Electric Car Fire: ಎಲೆಕ್ಟ್ರಿಕ್ ಕಾರಿಗೂ ಬಿತ್ತು ಬೆಂಕಿ! ಯಾವ ಕಾರದು? ನೋಡಿ ವಿಡಿಯೋ

ವೈರಲ್ ಆಗಿರುವ ವಿಡಿಯೋ ಕ್ಲಿಪ್‌ನಲ್ಲಿ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳು ಹೆಣಗಾಡುತ್ತಿರುವುದನ್ನು ಕಾಣಬಹುದಾಗಿದೆ. ಘಟನೆಯಿಂದ ಯಾವುದೇ ಪ್ರಾಣಹಾನಿ ಅಥವಾ ಗಾಯದ ಬಗ್ಗೆ ವರದಿಯಾಗಿಲ್ಲ.

ಕಾರಿಗೆ ಬೆಂಕಿ

ಕಾರಿಗೆ ಬೆಂಕಿ

  • Share this:
    ಕಳೆದೆರಡು ತಿಂಗಳುಗಳಲ್ಲಿ, ಭಾರತದಲ್ಲಿ ಹಲವಾರು ಎಲೆಕ್ಟ್ರಿಕ್ ಸ್ಕೂಟರ್‌ಗಳು (Electric Scooter Fire) ಬೆಂಕಿಗೆ ಆಹುತಿಯಾಗಿವೆ. ಆದರೆ ಈಗ ಮಹಾರಾಷ್ಟ್ರದಲ್ಲಿ ಎಲೆಕ್ಟ್ರಿಕ್ ಕಾರಿಗೆ (Electric Car Fire) ಬೆಂಕಿ ಹೊತ್ತಿಕೊಂಡಿರುವುದು ಬೆಳಕಿಗೆ ಬಂದಿದೆ. ಮುಂಬೈನ ವೆಸ್ಟ್ ವಸಾಯಿ ಪ್ರದೇಶದ ರೆಸ್ಟೋರೆಂಟ್‌ನ ಹೊರಗೆ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಬೆಂಕಿಗೆ ಆಹುತಿಯಾಗಿರುವ ವಿಡಿಯೋ (Tata Nexon EV Fire Video) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸದ್ಯಕ್ಕೆ ಈ ನಿರ್ದಿಷ್ಟ ಘಟನೆಗೆ ಕಾರಣ ತಿಳಿದುಬಂದಿಲ್ಲ. ಆದರೆ ಹೇಳಿಕೆಯೊಂದರಲ್ಲಿ, ಈ ವಿಷಯದಲ್ಲಿ ವಿವರವಾದ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಟಾಟಾ ಮೋಟಾರ್ಸ್ ಭರವಸೆ ನೀಡಿದೆ.

    ವೈರಲ್ ಆಗಿರುವ ವಿಡಿಯೋ ಕ್ಲಿಪ್‌ನಲ್ಲಿ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳು ಹೆಣಗಾಡುತ್ತಿರುವುದನ್ನು ಕಾಣಬಹುದಾಗಿದೆ. ಘಟನೆಯಿಂದ ಯಾವುದೇ ಪ್ರಾಣಹಾನಿ ಅಥವಾ ಗಾಯದ ಬಗ್ಗೆ ವರದಿಯಾಗಿಲ್ಲ.



    ಯಾವುದೇ ಅಪಾಯ ಸಂಭವಿಸಿಲ್ಲ
    ಬಿಳಿ ಬಣ್ಣದ ನೆಕ್ಸಾನ್ ಎಲೆಕ್ಟ್ರಿಕ್ ಕಾರನ್ನು ರೆಸ್ಟೋರೆಂಟ್‌ನ ಹೊರಗೆ ನಿಲ್ಲಿಸಲಾಗಿತ್ತು. ಅದೇ ಜಾಗದಲ್ಲಿ ಎಲೆಕ್ಟ್ರಿಕ್ ಕಾರಿಗೆ ಬೆಂಕಿ ತಗಲಿದೆ. ಯಾವುದೇ ಅಪಾಯ ಸಂಭವಿಸುವ ಮುನ್ನವೇ ಎಲೆಕ್ಟ್ರಿಕ್ ಕಾರಿಗೆ ತಗುಲಿದ್ದ ಬೆಂಕಿ ನಂದಿಸಲಾಗಿದೆ.

    ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ ಟಾಟಾ
    ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಟಾಟಾ ಮೋಟಾರ್ಸ್ ಹೇಳಿಕೆ ನೀಡಿದೆ. "ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿಗೆ ಬೆಂಕಿ ಹೊತ್ತಿಕೊಂಡಿರುವ ಕುರಿತು ವಿಸ್ತೃತ ತನಿಖೆಯನ್ನು ನಡೆಸಲಾಗುತ್ತಿದೆ. ನಮ್ಮ ಸಂಪೂರ್ಣ ತನಿಖೆಯ ನಂತರ ನಾವು ವಿವರವಾದ ಪ್ರತಿಕ್ರಿಯೆಯನ್ನು ಹಂಚಿಕೊಳ್ಳುತ್ತೇವೆ ”ಎಂದು ಕಂಪನಿಯು ಟ್ವಿಟರ್ ಪೋಸ್ಟ್‌ನಲ್ಲಿ ತಿಳಿಸಿದೆ.



    ಇದೇ ಮೊದಲ ಘಟನೆ
    ನಮ್ಮ ವಾಹನಗಳು ಮತ್ತು ಅವುಗಳ ಬಳಕೆದಾರರ ಸುರಕ್ಷತೆಗೆ ನಾವು ಬದ್ಧರಾಗಿದ್ದೇವೆ. ಸುಮಾರು 4 ವರ್ಷಗಳಲ್ಲಿ 30,000 ಕ್ಕೂ ಹೆಚ್ಚು EV ಗಳು ದೇಶಾದ್ಯಂತ 1 ಮಿಲಿಯನ್ ಕಿಮೀಗಳನ್ನು ಒಟ್ಟುಗೂಡಿಸಿದ ನಂತರ ಇದು ಮೊದಲ ಘಟನೆಯಾಗಿದೆ ಎಂದು ಟಾಟಾ ಕಂಪನಿ ಸ್ಪಷ್ಟೀಕರಣದಲ್ಲಿ ಬರೆದುಕೊಂಡಿದೆ.

    ಇದನ್ನೂ ಓದಿMahindra Cars: ವಾಹನ ಖರೀದಿಸುವವರಿಗೆ ಗುಡ್ ನ್ಯೂಸ್; 2023ರಲ್ಲಿ ಬಿಡುಗಡೆಯಾಗುತ್ತಂತೆ ಎಲೆಕ್ಟ್ರಿಕ್ ಮಹೀಂದ್ರಾ XUV300

    ಟಾಟಾ ನೆಕ್ಸಾನ್ ಇವಿ ಭಾರತದಲ್ಲಿ ಈಗ ಎರಡೂವರೆ ವರ್ಷಗಳಿಗೂ ಹೆಚ್ಚು ಸಮಯದಿಂದ ಮಾರುಕಟ್ಟೆಯಲ್ಲಿದೆ. ಇದು ರಾಷ್ಟ್ರದಲ್ಲಿ ಅತಿ ಹೆಚ್ಚು ಮಾರಾಟವಾಗುವ ಪ್ರಯಾಣಿಕ EVಗಳಲ್ಲಿ ಒಂದಾಗಿದೆ. ಟಾಟಾ ಮೋಟಾರ್ಸ್ ಇತ್ತೀಚೆಗೆ ಭಾರತದಲ್ಲಿ ನೆಕ್ಸಾನ್ ಇವಿ ಮ್ಯಾಕ್ಸ್ ಅನ್ನು ಬಿಡುಗಡೆ ಮಾಡಿದೆ. ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ದೊಡ್ಡ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಹೆಚ್ಚು ಶಕ್ತಿ ಮತ್ತು ಟಾರ್ಕ್ ಅನ್ನು ಅಭಿವೃದ್ಧಿಪಡಿಸಲಾಗಿದ್ದು ಒಂದೇ ಚಾರ್ಜ್‌ನಲ್ಲಿ 437 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ ಎಂದು ಹೇಳಲಾಗಿದೆ.
    Published by:guruganesh bhat
    First published: