಟಾಟಾ ಸಮೂಹ ಸಂಸ್ಥೆ ತಿಳಿಸಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಭಾರತದ ಅತಿ ದೊಡ್ಡ ಪ್ರತಿಷ್ಠಿತ ಐಟಿ ಸೇವಾ ಸಂಸ್ಥೆ ಟಿಸಿಎಸ್ 20,409 ಉದ್ಯೋಗಿಗಳನ್ನು ಹೊಸದಾಗಿ ತನ್ನ ಬಳಗಕ್ಕೆ ಸೇರಿಸಿಕೊಂಡಿದೆ. 2021ರ ಜೂನ್ ಅಂತ್ಯದ ತ್ರೈಮಾಸಿಕದಲ್ಲಿ ಈ ದೊಡ್ಡ ಬೆಳವಣಿಗೆ ನಡೆದಿದ್ದು, ಅತಿ ಹೆಚ್ಚಿನ ದಾಖಲೆ ಸಂಖ್ಯೆ ಎನ್ನುವ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. ಆ ಮೂಲಕ ಟಿಸಿಎಸ್​​ 500,000ಕ್ಕಿಂತಲೂ ಹೆಚ್ಚಿನ ಉದ್ಯೋಗಿಗ ಳನ್ನು ಹೊಂದಿದೆ ಎಂಬ ಹೆಮ್ಮೆಗೆ ಪಾತ್ರವಾಗಿದೆ. ಈ ಎಲ್ಲಾ ಬೆಳವಣಿಗೆಗಳು ಐಟಿ ಕ್ಷೇತ್ರದ ಉದ್ಯೋಗಾಕಾಂಕ್ಷಿಗಳಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. 

ಮಹಿಳಾ ಉದ್ಯೋಗಿಗಳ ಸ್ಥಾನ ಭದ್ರ

ಹಲವಾರು ವೈವಿಧ್ಯತೆಯನ್ನು ಒಳಗೊಂಡ ಉದ್ಯೋಗಿಗಳಿದ್ದು, 155 ರಾಷ್ಟ್ರೀಯತೆ ಮತ್ತು ಶೇಕಡಾ 36.2 ರಷ್ಟು ಮಹಿಳಾ ಉದ್ಯೋಗಿಗಳು ಟಿಸಿಎಸ್​​ನಲ್ಲಿ ತಮ್ಮ ಸ್ಥಾನ ಭದ್ರಪಡಿಸಿ ಕೊಂಡಿದ್ದಾರೆ' ಎಂದು ಟಾಟಾ ಸಮೂಹ ಸಂಸ್ಥೆ ತಿಳಿಸಿದೆ.

ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕಾಡ್ ಅವರು ಹೇಳುವ ಪ್ರಕಾರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕಂಡು ಬಂದ ಕೊರೊನಾ ಸಾಂಕ್ರಾಮಿಕದ ಎರಡನೇ ಅಲೆ ಟಿಸಿಎಸ್​ ಕುಟುಂಬಕ್ಕೆ ಸಾಕಷ್ಟು ಸವಾಲಾಗಿತ್ತು. 'ನಮ್ಮ ಚಿಂತನೆಗಳು ಮತ್ತು ಉತ್ಕೃಷ್ಟ ಪ್ರಯತ್ನಗಳ ನಂತರವೂ ವೈಯಕ್ತಿಕ ನಷ್ಟ, ಕಷ್ಟಕ್ಕೆ ಸಿಲುಕಿದ ಕುಟುಂಬದ ಜೊತೆಗೆ ನಮ್ಮ ಸಂಸ್ಥೆ ನಿಂತಿದೆ' ಎಂದರು.

'ಇಂತಹ ಕಠಿಣ ಸಂದರ್ಭದಲ್ಲಿ, ಒತ್ತಡದ ಕಾಲದಲ್ಲಿ ಒಬ್ಬರಿಗೊಬ್ಬರು ಭದ್ರವಾಗಿ ನಿಂತ ನಮ್ಮ ಸಹವರ್ತಿಗಳ ಮನೋಧರ್ಮ ಮತ್ತು ವ್ಯಕ್ತಿತ್ವವನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಲು ಬಯಸುವೆವು. ನಾವು ನಮ್ಮ ಎಲ್ಲಾ ಅಸೋಸಿಯೇಟ್ಸ್​ಗಳ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಪ್ರೀಮಿಯಂಗಳನ್ನು ಮೀಸಲಿಡುವುದುನ್ನು ಮುಂದುವರೆಸುತ್ತೇವೆ. ನಮ್ಮ ಎಲ್ಲಾ ಸಹವರ್ತಿಗಳಿಗೆ ಲಸಿಕೆಯನ್ನು ಆದ್ಯತೆಯಾಗಿ ಪರಿಗಣಿಸಿದ್ದೇವೆ. ಅವಲಂಬಿತರು ಮತ್ತು ಗುತ್ತಿಗೆ ಸಿಬ್ಬಂದಿಗಳು ಕೂಡ ಈ ಪಟ್ಟಿಯಲ್ಲಿದ್ದಾರೆ' ಎಂದು ತಿಳಿಸಿದ್ದಾರೆ.

ಸೆಪ್ಟೆಂಬರ್ ಒಳಗೆ ಟಾಟಾ ಬಳಗಕ್ಕೆ ಲಸಿಕೆ ಸಂಪೂರ್ಣ;

'ಎರಡು ತಿಂಗಳೊಳಗೆ ಅರ್ಧ ಮಿಲಿಯನ್​ನಷ್ಟು ನಮ್ಮ ಸಹವರ್ತಿಗಳು, ಕುಟುಂಬ ಸದಸ್ಯರು ಹಾಗೂ 70 ಪ್ರತಿಶತಕ್ಕೂ ಹೆಚ್ಚಿನ ಸಹವರ್ತಿಗಳಿಗೆ ಲಸಿಕೆಯನ್ನು ನೀಡಲಾಗಿದೆ. ಅಲ್ಲದೇ ನಾವು ಸೆಪ್ಟೆಂಬರ್ ತಿಂಗಳ ಒಳಗೆ ಎಲ್ಲಾ ಟಿಸಿಎಸ್ ಬಳಗಕ್ಕೆ ಮತ್ತು ಅವರ ಕುಟುಂಬಗಳಿಗೆ ಲಸಿಕೆ ಹಾಕುವ ಹಾದಿಯಲ್ಲಿದ್ದೇವೆ' ಎಂದು ಹೇಳಿದರು.

ಇದನ್ನೂ ಓದಿ: Sumalatha Ambrish| ಅಂಬರೀಶ್ ಕಾಲದಲ್ಲಿ ಅಕ್ರಮ ನಡೆದಿದ್ದರೆ ದಾಖಲೆ ತನ್ನಿ; ಕುಮಾರಸ್ವಾಮಿಗೆ ಸಂಸದೆ ಸುಮಲತಾ ಸವಾಲು!

ಟಿಸಿಎಸ್ ತ್ರೈಮಾಸಿಕದಲ್ಲಿ 45,111 ಕೋಟಿ ರೂ. ಆದಾಯವನ್ನು ದಾಖಲಿಸಿದೆ. ಇದು ವರ್ಷಕ್ಕೆ 18.5 ಶೇಕಡಾ (ವರ್ಷದಿಂದ  ವರ್ಷಕ್ಕೆ) ಮತ್ತು ನಿವ್ವಳ ಲಾಭದಲ್ಲಿ 9008 ಕೋಟಿ ರೂ. ಇದು 28.5 ರಷ್ಟು ವರ್ಷದಿಂದ ವರ್ಷಕ್ಕೆ ಬೆಳವಣಿಗೆಯಾಗಿದೆ.

ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಪನಿಯು 18.1 ಬಿಲಿಯನ್ ಡಾಲರ್ ಮೌಲ್ಯದ ಒಪ್ಪಂದಗಳಿಗೆ ಸಹಿ ಹಾಕಿರುವುದು ಭಾರತದ ಐಟಿ ಕ್ಷೇತ್ರದ ಬಗ್ಗೆ ಹೆಚ್ಚಿನ ಭರವಸೆ ಮೂಡಿಸಿದೆ.

ಇದನ್ನೂ ಓದಿ: ಬೂಟು ಒದ್ದೆಯಾಗುವುದನ್ನು ತಪ್ಪಿಸಲು ತಮಿಳುನಾಡು ಸಚಿವರನ್ನು ಹೊತ್ತು ಸಾಗಿದ ಬೆಸ್ತ; ವಿಡಿಯೋ ವೈರಲ್

ಮಾಸಿಕ ಆದಾಯದಲ್ಲಿ 6 ಬಿಲಿಯನ್ ಡಾಲರ್ ಮೈಲಿಗಲ್ಲು;

ಮುಖ್ಯ ಹಣಕಾಸು ಅಧಿಕಾರಿ ಸಮೀರ್ ಸೆಕ್ಸರಿಯಾ ಅವರು ಹೇಳುವ ಪ್ರಕಾರ ಟಾಟಾ ಸಂಸ್ಥೆ ಈ ತ್ರೈ ಮಾಸಿಕದಲ್ಲಿ ತ್ರೈಮಾಸಿಕ ಆದಾಯದಲ್ಲಿ 6 ಬಿಲಿಯನ್ ಡಾಲರ್ ಮೈಲಿಗಲ್ಲನ್ನು ದಾಟಿದೆ. ಅಲ್ಲದೇ ವಾರ್ಷಿಕ ವೇತನದಲ್ಲಿ ತೃಪ್ತಿದಾಯಕ ಹೆಚ್ಚಳ ಮತ್ತು ಬಡ್ತಿ, ಜೊತೆಗೆ ಖಾಸಗಿ ವಲಯಗಳಲ್ಲಿ ಅತಿ ದೊಡ್ಡ ಲಸಿಕೆ ಡ್ರೈವ್ ಕೈಗೊಂಡಿದೆ. ಇದಿಷ್ಟೇ ಅಲ್ಲದೇ ಪ್ರಾದೇಶಿಕ ಮಾರುಕಟ್ಟೆಯಲ್ಲಿ ಮುನ್ನಲೆಯಲ್ಲಿದ್ದೇವೆ. ವರ್ಷದಿಂದ ವರ್ಷಕ್ಕೆ  ಕ್ಯೂ 1 ಆಪರೇಟಿಂಗ್​ ಮಾರ್ಜೀನ್​​ ಅನ್ನು ವಿಸ್ತರಿಸಿದ್ದೇವೆ ಎಂದಿದ್ದಾರೆ.

ಮುಂದಿನ ದಿನಗಳ ಬಗ್ಗೆ ಇನ್ನಷ್ಟು ಭರವಸೆ ಇದೆ.  ಬದಲಾವಣೆಯ ಅವಕಾಶಗಳಲ್ಲಿ ನಮ್ಮ ವಿಸ್ತರಿಸುವ ಶಕ್ತಿಯನ್ನು ಬಲಪಡಿಸುವಂತೆ ಸರಿಯಾದ ಹೂಡಿಕೆಯ ಮಾರ್ಕೆಟಿಂಗ್ ಬಗ್ಗೆ ಹೆಚ್ಚು ಕೇಂದ್ರಿಕರಿಸಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಉದ್ಯಮವನ್ನು ಲಾಭದ ಹಾದಿಯಲ್ಲಿ ಸ್ಥಿರವಾಗಿಸಿಕೊಳ್ಳುವ ಕಾರ್ಯದಲ್ಲಿ ಶ್ರಮಿಸುತ್ತಿದ್ದೇವೆ.
Published by:MAshok Kumar
First published: