ನಾಯಕತ್ವ ರಚನೆಯ ಬದಲಾವಣೆಗೆ ಸಿಇಒ ಹುದ್ದೆ ಸೃಷ್ಟಿಸಲು ಮುಂದಾದ ಟಾಟಾ ಸನ್ಸ್‌ ಕಂಪನಿ..!

ಜುಲೈನಲ್ಲಿ ಭಾರತೀಯ ಪತ್ರಿಕೆಯೊಂದು  ಚಂದ್ರಶೇಖರನ್‌ರ ಮುಖ್ಯಸ್ಥ ಅವಧಿಯ ವಿಸ್ತರಣೆಯನ್ನು ಅನೌಪಚಾರಿಕವಾಗಿ ಅನುಮೋದಿಸಲಾಗಿದೆ ಎಂದು ವರದಿ ಮಾಡಿದ ನಂತರ, ರತನ್ ಟಾಟಾ, ಈ ಸಂಬಂಧ ಮಂಡಳಿಯು ನಿರ್ಧಾರ ತೆಗೆದುಕೊಂಡಿಲ್ಲ ಮತ್ತು ಈ ವಿಷಯದ ಬಗ್ಗೆ ಯಾರೂ ಅವರನ್ನು ಸಂಪರ್ಕಿಸಿಲ್ಲ ಎಂದು ಹೇಳಿದ್ದರು. 

ರತನ್ ಟಾಟಾ.

ರತನ್ ಟಾಟಾ.

  • Share this:
ಉಪ್ಪಿನಿಂದ ಸಾಫ್ಟ್‌ವೇರ್‌ ಉದ್ಯಮದವರೆಗೆ 106 ಬಿಲಿಯನ್ ಡಾಲರ್ ಮೌಲ್ಯದ ಟಾಟಾ ಸಮೂಹದ ಭಾಗವಾಗಿರುವ ಟಾಟಾ ಸನ್ಸ್‌ ಲಿಮಿಟೆಡ್‌ (TATA Sons limited) ಕಂಪನಿ ಅಸ್ತಿತ್ವಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ನಾಯಕತ್ವ ರಚನೆಯ ನವೀಕರಣದ ಭಾಗವಾಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸ್ಥಾನವನ್ನು ಕ್ರಿಯೇಟ್‌ ಮಾಡಲು ಯೋಜಿಸುತ್ತಿದೆ ಎಂದು ವರದಿಗಳು ಹೇಳುತ್ತಿದೆ. ಈ ಬಗ್ಗೆ ಕಂಪನಿ ಇನ್ನೂ ಅಧಿಕೃತ ಹೇಳಿಕೆ ನೀಡದಿದ್ದರೂ, ಈ ರೀತಿಯ ಪ್ರಸ್ತಾವನೆ ಪರಿಗಣನೆಯಲ್ಲಿದೆ ಎಂದು ಮೂಲಗಳು ಬ್ಲೂಮ್‌ಬರ್ಗ್‌ಗೆ (Bloomberg) ತಿಳಿಸಿವೆ. ಉದ್ದೇಶಿತ ಯೋಜನೆಯ ಪ್ರಕಾರ, ಸಿಇಒ ಟಾಟಾ ಸಮೂಹದ ವಿವಿಧ ವ್ಯವಹಾರಗಳಿಗೆ ಮಾರ್ಗದರ್ಶನ ನೀಡುತ್ತಾರೆ, ಆದರೆ ಸಂಸ್ಥೆಯ ಮುಖ್ಯಸ್ಥರು ಷೇರುದಾರರ (Share Holder) ಪರವಾಗಿ ಮುಖ್ಯ ಕಾರ್ಯನಿರ್ವಾಹಕರ ಕಾರ್ಯನಿರ್ವಹಣೆಯನ್ನು ನೋಡಿಕೊಳ್ಳುತ್ತಾರೆ ಎಂದು ವರದಿ ಹೇಳಿದೆ.

ಅಲ್ಲದೆ, ಟಾಟಾ ಟ್ರಸ್ಟ್‌ಗಳನ್ನು ನಿಯಂತ್ರಿಸುವ 83 ವರ್ಷದ ಮುಖ್ಯಸ್ಥ ರತನ್ ಟಾಟಾ ಅವರ ಅನುಮೋದನೆ ಪಡೆಯುವುದು ಉದ್ದೇಶಿತ ಬದಲಾವಣೆಗಳನ್ನು ಕಾರ್ಯಗತಗೊಳಿಸುವಲ್ಲಿ ಪ್ರಮುಖವೆಂದು ಪರಿಗಣಿಸಲಾಗಿದೆ.

ಟಾಟಾ ಸನ್ಸ್‌ನ ಉದ್ದೇಶಿತ ಸಿಇಒ ಸ್ಥಾನಕ್ಕಾಗಿ ಟಾಟಾ ಸ್ಟೀಲ್ ಲಿಮಿಟೆಡ್‌ನ ಮುಖ್ಯಸ್ಥ ಸೇರಿದಂತೆ ವಿವಿಧ ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥರನ್ನು ಕಂಪನಿ ಪರಿಗಣಿಸುತ್ತಿದೆ ಎಂದೂ ಮೂಲಗಳು ಹೇಳಿದ್ದಾರೆ. ಹಾಗೆ,  ಟಾಟಾ ಸನ್ಸ್ ಪ್ರಸ್ತುತ ಮುಖ್ಯಸ್ಥ ನಟರಾಜನ್ ಚಂದ್ರಶೇಖರನ್ ಅವರ ಅಧಿಕಾರಾವಧಿಯನ್ನು ಫೆಬ್ರವರಿ 2022ರ ನಂತರವೂ ವಿಸ್ತರಿಸಲು ಪರಿಗಣಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆದರೂ, ಇವುಗಳ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ, ಮತ್ತು ಪರಿಗಣನೆಯಲ್ಲಿರುವ ಯೋಜನೆಯನ್ನು ಬದಲಾಯಿಸಬಹುದು ಎಂದೂ ಹೇಳಿದರು.
1991 ರಿಂದ 2012 ರವರೆಗೆ ಟಾಟಾ ಸನ್ಸ್‌ನ ಮಾಜಿ ಮುಖ್ಯಸ್ಥರಾಗಿದ್ದ ಹಾಗೂ ಕಂಪನಿಯ ನಿಯಂತ್ರಣ ಸಾಧಿಸಿದ್ದ ರತನ್ ಟಾಟಾ, 2016ರಲ್ಲಿ ಕಂಪನಿಯ ಮುಖ್ಯಸ್ಥರಾಗಿ ಪದಚ್ಯುತ ಗೊಂಡ ಸೈರಸ್ ಪಿ ಮಿಸ್ತ್ರಿ ವಿರುದ್ಧದ ಕಾನೂನು ಹೋರಾಟದಲ್ಲಿ ಜಯಗಳಿಸಿದ ಕೆಲ ತಿಂಗಳುಗಳ ನಂತರ ಈ ವರದಿ ಬಂದಿದೆ.

ಟಾಟಾ ಸನ್ಸ್ ಒಂದು ಪಟ್ಟಿ ಮಾಡದ ಸಂಸ್ಥೆಯಾಗಿಲ್ಲದಿದ್ದರೂ, ಪ್ರಸ್ತಾವಿತ ನಾಯಕತ್ವ ರಚನೆಯನ್ನು ಸಮಯಕ್ಕೆ ಅನುಗುಣವಾಗಿ ಕಾರ್ಯಗತಗೊಳಿಸಿದರೆ, ಏಪ್ರಿಲ್ 2022ರ ವೇಳೆಗೆ ಸಿಇಒ ಮತ್ತು ಮುಖ್ಯಸ್ಥರ ಪಾತ್ರವನ್ನು ದೇಶದ ಅಗ್ರ 500 ಪಟ್ಟಿಯಲ್ಲಿರುವ ಕಂಪನಿಗಳು ವಿಭಜಿಸಬೇಕೆಂಬ ಸೆಬಿಯ ಶಿಫಾರಸ್ಸಿಗೆ ಇದು ಅನುಗುಣವಾಗಿರುತ್ತದೆ ಎಂದು ತಿಳಿದುಬಂದಿದೆ.

ಇನ್ನು, ಕಂಪನಿಯ ಮೇಲೆ ವೃತ್ತಿಪರ ಮ್ಯಾನೇಜರ್ ಅನ್ನು ಸೇರಿಸುವುದರಿಂದ ಟಾಟಾ ಸಮೂಹದ ಪ್ರಸ್ತುತ ಅರೆ-ನಿವೃತ್ತ ಮುಖ್ಯಸ್ಥ ಎಮಿರಿಟಸ್ ಪಾತ್ರದಿಂದ ತನ್ನದೇ ಆದ ಪರಿವರ್ತನೆಯನ್ನು ಹೇಗೆ ಊಹಿಸಬಹುದು ಎಂಬುದರ ಕುರಿತು ಗಮನ ಸೆಳೆಯುತ್ತದೆ.
ರತನ್ ಟಾಟಾ ವ್ಯಾಪಾರ ನಿರ್ಧಾರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ ಎಂದು ಹೇಳುತ್ತಿದ್ದರೂ, ತಮ್ಮ ಟಾಟಾ ಟ್ರಸ್ಟ್‌ಗಳ ನಾಯಕತ್ವದ ಮೂಲಕ ಸಮೂಹದ ನಿರ್ವಹಣೆಯ ಮೇಲೆ ಗಣನೀಯ ಪ್ರಭಾವವನ್ನು ಹೊಂದಿದ್ದಾರೆ.

ಜುಲೈನಲ್ಲಿ ಭಾರತೀಯ ಪತ್ರಿಕೆಯೊಂದು  ಚಂದ್ರಶೇಖರನ್‌ರ ಮುಖ್ಯಸ್ಥ ಅವಧಿಯ ವಿಸ್ತರಣೆಯನ್ನು "ಅನೌಪಚಾರಿಕವಾಗಿ ಅನುಮೋದಿಸಲಾಗಿದೆ" ಎಂದು ವರದಿ ಮಾಡಿದ ನಂತರ, ರತನ್ ಟಾಟಾ, ಈ ಸಂಬಂಧ ಮಂಡಳಿಯು ನಿರ್ಧಾರ ತೆಗೆದುಕೊಂಡಿಲ್ಲ ಮತ್ತು ಈ ವಿಷಯದ ಬಗ್ಗೆ ಯಾರೂ ಅವರನ್ನು ಸಂಪರ್ಕಿಸಿಲ್ಲ ಎಂದು ಹೇಳಿದ್ದರು.

ಇದನ್ನೂ ಓದಿ: Ravi Shastri Step Down| ಖಚಿತವಾಯ್ತು ರವಿಶಾಸ್ತ್ರಿ ನಿವೃತ್ತಿ; ಟಿ20 ವಿಶ್ವಕಪ್ ನಂತರ ಮುಖ್ಯ ಕೋಚ್​ ಹುದ್ದೆಯಿಂದ ಹೊರಕ್ಕೆ!

ಕೌಟುಂಬಿಕ ಸಂಪರ್ಕದ ಹೊರತಾಗಿಯೂ, ಭಾರತೀಯ ಪ್ರಖ್ಯಾತ ಉದ್ಯಮಿಯಾದ ರತನ್‌ ಟಾಟಾ, ಟಾಟಾ ಸಮೂಹವನ್ನು ಗಮನ ಸೆಳೆಯುವ ಒಪ್ಪಂದಗಳೊಂದಿಗೆ ಜಾಗತಿಕ ಭೂಪಟದಲ್ಲಿ ಇರಿಸಿದರು. ಕಳೆದ ಎರಡು ದಶಕಗಳಲ್ಲಿ, 2.3 ಶತಕೋಟಿ ಡಾಲರ್ ವಾಹನ ತಯಾರಕ ಜೆಎಲ್‌ಆರ್‌ ಖರೀದಿಯಿಂದ ಹಿಡಿದು ಬ್ರಿಟಿಷ್ ಸ್ಟೀಲ್ ಕಂಪನಿ ಕೋರಸ್ ಗ್ರೂಪ್ ಪಿಎಲ್‌ಸಿಯನ್ನು 13 ಬಿಲಿಯನ್ ಡಾಲರ್ ಮೊತ್ತಕ್ಕೆ ಸ್ವಾಧೀನ ಪಡಿಸಿಕೊಳ್ಳುವುದು ಇದರಲ್ಲಿ ಸೇರಿದೆ.
Published by:MAshok Kumar
First published: