ಟಾಟಾ ಮೋಟರ್ಸ್​ನಿಂದ ಭಾರತೀಯ ಸೇನೆಗೆ ಉಡುಗೊರೆ: ಬಾಂಬ್ ಬಿದ್ದರೂ ಜಗ್ಗದು ಈ ವಾಹನ

ಭಾರತೀಯ ಸೈನಿಕರಿಗೆ ಗರಿಷ್ಠ ಪ್ರಮಾಣದಲ್ಲಿ ವಾಹನಗಳನ್ನು ನಿರ್ಮಿಸಿ ಕೊಡುತ್ತಿರುವ ಟಾಟಾ ಮೋಟರ್ಸ್​ ಇತ್ತೀಚೆಗಷ್ಟೇ ವಿಶೇಷ ಟಾಟಾ ಸಫಾರಿ ಸ್ಟೋರ್ಮ್ ಆರ್ಮಿ ಕಾರುಗಳನ್ನು ಒದಗಿಸಿತ್ತು.

zahir | news18
Updated:March 3, 2019, 7:35 AM IST
ಟಾಟಾ ಮೋಟರ್ಸ್​ನಿಂದ ಭಾರತೀಯ ಸೇನೆಗೆ ಉಡುಗೊರೆ: ಬಾಂಬ್ ಬಿದ್ದರೂ ಜಗ್ಗದು ಈ ವಾಹನ
ಟಾಟಾ ಮರ್ಲಿನ್ LSV
  • News18
  • Last Updated: March 3, 2019, 7:35 AM IST
  • Share this:
ಟಾಟಾ ಮೋಟರ್ಸ್​ ಕಂಪೆನಿ ಭಾರತೀಯ ಸೈನಿಕರ ಸುರಕ್ಷತೆಗಾಗಿ ಮರ್ಲಿನ್ LSV ವಾಹನವನ್ನು ಪರಿಚಯಿಸಿದೆ. ಗ್ರೇನೇಡ್ ದಾಳಿ, ಸಣ್ಣ ಬಾಂಬ್ ಸೇರಿದಂತೆ ಹಲವು ಅಪಾಯದ ಸಂದರ್ಭದಲ್ಲೂ ಸೈನಿಕರಿಗೆ ಸಂಪೂರ್ಣ ಭದ್ರತೆ ನೀಡಲಿರುವುದು ಈ ವಾಹನದ ವಿಶೇಷತೆ.

ಟಾಟಾ ಮರ್ಲಿನ್ ವಾಹನ, STANAG 4569 ಲೆವೆಲ್ 1 ಭದ್ರತೆ ನೀಡಲಿದ್ದು, ಇದರಲ್ಲಿ 7.6mm ಗನ್, 40mm ಅಟೋಮ್ಯಾಟಿಕ್ ಗ್ರೇನೇಡ್, ಟ್ಯಾಂಕ್ ಮಿಸೇಲ್ಸ್ ಸೇರಿದಂತೆ ಪ್ರಮುಖ ಶಸ್ತ್ರಾಸ್ತ್ರಗಳನ್ನು ಒಳಗೊಂಡಿದೆ. ಅಲ್ಲದೆ ಶತ್ರು ಸೈನ್ಯದ ಕ್ಷಿಪಣಿಗಳನ್ನು ಉಡಾಯಿಸಬಲ್ಲ ಲಾಂಚರ್​ಗಳನ್ನು ಇದರಲ್ಲಿ ನೀಡಲಾಗಿದೆ. ಈ ಹೊಸ ವಾಹನದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೂತನ ವಾಹನವನ್ನು ಟಾಟಾ ಮೋಟರ್ಸ್​ ಇಂಡಿಯನ್ ಆರ್ಮಿಗೆ ಉಡುಗೊರೆಯಾಗಿ ನೀಡಿದೆ ಎನ್ನಲಾಗಿದೆ.

ಭಾರತೀಯ ಸೈನಿಕರಿಗೆ ಗರಿಷ್ಠ ಪ್ರಮಾಣದಲ್ಲಿ ವಾಹನಗಳನ್ನು ನಿರ್ಮಿಸಿ ಕೊಡುತ್ತಿರುವ ಟಾಟಾ ಮೋಟರ್ಸ್​ ಇತ್ತೀಚೆಗಷ್ಟೇ ವಿಶೇಷ ಟಾಟಾ ಸಫಾರಿ ಸ್ಟೋರ್ಮ್ ಆರ್ಮಿ ಕಾರುಗಳನ್ನು ಒದಗಿಸಿತ್ತು.ಇದೀಗ ಹೊಸ ಮರ್ಲಿನ್ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳುತ್ತಿರುವುದರಿಂದ ದೇಶದ ಸೇನಾ ಬಲ ಮತ್ತಷ್ಟು ಬಲಿಷ್ಠವಾಗಲಿದೆ. ಇದರಿಂದ ಭಾರತೀಯ ಸೇನೆಯು ಗುಡ್ಡಗಾಡು ಪ್ರದೇಶ ಮತ್ತು ನಕ್ಸಲೀಯ ಪ್ರದೇಶಗಲ್ಲಿ ಕಾರ್ಯಾಚರಣೆ ಸಹಕಾರಿಯಾಗಲಿದೆ.

ಇದನ್ನೂ ಓದಿ: ಅಪ್ಪ ಭಾರತದ ಕೃಷಿ ಸಚಿವ, ಮಗ ಪಾಕ್ ಸೇನಾಧಿಕಾರಿ: ಇದು ತೆರೆಮರೆಯ ಕಥೆ..!

First published:March 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...