Air India ಹರಾಜಾಗಿರುವುದು ಸುಳ್ಳು, ಶೀಘ್ರದಲ್ಲೇ ಈ ಬಗ್ಗೆ ಸ್ಪಷ್ಟೀಕರಣ ನೀಡುವುದಾಗಿ ತಿಳಿಸಿದ DIPAM

Tata Sons Buys Air India: ಎಲ್ಲೆಡೆ ಹರಿದಾಡುತ್ತಿರೋ ಈ ಸುದ್ದಿ ಸುಳ್ಳು ಎಂದು DIPAM ಹೇಳಿದೆ. ಏರ್ ಇಂಡಿಯಾ ಮಾರಾಟವಾಗಿರುವುದು ಊಹಾಪೋಹಗಳಷ್ಟೇ. ಈ ಬಗ್ಗೆ ಅಧಿಕೃತ ಹೇಳಿ ಹೊರಬೀಳುವುದಾಗಿ ತಿಳಿಸಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಸಾಲದ ಸುಳಿಯಿಂದ ಹೊರಬರಲಾಗದೆ ಸಂಕಷ್ಟಕ್ಕೆ ಸಿಲುಕಿದ್ದ ಏರ್ ಇಂಡಿಯಾದ(Air India) ಉಕ್ಕಿನ ಹಕ್ಕಿಗಳ ಹೊಣೆಯನ್ನ ಯಾರು ಹೊತ್ತುಕೊಳ್ಳುತ್ತಾರೆ ಎಂಬ ಪ್ರಶ್ನೆ ಎಲ್ಲರನ್ನ ಕಾಡುತ್ತಿತ್ತು. ಇದೀಗ ಆ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಹರಾಜಿನಲ್ಲಿ ಟಾಟಾ ಸಮೂಹ ಸಂಸ್ಥೆ ಏರ್(Tata Group) ಇಂಡಿಯಾವನ್ನು ಖರೀದಿಸಿದೆ. ಇಂದು ಭಾರತೀಯ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯ ಖರೀದಿ ಸಂಬಂಧ ಹರಾಜು ನಡೆಸಲಾಯಿತು.ಈ ಹರಾಜು ಪ್ರಕ್ರಿಯೆಯಲ್ಲಿ ಹಲವಾರು ಸಂಸ್ಥೆಗಳು ಭಾಗಿಯಾಗಿದ್ದವು. ಅಂತಿಮವಾಗಿ ಟಾಟಾ ಸನ್ಸ್ ಸಂಸ್ಥೆ(Tata Son's) ಏರ್ ಇಂಡಿಯಾ ಸಂಸ್ಥೆಯನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಬಹುದೊಡ್ಡ ಮೊತ್ತ ನೀಡಿ ಖರೀದಿ ಮಾಡಲಾಗಿದೆ ಎಂದು ಹೇಳಲಾಗುತಿತ್ತು. ಆದರೆ ಅವೆಲ್ಲ ಸುಳ್ಳು ವದಂತಿಗಳು ಎಂದು  DIPAM ತಿಳಿಸಿದೆ, 

  ಏರ್ ಇಂಡಿಯಾ ಸಂಸ್ಥೆಯನ್ನು ಖರೀದಿಸಲು ಬಿಡ್ ಸಲ್ಲಿಸಿದ್ದ ಸಂಸ್ಥೆಗಳ ಪೈಕಿ ಟಾಟಾ ಸನ್ಸ್ ಹಾಗೂ ಸ್ಪೈಸ್ ಜೆಟ್ ಸಂಸ್ಥೆಗಳು ಪ್ರಮುಖ ಸಂಸ್ಥೆಗಳಾಗಿದ್ದವು. ಈ ಪೈಕಿ ಅಂತಿಮವಾಗ ಏರ್ ಇಂಡಿಯಾವನ್ನು ಖರೀದಿಸಲು ಸಲ್ಲಿಸಿದ್ದ ಫೈನಲ್ ಬಿಡ್ ಟಾಟಾ ಸಮೂಹ ಸಂಸ್ಥೆ ಪಾಲಾಗಿದೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಎಲ್ಲೆಡೆ ಹರಿದಾಡುತ್ತಿರೋ ಈ ಸುದ್ದಿ ಸುಳ್ಳು ಎಂದು DIPAM ಹೇಳಿದೆ. ಏರ್ ಇಂಡಿಯಾ ಮಾರಾಟವಾಗಿರುವುದು ಊಹಾಪೋಹಗಳಷ್ಟೇ. ಈ ಬಗ್ಗೆ ಅಧಿಕೃತ ಹೇಳಿ ಹೊರಬೀಳುವುದಾಗಿ ತಿಳಿಸಿದೆ

  ಹಳೆಯ ಮಾಲೀಕರನ್ನೇ ಸೇರಿದ ಉಕ್ಕಿನ ಹಕ್ಕಿಗಳು!

  ಸಾಲ್ಟ್-ಟು-ಸಾಫ್ಟ್ ವೇರ್ ಸಮೂಹವೂ ಸೆಪ್ಟೆಂಬರ್ 15ರಂದು ವಿಮಾನಯಾನಕ್ಕಾಗಿ ಅಂತಿಮ ಬಿಡ್ ಸಲ್ಲಿಸಿತ್ತು. ಸ್ಪೈಸ್ ಜೆಟ್ ಪ್ರವರ್ತಕ ಅಜಯ್ ಸಿಂಗ್ ಕೂಡ ಬಿಡ್ ನಲ್ಲಿ ಪಾಲ್ಗೊಂಡಿದ್ದರು.ಈ ಹಿಂದೆ ಏರ್ ಇಂಡಿಯಾ ಟಾಟಾ ಗ್ರೂಪ್ ಕಂಪನಿಯಾಗಿತ್ತು. ಈ ಕಂಪನಿಯನ್ನು ಜೆಆರ್ ಡಿ ಟಾಟಾ 1932ರಲ್ಲಿ ಸ್ಥಾಪಿಸಿತ್ತು. ಸ್ವಾತಂತ್ರ್ಯ ಬಂದ ನಂತರ ವಾಯುಮಾನ ವಲಯವನ್ನು ರಾಷ್ಟ್ರೀಕರಣಗೊಳಿಸಲಾಗಿತ್ತು.  ಇದನ್ನೂ ಓದಿ: UNGA ನಲ್ಲಿ ಪ್ರಧಾನಿ ಮೋದಿ ಮಾಡಿದ ಭಾಷಣವೇ ವಿಶ್ವಕ್ಕೆ ಸಂದೇಶವಾಗಿದೆ; ಯುಎನ್ ರಾಯಭಾರಿ ತಿರುಮೂರ್ತಿ

  ಜುಲೈ 29, 1946ರಂದು ಏರ್ ಇಂಡಿಯಾ ಎಂದು ಮರು ನಾಮಕರಣ ಮಾಡಲಾಗಿತ್ತು. 1953 ರಲ್ಲಿ ಸರ್ಕಾರವು ಏರ್ ಕಾರ್ಪೊರೇಷನ್ ಕಾಯ್ದೆಯನ್ನು ಅಂಗೀಕರಿಸಿತ್ತು. ಹಾಗೂ ಕಂಪನಿಯ ಸ್ಥಾಪಕ ಜೆಆರ್ ಡಿ ಟಾಟಾ ಅವರಿಂದ ಮಾಲೀಕತ್ವದ ಹಕ್ಕುಗಳನ್ನು ಸರ್ಕಾರ ಖರೀದಿಸಿತು. ಇದಾದ ಬಳಿಕ ಈ ಕಂಪನಿಯನ್ನ ಏರ್ ಇಂಡಿಯಾ ಇಂಟರ್ ನ್ಯಾಷನಲ್ ಲಿಮಿಟೆಡ್ ಎಂದು ಹೆಸರಿಡಲಾಯಿತು.

  ಗೃಹ ಸಚಿವ ಅಮಿತ್ ಶಾ ನೇತೃತ್ವದ ರಾಷ್ಟ್ರೀಯ ವಾಹಕ ಬಂಡವಾಳ ಹೂಡಿಕೆಯ ಮಂತ್ರಿಗಳ ಸಮಿತಿಯು ಸಭೆ ನಡೆಸಲಿದೆ. ಈ ಸಮಿತಿಯ ಅನುಮೋದನೆ ನಂತರವಷ್ಟೇ ಔಪಚಾರಿಕ ಘೋಷಣೆಯನ್ನು ಮಾಡಲಾಗುತ್ತದೆ. ಸ್ಪೈಸ್ ಜೆಟ್ ಹಾಗೂ ಟಾಟಾ ಸನ್ಸ್ ನಡುವೆ ತೀವ್ರ ಪೈಪೋಟಿ  ನಡೆಯುತ್ತಿದೆ ಎನ್ನಲಾಗಿದೆ.  ಹರಾಜಿನಲ್ಲಿ 20,000 ಕೋಟಿಗೆ ಏರ್ ಇಂಡಿಯಾ ಟಾಟಾ ಸನ್ಸ್ ಪಾಲಾಗಿದೆ ಎಂದು ಹೇಳಲಾಗುತ್ತಿತ್ತು.

  ಇದನ್ನೂ ಓದಿ: ರಾಜೀವ್ ಗಾಂಧಿ ಹತ್ಯೆಯಾದ 30 ವರ್ಷಗಳ ಬಳಿಕ ನಿವೃತ್ತಿಯ ದಿನ ರಕ್ತಸಿಕ್ತ ಕ್ಯಾಪ್-ಬ್ಯಾಡ್ಜ್ ಪಡೆದ ಪೊಲೀಸ್ ಅಧಿಕಾರಿ

  ಸುಮಾರು 60,000 ಕೋಟಿ ರುಪಾಯಿಗೂ ಅಧಿಕ ಸಾಲದ ಹೊರೆ ಹೊತ್ತುಕೊಂಡಿರುವ ಏರ್ ಇಂಡಿಯಾ ಪುನಶ್ಚೇತನಕ್ಕಾಗಿ ಸರ್ಕಾರ ಇನ್ನಿಲ್ಲದ್ದಂತೆ ಯತ್ನಿಸಿ ಸೋತಿದೆ. 6 ವಿಮಾನ ನಿಲ್ದಾಣಗಳಲ್ಲಿ ಏರ್ ಇಂಡಿಯಾ ವಿಮಾನ ಹಾರಾಟ ನಡೆಸಿರಲಿಲ್ಲ. 2019 ರ ಮಾರ್ಚ್ 31ರ ಲೆಕ್ಕಾಚಾರದಂತೆ ಏರ್ ಇಂಡಿಯಾ ಸಂಸ್ಥೆಯ ಸಾಲ 60,074 ಕೋಟಿ ಆಗಿದೆ. ತನ್ನ ಪಾಲಿನ ಶೇಕಡಾ 76ರಷ್ಟು ಷೇರು ಮಾರಾಟಕ್ಕಿಟ್ಟರೂ ಖರೀದಿದಾರರು ಇಲ್ಲದ್ದಂತಾಗಿತ್ತು. ಏರ್ ಇಂಡಿಯಾ ಬದಲಿಗೆ ಜೆಟ್ ಏರ್ ಲೈನ್ಸ್ ಖರೀದಿಯತ್ತ ಟಾಟಾ ಸಮೂಹ ಸಂಸ್ಥೆ ಹೆಚ್ಚಿನ ಆಸಕ್ತಿ ವಹಿಸಿತ್ತು.

  ವರದಿ: ವಾಸುದೇವ್ ಎಂ
  Published by:Sandhya M
  First published: