ಕೊರೋನಾ ಸಂದಿಗ್ಧತೆ ನಡುವೆಯೂ ನೌಕರರ ಸಂಬಳ ಹೆಚ್ಚಿಸಿದ ಟಿಸಿಎಸ್

ಐಟಿ ವಲಯದಲ್ಲಿ ದಿಗ್ಗಜನಾಗಿರುವ ಟಿಸಿಎಸ್​ ಆಕ್ಟೋಬರ್​ 1ರಿಂದ ಜಾರಿ ಬರುವಂತೆ ತನ್ನ ಉದ್ಯೋಗಿಗಳಿಗೆ ಸಂಬಳ ಹೆಚ್ಚಿಸಿದೆ

ಟಿಸಿಎಸ್​

ಟಿಸಿಎಸ್​

 • Share this:
  ಬೆಂಗಳೂರು (ಅ.7): ಕೊರೋನಾ ಆರ್ಥಿಕ ಹೊಡೆತಕ್ಕೆ ಸಿಲುಕಿರುವ ಅನೇಕ ದೈತ್ಯ ಕಂಪನಿಗಳು ನಷ್ಟ ಅನುಭವಿಸಿದೆ. ಇದರ ಪರಿಣಾಮವಾಗಿ ಅನೇಕರು ಕೆಲಸ ಕಳೆದುಕೊಳ್ಳುವಂತೆ ಆಗಿದೆ. ಇನ್ನು ಕೆಲಸ ಉಳಿಸಿಕೊಂಡವರಿಗೆ ಈ ವರ್ಷ ಯಾವುದೇ ಸಂಬಳ ಹೆಚ್ಚಳ, ಬೋನಸ್​, ಇನ್​ಕ್ರಿಮೆಂಟ್​ ಇಲ್ಲ ಎಂಬ ಸ್ಥಿತಿ. ಈ ಮಧ್ಯೆ ಟಿಸಿಎಸ್​ ತನ್ನ ಕಂಪನಿ ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದೆ. ಐಟಿ ವಲಯದಲ್ಲಿ ದಿಗ್ಗಜನಾಗಿರುವ ಟಿಸಿಎಸ್​ ಆಕ್ಟೋಬರ್​ 1ರಿಂದ ಜಾರಿ ಬರುವಂತೆ ತನ್ನ ಉದ್ಯೋಗಿಗಳಿಗೆ ಸಂಬಳ ಹೆಚ್ಚಿಸಿದೆ. ಸದ್ಯ ಟಿಸಿಎಸ್​ನಲ್ಲಿ4,53,540 ಜನರು ಕಾರ್ಯನಿರ್ವಹಿಸುತ್ತಿದ್ದು, ಅವರಿಗೆಲ್ಲಾ ಸಂಬಳದಲ್ಲಿ ಏರಿಕೆಯಾಗಲಿದೆ.

  ಸ್ಥಳೀಯ ಪ್ರತಿಭೆಗಳ ಅಭಿವೃದ್ಧಿಗೆ ಟಿಸಿಎಸ್​ ಹೂಡಿಕೆ ಮಾಡುತ್ತದೆ. ಉನ್ನತ ಮಟ್ಟದ ಕೌಶಲ್ಯ ಮತ್ತು ನವೀನ ತರಬೇತಿ ವಿಧಾನಗಳಿಂದ ಕಂಪನಿ ಮುನ್ನಡೆಸಲು ಸಾಧ್ಯವಾಗಿದೆ, ಕ್ಯೂ 2ನಲ್ಲಿ ಟಿಸಿಎಸ್​ 10.2 ಮಿಲಿಯನ್​ ಕಲಿಕೆಯಾಗಿದ್ದು, ಹಿಂದಿನ ತ್ರೈಮಾಸಿಕಕ್ಕಿಂತೆ ಶೇ 29ರಷ್ಟು ವೃದ್ಧಿಯಾಗಿದೆ, ಉದ್ಯೋಗಿಗಳಿಗೆ ಹಲವು ವಿಧಾನದ ಮೂಲಕ ತರಬೇತಿ ನೀಡಲಾಗಿದೆ ಎಂದು ಟಿಸಿಎಸ್​ ತಿಳಿಸಿದೆ.

  ಹೂಡಿಕೆ, ಪ್ರಗತಿಪರ ಮಾನವ ಸಂಪನ್ಮೂಲ ನೀತಿ, ಸಂಸ್ಕೃತಿಗಳ ಸಬಲೀಕರಣದಿಂದ ಪ್ರತಿಭೆಗಳನ್ನು ಉಳಿಸಿಕೊಳ್ಳುವಲ್ಲಿ ಜಾಗತಿಕ ಉದ್ಯಮದಲ್ಲಿ ಟಿಸಿಎಸ್​ ಹೆಸರು ಮಾಡಿದೆ. ಎಲ್ಲಾ ಸಮಯದಲ್ಲಿಯೂ ಅದ್ಭತು ಸೇವೆ ಸಲ್ಲಿಸಿರುವ ಕಂಪನಿಯ ಉದ್ಯೋಗಿಗಳಿಗೆ ಇದೇ ವೇಳೆ ಧನ್ಯವಾದ ತಿಳಿಸುತ್ತೇವೆ ಎಂದಿದ್ದಾರೆ.

  ಕೊರೋನಾ ಸಂದರ್ಭದಲ್ಲಿ ನೌಕರರ ಕಾಳಜಿಗೆ ಮುಂದಾಗಿದ್ದ ಕಂಪನಿ, ಶೇ 75 ರಷ್ಟು ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವ ಸೇವೆ ನೀಡಿತು.
  Published by:Seema R
  First published: