Kerala High Court: ಪತ್ನಿಯ ರೂಪ ಇತರ ಸ್ತ್ರೀಯರೊಂದಿಗೆ ಹೋಲಿಸುವುದು ಮಾನಸಿಕ ಕ್ರೌರ್ಯ

13 ವರ್ಷಗಳ ಹಿಂದೆ ಕ್ರೂರತೆಯ ಹಿನ್ನಲೆಯಲ್ಲಿ ಪತ್ನಿಯು ವಿಚ್ಛೇದನವನ್ನು ಆಗ್ರಹಿಸಿ ದೂರು ನೀಡಿದ್ದರು. ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯವು ದಂಪತಿಗಳ ವಿವಾಹವನ್ನು ರದ್ದುಗೊಳಿಸಿ ಕ್ರೂರ ನಡವಳಿಕೆ ಹಾಗೂ ಹಿಂಸಾಚಾರದ ಸಮಯದಲ್ಲಿ ಮಹಿಳೆಯು ಪತಿಯ ವರ್ತನೆಯನ್ನು ಸಹಿಸಿಕೊಂಡಿರುತ್ತಾಳೆ ಎಂಬುದನ್ನು ನಿರೀಕ್ಷಿಸುವುದು ತಪ್ಪು ಎಂದು ನ್ಯಾಯಪೀಠ ತಿಳಿಸಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ದಾಂಪತ್ಯ ಜೀವನದಲ್ಲಿ ಪತಿ (Husband) ಪತ್ನಿಯರಿಬ್ಬರೂ (Wife) ಸಾಮರಸ್ಯದಿಂದ ಜೀವನ ನಡೆಸಬೇಕು ಆಗ ಮಾತ್ರವೇ ಸಂಸಾರವೆಂಬ ತೇರು ನಿರ್ವಿಘ್ನವಾಗಿ ಮುನ್ನಡೆಯಲು ಸಾಧ್ಯ ಎಂಬುದು ನಮಗೆಲ್ಲಾ ಗೊತ್ತೇ ಇದೆ. ಪತ್ನಿಯ ಇಚ್ಛೆಗಳಿಗೆ ಗೌರವ (Respect) ಕೊಟ್ಟು ಅಂತೆಯೇ ಪತಿಯ ಇಷ್ಟಾನಿಷ್ಟಾಗಳನ್ನು ಗಮನದಲ್ಲಿಟ್ಟುಕೊಂಡು ದಂಪತಿಗಳಿಬ್ಬರೂ ಮುನ್ನಡೆಯಬೇಕು. ಮಾನಸಿಕವಾಗಿ ಹಾಗೂ ದೈಹಿಕವಾಗಿ ಇಬ್ಬರೂ ನೋವಿಗೆ ಒಳಗಾದಲ್ಲಿ ಅದೊಂದು ಮಾರಕ ದುಃಖವಾಗಿ ಸುಖ ಸಂಸಾರವನ್ನೇ (Family) ಹಾಳುಗೆಡವಬಹುದು. ಅದಾಗ್ಯೂ ದೇಶದಲ್ಲಿ ಕೌಟುಂಬಿಕ ಹಿಂಸಾಚಾರ ಒಂದಿಲ್ಲೊಂದು ಬಗೆಯಲ್ಲಿ ನಡೆಯುತ್ತಲೇ ಇದೆ. ಇಂದಿಗೂ ಕೆಲವೊಂದು ಕಡೆಗಳಲ್ಲಿ ಪತ್ನಿಯ ಇಷ್ಟಗಳಿಗೆ ಬೆಲೆ ಇಲ್ಲ ಹಾಗೂ ಆಕೆಯ ಮೇಲೆ ಪತಿಯ ಮತ್ತು ಮನೆಯವರ ಶೋಷಣೆ ನಿರಂತರವಾಗಿ ನಡೆಯುತ್ತಲೇ ಇದೆ. ಇಂತಹ ಸಮಯದಲ್ಲಿ ವಿಚ್ಛೇದನವೊಂದೇ (Divorce) ಸೂಕ್ತಮಾರ್ಗವಾಗಿ ತೋರುತ್ತದೆ.

13 ವರ್ಷಗಳ ಹಿಂದೆ ಕ್ರೂರತೆಯ ಹಿನ್ನಲೆಯಲ್ಲಿ ಪತ್ನಿಯು ವಿಚ್ಛೇದನವನ್ನು ಆಗ್ರಹಿಸಿ ದೂರು ನೀಡಿದ್ದರು. ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯವು ದಂಪತಿಗಳ ವಿವಾಹವನ್ನು ರದ್ದುಗೊಳಿಸಿ ಕ್ರೂರ ನಡವಳಿಕೆ ಹಾಗೂ ಹಿಂಸಾಚಾರದ ಸಮಯದಲ್ಲಿ ಮಹಿಳೆಯು ಪತಿಯ ವರ್ತನೆಯನ್ನು ಸಹಿಸಿಕೊಂಡಿರುತ್ತಾಳೆ ಎಂಬುದನ್ನು ನಿರೀಕ್ಷಿಸುವುದು ತಪ್ಪು ಎಂದು ನ್ಯಾಯಪೀಠ ತಿಳಿಸಿದೆ.

ಮೂದಲಿಕೆ ಅಪಹಾಸ್ಯ ಮಾನಸಿಕ ಕಿರುಕುಳಕ್ಕೆ ಸಮ:
ಪತ್ನಿಯು ತನ್ನ ಆಸೆಗಳನ್ನು ಕಾಮನೆಗಳನ್ನು ಪೂರೈಸುತ್ತಿಲ್ಲ ಎಂದು ಹಾಗೂ ಇತರ ಮಹಿಳೆಯರೊಂದಿಗೆ ಪತ್ನಿಯನ್ನು ಹೋಲಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮನಾದುದು ಎಂದು ಕೇರಳ ಹೈಕೋರ್ಟ್ ತಿಳಿಸಿದೆ. ದಂಪತಿಗಳಿಗೆ ವಿಚ್ಛೇದನವನ್ನು ನೀಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶದ ವಿರುದ್ಧ ಮಹಿಳೆಯ ಪತಿಯು ಮೇಲ್ಮನವಿ ಸಲ್ಲಿಸಿದ್ದನು. ಈ ಸಮಯದಲ್ಲಿ ನ್ಯಾಯಾಲಯವು ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸಿ ಮಹಿಳೆಯ ಮೇಲೆ ನಡೆಸುವ ಮೂದಲಿಕೆಗಳು, ಅಪಹಾಸ್ಯಗಳು ಮಾನಸಿಕ ಕಿರುಕುಳಕ್ಕೆ ಸಮನಾದುದು ಎಂಬುದಾಗಿ ತೀರ್ಪಿತ್ತಿದೆ.

ಇದನ್ನೂ ಓದಿ: Burqa Arrest: ಬುರ್ಖಾ ಧರಿಸಿ ಗರ್ಲ್​ಫ್ರೆಂಡ್ ಭೇಟಿಗೆ ಬಂದ ಯುವಕ! ಮುಂದೆ ಆಗಿದ್ದೇ ಬೇರೆ!

ನೊಂದ ಮಹಿಳೆಯು ಅರ್ಜಿಯಲ್ಲಿ ಪತಿಯ ವಿರುದ್ಧ ದೋಷರೋಪಗಳನ್ನು ಮಾಡಿದ್ದು, 2009 ರಲ್ಲಿ ವಿವಾಹವಾದ ಸಮಯದಿಂದಲೂ ಪತಿಯು ಆಕೆಯ ಮೇಲೆ ಅನುರಕ್ತನಾಗಿರಲಿಲ್ಲ ಅಂತೆಯೇ ಅಸಹ್ಯಕರ ವಸ್ತುವಂತೆ ನೋಡುತ್ತಿದ್ದನು ಹಾಗೂ ದೈಹಿಕವಾಗಿ ಆಕರ್ಷಣೀಯವಾಗಿಲ್ಲ ಎಂಬುದಾಗಿ ಮೂದಲಿಸುತ್ತಿದ್ದನು ಎಂದು ಆರೋಪಿಸಿದ್ದಾರೆ.

ತನ್ನ ಆಸೆ ಆಕಾಂಕ್ಷೆಗಳಿಗೆ ಆಕೆಯು ಸರಿಸಮನಾಗಿಲ್ಲ ಎಂಬ ಭಾವನೆ ಪತಿಗಿದ್ದು ಈ ವಿಷಯವನ್ನು ಆತ ಸ್ವತಃ ಬಾಯಿಬಿಟ್ಟು ಹೇಳಿರುವುದಾಗಿಯೂ ಮಹಿಳೆ ಹೇಳಿಕೊಂಡಿದ್ದು, ತಾನು ಇದುವರೆಗೆ ಭೇಟಿಮಾಡಿರುವ ಮಹಿಳೆಯರಂತೆ ಆಕೆ ಸುಂದರವಾಗಿಲ್ಲವೆಂದು ಟೀಕಿಸುತ್ತಿದ್ದನು ಎಂಬುದಾಗಿ ಆಕೆ ಬೇಸರಿಸಿಕೊಂಡಿದ್ದಾಳೆ. ವಿವಾಹವಾಗಿ ಬರೇ ಒಂದು ತಿಂಗಳ ಕಾಲ ಮಾತ್ರ ಅವರು ಜೊತೆಯಾಗಿದ್ದರು ಎಂಬುದು ಕೂಡ ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.

ಮಾನಸಿಕ ಕ್ರೌರ್ಯಕ್ಕೆ ಪುಷ್ಟಿನೀಡುವ ಅಂಶಗಳಾವುವು?
ಪತಿಯ ಮೇಲ್ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯವು, ಸಾಮಾಜಿಕ ಪರಿಕಲ್ಪನೆಗಳು ಹಾಗೂ ಜೀವನ ಮಟ್ಟಗಳ ಸುಧಾರಣೆಗೆ ಅನುಗುಣವಾಗಿ ಕ್ರೌರ್ಯವು ಬದಲಾವಣೆಗೊಳ್ಳುವುದರಿಂದ ಇದರ ಕುರಿತು ಸಮಗ್ರ ವ್ಯಾಖ್ಯಾನವನ್ನು ನೀಡುವುದು ಕಷ್ಟಕರ ಎಂದು ಹೇಳಿದೆ. ನಿರಂತರವಾದ ದುರ್ವರ್ತನೆ, ವೈವಾಹಿಕ ಸಂಭೋಗವನ್ನು ನಿಲ್ಲಿಸುವುದು, ಗಂಡನ ಉದಾಸೀನತೆ, ಹೆಂಡತಿ ಕಳಂಕಿತಳು ಎಂಬ ಪತಿಯ ಪ್ರತಿಪಾದನೆಯು ಮಾನಸಿಕ ಇಲ್ಲವೇ ಕಾನೂನು ಕ್ರೌರ್ಯಕ್ಕೆ ಕಾರಣವಾಗುವ ಅಂಶಗಳಾಗಿವೆ ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: Kiss Of Death: ಪ್ರೇಯಸಿಯ ಒಂದು ಮುತ್ತಿಗೆ ಪ್ರೇಮಿ ಸಾವು, ಜೈಲಿನಲ್ಲಿದ್ದ ಯುವಕನ ಪ್ರಾಣ ಕಸಿದ ಪ್ರೀತಿ!

ದೈಹಿಕ ಕ್ರೌರ್ಯದಲ್ಲಿ ನೇರ ಸಾಕ್ಷ್ಯಗಳಿರಬಹುದು ಆದರೆ ಮಾನಸಿಕ ಕ್ರೌರ್ಯದಲ್ಲಿ ಸಾಕ್ಷ್ಯಗಳಿರುವುದಿಲ್ಲ, ಈ ಸಮಯದಲ್ಲಿ ಕ್ರೌರ್ಯವನ್ನು ನಿರೂಪಿಸಲು ದೂರು ಗಂಭೀರವಾಗಿರಬೇಕು ಹಾಗೂ ಪರಸ್ಪರ ಸಂಗಾತಿಗಳು ಜೊತೆಯಾಗಿ ಬಾಳಲು ಸಾಧ್ಯವಿಲ್ಲವೆಂಬ ತೀರ್ಮಾನಕ್ಕೆ ಒಳಪಟ್ಟಿರಬೇಕು. ಮೌಖಿಕ ನಿಂದನೆ ಹಾಗೂ ಅಸಭ್ಯ ಭಾಷೆಯನ್ನು ಬಳಸುವ ಅವಮಾನವನ್ನು ಕ್ರೌರ್ಯವು ಒಳಗೊಂಡಿರುತ್ತದೆ ಅಂತೆಯೇ ಇದು ಇತರ ವ್ಯಕ್ತಿಯ ಮಾನಸಿಕ ಶಾಂತಿಯ ನಿರಂತರ ಭಂಗಕ್ಕೆ ಕಾರಣವಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.
Published by:Ashwini Prabhu
First published: