ಹೊಸ Tata Ace Gold Diesel+ ಖಂಡಿತವಾಗಿಯೂ ಸಾಕಷ್ಟು ಪ್ಲಸ್‌ನೊಂದಿಗೆ ಬರಲಿದೆ!

Tata Ace Gold Diesel Plus: ನಮ್ಮ ಗ್ರಾಹಕರಿಗೆ ಅತ್ಯುತ್ತಮ ಸಮಯ ನಿರ್ವಹಣೆ, ಹೆಚ್ಚಿನ ಮೈಲೇಜ್ ನೀಡಲು ಮತ್ತು ಆ ಮೂಲಕ ಅವರು ಹೆಚ್ಚಿನ ಆದಾಯ ಪಡೆಯುವಂತಾಗಲು ಈಗ ಚಾಲ್ತಿಯಲ್ಲಿರುವ Ace Gold Diesel ಅನ್ನು ಅತ್ಯುನ್ನತ ತಂತ್ರಜ್ಞಾನದೊಂದಿಗೆ ಮರುವಿನ್ಯಾಸಗೊಳಿಸಲಾಗಿದೆ

Tata Ace Gold Diesel Plus

Tata Ace Gold Diesel Plus

 • Share this:
  ಛೋಟಾ ಹಾಥಿ ಎಂದೇ ಹೆಸರುವಾಸಿಯಾಗಿರುವ Tata Ace, 23 ಲಕ್ಷ ಗ್ರಾಹಕರ ಹೃದಯಗಳಲ್ಲಿ ಮನೆಮಾಡಿದೆ ಮತ್ತು ಇನ್ನೂ ಅದರ ಗ್ರಾಹಕರ ಸಂಖ್ಯೆ ಏರುತ್ತಲೇ ಇದೆ! Tata Ace, 2005ರಲ್ಲಿ ಪ್ರಾರಂಭವಾಗಿದ್ದು, ನಂತರ 2018ರಲ್ಲಿ Tata Ace Gold, 4 ಆವೃತ್ತಿಗಳಲ್ಲಿ ಮಾರುಕಟ್ಟೆಗೆ ಬಂದಿದೆ - Ace Gold Diesel, Ace Gold Petrol, Ace Gold CNG, Ace Gold Petrol Cx. Tata Ace Gold ಕುಟುಂಬಕ್ಕೆ ಇತ್ತೀಚೆಗೆ ಡೀಸೆಲ್ ಇಂಧನ ಬಳಸುವ ಹೊಸ ಆವೃತ್ತಿಯನ್ನು ಸೇರಿಸಲಾಗಿದೆ.

  ನಮ್ಮ ಗ್ರಾಹಕರಿಗೆ ಅತ್ಯುತ್ತಮ ಸಮಯ ನಿರ್ವಹಣೆ, ಹೆಚ್ಚಿನ ಮೈಲೇಜ್ ನೀಡಲು ಮತ್ತು ಆ ಮೂಲಕ ಅವರು ಹೆಚ್ಚಿನ ಆದಾಯ ಪಡೆಯುವಂತಾಗಲು ಈಗ ಚಾಲ್ತಿಯಲ್ಲಿರುವ Ace Gold Diesel ಅನ್ನು ಅತ್ಯುನ್ನತ ತಂತ್ರಜ್ಞಾನದೊಂದಿಗೆ ಮರುವಿನ್ಯಾಸಗೊಳಿಸಲಾಗಿದೆ. Ace Gold Diesel+ ಎಂದು ಹೆಸರಿಸಲಾಗಿರುವ ಈ ವಾಹನವು ಅಸ್ತಿತ್ವದಲ್ಲಿರುವ Ace Gold Dieselಗಿಂತ ಖಚಿತವಾಗಿ ಸಾಕಷ್ಟು ಧನಾತ್ಮಕ ಅಂಶಗಳನ್ನು ಒಳಗೊಂಡಿದೆ.

  ಇದಕ್ಕೆ 5.68 ಲಕ್ಷ ರೂಪಾಯಿಗಳ ದರವಿದ್ದು (ಎಕ್ಸ್-ಶೋ ರೂಂ ದರ), Tata Ace Gold Diesel+ 14.7 ಕಿ.ವ್ಯಾಟ್‌ನಷ್ಟು ಹೆಚ್ಚು ಶಕ್ತಿ, 45NMನಷ್ಟು ಪಿಕಪ್ ಮತ್ತು 27.5% ಶ್ರೇಣೀಯತೆ, ಅಂದರೆ ಲೋಡ್ ಒಯ್ಯುವ ಅತ್ಯುತ್ತಮ ಸಾಮರ್ಥ್ಯ ಹೊಂದಿದೆ ಮತ್ತು ಏರಿಳಿತವಿರುವ ಕಣಿವೆಗಳಲ್ಲಿಯೂ ಇದು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸುತ್ತದೆ. 750 ಕೆಜಿ ತೂಕವನ್ನು ಹೊತ್ತೊಯ್ಯುವ ಪ್ರಮಾಣಿತ ಸಾಮರ್ಥ್ಯವನ್ನು ಹೊಂದಿರುವ ಇದು ಸರಳವಾದ 2-ಸಿಲಿಂಡರ್ ಎಂಜಿನ್ ಒಳಗೊಂಡಿದೆ ಮತ್ತು ಸದೃಢ ಲೀಫ್ ಸ್ಪ್ರಿಂಗ್ ಸಸ್ಪೆನ್ಶನ್‌ ಹೊಂದಿದೆ.

  ಕಾರ್ಯನಿರ್ವಹಣೆ ಮತ್ತು ಲಾಭಗಳನ್ನು ಸುಲಭವಾಗಿ ಚಲಾಯಿಸಲು ಅತ್ಯುನ್ನತ BS6 ತಂತ್ರಜ್ಞಾನದೊಂದಿಗೆ Tata Ace Gold Diesel+ ವಾಹನವನ್ನು ವಿನ್ಯಾಸಗೊಳಿಸಲಾಗಿದೆ. ತನ್ನ ಗ್ರಾಹಕರಿಗೆ Tata Ace Gold Diesel+ ತಂದಿರುವ ಪ್ಲಸ್ ಅಂಶಗಳನ್ನು ತಿಳಿಯೋಣ-
  ಅಪ್‌ಟೈಮ್+

  Ace Gold Diesel + ನ ಸರಳ ಮತ್ತು ಅತ್ಯುನ್ನತ ತಂತ್ರಜ್ಞಾನವು ರಸ್ತೆ ಮೇಲೆ ಹೆಚ್ಚಿನ ವಾಹನದ ಅಪ್‌ಟೈಮ್ ನೀಡುತ್ತದೆ. ಇದು Ace Gold Diesel + ನ ವಿಶ್ವಾಸಾರ್ಹತೆಯೊಂದಿಗೆ ಟ್ರಿಪ್‌ಗಳ ಸಂಖ್ಯೆಯನ್ನು ಮತ್ತು ಆದಾಯವನ್ನು ಹೆಚ್ಚಿಸುತ್ತದೆ.

  ಮೈಲೇಜ್+

  ಈ ಸರಳ ತಂತ್ರಜ್ಞಾನವು ವಾಹನದಲ್ಲಿ ಹೆಚ್ಚಿನ ಇಂಧನ ದಕ್ಷತೆಯನ್ನು ಸಹ ಖಾತ್ರಿಪಡಿಸುತ್ತದೆ. ಗ್ರಾಹಕರು 22-23 kmpl ಮೈಲೇಜ್ ಪಡೆಯಬಹುದು, ಹಾಗಾಗಿ ಇದು ವಾಹನ ಓಡಿಸುವ ಅತ್ಯಂತ ಕಡಿಮೆ ದರವನ್ನು ಖಚಿತಪಡಿಸುತ್ತದೆ.

  ಆದಾಯ+

  Ace Gold Diesel +ನ ಗಮನಾರ್ಹವಾದ ಹೆಚ್ಚಿನ ಕಾರ್ಯಾಚರಣೆ ವಿಶ್ವಾಸಾರ್ಹತೆಯಿಂದಾಗಿ ಗ್ರಾಹಕರು ಹೆಚ್ಚು ಟ್ರಿಪ್‌ಗಳನ್ನು ಓಡಿಸಬಹುದು. ಹೆಚ್ಚು ಮೇಲೇಜ್ ನೀಡುವುದರೊಂದಿಗೆ, Ace Gold Diesel + ಗ್ರಾಹಕರಿಗೆ ಇದು ಆದಾಯ+ ಅನ್ನು ಖಚಿತಪಡಿಸುತ್ತದೆ.

  ಇಲ್ಲಿ ವಿವರಿಸಿರುವ ಮೌಲ್ಯವರ್ಧಿತ ಸೇವೆಗಳೊಂದಿಗೆ Ace Gold Diesel + ಬಂದಿದೆ:

  3 ವರ್ಷಗಳು/75000 ಕಿ.ಮೀ Freedom Platinum AMC:

  ಇನ್ನೂ ಒಂದು ಪ್ರವರ್ತಕ ಹೆಜ್ಜೆಯೊಂದಿಗೆ, ಫ್ರೀಡಂ ಪ್ಲಾಟಿನಂ ವಾರ್ಷಿಕ ನಿರ್ವಹಣೆ ಗುತ್ತಿಗೆ ಅಡಿಯಲ್ಲಿ ನೀವು 3 ವರ್ಷಗಳು ಅಥವಾ 75000 ಕಿ.ಮೀಗಳ AMCಯನ್ನು ಪಡೆಯುತ್ತೀರಿ, ಅದರೊಂದಿಗೆ ಪೂರಕವಾಗಿ ಎಂಜಿನ್ ಆಯಿಲ್ ಪರೀಕ್ಷೆ, AMC ಅವಧಿಯವರೆಗೂ ಪ್ರತಿ 50,000 ಕಿ.ಮೀಗಳಿಗೆ ಟಾಪ್ ಅಪ್ ನೀಡುತ್ತದೆ. ಇನ್ನೇನು ಬೇಕು? 5000 ಕಿ.ಮೀಗಳಿಗೆ ಬ್ರೇಕ್ ಕಾರ್ಯನಿರ್ವಹಣೆ, ಫ್ರಂಟ್ ಮತ್ತು ರೇರ್ ಬ್ರೇಕ್ ಪ್ಯಾಡ್ ವೇರ್, ಬ್ರೇಕ್ ಪೆಡಲ್ ಪ್ರಯಾಣ ಮತ್ತು ಪರಿಶೀಲನೆಯನ್ನು ಪಡೆಯುವಿರಿ. ಇದೆಲ್ಲವೂ ಕೇವಲ 40 ರೂಪಾಯಿ/ತಿಂಗಳಿಗೆ ದೊರೆಯುತ್ತದೆ.

  ಅಪ್‌ಟೈಮ್ ಗ್ಯಾರಂಟಿ

  ಗ್ರಾಹಕರೆಡೆಗಿನ ತನ್ನ ಬದ್ಧತೆಯೊಂದಿಗೆ, ಭಾರತದಲ್ಲಿ ಇದೇ ಮೊದಲ ಬಾರಿಗೆ SCV ವಿಭಾಗದಲ್ಲಿ, Tata Motors ಈ ಆವೃತ್ತಿಯೊಂದಿಗೆ ಗ್ಯಾರಂಟಿ ಅಪ್‌ಟೈಮ್ ಅನ್ನು ಪರಿಚಯಿಸಿದೆ. ಇದು 15,000 ಕಿ.ಮೀ ಅಥವಾ 6 ತಿಂಗಳು (ಯಾವುದು ಕಡಿಮೆಯೋ ಅದು) ಟ್ರಕ್ ನಿಶ್ಚಿತವಾಗಿಯೂ ಯಾವುದೇ ಸಮಸ್ಯೆಗಳಿಲ್ಲದಂತೆ ಓಡುವಂತೆ ಮಾಡುತ್ತದೆ. ನಿಮಗೆ ನೀಡಿರುವ ವಚನವನ್ನು ಉಳಿಸಿಕೊಳ್ಳುವಲ್ಲಿ ಟ್ರಕ್ ವಿಫಲವಾದರೆ, ನಿಮಗೆ ಪ್ರತಿಯೊಂದು ಬಾರಿ ಟ್ರಕ್ ಸ್ಥಗಿತಗೊಂಡಾಗಲೂ 1,000 ರೂಪಾಯಿಗಳ ಪರಿಹಾರವನ್ನು ನೀಡಲಾಗುತ್ತದೆ.

  ಸೇವಾ ಗ್ಯಾರಂಟಿ

  ವರ್ಕ್‌ಶಾಪ್‌ನಿಂದ ತೆರಳಿದ 24 ಗಂಟೆಗಳ ಒಳಗಾಗಿ ಯಾವುದೇ ರೀತಿಯ ರಿಪೇರಿ ಇದ್ದರೂ ಸಹ ಮರಳಿ ತನ್ನಿ – ಈ ತತ್ವದಲ್ಲಿ ಯಾವುದೇ ಹೊಂದಾಣಿಕೆ ಇಲ್ಲ ಮತ್ತು ಒಂದು ವೇಳೆ ಟ್ರಕ್ ಅನ್ನು 24 ಗಂಟೆಗಳ ನಂತರವೂ ರಿಪೇರಿಗಾಗಿ ಯಾರೂ ಗಮನಿಸದಿದ್ದರೆ ದಿನಕ್ಕೆ 1000 ರೂಪಾಯಿಗಳ ಪರಿಹಾರದ ಗ್ಯಾರಂಟಿಯೊಂದಿಗೆ ಇದು ಬಂದಿದೆ! ಇದು ನಿಮ್ಮ ಸಾರಿಗೆ ವ್ಯವಹಾರವನ್ನು ವರ್ಧಿಸುವುದರಲ್ಲಿ ಅನುಮಾನವೇ ಇಲ್ಲ!

  ಲಕ್ಷಾಂತರ ಭಾರತೀಯ ಉದ್ಯಮಿಗಳ ಆಕಾಂಕ್ಷೆಗಳನ್ನು ಈಡೇರಿಸಲು, ಕಡಿಮೆ ಕಾರ್ಯಾಚರಣೆ ವೆಚ್ಚದೊಂದಿಗೆ ತಮ್ಮ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡಲು ಮತ್ತು ತನ್ನ ವರ್ಗದಲ್ಲಿ ಅತಿ ಹೆಚ್ಚು ಆದಾಯ ಗಳಿಸುವ ಸಾಮರ್ಥ್ಯವನ್ನು ಒದಗಿಸಲು Tata Ace Gold Diesel+ ತಯಾರಾಗಿದೆ.

  Tata Motorsನ ಇತರ ವಾಣಿಜ್ಯ ವಾಹನಗಳಂತೆಯೇ, ಇದು ಸಹ Sampoorna Seva 2.0 ಉಪಕ್ರಮದ ಸುರಕ್ಷತೆಯನ್ನು ಹೊಂದಿದ್ದು, ಅದರಿಂದಾಗಿ Tata Motorsನ ಮೌಲ್ಯವರ್ಧಿತ ಸೇವೆಗಳಾದ Tata Alert, Tata Zippy, Tata Kavach ಮತ್ತು Tata Samarth ಅನ್ನು ಪಡೆಯಬಹುದು. ಇವುಗಳು ತ್ವರಿತ ರಿಪೇರಿಗಳು, ಸಮರ್ಥ ಸೇವೆ, ತಡೆರಹಿತ ವಿಮೆ ಮತ್ತು ಚಾಲಕರ ಕಲ್ಯಾಣದ ಅನುಕೂಲ ಮಾಡಿಕೊಡುತ್ತವೆ.
  ನಿಮ್ಮ ವ್ಯಾಪಾರಕ್ಕೆ ‘ಪ್ಲಸ್’ ನೀಡಲು, ಅರ್ಹವಾಗಿರುವ Tata Ace Gold Diesel+ಗೆ ಬಿಟ್ಟುಬಿಡಿ, ಭರವಸೆ ಮತ್ತು ವಿಶ್ವಾಸಾರ್ಹತೆಯೊಂದಿಗೆ ಭಾರತದ ಮುಂಚೂಣಿ ಸಣ್ಣ ವಾಣಿಜ್ಯ ವಾಹನದ ಹೆಸರಿನೊಂದಿಗೆ ಅದು ಆಗಮಿಸಿದೆ. ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ಹೊಚ್ಚ ಹೊಸ Ace ಬುಕ್ ಮಾಡಿ. Tata Motors CV ಸೇಲ್ಸ್ ಪ್ಲಾಟ್‌ಫಾರ್ಮ್‌ಗೆ ಭೇಟಿ ಕೊಡಿ.
  Published by:Sharath Sharma Kalagaru
  First published: