• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Taslima Nasreen: ಮೊಣಕಾಲು ನೋವೆಂದು ಆಸ್ಪತ್ರೆಗೆ ಹೋದ್ರೆ, ಹಿಪ್‌ ರಿಪ್ಲೇಸ್‌ಮೆಂಟ್‌ ಸರ್ಜರಿ ಮಾಡಿದ್ರು- ಲೇಖಕಿ ತಸ್ಲೀಮಾ ನಸ್ರೀನ್ ಆರೋಪ

Taslima Nasreen: ಮೊಣಕಾಲು ನೋವೆಂದು ಆಸ್ಪತ್ರೆಗೆ ಹೋದ್ರೆ, ಹಿಪ್‌ ರಿಪ್ಲೇಸ್‌ಮೆಂಟ್‌ ಸರ್ಜರಿ ಮಾಡಿದ್ರು- ಲೇಖಕಿ ತಸ್ಲೀಮಾ ನಸ್ರೀನ್ ಆರೋಪ

ಲೇಖಕಿ ತಸ್ಲೀಮಾ ನಸ್ರೀನ್

ಲೇಖಕಿ ತಸ್ಲೀಮಾ ನಸ್ರೀನ್

ಜನವರಿ 13 ರಂದು ತಡರಾತ್ರಿ ತಾನು ದಾಖಲಾಗಿದ್ದು, ಜನವರಿ 14 ರಂದು ಬೆಳಗ್ಗೆ ಅವರು ನನ್ನನ್ನು ಒಟ್ಟು ಹಿಪ್ ರಿಪ್ಲೇಸ್‌ಮೆಂಟ್‌ ಆಪರೇಷನ್‌ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದರು.

  • Trending Desk
  • 4-MIN READ
  • Last Updated :
  • New Delhi, India
  • Share this:

ಮೊಣಕಾಲು ನೋವಿಗೆಂದು(Ankle Pain) ಆಸ್ಪತ್ರೆಗೆ ಹೋದರೆ ಅಲ್ಲಿನ ವೈದ್ಯರು(Doctors) ನನಗೆ ಹಿಪ್(Hip)‌ ಅಥವಾ ಸೊಂಟದ ಬದಲಿ ಶಸ್ತ್ರಚಿಕಿತ್ಸೆಗೆ(Surgery) ಒತ್ತಾಯಿಸಿದ್ದಾಗಿ ಲೇಖಕಿ ತಸ್ಲೀಮಾ ನಸ್ರೀನ್‌ ದೆಹಲಿ ಮೂಲದ ಖಾಸಗಿ ಆಸ್ಪತ್ರೆಯ ವಿರುದ್ಧ ಆರೋಪ ಮಾಡಿದ್ದಾರೆ. ವಿನಾಕಾರಣ ತಮಗೆ ಒತ್ತಾಯ ಮಾಡಿದ್ದಾಗಿ ಅಪೋಲೋ ಆಸ್ಪತ್ರೆಯ(Apollo Hospital) ವೈದ್ಯರಾದ ಡಾ. ಯತೀಂದರ್‌ ಖರ್ಬಂದಾ ವಿರುದ್ಧ ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ.


“ಸರ್ಜರಿಗಾಗಿ ನನ್ನನ್ನು ಒತ್ತಾಯಿಸಲಾಯಿತು”


"ನಾನು ಮೊಣಕಾಲು ನೋವಿನಿಂದಾಗಿ ಅಪೋಲೊ ಆಸ್ಪತ್ರೆಗೆ ಹೋಗಿದ್ದು, ಅಲ್ಲಿ ಡಾ. ಯತೀಂದರ್ ಖರ್ಬಂದ ನನಗೆ ಸೊಂಟದ ಮುರಿತವಿದೆ ಎಂದು ಹೇಳಿದರು. ಆದರೆ ನನಗೆ ಎಕ್ಸರೇಯನ್ನು ತೋರಿಸಲಿಲ್ಲ.


ಜನವರಿ 13 ರಂದು ತಡರಾತ್ರಿ ತಾನು ದಾಖಲಾಗಿದ್ದು, ಜನವರಿ 14 ರಂದು ಬೆಳಗ್ಗೆ ಅವರು ನನ್ನನ್ನು ಒಟ್ಟು ಹಿಪ್ ರಿಪ್ಲೇಸ್‌ಮೆಂಟ್‌ ಆಪರೇಷನ್‌ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದರು.


ಆದರೆ ಯಾವುದೇ ಸೊಂಟದ ಮುರಿತ ಕಂಡುಬಂದಿಲ್ಲ ಮತ್ತು ಸುಳ್ಳು ಡಿಸ್ಚಾರ್ಜ್ ಸಮ್ಮರಿಯನ್ನು ಮಾಡಲಾಗಿದೆ ಎಂದು ನನಗೆ ನಂತರದಲ್ಲಿ ತಿಳಿದುಬಂದಿತು” ಎಂಬುದಾಗಿ ಟ್ವಿಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ.


“ಯೋಚಿಸಲು ಸಮಯವನ್ನೇ ನೀಡಲಿಲ್ಲ”


"ಸರ್ಜರಿಯ ಬಗ್ಗೆ ನನಗೆ ಯೋಚಿಸಲು ಅಥವಾ ಸ್ನೇಹಿತರು, ಕುಟುಂಬದೊಂದಿಗೆ ಚರ್ಚಸಿಲು, 2 ನೇ ಅಭಿಪ್ರಾಯವನ್ನು ಕೇಳಲು ಸಮಯವನ್ನೇ ನೀಡಲಿಲ್ಲ. ನಾನು ಒಬ್ಬಂಟಿಯಾಗಿದ್ದೆ.


ಇದನ್ನೂ ಓದಿ: Husband-Wife: ಮೊಬೈಲ್​​ ಫೋನ್​​​ ಸೀಕ್ರೆಟ್​​ ಲಾಕ್​​ ಓಪನ್​ ಮಾಡಲಿಲ್ಲ ಅಂತ ಗಂಡನ ವಿರುದ್ಧ ಪತ್ನಿ ದೂರು; FIR ದಾಖಲಿಸಿದ ಪೊಲೀಸ್​


ಡಾ. ಖರ್ಬಂದ ಅವರು ಟೋಟಲ್ ಹಿಪ್ ರಿಪ್ಲೇಸ್ಮೆಂಟ್ ಮತ್ತು OT ಸಿದ್ಧವಾಗಿದೆ. ಬೇಗ ಸರ್ಜರಿ ಮಾಡಬೇಕು ಎಂದು ಹೇಳಿದರು. ಅವರು ಯಾವುದೇ ಸೂಚನೆಯಿಲ್ಲದೆ ಹಾಗೆ ಮಾಡಿದರು. ಇದು ಖಂಡಿತವಾಗಿಯೂ ದುರುಪಯೋಗವಾಗಿದೆ ” ಎಂದು ಅವರು ಬರೆದುಕೊಂಡಿದ್ದಾರೆ. “ಸರ್ಜರಿಯ ತೊಡಕುಗಳಿಂದ ನಾನು ಸತ್ತರೆ ಆ ವೈದ್ಯರೇ ಕಾರಣ”!


“ಮೊಣಕಾಲು ನೋವಿನಿಂದ ಅಪೋಲೋ ಆಸ್ಪತ್ರೆಗೆ ತಲುಪಿದ ನಂತರ ಅವರು ಕೆಲವೇ ಗಂಟೆಗಳಲ್ಲಿ ನನ್ನ THR (Total Hip Replacement)ಮಾಡಿದರು.


ಇದು ಇನ್ನೂ ಒಂದು ದುಃಸ್ವಪ್ನವಾಗಿದೆ. ಅವರು ಎಕ್ಸ್‌ರೇ ಮತ್ತು ಬಗ್ಗೆ ನನಗೆ ಸುಳ್ಳು ಹೇಳಿದರು. ಟೋಟಲ್ ಹಿಪ್ ರಿಪ್ಲೇಸ್‌ಮೆಂಟ್‌ನ ತೊಡಕುಗಳಿಂದ ನಾನು ಸತ್ತರೆ, ಡಾಕ್ಟರ್ ಖರ್ಬಂದ ಅವರೇ ಜವಾಬ್ದಾರರು” ಎಂದು ತಸ್ಲೀಮಾ ಹೇಳಿದ್ದಾರೆ.


ನನಗೆ ವಿಷಾದವಿದೆ ಎಂದು ತಸ್ಲೀಮಾ


ಅವಶ್ಯಕತೆಯೇ ಇಲ್ಲದ ಟೋಟಲ್ ಹಿಪ್ ರಿಪ್ಲೇಸ್‌ಮೆಂಟ್‌ಗಾಗಿ ಅವರು ನನ್ನ ಮೇಲೆ ಒತ್ತಡ ಹೇರಿದಾಗ ಆ ಆಸ್ಪತ್ರೆಯಿಂದ ಹೊರಬರಬೇಕಿತ್ತು. ಅದಕ್ಕಾಗಿ ನನಗೆ ವಿಷಾದವಿದೆ ಎನ್ನುವ ತಸ್ಲೀಮಾ ನಾನು AIIMS ಗೆ ಹೋಗಬೇಕಿತ್ತು ಎಂದಿದ್ದಾರೆ.


ಡಾಕ್ಟರ್‌ಗಳನ್ನು ಕುರುಡಾಗಿ ನಂಬಿದ್ದಕ್ಕಾಗಿ ನಾನು ವಿಷಾದಿಸುತ್ತೇನೆ. ನನಗೆ ಯೋಚಿಸಲು ಅಥವಾ 2 ನೇ ಅಭಿಪ್ರಾಯವನ್ನು ಪಡೆಯಲು ಸಮಯ ನೀಡದಿದ್ದಾಗ ನಾನು ಇಲ್ಲ ಎಂದು ಹೇಳಬೇಕಿತ್ತು. ಹಾಗೆ ಹೇಳದ್ದಕ್ಕೆ ನಾನು ವಿಷಾದಿಸುತ್ತೇನೆ ಎಂದು ಅವರು ಹೇಳಿಕೊಡಿದ್ದಾರೆ. ಅಲ್ಲದೇ ಚಿಕಿತ್ಸೆಗಾಗಿ ಆಸ್ಪತ್ರೆಯು 7,42,845 ರೂಪಾಯಿಗಳನ್ನು ವಿಧಿಸಿದೆ ಎಂದೂ ಅವರು ಹೇಳಿಕೊಂಡಿದ್ದಾರೆ.


ಸೊಂಟ ಬದಲಿ ಶಸ್ತ್ರಚಿಕಿತ್ಸೆ ಯಾವಾಗ ಮಾಡುತ್ತಾರೆ?ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ಹಿಪ್ ಜಾಯಿಂಟ್‌ನಲ್ಲಿ ಗಮನಾರ್ಹವಾದ ನೋವು ಅಥವಾ ಉರಿಯೂತವನ್ನು ಹೊಂದಿರುವಾಗ ವೈದ್ಯರು ರೋಗಿಯನ್ನು ಹಿಪ್ ಬದಲಿ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಶಿಫಾರಸು ಮಾಡುತ್ತಾರೆ.


ಅಸ್ಥಿಸಂಧಿವಾತ, ರುಮಟಾಯ್ಡ್ ಸಂಧಿವಾತ, ಸೊಂಟದ ಮುರಿತ ಮತ್ತು ಸೊಂಟದಲ್ಲಿನ ಗೆಡ್ಡೆಯಂತಹ ಆರೋಗ್ಯದ ತೊಂದರೆಗಳು ವ್ಯಕ್ತಿಯನ್ನು ನಿಶ್ಚಲಗೊಳಿಸುತ್ತದೆ. ಆಗ ಇಂಥ ಶಸ್ತ್ರಚಿಕಿತ್ಸೆಯನ್ನು ಶಿಫಾರಸು ಮಾಡಲಾಗುತ್ತದೆ.



ಸಂಪೂರ್ಣ ಹಿಪ್ ರಿಪ್ಲೇಸ್‌ಮೆಂಟ್ ಶಸ್ತ್ರಚಿಕಿತ್ಸೆಯ ವೇಳೆ ಈಗಾಗಲೇ ಹಾನಿಗೊಳಗಾದ ಕಾರ್ಟಿಲೆಜ್ ಮತ್ತು ಮೂಳೆಯನ್ನು ತೆಗೆದುಹಾಕಲಾಗುತ್ತದೆ. ಕೃತಕ ಘಟಕಗಳೊಂದಿಗೆ ಅದನ್ನು ಬದಲಾಯಿಸಲಾಗುತ್ತದೆ.


ಇದನ್ನೂ ಓದಿ: 108 Variety Dishes: ಮೊದಲ ಸಲ ಮನೆಗೆ ಬಂದ ಅಳಿಯನಿಗೆ 108 ಬಗೆಯ ಖಾದ್ಯ ತಯಾರಿಸಿ ಬಡಿಸಿದ ಅತ್ತೆ!


ಲಭ್ಯವಿರುವ ಎಲ್ಲಾ ಇತರ ಚಿಕಿತ್ಸಾ ವಿಧಾನಗಳಿಗೆ ಸೊಂಟವು ಪ್ರತಿಕ್ರಿಯಿಸಲು ವಿಫಲವಾದಾಗ ಇದನ್ನು ಶಿಫಾರಸ್ಸು ಮಾಡಲಾಗುತ್ತದೆ. ಸಾಮಾನ್ಯವಾಗಿ ವಿಪರೀತ ನೋವು, ನಡಿಗೆ ಅಥವಾ ಮೆಟ್ಟಿಲು ಹತ್ತಲು ತೊಂದರೆ, ಮಲಗುವಾಗ ಹೆಚ್ಚು ಸಮಸ್ಯೆಯಾಗುವುದು ಇಂಥ ಸಂದರ್ಭಗಳಲ್ಲಿ ವೈದ್ಯರು ಇಂಥ ಚಿಕಿತ್ಸೆಗೆ ಸಲಹೆ ನೀಡುತ್ತಾರೆ.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು