ಬಿಜೆಪಿಯೇತರ ಸಿಎಂಗಳು ಸಿಎಬಿ ಕಾಯ್ದೆ ಜಾರಿಯಾಗದಂತೆ ನೋಡಿಕೊಳ್ಳಬೇಕು; ಜೆಡಿಯು ನಾಯಕ ಪ್ರಶಾಂತ್ ಕಿಶೋರ್​ ಒತ್ತಾಯ

ಜೆಡಿಯು ಪಕ್ಷದ ಸಂವಿಧಾನ ಮೊದಲ ಪುಟದಲ್ಲೇ ಮೂರು ಬಾರಿ ಜಾತ್ಯಾತೀತ ಎಂಬ ಪದವನ್ನು ಬಳಕೆ ಮಾಡಲಾಗಿದೆ. ಇಂತಹ ಪಕ್ಷ ಧರ್ಮದ ಆಧಾರದ ಮೇಲೆ ಪೌರತ್ವ ಹಕ್ಕನ್ನು ತಾರತಮ್ಯ ಮಾಡುವ ಕಾಯ್ದೆಗೆ ಬೆಂಬಲ ಸೂಚಿಸಿದ್ದು ಸಂವಿಧಾನ ಮತ್ತು ಗಾಂಧಿ ಆಶಯಗಳಿಗೆ ವಿರುದ್ಧವಾದದ್ದು ಎಂದು ಜೆಡಿಯು ರಾಷ್ಟ್ರೀಯ ಉಪಾಧ್ಯಕ್ಷ ಪ್ರಶಾಂತ್​ ಕಿಶೋರ್ ವಿಷಾಧ ವ್ಯಕ್ತಪಡಿಸಿದ್ದರು.

MAshok Kumar | news18-kannada
Updated:December 13, 2019, 12:24 PM IST
ಬಿಜೆಪಿಯೇತರ ಸಿಎಂಗಳು ಸಿಎಬಿ ಕಾಯ್ದೆ ಜಾರಿಯಾಗದಂತೆ ನೋಡಿಕೊಳ್ಳಬೇಕು; ಜೆಡಿಯು ನಾಯಕ ಪ್ರಶಾಂತ್ ಕಿಶೋರ್​ ಒತ್ತಾಯ
ಪ್ರಶಾಂತ್ ಕಿಶೋರ್.
  • Share this:
ನವದೆಹಲಿ (ಡಿಸೆಂಬರ್ 13): ಲೋಕಸಭೆ ಹಾಗೂ ರಾಜ್ಯಸಭೆ ಎರಡರಲ್ಲೂ ಅಂಗೀಕಾರವಾಗಿರುವ “ಪೌರತ್ವ ತಿದ್ದುಪಡಿ ಮಸೂದೆ” ಜಾರಿಯಾಗದಂತೆ ದೇಶದ 16 ಬಿಜೆಪಿಯೇತರ ಮುಖ್ಯಮಂತ್ರಿಗಳು ಒಟ್ಟಾಗಿ ತಡೆಯಬೇಕು ಎಂದು ಜೆಡಿಯು (ಜನತಾದಳ ) ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಪ್ರಶಾಂತ್ ಕಿಶೋರ್ ಒತ್ತಾಯಿಸಿದ್ದಾರೆ.

ಈ ಕುರಿತು ಇಂದು ಟ್ವೀಟ್ ಮಾಡುವ ಮೂಲಕ ಅಭಿಪ್ರಾಯ ಹೊರಹಾಕಿರುವ ಅವರು, “ದೇಶದ ಬಿಜೆಪಿಯೇತರ ಸಿಎಂ ಗಳು ಒಟ್ಟಾಗಿ ‘ಭಾರತದ ಆತ್ಮವನ್ನು ಉಳಿಸಿ’ ಮತ್ತು ಈ ವಿವಾದಾತ್ಮಕ ಕಾಯ್ದೆ ಅನುಷ್ಠಾನವಾಗದಂತೆ ತಡೆಯುವ ನಿಲುವನ್ನು ತೆಗೆದುಕೊಳ್ಳಬೇಕು” ಎಂದು ಕರೆ ನೀಡಿದ್ದಾರೆ.

"ಪಂಜಾಬ್, ಕೇರಳ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳು ಈಗಾಗಲೇ ಎನ್ಆರ್​ಸಿ ಹಾಗೂ ಸಿಎಬಿ ಕಾಯ್ದೆಗಳಿಗೆ ತಮ್ಮ ಬೆಂಬಲ ಇಲ್ಲ ಎಂದು ಸ್ಪಷ್ಟಡಿಸಿದ್ದಾರೆ. ಹೀಗಾಗಿ ಉಳಿದವರು ಕೂಡ ಈ ಕುರಿತ ತೀರ್ಮಾನ ತೆಗೆದುಕೊಳ್ಳಲು ಇದು ಸೂಕ್ತ ಸಮಯ. ಈ ಕಾಯ್ದೆ ಸಂಸತ್ತಿನಲ್ಲಿ ಬಹುಮತ ಗಳಿಸಿದ್ದು ನ್ಯಾಯಾಂಗವನ್ನೂ ಮೀರಿ ಭಾರತದ ಆತ್ಮವನ್ನು ಉಳಿಸುವ ಕೆಲಸವಾಗಬೇಕಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬಿಜೆಪಿ ಸೋಮವಾರ ಲೋಕಸಭೆಯಲ್ಲಿ ಮಂಡಿಸಿತ್ತು. ಮೈತ್ರಿಗೆ ಕಟ್ಟುಬಿದ್ದು ಹಲವಾರು ಭಿನ್ನಾಭಿಪ್ರಾಯದ ನಡುವೆಯೂ ಜೆಡಿಯು ಈ ಮಸೂದೆಯನ್ನು ಬೆಂಬಲಿಸಿತ್ತು. ತದನಂತರ ಈ ಕುರಿತು ವಿಷಾಧ ವ್ಯಕ್ತಪಡಿಸಿದ್ದ ಪ್ರಶಾಂತ್ ಕಿಶೋರ್, “ಈ ಕಾಯ್ದೆ ಧರ್ಮದ ಆಧಾರದ ಮೇಲೆ ಜನರಲ್ಲಿ ತಾರತಮ್ಯ ಮಾಡುತ್ತಿದೆ. ಗಾಂಧಿವಾದವನ್ನು ಆದರ್ಶವಾಗಿ ಪಾಲಿಸುವ ಹಾಗೂ ಜಾತ್ಯಾತೀತ ನಿಲುವು ಹೊಂದಿರುವ ನಾಯಕ ನಿತೀಶ್ ಕುಮಾರ್ ಈ ಕಾಯ್ದೆಗೆ ಅನುಮತಿ ನೀಡಿರುವುದು ಪಕ್ಷದ ಸಿದ್ದಾಂತಕ್ಕೆ ಒಪ್ಪುವುದಿಲ್ಲ” ಎಂದು ಕಿಡಿಕಾರಿದ್ದರು.

ಅಲ್ಲದೆ, “ಜೆಡಿಯು ಪಕ್ಷದ ಸಂವಿಧಾನ ಮೊದಲ ಪುಟದಲ್ಲೇ ಮೂರು ಬಾರಿ ಜಾತ್ಯಾತೀತ ಎಂಬ ಪದವನ್ನು ಬಳಕೆ ಮಾಡಲಾಗಿದೆ. ಇಂತಹ ಪಕ್ಷ ಧರ್ಮದ ಆಧಾರದ ಮೇಲೆ ಪೌರತ್ವ ಹಕ್ಕನ್ನು ತಾರತಮ್ಯ ಮಾಡುವ ಕಾಯ್ದೆಗೆ ಬೆಂಬಲ ಸೂಚಿಸಿದ್ದು ಸಂವಿಧಾನ ಮತ್ತು ಗಾಂಧಿ ಆಶಯಗಳಿಗೆ ವಿರುದ್ಧವಾದದ್ದು” ಎಂದು ವಿಷಾಧ ವ್ಯಕ್ತಪಡಿಸಿದ್ದರು.

ಇನ್ನೂ ಬಿಜೆಪಿ ಪಕ್ಷದ ವಿರುದ್ಧವೂ ತಮ್ಮ ಟ್ವಿಟರ್ ಖಾತೆಯಲ್ಲಿ ನಿರಂತರ ಟೀಕಾಪ್ರಹಾರ ನಡೆಸುತ್ತಿರುವ ಪ್ರಶಾಂತ್ ಕಿಶೋರ್ ಬಿಜೆಪಿಯೇತರ ಮುಖ್ಯಮಂತ್ರಿಗಳು ಅಧಿಕಾರದಲ್ಲಿರುವ ರಾಜ್ಯದಲ್ಲಿ ಈ ಕಾಯ್ದೆ ಜಾರಿಯಾಗದಂತೆ ತಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಕೇಂದ್ರದ ನೂತನ ಮಸೂದೆಗೆ ಕೆಂಡವಾದ ಈಶಾನ್ಯ ಭಾರತ; ಏನಿದು ಪೌರತ್ವ ತಿದ್ದುಪಡಿ ಮಸೂದೆ? ಜನಾಕ್ರೋಶಕ್ಕೆ ಕಾರಣವೇನು? ಇಲ್ಲಿದೆ ಡೀಟೈಲ್ಸ್
First published:December 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading