• Home
 • »
 • News
 • »
 • national-international
 • »
 • ಗ್ರಾಮೀಣ ಭಾರತವನ್ನು ಭವಿಷ್ಯಕ್ಕೆ ಸಶಕ್ತಗೊಳಿಸಲು Tata Powerನ ಸೌರ ಶಕ್ತಿ ಪರಿಹಾರೋಪಾಯಗಳು ಸಜ್ಜಾಗಿವೆ

ಗ್ರಾಮೀಣ ಭಾರತವನ್ನು ಭವಿಷ್ಯಕ್ಕೆ ಸಶಕ್ತಗೊಳಿಸಲು Tata Powerನ ಸೌರ ಶಕ್ತಿ ಪರಿಹಾರೋಪಾಯಗಳು ಸಜ್ಜಾಗಿವೆ

ಗ್ರಾಮೀಣ ಭಾರತವನ್ನು ಭವಿಷ್ಯಕ್ಕೆ ಸಶಕ್ತಗೊಳಿಸಲು Tata Powerನ ಸೌರ ಶಕ್ತಿ ಪರಿಹಾರೋಪಾಯಗಳು ಸಜ್ಜಾಗಿವೆ

ಗ್ರಾಮೀಣ ಭಾರತವನ್ನು ಭವಿಷ್ಯಕ್ಕೆ ಸಶಕ್ತಗೊಳಿಸಲು Tata Powerನ ಸೌರ ಶಕ್ತಿ ಪರಿಹಾರೋಪಾಯಗಳು ಸಜ್ಜಾಗಿವೆ

ಸಾಮಾನ್ಯವಾಗಿ, ಸೌರ ಶಕ್ತಿಯನ್ನು ವಿಕೇಂದ್ರಿಕೃತ ಯೋಜನೆಯ ಮೂಲಕ ವಿತರಿಸಬಹುದಾಗಿದ್ದು, ಅದು ಹಲವಾರು ಪ್ರಯೋಜನಗಳನ್ನು ಹೊಂದಿದೆ.

 • Share this:

  ಸುಡು ಬಿಸಿಲ ದಿನಗಳು ಭಾರತದಲ್ಲಿ ನಮ್ಮ ನೆಚ್ಚಿನ ಹವಾಮಾನ ಆಗಿರುವುದಿಲ್ಲ, ಆದರೆ ಅವುಗಳು ಅದ್ಬುತ ಆರ್ಥಿಕ ಸ್ವತ್ತಾಗಿ ಕಾರ್ಯ ನಿರ್ವಹಿಸಬಲ್ಲವು. ಪ್ರತಿ ವರ್ಷ 300 ಬಿಸಿಲ ದಿನಗಳಿಂದಾಗಿ ಭಾರತದ ಸೌರ ಶಕ್ತಿ ಸಾಮರ್ಥ್ಯವು ಪ್ರತಿ ವರ್ಷ 5000 ಕಿಲೊವಾಟ್-ಆರ್ಸ್‌ಗೆ ತಲುಪಿದೆ. ಅಂದರೆ, ನಮ್ಮ ಎಲ್ಲಾ ಪಳೆಯುಳಿಕೆ ಇಂಧನ (fossil fuel) ಸಂಗ್ರಹದಿಂದ ಉತ್ಪಾದಿಸುವ ಶಕ್ತಿಗಿಂತ ಹೆಚ್ಚಿನ ಶಕ್ತಿಯನ್ನು ಸೌರ ಶಕ್ತಿ ಬಳಸಿಕೊಂಡು ಒಂದು ವರ್ಷದಲ್ಲಿ ಉತ್ಪಾದಿಸಬಹುದು.


  ಗ್ರಾಮೀಣ ಭಾಗದ ಎಲ್ಲ ಮನೆಗಳಿಗೂ ಸಂಪರ್ಕ ಒದಗಿಸುವುದು ಇನ್ನೂ ಪ್ರಗತಿಯಲ್ಲಿ ಇರುವುದರಿಂದ, ಇದು ಜೀವನದ ಬಹುತೇಕ ಪ್ರತಿಯೊಂದು ಸಂಗತಿಯ ಮೇಲೂ ಅಪಾರ ಬದಲಾವಣೆ ಉಂಟು ಮಾಡುತ್ತದೆ.


  ಸೌರ ಶಕ್ತಿ ಮತ್ತು ಆರೋಗ್ಯ
  ಗ್ರಾಮೀಣ ಭಾರತದ ಜನರು ಈಗಲೂ ಗ್ರಿಡ್ ಸಂಪರ್ಕಿತ ವಿದ್ಯುತ್‌ ಸೌಲಭ್ಯದ ಕೊರತೆ ಅನುಭವಿಸುತ್ತಿದ್ದಾರೆ ಮತ್ತು ಅವರು ಸೀಮೆಎಣ್ಣೆ, ಡೀಸೆಲ್ ಹಾಗೂ ಉರುವಲು ಕಟ್ಟಿಗೆಯನ್ನು ಅವಲಂಬಿಸಿದ್ದು ಅದು ಮಹಿಳೆಯರು ಮತ್ತು ಮಕ್ಕಳಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಕಡಿಮೆ ವೆಚ್ಚ ಮತ್ತು ಯೋಜನಾಬದ್ಧ ದರ ಸ್ಕೀಮ್‌ಗಳ ಮೂಲಕ ಸೌರ ಶಕ್ತಿಯು ಒಂದು ಆಕರ್ಷಕ ಪರ್ಯಾಯವೆಂದು ಸಾಬೀತಾಗಬಹುದು.


  ಸಾಮಾನ್ಯವಾಗಿ, ಸೌರ ಶಕ್ತಿಯನ್ನು ವಿಕೇಂದ್ರಿಕೃತ ಯೋಜನೆಯ ಮೂಲಕ ವಿತರಿಸಬಹುದಾಗಿದ್ದು, ಅದು ಹಲವಾರು ಪ್ರಯೋಜನಗಳನ್ನು ಹೊಂದಿದೆ: ಬೆಳಕು, ಉಷ್ಣತೆ, ನೀರು ಶುದ್ಧೀಕರಣ ಮತ್ತು ಉತ್ಪಾದಕತೆ. ಉದಾಹರಣೆಗೆ, ಸೀಮೆ ಎಣ್ಣೆ ದೀಪಗಳ ಬಳಕೆಯನ್ನು ಮತ್ತು ಅದರಿಂದಾಗುವ ಎಲ್ಲಾ ಅಪಾಯಗಳನ್ನು ಸೌರ ಬೆಳಕು ತಡೆಗಟ್ಟುತ್ತದೆ. ಈ ಸೌರ ದೀಪಗಳಿಂದ ದೊರೆಯುವ ಹೆಚ್ಚುವರಿ 4-5 ಗಂಟೆಗಳ ಬೆಳಗುವಿಕೆಯು (lighting), ಕಾರ್ಯನಿರ್ವಹಣಾ ಅವಧಿಯನ್ನು ವಿಸ್ತರಿಸುವ ಸರಳ ಪ್ರಕ್ರಿಯೆಯ ಮೂಲಕ ಉತ್ಪಾದಕತೆಯನ್ನು ಮತ್ತು ಮನೆಯ ಆದಾಯವನ್ನು ಸುಧಾರಿಸಬಹುದು.


  ನೀರು ಶುದ್ಧೀಕರಣಕ್ಕೆ ವಿದ್ಯುತ್ ಅಗತ್ಯವಿರುವುದರಿಂದ ಗ್ರಾಮೀಣ ಭಾರತದಲ್ಲಿ ಶುದ್ಧ ನೀರು ಪೂರೈಕೆಯು ಅತಿ ದೊಡ್ಡ ಸವಾಲಾಗಿದೆ. ಇಲ್ಲಿಯೂ ಸಹ ಸೌರ ಶಕ್ತಿಯು ಪರಿವರ್ತನೆ ತರಬಲ್ಲದು. ನಾಗಾಲ್ಯಾಂಡ್, ಇತ್ತೀಚೆಗೆ ಕೊಹಿಮಾ ಸಮೀಪದ ಸೀಸ್ಮಾ ಗ್ರಾಮದಲ್ಲಿ ಸೌರ ಚಾಲಿತ ನೀರು ಶುದ್ಧೀಕರಣ ಘಟಕವನ್ನು ಅಳವಡಿಸಿದ್ದು, ಶುದ್ಧ ಕುಡಿಯುವ ನೀರು ತಯಾರಿಸಲು ಈ ಘಟಕವು ಸುಧಾರಿತ ಮೆಂಬ್ರೇನ್ ಫಿಲ್ಟ್ರೇಶನ್ ಸಿಸ್ಟಂ ಮೂಲಕ ಕಾರ್ಯ ನಿರ್ವಹಿಸುತ್ತದೆ.


  ಸೌರ ಶಕ್ತಿ ಮತ್ತು ಜೀವನೋಪಾಯ
  ಸೌರ ದೀಪಗಳಿಂದ ಸೌರ ಮೈಕ್ರೊ ಗ್ರಿಡ್‌ಗಳಿಗೆ, ನಂತರ ಸೌರ ಪಂಪ್‌ಗಳಿಗೆ ಪರಿವರ್ತನೆಯಾಗುವುದು ಸಣ್ಣ ಬದಲಾವಣೆಯಾದರೂ ಅದು ಅತ್ಯಂತ ಹೆಚ್ಚು ಪರಿಣಾಮಕಾರಿಯಾದದ್ದು.


  ಸೌರ ಮೈಕ್ರೊ ಗ್ರಿಡ್‌ಗಳು ಅಂತರ್ಗತ ನೆಟ್‌ವರ್ಕ್‌ಗಳಾಗಿದ್ದು, ಅವು ಶುದ್ಧ ಸೌರ ಶಕ್ತಿಯನ್ನು ಪಡೆದುಕೊಂಡು, ಸಂಗ್ರಹಿಸುತ್ತವೆ ಹಾಗೂ ಇಡೀ ಸಮುದಾಯಕ್ಕೆ ವಿತರಿಸುತ್ತವೆ. ಉನ್ನತ ಗುಣಮಟ್ಟದ ಸೌರ ಪ್ಯಾನೆಲ್‌ಗಳು ಮತ್ತು ಬ್ಯಾಟರಿಗಳ ಕೇಂದ್ರೀಕೃತ ‘ಹಬ್’ನಿಂದ ಶಕ್ತಿಯು ಬರುತ್ತದೆ ಮತ್ತು ಪ್ರತಿ ಕುಟುಂಬವು ಇದರಿಂದ ವಿದ್ಯುತ್ ಪಡೆಯುತ್ತವೆ.


  ಭಾರತದಲ್ಲಿ, ಅತ್ಯಂತ ದುಬಾರಿಯೆನಿಸುವ ವಿದ್ಯುತ್ ಸಮಸ್ಯೆಗೆ ಸೌರ ಮೈಕ್ರೊಗ್ರಿಡ್‌ಗಳು ಕಡಿಮೆ ವೆಚ್ಚದ ಪರಿಹಾರೋಪಾಯಗಳು ಎಂದು ಸಾಬೀತುಪಡಿಸುತ್ತಿವೆ. Tata Power ನ ರಿನೀವಬಲ್ ಮೈಕ್ರೊ ಗ್ರಿಡ್ ದೇಶದ ಮುಂಚೂಣಿಯಲ್ಲಿದೆ ಮತ್ತು ಮುಂಬರುವ ದಿನಗಳಲ್ಲಿ 10,000 ಮೈಕ್ರೊಗ್ರಿಡ್‌ಗಳನ್ನು ಸ್ಥಾಪಿಸುವ ಯೋಜನೆಯನ್ನು ಹೊಂದಿದೆ. ಇದುವರೆಗೆ ಈಗಾಗಲೇ ಇದು 200 ಮೈಕ್ರೊ ಗ್ರಿಡ್‌ಗಳನ್ನು ಅಳವಡಿಸಿದ್ದು, ಅವುಗಳು ಬಹುತೇಕ ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿವೆ, ಅಲ್ಲದೆ, ಒರಿಸ್ಸಾದ 10-15 ಗ್ರಾಮಗಳಲ್ಲಿ ಪ್ರಾಯೋಗಿಕ ಮೈಕ್ರೊ ಗ್ರಿಡ್ ಯೋಜನೆ ಜಾರಿಯಲ್ಲಿದೆ. ಮೈಕ್ರೊ ಗ್ರಿಡ್‌ಗಳು ಮನೆಗಳಿಗೆ ಮಾತ್ರವಲ್ಲದೆ, ಶಾಪ್‌ಗಳು, ಮೆಡಿಕಲ್ ಕ್ಲಿನಿಕ್‌ಗಳು (ರೆಫ್ರಿಜರೇಷನ್‌ಗಾಗಿ), ಎಲೆಕ್ಟ್ರಿಕ್ ಮೊಬಿಲಿಟಿ ಪೂರೈಕೆದಾರರು, ಟೆಲಿಕಾಂ ಟವರ್‌ಗಳು, ಶಿಕ್ಷಣ ಕೇಂದ್ರಗಳು ಮತ್ತು ಬೀದಿಬದಿಯ ತಿನಿಸಿನ ಮಳಿಗೆಗಳಿಗೆ ವಿದ್ಯುತ್ ಒದಗಿಸಲು ಸಹಾಯ ಮಾಡುತ್ತಿದ್ದು, ಆ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ಹಾಗೂ ಶಿಕ್ಷಣ, ವೈದ್ಯಕೀಯ ಸೌಲಭ್ಯ ಮತ್ತು ಉದ್ಯೋಗಾವಕಾಶಗಳ ಮೂಲಕ ಎಲ್ಲಾ ಕುಟುಂಬಗಳ ಜೀವನದ ಗುಣಮಟ್ಟ ಹೆಚ್ಚಿಸಲು ಸಹಾಯ ಮಾಡುತ್ತದೆ.


  ಭಾರತದ ಕೃಷಿ ಕ್ಷೇತ್ರವು ನೈಸರ್ಗಿಕ ನೀರಾವರಿಗಾಗಿ ಸಂಪೂರ್ಣವಾಗಿ ಮಾನ್ಸೂನ್ ಮೇಲೆ ಅವಲಂಬಿತವಾಗಿದೆ. ನೀರಾವರಿಗೆ ನೀರು ಒದಗಿಸುವ ಯಾಂತ್ರಿಕ ವಿಧಾನವಾಗಿ ಪಂಪ್‌ಗಳನ್ನು ಬಳಸಲಾಗುತ್ತದೆ. ರೈತರು ಪಂಪ್ ಚಾಲನೆ ಮಾಡಲು ಗ್ರಿಡ್ ವಿದ್ಯುತ್ ಅಥವಾ ಡೀಸೆಲ್ ಜನರೇಟರ್-ಸೆಟ್‌ಗಳ ಮೇಲೆ ಅವಲಂಬಿತವಾಗಿದ್ದು, ಅದು ಸಾಕಷ್ಟು ವಿಳಂಬ ಮತ್ತು ಆರ್ಥಿಕ ಹೊರೆ ಉಂಟು ಮಾಡುತ್ತದೆ. ಹಾಗಾಗಿ, ನಮ್ಮ ರೈತರಿಗಾಗಿ, ಸೋಲಾರ್ ವಾಟರ್ ಪಂಪ್‌ನಂತಹ ಪರಿಣಾಮಕಾರಿ ನೀರಾವರಿ ವ್ಯವಸ್ಥೆಯು ಹೆಚ್ಚು ಸಹಕಾರಿಯಾಗಲಿದೆ. ಇದು ಅವರ ಕೃಷಿ ಭೂಮಿಗೆ ವಿಶ್ವಾಸಾರ್ಹತೆಯೊಂದಿಗೆ ನಿರಂತರವಾಗಿ ನೀರು ಪೂರೈಸುವ ಭರವಸೆಯೊಂದಿಗೆ ಅವರ ಕೃಷಿ ಉತ್ಪನ್ನವನ್ನು ಹೆಚ್ಚಿಸುತ್ತದೆ.


  ಸೋಲಾರ್ ಪವರ್ ಅಗ್ರಿ ಪಂಪ್‌ಗಳು, ಸ್ವತಂತ್ರವಾಗಿ ಭಾರತೀಯ ಕೃಷಿಕರ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿವೆ ಮತ್ತು ಈಗಾಗಲೇ ಬಳಕೆಯಲ್ಲಿರುವ 26 ಮಿಲಿಯನ್ ಅಗ್ರಿ ಪಂಪ್‌ಗಳಿಗೆ ಪರಿಸರ ಸ್ನೇಹಿ ಪರ್ಯಾಯವಾಗಿವೆ. ಇವುಗಳಲ್ಲಿ 10 ಮಿಲಿಯನ್ ಪಂಪ್‌ಗಳು ಡೀಸೆಲ್ ಚಾಲಿತ. ಬರೀ 1 ಮಿಲಿಯನ್ ಡೀಸೆಲ್ ಪಂಪ್‌ಗಳನ್ನು ಸೌರ ಪಂಪ್‌ಗಳಿಂದ ಬದಲಾಯಿಸಿದರೆ, 9.4 ಬಿಲಿಯನ್ ಲೀಟರ್‌ಗಳಷ್ಟು ಡೀಸೆಲ್ ಬಳಕೆಯನ್ನು ನಿಲ್ಲಿಸಬಹುದು, ಅದು ನೇರವಾಗಿ ರೈತರ ಉಳಿತಾಯವಾಗಿ ಪರಿವರ್ತನೆಯಾಗುತ್ತದೆ. ಅಲ್ಲದೆ, 25.3 ಮಿಲಿಯನ್ ಟನ್‌ಗಳಷ್ಟು CO2 ಉಳಿಸಲು ಸಹ ಇದು ಸಹಾಯ ಮಾಡುತ್ತದೆ. 


  ಈ ಅಗತ್ಯವನ್ನು ಪೂರೈಸಲು Tata Power Solar, ಸರ್ಫೇಸ್ ಮತ್ತು ಸಬ್‌ಮರ್ಸಿಬಲ್ ವರ್ಗಳೆರಡರಲ್ಲಿಯೂ DC ಮತ್ತು AC ಎರಡೂ ಶ್ರೇಣಿಗಳ ಸೋಲಾರ್ ವಾಟರ್ ಪಂಪ್‌ಗಳನ್ನು ಒದಗಿಸುತ್ತಿದೆ. ಈ ಪಂಪ್‌ಗಳು, ಸಾಂಪ್ರದಾಯಿಕ ನೀರಾವರಿ ವ್ಯವಸ್ಥೆಯ ಹೋಲಿಕೆಯಲ್ಲಿ, ದುಬಾರಿ ಇಂಧನದ ಮೇಲಿನ ಕೃಷಿಕರ ಅವಲಂಬನೆಯನ್ನು ಮತ್ತು ಅವುಗಳ ನಿರ್ವಹಣಾ ವೆಚ್ಚವನ್ನು ತಗ್ಗಿಸಲು ಸಹಾಯ ಮಾಡುತ್ತವೆ. ಈವರೆಗೆ ಭಾರತದಾದ್ಯಂತ 76,000 ಪಂಪ್‌ಗಳನ್ನು ಅಳವಡಿಸಲಾಗಿದ್ದು, ಭಾರತದ ಎಲ್ಲಾ ರೈತರಿಗೂ ನೀರಿನ ಲಭ್ಯತೆಯ ಖಚಿತತೆ ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸುವುದು ನಮ್ಮ ಧ್ಯೇಯವಾಗಿದೆ.


  ದೇಶದ ತಲುಪಲು ಸಾಧ್ಯವಿಲ್ಲದಂತಹ ಪ್ರದೇಶಗಳಲ್ಲಿಯೂ ಸಹ ಭಾರತದ ಕೃಷಿಕರ ನೀರಾವರಿ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡಲು ಮತ್ತು ಎಲ್ಲಾ ಸಮಯದಲ್ಲೂ ಅವರಿಗೆ ನಿಶ್ಚಿತ ಆದಾಯವನ್ನು ಖಾತ್ರಿಪಡಿಸಲು Tata Power, PM-KUSUM ಯೋಜನೆಯಡಿ ನೋಂದಾಯಿಸಲಾದ ಏಜೆನ್ಸಿಯಾಗಿದೆ. ಗ್ರಾಮೀಣ, ಅರೆ ಗ್ರಾಮೀಣ ಅಥವಾ ನಗರ ಪ್ರದೇಶಗಳಲ್ಲಿ ತ್ವರಿತಗತಿಯಲ್ಲಿ ಸೋಲಾರ್ ಪಂಪ್‌ಗಳನ್ನು ಅಳವಡಿಸಿಕೊಳ್ಳಲು ಬಯಸುವ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದ್ದು, ಅವರ ಅನುಕೂಲಕ್ಕಾಗಿ ಇದರ ಸೋಲಾರ್ ಪಂಪ್‌ಗಳು ಈಗ ರಿಟೇಲ್ ಮಾರುಕಟ್ಟೆಯಲ್ಲಿಯೂ ಸಹ ಲಭ್ಯ ಇವೆ.


  ಗ್ರಾಮೀಣ ಭಾಗದ ಯುವ ಜನತೆಗೆ ಉದ್ಯೋಗ ಒದಗಿಸುವ ಮೂಲಕವೂ ಸಹ ಸೌರ ಶಕ್ತಿ ಮತ್ತು ಸೌರ ತಂತ್ರಜ್ಞಾನವು ಅತ್ಯಂತ ಪ್ರಯೋಜನಕಾರಿ ಎನಿಸಿದೆ. ಇಂಟರ್‌ನ್ಯಾಷನಲ್ ರಿನೀವಬಲ್ ಎನರ್ಜಿ ಏಜೆನ್ಸಿಯ (IRENA) ಪ್ರಕಾರ, ಭಾರತದ ಸೌರ ವಲಯವು 2018ರಲ್ಲಿ 1,15,000 ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ ಮತ್ತು ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚಳವಾಗಲಿದೆ. ಈ ಸಿಸ್ಟಂಗಳ ಅಳವಡಿಕೆಯು ಹೆಚ್ಚಾದಂತೆ, ಈ ಸಿಸ್ಟಂಗಳನ್ನು ಅಳವಡಿಸುವ ಮತ್ತು ದುರಸ್ತಿ ಮಾಡುವ ಅರೆ-ಕೌಶಲ ಕಾರ್ಮಿಕರಿಗೆ ಬೇಡಿಕೆಯೂ ಹೆಚ್ಚುತ್ತದೆ. Tata Power ಸ್ಕಿಲ್ ಡೆವೆಲಪ್‌ಮೆಂಟ್ ಇನ್‌ಸ್ಟಿಟ್ಯೂಟ್ ಮೂಲಕ, ನವೀಕರಿಸಬಹುದಾದ ಇಂಧನ ವಲಯದಲ್ಲಿ ಕಾರ್ಯ ನಿರ್ವಹಿಸಲು ಪ್ರತಿ ವರ್ಷ 3000 ಯುವಕ/ಯುವತಿಯರನ್ನು Tata Power ತರಬೇತುಗೊಳಿಸುತ್ತಿದೆ ಹಾಗೂ GOI ಸಹ ನವೀಕರಿಸಬಹುದಾದವು ಮತ್ತು ಗ್ರಾಮೀಣ ಯುವ ಜನತೆಯನ್ನು ಗಮನದಲ್ಲಿರಿಸಿಕೊಂಡು ಸಾಕಷ್ಟು ತರಬೇತಿ ಉಪಕ್ರಮಗಳಿಗೆ ಬಂಡವಾಳ ಹೂಡುತ್ತಿದೆ.


  ಸೌರ ಶಕ್ತಿ ಮತ್ತು ಭಾರತದ ಆರ್ಥಿಕತೆ
  ಭಾರತದ ಆರ್ಥಿಕತೆ ಬೆಳವಣಿಗೆಯಾದಂತೆ, ವ್ಯಾಲ್ಯೂ ಚೈನ್‌ನಲ್ಲಿ ಮೇಲೇರಿದಂತೆ ಇಂಧನ ಬೇಡಿಕೆಯೂ ಹೆಚ್ಚಾಗುತ್ತಲೇ ಇದೆ. 19ನೇ ಎಲೆಕ್ಟ್ರಿಕ್ ಪವರ್ ಸರ್ವೇ ರಿಪೋರ್ಟ್ ಪ್ರಕಾರ, 2016-17, 2021-22 ಮತ್ತು 2026-27ರ ಅವಧಿಯಲ್ಲಿ ಅಖಿಲ-ಭಾರತದಲ್ಲಿ ವಿದ್ಯುತ್ ಬಳಕೆಯು ಕ್ರಮವಾಗಿ 921 BU, 1300 BU ಮತ್ತು 1743 BU ಎಂದು ಮೌಲ್ಯಮಾಪನ ಮಾಡಲಾಗಿದೆ. ಇದು 2036-37ರ ವೇಳೆಗೆ 3049 BU ಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ, 2021-22ರ ಅನ್ವಯ ಭಾರತದ ಒಟ್ಟಾರೆ ಇಂಧನ ಉತ್ಪಾದನೆಯು 1491 BU ಮಾತ್ರ. ಭಾರತವು ಹೆಚ್ಚು ಕಾಲ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲಾರದು, ಹಾಗಾಗಿ ಈ ಬೇಡಿಕೆಯನ್ನು ಪೂರೈಸುವ ಏಕೈಕ ಆರ್ಥಿಕವಾಗಿ ಹೊರೆಯಾಗದೇ ಇರುವುದು ಎಂದರೆ ಅದು ನವೀಕರಿಸಬಹುದಾದ ಇಂಧನ ಮೂಲಗಳು.


  2019 ರಲ್ಲಿ, ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಅಳವಡಿಕೆಯಲ್ಲಿ ಜಾಗತಿಕವಾಗಿ ನಾಲ್ಕನೇ ಸ್ಥಾನದಲ್ಲಿದ್ದು, ಅದರಲ್ಲಿ ಸೌರ ಮತ್ತು ಪವರ ವಿದ್ಯುತ್ ಮುಂಚೂಣಿಯಲ್ಲಿವೆ. ಪ್ರಧಾನಿ ನರೇಂದ್ರ ಮೋದಿ ಅವರು 2030ರ ವೇಳೆಗೆ 450 ಗಿಗಾ ವಾಟ್‌ಗಳಷ್ಟು ನವೀಕರಿಸಬಹುದಾದ ಇಂಧನ ಉತ್ಪಾದನೆಯ ಗುರಿ ಹೊಂದಿದ್ದಾರೆ - ಅಂದರೆ ಈಗಿನ ಸಾಮರ್ಥ್ಯಕ್ಕಿಂತ ಐದು ಪಟ್ಟು ಹೆಚ್ಚು. ಒಂದು ವೇಳೆ ಅದನ್ನು ಸಾಧಿಸಿದರೆ, ಭಾರತವು 2030ರ ವೇಳೆಗೆ ಪಳೆಯುಳಿಕೆ ಇಂಧನ ಮೂಲಗಳನ್ನು ಹೊರತುಪಡಿಸಿ 60%ರಷ್ಟು ವಿದ್ಯುತ್ ಉತ್ಪಾದಿಸಬಹುದು, ಅದು ಪ್ಯಾರಿಸ್ ಒಪ್ಪಂದದ ತನ್ನ ಗುರಿಗಿಂತ 40% ಹೆಚ್ಚು ಇರುತ್ತದೆ ಎಂಬುದೂ ಸಹ ಸತ್ಯ. ಇದು, ಅನಿಶ್ಚತ ಇಂಧನ ಬೆಲೆ ಇರುವ ಈ ಸಂದರ್ಭದಲ್ಲಿ ಭಾರತವು ಇಂಧನ ಆಮದು ಮೇಲೆ ವೆಚ್ಚ ಮಾಡುವುದನ್ನು ಉಳಿಸಲು ಸಹ ಸಹಾಯವಾಗುತ್ತದೆ.


  ಸ್ಟ್ಯಾಂಡರ್ಡ್ ಚಾರ್ಟರ್ಡ್ SDG ಇನ್‌ವೆಸ್ಟ್‌ಮೆಂಟ್ ಮ್ಯಾಪ್ ಪ್ರಕಾರ, ಶುದ್ಧ ಇಂಧನ ವಲಯದಲ್ಲಿ ಭಾರತವೊಂದೇ $700 ಬಿಲಿಯನ್‌ಗೂ ಹೆಚ್ಚಿನ ಖಾಸಗಿ ಹೂಡಿಕೆ ಅವಕಾಶವನ್ನು ಒದಗಿಸಿದೆ. ಇದು ಸೌರ ಶಕ್ತಿ ಮತ್ತು ಭಾರತದ ಏರಿಕೆಯಾಗಿರುವ ಇಂಧನ ಸವಾಲನ್ನು ತೋರಿಸುತ್ತದೆ. ಬೆಳೆಯುತ್ತಿರುವ ಆರ್ಥಿಕತೆಯು ತನ್ನ ಆರ್ಥಿಕತೆ ಹಾಗೂ ತನ್ನ ಪರಿಸರಕ್ಕಾಗಿ ತನ್ನ ಇಂಧನ ಅಗತ್ಯವನ್ನು ಸುಸ್ಥಿರ ಮಾದರಿಯಲ್ಲಿ ಹೇಗೆ ಪೂರೈಸಿಕೊಳ್ಳುತ್ತದೆ ಎಂದು ಇಡೀ ಜಗತ್ತಿಗೆ ತೋರಿಸುವ ಅವಕಾಶವನ್ನು ಭಾರತ ಹೊಂದಿದೆ. ಪಳೆಯುಳಿಕೆ-ಅಲ್ಲದ ಇಂಧನ ಮೂಲಗಳಿಂದ ನಮ್ಮ 40% ವಿದ್ಯುತ್ ಉತ್ಪಾದನೆ ಮಾಡಿಕೊಳ್ಳುವ ಕುರಿತು GOI ಪ್ಯಾರಿಸ್ ಕ್ಲೈಮ್ಯಾಟ್ ಕಾನ್ಫರೆನ್ಸ್‌ನಲ್ಲಿ NDC ಪ್ರಸ್ತಾಪಿಸಿದಾಗಲೇ ಹಲವರ ಹುಬ್ಬೇರುವಂತೆ ಮಾಡಿದೆ. ಹಾಗಿದ್ದರೂ, ಈ ಕ್ಷೇತ್ರದಲ್ಲಿ ಅಪಾರ ಪ್ರಗತಿ ಸಾಧಿಸಿರುವ Tata Power ನಂತಹ ಖಾಸಗಿ ಕಂಪೆನಿಗಳ ಸಹಭಾಗಿತ್ವದಲ್ಲಿ ಮಾತ್ರ ಈ ಬದ್ಧತೆಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದು GOI ಗೆ ತಿಳಿದಿದೆ.


  ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 200 ಮೈಕ್ರೊ ಗ್ರಿಡ್‌ಗಳ ಜತೆಗೆ, ಸೌರ ಛಾವಣಿ ಅಳವಡಿಕೆಗಳ ಮೂಲಕ ಈಗಾಗಲೇ 1000 MW ಗೂ ಹೆಚ್ಚು ವಿದ್ಯುತ್ ಉತ್ಪಾದಿಸಿದೆ. ಆ ಮೂಲಕ ಕಳೆದ 8 ವರ್ಷಗಳಿಂದ ಇದನ್ನು ಭಾರತದ ನಂ.1 ಸೋಲಾರ್ EPC ಆಗಿ ಮಾಡಿದೆ. ಈ ಅಳವಡಿಕೆಗಳ ಮೂಲಕ ಮಾತ್ರವೇ, ಗ್ರಾಹಕರು ತಮ್ಮ ಸರಾಸರಿ ವಿದ್ಯುತ್ ಬಿಲ್‌ಗಳಲ್ಲಿ 50% ವರೆಗೆ ಉಳಿತಾಯ ಮಾಡಿದ್ದಾರೆ ಮತ್ತು 30 ಮಿಲಿಯನ್+ ಟನ್‌ಗಳಷ್ಟು CO2 ಉಳಿಸಿದ್ದಾರೆ.


  ಒಟ್ಟಾರೆ ವೆಚ್ಚವನ್ನು ತಗ್ಗಿಸುವ, ಪೂರ್ಣ ಸರ್ವೀಸ್ ಇನ್‌ಸ್ಟಾಲೇಷನ್ ಮತ್ತು ದುರಸ್ತಿ ಹಾಗೂ 25 ವರ್ಷದ ವಾರಂಟಿ ನೀಡುವ ಯೋಜನಾಬದ್ಧ ದರ ನಿಗದಿಪಡಿಸುವಿಕೆಯ ಮೂಲಕ, ಒಂದು ಬಾರಿಗೆ ಒಂದು ಛಾವಣಿಯೊಂದಿಗೆ ಹಸಿರು ಇಂಧನ ಭವಿಷ್ಯದೆಡೆಗೆ ಮುನ್ನಡೆಯಲು Tata Power ಭಾರತಕ್ಕೆ ಸಹಾಯ ಮಾಡುತ್ತಿದೆ.


  ರೂ. 3,400 ಕೋಟಿ ಹೂಡಿಕೆಯೊಂದಿಗೆ 4GW ಸೋಲಾರ್ ಸೆಲ್ ಮತ್ತು ಮಾಡ್ಯೂಲ್ ತಯಾರಿಕಾ ಉದ್ಯಮವನ್ನು ಸಹ Tata Power ಆರಂಭಿಸುತ್ತಿದೆ. ಇದು ಸೋಲಾರ್ ಸೆಲ್‌ಗಳು ಮತ್ತು ಬ್ಯಾಟರಿ ಆಮದು ಮಾಡಿಕೊಳ್ಳುವ ಭಾರತದ ಅವಲಂಬನೆಯನ್ನು ತಗ್ಗಿಸಲಿದೆ. ಈ ಲೇಖನ ಬರೆಯುವ ಸಂದರ್ಭದಲ್ಲಿ Tata Power 5114 MW ಶುದ್ಧ ಇಂಧನ ಸಾಮರ್ಥ್ಯವನ್ನು ಮತ್ತು 2000+ EV ಚಾರ್ಜಿಂಗ್ ಸ್ಟೇಷನ್‌ಗಳನ್ನು ಹೊಂದಿರುವ ಹೆಗ್ಗಳಿಕೆ ಹೊಂದಿದೆ. ನ ಕ್ಲೀನ್ ಎನರ್ಜಿ ಇನ್‌ಕ್ಯುಬೇಶನ್ ಸೆಂಟರ್ ಹೊಸ ಶುದ್ಧ ಮತ್ತು ಹಸಿರು ಇಂಧನ ಸ್ಟಾರ್ಟಪ್‌ಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಹಸಿರು ಇಂಧನ ತಂತ್ರಜ್ಞಾನಗಳ ಮುಂದಿನ ಹಂತದ ನಾವೀನ್ಯತೆಯನ್ನು ಬೆಂಬಲಿಸುತ್ತಿದೆ. ಆ ಮೂಲಕ ಜಾಗತಿಕ ಇಂಧನ ಸಂರಕ್ಷಣೆ, ಉತ್ಪಾದನೆ ಮತ್ತು ಸುಸ್ಥಿರತೆ ವಲಯದಲ್ಲಿ ಭಾರತವನ್ನು ಮುನ್ನೆಲೆಗೆ ತಂದಿದೆ.


  ಸಾರಾಂಶ
  Tata Power ಗೆ ಸುಸ್ಥಿರತೆಯ ನೀತಿಯು ಆಳವಾಗಿ ಬೇರೂರಿದೆ. “Tata Power ನ ಸುಸ್ಥಿರತೆಯ ಆಧಾರಸ್ತಂಭವು 100 ವರ್ಷಗಳಿಗೂ ಹಿಂದೆಯೇ ನಮ್ಮ ಸಂಸ್ಥಾಪಕರಾದ ಜಮ್‌ಶೆಡ್ ಜೀ ಟಾಟಾ ಅವರಿಗೆ ಇದ್ದ ದೂರದೃಷ್ಟಿಯನ್ನು ಆಧರಿಸಿದೆ. ಈ ದೇಶದ ಜನರಿಗೆ ಶುದ್ಧ, ಹೇರಳವಾದ ಮತ್ತು ಕೈಗೆಟುಕುವ ದರದ ಇಂಧನ ಒಂದಗಿಸಬೇಕು ಎಂಬುದೇ ನಮ್ಮ ಸದಾಕಾಲದ ಧ್ಯೇಯವಾಗಿದೆ. ಆ ಸಾಧ್ಯತೆಯು, ಹವಾಮಾನ ವೈಪರೀತ್ಯವು ಜಾಗತಿಕ ಅಪಾಯವಾಗಿರುವ ಈ ಕಾಲಘಟ್ಟದಲ್ಲಿ ಹೆಚ್ಚಾಗಿದೆ” ಎಂದು Network18 ನಲ್ಲಿ ನಡೆದ ಇತ್ತೀಚಿನ ಸಂದರ್ಶನದಲ್ಲಿ Tata Power CEO&MD ಡಾ. ಪ್ರವೀಣ್ ಸಿನ್ಹಾ ಹೇಳಿದ್ದಾರೆ. 


  Tata Power ನ ಪೋರ್ಟ್‌ಫೋಲಿಯೊ ಪ್ರಸ್ತುತ 32% ಹಸಿರು ಇಂಧನವನ್ನು ಹೊಂದಿದ್ದು, 2030ರ ವೇಳೆಗೆ ಅದನ್ನು 70% ಗೆ ಮತ್ತು 2045ರ ವೇಳೆಗೆ 100% ಗೆ ಹೆಚ್ಚಿಸುವ ಗುರಿ ಹೊಂದಿದೆ. Tata Power 2045ರ ವೇಳೆಗೆ ನೆಟ್ ಝೀರೊ ಗುರಿಯನ್ನು ಹೊಂದಿರುವ ಭಾರತದ ಮೊದಲ ಕಂಪೆನಿಯಾಗಿದೆ. ಹಾಗಿದ್ದರೂ, ಸಸ್ಟೇನಬಲ್ ಈಸ್ ಅಟೇನಬಲ್ (Sustainable is Attainable) ಎಂಬ ನಂಬಿಕೆಯನ್ನು ಬೃಹತ್ ಸಮುದಾಯದಲ್ಲಿ ಚಿಗುರಿಸುವ ಬಯಕೆ ಹೊಂದಿದೆ; ಹಸಿರು ಉತ್ಪನ್ನಗಳು ಮತ್ತು ಪರಿಹಾರೋಪಾಯಗಳ ಬೃಹತ್-ಪ್ರಮಾಣದ ಅಳವಡಿಕೆಯ ಮೂಲಕ ಮಿಲಿಯನ್‌ಗಟ್ಟಲೆ ಭಾರತೀಯರ ಸುಸ್ಥಿರ ಜೀವನಶೈಲಿಯನ್ನಾಗಿಸುವುದು 'ಅಟೇನಬಲ್’ ಆಗಲಿದೆ. ಹಸಿರು ಟ್ಯಾರಿಫ್ ಅಳವಡಿಸಿಕೊಳ್ಳುವ ಮೂಲಕ ಹಸಿರು ಇಂಧನ ಪೂರೈಕೆಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ತನ್ನ ಗ್ರಾಹಕರಿಗೆ ನೀಡುವ ಮೂಲಕ ಅವರು ಇದನ್ನು ಪ್ರಾರಂಭಿಸಿದ್ದಾರೆ.


  ಭಾರತವು ಶುದ್ಧ ಮೂಲಗಳಿಂದ ಇಂಧನ ಉತ್ಪಾದಿಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ ಮತ್ತು ಭಾರತದ ಗ್ರಾಹಕರು ಮತ್ತು ಉದ್ಯಮಗಳು ಹಸಿರು ಇಂಧನವನ್ನು ಹೆಚ್ಚಾಗಿ ಆಯ್ಕೆ ಮಾಡುತ್ತಿರುವುದರಿಂದ ತನ್ನದೇ ಉದಾಹರಣೆಯ ಮೂಲಕ ವಿಶ್ವದ ಮುಂಚೂಣಿಯಲ್ಲಿರುವ ಗುರಿಯೆಡೆಗೆ ಭಾರತವು ದಿಟ್ಟ ಭವಿಷ್ಯದೆಡೆಗೆ ಹೆಜ್ಜೆ ಇಟ್ಟಿದೆ.

  First published: