ಸಾಲದ ಸುಳಿಯಲ್ಲಿ ಸಿಲುಕಿರುವ ಏರ್ ಇಂಡಿಯಾ(Air India) ವನ್ನು ಟಾಟಾ ಸನ್ಸ್(Tata Sons) ಹರಾಜಿನಲ್ಲಿ 18,000 ಕೋಟಿ ರೂ.ಗಳ ಮೂಲಕ ತನ್ನದಾಗಿಸಿಕೊಂಡು ಇತಿಹಾಸ ಸೃಷ್ಟಿಸಿದೆ. ತಾನು ಸ್ಥಾಪಿಸಿದ ವಿಮಾನಯಾನ ಸಂಸ್ಥೆ ತಾಯ್ನಾಡಿಗೆ ಬಂದ ಕ್ಷಣವಾಗಿದೆ ಎಂದು ಸರ್ಕಾರ ಹೇಳಿದ್ದು, ವಿಮಾನಯಾನದ ನಿಯಂತ್ರಣವನ್ನು ಹಸ್ತಾಂತರಿಸಿದೆ. ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಮಿತಿಯು ಟಾಟಾ ಸಂಸ್ಥೆಗೆ ಅನುಮೋದನೆ ನೀಡಿದೆ. ಏರ್ ಇಂಡಿಯಾ ತಾಂತ್ರಿಕ ಬಿಡ್ನಲ್ಲಿ ಒಟ್ಟು ನಾಲ್ಕು ಸಂಸ್ಥೆಗಳು ಬಿಡ್ ಮಾಡಿದ್ದವು. ಆದರೆ ಹಣಕಾಸು ಬಿಡ್ನಲ್ಲಿ ಟಾಟಾ ಗ್ರೂಪ್ ಮತ್ತು ಸ್ಪೈಸ್ಜೆಟ್ ಅಧ್ಯಕ್ಷ ಅಜಯ್ ಸಿಂಗ್ ಮಾತ್ರ ಉಳಿದುಕೊಂಡಿದ್ದರು. ಅಜಯ್ ಸಿಂಗ್ ಸಂಸ್ಥೆಯ ಬದಲು ತಮ್ಮ ವೈಯಕ್ತಿಕ ಸಾಮರ್ಥ್ಯದ ಮೇಲೆ ಬಿಡ್ ಮಾಡಿದ್ದರು. ಅವರ ಬಿಡ್ ಸುಮಾರು 15,100 ಕೋಟಿ ರೂಪಾಯಿ ಆಗಿತ್ತು. ಇದೀಗ ಟಾಟಾ ಸನ್ಸ್ ಹೆಚ್ಚಿನ ಮೊತ್ತವನ್ನು ಬಿಡ್ ಮಾಡಿ ಈ ಬಿಡ್ ಗೆದ್ದುಕೊಂಡಿದೆ.
ಏರ್ ಇಂಡಿಯಾದ ಒಟ್ಟು ಸಾಲ 61,560 ಕೋಟಿ
ಸರ್ಕಾರ ಏರ್ ಇಂಡಿಯಾ ಹರಾಜನ್ನು 12,906 ಕೋಟಿಗೆ ನಿಗದಿಪಡಿಸಿತ್ತು. 18,000 ಕೋಟಿ ರೂ.ಗಳ ಮೂಲಕ ಟಾಟಾ ಗ್ರೂಪ್ ಹರಾಜನ್ನು ಗೆದ್ದಿದ್ದು, ಇದೇ ವರ್ಷ ಡಿಸೆಂಬರ್ ಗೆ ಸರ್ಕಾರದ ಅಧೀನ ಅವಧಿ ಮುಕ್ತಾಯವಾಗಲಿದೆ. ಆಗಸ್ಟ್ 31 ರ ಹೊತ್ತಿಗೆ ಏರ್ ಇಂಡಿಯಾದ ಒಟ್ಟು ಸಾಲ 61,560 ಕೋಟಿ ಎಂದು ಪಾಂಡೆ ಹೇಳಿದರು. ಟಾಟಾ ಸ್ವಾಧೀನಪಡಿಸಿಕೊಳ್ಳುವ ಸಾಲವು 15,300 ಕೋಟಿಯಾಗಿದ್ದು, 46,262 ಕೋಟಿ ಏರ್ ಇಂಡಿಯಾ ಅಸೆಟ್ ಹೋಲ್ಡಿಂಗ್ಸ್ ಲಿಮಿಟೆಡ್ ನಲ್ಲಿ ಉಳಿಯುತ್ತದೆ. ಇದು ವಿಶೇಷ ಉದ್ದೇಶದ ವಾಹನವಾಗಿದ್ದು, ಇದು ನಾನ್ ಕೋರ್ ಆಸ್ತಿಗಳು, ಭೂಮಿ ಮತ್ತು ಏರ್ ಇಂಡಿಯಾದ ಸಾಲವನ್ನು ಉಳಿಸಿಕೊಳ್ಳಲು ರಚಿಸಲಾಗಿದೆ.
ಪಾರದರ್ಶಕ ಹರಾಜಿಗೆ ಹೊತ್ತು
ಹರಾಜಿನ ಸ್ಪರ್ಧಾತ್ಮಕ ಪ್ರಕ್ರಿಯೆಯನ್ನು ಪಾರದರ್ಶಕ ರೀತಿಯಲ್ಲಿ ನಡೆಸಲಾಗಿದೆ ಎಂದು ಡಿಐಪಿಎಎಂ ಕಾರ್ಯದರ್ಶಿ ತುಹಿನ್ ಕಾಂತಾ ಪಾಂಡೆ ಹೇಳಿದರ. ಬಿಲ್ಡರ್ಗಳು "ನಗದು ಪರಿಗಣನೆಗೆ ಉದ್ಯಮ ಮೌಲ್ಯದ ಕನಿಷ್ಠ 15 ಪ್ರತಿಶತ" ವನ್ನು ಉಲ್ಲೇಖಿಸಬೇಕಾಗಿತ್ತು. ಬಿಡ್ಡರ್ಗಳು "ಉಳಿಸಿಕೊಂಡಿರುವ ಸಾಲಕ್ಕಾಗಿ ಉಲ್ಲೇಖಿಸಿದ ಎಂಟರ್ಪ್ರೈಸ್ ಮೌಲ್ಯದ ಗರಿಷ್ಠ 85 ಪ್ರತಿಶತ" ವನ್ನು ಉಲ್ಲೇಖಿಸಬೇಕು ಎಂದು ಅಧಿಕಾರಿ ಹೇಳಿದರು. ಮೀಸಲು ಬೆಲೆಯನ್ನು "ಮೊಹರು ಮಾಡಿದ ಹಣಕಾಸು ಬಿಡ್ಗಳನ್ನು ತೆರೆಯುವ ಮೊದಲು" ನಿಗದಿಪಡಿಸಲಾಗಿದೆ ಎಂದು ಡಿಐಪಿಎಎಮ್ ಕಾರ್ಯದರ್ಶಿ ಸ್ಪಷ್ಟಪಡಿಸಿದರು. ಹಣಕಾಸಿನ ಬಿಡ್ ನಂತರ ನಿಯಮಗಳು ಮತ್ತು ಷರತ್ತುಗಳನ್ನು ಮಾತುಕತೆ ನಡೆಸಿಲ್ಲ ಎಂದು ಹೇಳಿದರು.
ಕಳೆದ 15 ವರ್ಷಗಳಿಂದ ನಷ್ಟದಲ್ಲಿ ಏರ್ ಇಂಡಿಯಾ
ಕಳೆದ 15 ವರ್ಷಗಳಿಂದ ಲಾಭ ಗಳಿಸದ ಏರ್ ಇಂಡಿಯಾವನ್ನು ಮಾರಾಟ ಮಾಡುವುದು, ಆಸ್ತಿಯನ್ನು ಖಾಸಗೀಕರಣಗೊಳಿಸುವ ಸರ್ಕಾರದ ಮಹತ್ವಾಕಾಂಕ್ಷೆಯಲ್ಲಿ ಒಂದು ಪ್ರಮುಖ ಭಾಗವಾಗಿತ್ತು. ಖರೀದಿದಾರನನ್ನು ಹುಡುಕುವುದು ಕಷ್ಟಕರವಾಗಿತ್ತು ಏಕೆಂದರೆ ವಿಮಾನಯಾನ ಸಂಸ್ಥೆಯು ಮಹಾರಾಜ ಎಂದು ಅಡ್ಡಹೆಸರು ಹೊಂದಿದ್ದು- ದೀರ್ಘಕಾಲ ಉಳಿಯಲು ಹೆಣಗಾಡುತ್ತಿದೆ, ನಷ್ಟದಲ್ಲಿ ಮುಳುಗಿತ್ತು ಮತ್ತು ಇತರೆ ವಿಮಾನಯಾನ ಸಂಸ್ಥೆಗಳ ಸ್ಪರ್ಧೆಯಿಂದ ನಲುಗಿತ್ತು. 1932 ರಲ್ಲಿ ಸ್ಥಾಪನೆಯಾದ ಏರ್ಲೈನ್ಗಾಗಿ ಖರೀದಿದಾರರನ್ನು ಹುಡುಕಲು ಹಲವಾರು ಪ್ರಯತ್ನಗಳನ್ನು ಮಾಡಬೇಕಾಯಿತು.
ಟಾಟಾ ಸಂಸ್ಥೆಗೆ ಸಿಗಲಿದೆ ವಿಶೇಷ ಸೌಲಭ್ಯ
ಸಾಲದ ಹೊರತಾಗಿಯೂ, ಏರ್ ಇಂಡಿಯಾ ಕೆಲವು ಅಮೂಲ್ಯವಾದ ವಾಯುಯಾನ ಸ್ವತ್ತುಗಳನ್ನು ನೀಡುತ್ತದೆ. ಟಾಟಾ ಗ್ರೂಪ್ ಈಗ ಕಾರ್ಯನಿರತ ವಿದೇಶಿ ವಿಮಾನ ನಿಲ್ದಾಣಗಳಲ್ಲಿ ಸ್ಲಾಟ್ಗಳಿಗೆ ಪ್ರವೇಶವನ್ನು ಪಡೆಯುತ್ತೆ. ಈ ಒಪ್ಪಂದವು ಏರ್ ಇಂಡಿಯಾದ ಲಾಭದಾಯಕವಾದ ಕಡಿಮೆ ವೆಚ್ಚದ ಏರ್ ಇಂಡಿಯಾ ಎಕ್ಸ್ಪ್ರೆಸ್ ಮತ್ತು ಭಾರತದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸರಕು ಮತ್ತು ನೆಲ ನಿರ್ವಹಣಾ ಸೇವೆಗಳನ್ನು ಒದಗಿಸುವ AISATS ನ ಶೇ.50ರನ್ನು ಟಾಟಾಗೆ ಪ್ಯಾಕೇಜ್ ಮಾಡಲಿದೆ.
Published by:Kavya V
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ