Air India: ನಿವೃತ್ತ ಪೈಲಟ್‌ಗಳಿಗೆ ಬಂಪರ್ ಆಫರ್‌ ಕೊಟ್ಟ ಏರ್‌ ಇಂಡಿಯಾ!

ಏರ್‌ ಇಂಡಿಯಾ

ಏರ್‌ ಇಂಡಿಯಾ

ಏರ್ಲೈನ್ ಕಾರ್ಯಾಚರಣೆಗಳಲ್ಲಿ ಸ್ಥಿರತೆಯನ್ನು ಸ್ಥಾಪಿಸಲು ಎದುರು ನೋಡುತ್ತಿರುವ ಸಂಸ್ಥೆ ಪ್ರಸ್ತುತ ಈ ರೀತಿಯ ಕ್ರಮ ತೆಗೆದುಕೊಂಡಿದೆ. ಈ ಪೈಲಟ್ಗಳನ್ನು ಕಮಾಂಡರ್ಗಳಾಗಿ ಮರು ನೇಮಕ ಮಾಡಿಕೊಳ್ಳಲು ಏರ್ ಇಂಡಿಯಾ ನೋಡುತ್ತಿದೆ ಎಂದು ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಹೇಳಿಕೊಂಡಿದೆ.

  • Share this:

300 ಏಕ ಆಸನದ ವಿಮಾನಗಳನ್ನು (Flight) ಸ್ವಾಧೀನಪಡಿಸಿಕೊಳ್ಳುವ ಚರ್ಚೆಯ ನಡುವೆ ಟಾಟಾ ಗ್ರೂಪ್ (TATA Group) ಒಡೆತನದ ಏರ್ ಇಂಡಿಯಾ (Air India) ತನ್ನಪೈಲಟ್ ಗಳಿಗೆ (Pilot) ಭರ್ಜರಿ ಆಫರ್ ಒಂದನ್ನು ಘೋಷಣೆ ಮಾಡಿದೆ. ಅದೇನೆಂದರೆ ಏರ್ ಇಂಡಿಯಾ ಐದು ವರ್ಷಗಳ ಅವಧಿಗೆ ನಿವೃತ್ತ ಹೊಂದಿದ ಪೈಲಟ್ಗಳನ್ನೂ ಮರು ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಏರ್ಲೈನ್ (Air Line) ಕಾರ್ಯಾಚರಣೆಗಳಲ್ಲಿ ಸ್ಥಿರತೆಯನ್ನು ಸ್ಥಾಪಿಸಲು ಎದುರು ನೋಡುತ್ತಿರುವ ಸಂಸ್ಥೆ ಪ್ರಸ್ತುತ ಈ ರೀತಿಯ ಕ್ರಮ ತೆಗೆದುಕೊಂಡಿದೆ. ಈ ಪೈಲಟ್ಗಳನ್ನು ಕಮಾಂಡರ್ಗಳಾಗಿ ಮರು ನೇಮಕ (Re-appointment) ಮಾಡಿಕೊಳ್ಳಲು ಏರ್ ಇಂಡಿಯಾ ನೋಡುತ್ತಿದೆ ಎಂದು ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ ಹೇಳಿಕೊಂಡಿದೆ.


ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿವೃತ್ತಿ ಯೋಜನೆ
ಮುಂದಿನ ಕ್ರಮಗಳಿಗಾಗಿ ವಿಮಾನಯಾನ ಸಂಸ್ಥೆಯು ನಿವೃತ್ತ ಪೈಲಟ್‌ಗಳ ಒಪ್ಪಿಗೆಯನ್ನು ಕೋರಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸುದ್ದಿ ಮೂಲಗಳಿಗೆ ಮಾಹಿತಿ ನೀಡಿದ್ದಾರೆ. ಮೂರು ವರ್ಷಗಳ ಹಿಂದೆ ನಿವೃತ್ತರಾದ ಪೈಲಟ್ಗಳಿಗೆ ಮಾಹಿತಿಯನ್ನು ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪೂರ್ಣ-ಸೇವಾ ವಾಹಕವು ಕ್ಯಾಬಿನ್ ಸಿಬ್ಬಂದಿ ಸೇರಿದಂತೆ ತನ್ನ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿವೃತ್ತಿ ಯೋಜನೆಯನ್ನು ಹೊರತಂದಿದೆ. ಮತ್ತು ಅದೇ ಸಮಯದಲ್ಲಿ ಹೊಸ ನೇಮಕಾತಿ ಮೂಲಕ ಹೊಸಬರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ.


 ಇದನ್ನೂ ಓದಿ:  Arrest: ಜೈಲು ಪಾಲಾದ ಬಾಡಿಗೆ ತಾಯಿ: 2 ದಿನದ ಶಿಶುವನ್ನು ಹಸ್ತಾಂತರಿಸುವಂತೆ ನ್ಯಾಯಾಲಯದ ಮೊರೆ ಹೋದ ದಂಪತಿ


ಪೈಲಟ್ಗಳು ವಿಮಾನಯಾನ ಸಂಸ್ಥೆಗೆ ಅತ್ಯಂತ ದುಬಾರಿ ಆಸ್ತಿಯಾಗಿದ್ದಾರೆ. ಅಲ್ಲದೆ ಇವರು ಕ್ಯಾಬಿನ್ ಸಿಬ್ಬಂದಿ ಮತ್ತು ವಿಮಾನ ನಿರ್ವಹಣಾ ಎಂಜಿನಿಯರ್‌ಗಳಂತಹ ಇತರ ಪ್ರಮುಖ ಪಾತ್ರಗಳಿಗೆ ಹೋಲಿಸಿದರೆ ಅತ್ಯಧಿಕ ವೇತನವನ್ನು ಪಡೆಯುತ್ತಾರೆ. ಇದಲ್ಲದೆ, ದೇಶೀಯ ವಿಮಾನಯಾನ ಉದ್ಯಮದಲ್ಲಿ ಸಮರ್ಪಕವಾಗಿ ತರಬೇತಿ ಪಡೆದ ಪೈಲಟ್ಗಳ ಕೊರತೆಯು ಯಾವಾಗಲೂ ಸಮಸ್ಯೆಯಾಗಿಯೇ ಉಳಿದುಕೊಂಡಿದೆ.


ಹೊಸ ಕೊಡುಗೆ ಬಗ್ಗೆ ಡೆಪ್ಯುಟಿ ಜನರಲ್ ಮ್ಯಾನೇಜರ್ ಮೇಲ್
"ಏರ್ ಇಂಡಿಯಾದಲ್ಲಿ ಕಮಾಂಡರ್ ಆಗಿ 5 ವರ್ಷಗಳ ಅವಧಿಗೆ ಅಥವಾ ನಿಮಗೆ 65 ವರ್ಷ ವಯಸ್ಸಾಗುವವರೆಗೆ ನಿವೃತ್ತಿಯ ನಂತರದ ಒಪ್ಪಂದಕ್ಕೆ ನಿಮ್ಮನ್ನು ಪರಿಗಣಿಸಲಾಗುತ್ತಿದೆ ಎಂದು ತಿಳಿಸಲು ನಾವು ಸಂತೋಷಪಡುತ್ತೇವೆ" ಎಂದು ಏರ್ ಇಂಡಿಯಾ ಸಿಬ್ಬಂದಿಯ ಡೆಪ್ಯುಟಿ ಜನರಲ್ ಮ್ಯಾನೇಜರ್, ವಿಕಾಸ್ ಗುಪ್ತಾ ಆಂತರಿಕ ಮೇಲ್‌ನಲ್ಲಿ ತಿಳಿಸಿದ್ದಾರೆ.


ನಿವೃತ್ತಿಯ ನಂತರದ ಒಪ್ಪಂದದ ಅವಧಿಯಲ್ಲಿ ಅಂತಹ ನೇಮಕಾತಿಗಳಿಗೆ ಏರ್ ಇಂಡಿಯಾದ ನೀತಿಯ ಪ್ರಕಾರ ನಿಮಗೆ ಸಂಭಾವನೆ ಮತ್ತು ಇತರೆ ಭತ್ಯೆಗಳನ್ನು ಪಾವತಿಸಲಾಗುವುದು ಎಂದು ವಿಕಾಸ್‌ ಗುಪ್ತಾ ತಿಳಿಸಿದ್ದಾರೆ. ಜೊತೆಗೆ ಆಸಕ್ತ ಪೈಲಟ್‌ಗಳು ತಮ್ಮ ವಿವರಗಳನ್ನು ಲಿಖಿತ ಒಪ್ಪಿಗೆಯೊಂದಿಗೆ ಜೂನ್ 23ರೊಳಗೆ ಮೇಲ್ ಮೂಲಕ ಸಂಸ್ಥೆಗೆ ಸಲ್ಲಿಸಲು ತಿಳಿಸಲಾಗಿದೆ. ಈ ಸಂಬಂಧ ಏರ್ ಇಂಡಿಯಾ ವಕ್ತಾರರಿಗೆ ಕಳುಹಿಸಲಾದ ಪ್ರಶ್ನೆಗೆ ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ.


ಟಾಟಾ ಗ್ರೂಪ್ ಏರ್ ಇಂಡಿಯಾ ವಿಮಾನ ಸಂಸ್ಥೆಯಲ್ಲಿ ಹೊಸ ಸುಧಾರಣೆ
ಏರ್ ಇಂಡಿಯಾದಲ್ಲಿ ಪೈಲಟ್‌ಗಳ ನಿವೃತ್ತಿ ವಯಸ್ಸು ಏರ್‌ಲೈನ್‌ನ ಇತರ ಎಲ್ಲಾ ಉದ್ಯೋಗಿಗಳಂತೆ 58 ಆಗಿದೆ. ಸಾಂಕ್ರಾಮಿಕ ರೋಗದ ಮೊದಲು, ಏರ್ ಇಂಡಿಯಾ ತನ್ನ ನಿವೃತ್ತ ಪೈಲಟ್‌ಗಳನ್ನು ಗುತ್ತಿಗೆಯ ಮೇಲೆ ಮರು-ನೇಮಕ ಮಾಡಿಕೊಳ್ಳುತ್ತಿತ್ತು ಆದರೆ ಮಾರ್ಚ್ 2020ರ ಅಂತ್ಯದ ನಂತರ ಈ ಕ್ರಮಕ್ಕೆ ಬ್ರೇಕ್ ಹಾಕಿತ್ತು. ಸಾಂಕ್ರಾಮಿಕ ಪರಿಣಾಮವನ್ನು ಭಾಗಶಃ ಸರಿದೂಗಿಸಲು ಅಂತಹ ಪೈಲಟ್‌ಗಳ ಒಪ್ಪಂದಗಳನ್ನು ಸಹ ಕೊನೆಗೊಳಿಸಲಾಯಿತು.


ಇದನ್ನೂ ಓದಿ:  GSAT-24 ಸಂವಹನ ಉಪಗ್ರಹ ಉಡಾವಣೆ ಮಾಡಿದ ಭಾರತ- ಇದರಿಂದಾಗುವ ಪರಿಣಾಮಗಳೇನು? ಇಲ್ಲಿದೆ ವಿವರ


ಆದಾಗ್ಯೂ, ಇತರ ಖಾಸಗಿ ವಿಮಾನಯಾನ ಸಂಸ್ಥೆಗಳಲ್ಲಿ ಪೈಲಟ್‌ಗಳು 65 ವರ್ಷ ವಯಸ್ಸನ್ನು ತಲುಪುವವರೆಗೆ ಸೇವೆಯಲ್ಲಿ ಇರುತ್ತಾರೆ. ಇನ್ನೂ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಏರ್‌ಲೈನ್ಸ್ ಬಿಡ್ ಅನ್ನು ಯಶಸ್ವಿಯಾಗಿ ಗೆದ್ದ ನಂತರ ಟಾಟಾ ಗ್ರೂಪ್ ಈ ವರ್ಷ ಜನವರಿ 27ರಂದು ಏರ್ ಇಂಡಿಯಾದ ನಿಯಂತ್ರಣವನ್ನು ತೆಗೆದುಕೊಂಡಿತು. ಅಂದಿನಿಂದ ಟಾಟಾ ಗ್ರೂಪ್ ಏರ್ ಇಂಡಿಯಾ ವಿಮಾನ ಸಂಸ್ಥೆಯಲ್ಲಿ ಹೊಸ ಹೊಸ ಸುಧಾರಣೆಗಳನ್ನು ತರುತ್ತಲೇ ಇದೆ.

Published by:Ashwini Prabhu
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು