• Home
  • »
  • News
  • »
  • national-international
  • »
  • Shocking Murder: ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸಿ, ಮೈಮೇಲೆ ಫೆವಿಕ್ವಿಕ್ ಸುರಿದು ಖಾಸಗಿ ಅಂಗ ಕಿತ್ತು ಕೊಂದ ಮಾಂತ್ರಿಕ

Shocking Murder: ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸಿ, ಮೈಮೇಲೆ ಫೆವಿಕ್ವಿಕ್ ಸುರಿದು ಖಾಸಗಿ ಅಂಗ ಕಿತ್ತು ಕೊಂದ ಮಾಂತ್ರಿಕ

ಬಂಧಿತ ಮಾಂತ್ರಿಕ

ಬಂಧಿತ ಮಾಂತ್ರಿಕ

ಮಾಂತ್ರಿಕ ಈ ಇಬ್ಬರ ಮೇಲೆ ಫೆವಿಕ್ವಿಕ್ ಸುರಿದಾಗ ರಾಹುಲ್ ಮತ್ತು ಸೋನು ಸ್ವಲ್ಪ ಸಮಯದವರೆಗೆ ಪರಸ್ಪರ ಅಂಟಿಕೊಂಡಿದ್ದರು. ಫೆವಿಕ್ವಿಕ್​ನಿಂದ ಅಂಟಿಹೋಗಿದ್ದ ಚರ್ಮವನ್ನು ಬೇರ್ಪಡಿಸಿಕೊಳ್ಳಲು ಇಬ್ಬರೂ ಎಳೆದುಕೊಂಡಿದ್ದಾರೆ. ಆಗ ಚರ್ಮ ಕಿತ್ತುಹೋಗಿದೆ.

  • News18 Kannada
  • Last Updated :
  • Karnataka, India
  • Share this:

    ಪುರುಷ ಮತ್ತು ಮಹಿಳೆಯೋರ್ವರ ಬಳಿ ತನ್ನ ಕಣ್ಣಮುಂದೆಯೇ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿ ಕೊಲೆ ಮಾಡಿದ ಆರೋಪದಡಿ ಮಾಂತ್ರಿಕನೋರ್ವನನ್ನು (Tantrik Arrested) ಬಂಧಿಸಲಾಗಿದೆ. ಅಲ್ಲದೇ ಓರ್ವ ಪುರುಷ ಮತ್ತು ಮಹಿಳೆಯ ನಗ್ನ ದೇಹಗಳನ್ನೂ ಸಹ ಪತ್ತೆಹಚ್ಚಲಾಗಿದೆ. ತನ್ನ ಮುಂದೆಯೇ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿದ್ದಲ್ಲದೇ ಇಬ್ಬರನ್ನು ಕೊಲೆ ಮಾಡಲಾಗಿದೆ ಎಂಬ ಆರೋಪದಡಿ 55 ವರ್ಷದ ಮಾಂತ್ರಿಕನನ್ನು ಬಂಧಿಸಲಾಗಿದೆ. ಪುರುಷ ಮತ್ತು ಮಹಿಳೆಯ ಮೃತ ನಗ್ನದೇಹಗಳು ದೊರೆತ ಬೆನ್ನಲ್ಲೇ ಪೊಲೀಸರು (Police Case) ಶೋಧಕಾರ್ಯಕ್ಕೆ ಮುಂದಾಗಿದ್ದರು. ಮೊದಲು ಮರ್ಯಾದಾ ಹತ್ಯೆ (Maryada Murder) ಆಗಿರಬಹುದು ಎಂಬ ಶಂಕೆ ವ್ಯಕ್ತವಾದರೂ ಮುಂದೆ ಈ ಪ್ರಕರಣ (Crime News) ಹೊಸ ತಿರುವನ್ನೇ ಪಡೆದುಕೊಂಡಿದೆ.


    ಸದ್ಯ ದೊರೆತ ನಗ್ನ ಮೃತದೇಹಗಳು 30 ವರ್ಷದ ಓರ್ವ ಶಿಕ್ಷಕಿ ಮತ್ತು 28 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದೆ. ಪೊಲೀಸರಿಗೆ ದೊರೆತ ಮಾಹಿತಿಯ ಪ್ರಕಾರ ಇಬ್ಬರೂ ಬೇರೆ ಬೇರೆ ಕುಟುಂಬಕ್ಕೆ ಸೇರಿದವರು. ಇಬ್ಬರಿಗೂ ಬೇರೆ ಬೇರೆಯವರ ಜೊತೆಯೇ ಮದುವೆಯಾಗಿತ್ತು. ಈ ಇಬ್ಬರ ಕುಟುಂಬದ ಸದಸ್ಯರೂ ಸಹ ಒಂದೇ ಮಾಂತ್ರಿಕನ ಬಳಿ ಆಗಾಗ ಭೇಟಿ ನೀಡುತ್ತಿದ್ದರು. ಹೀಗೆ ಇಬ್ಬರಿಗೂ ಪರಿಚಯ ಏರ್ಪಟ್ಟಿತ್ತು.


    ಇಬ್ಬರ ಭೇಟಿಗೂ ಈ ಮಾಂತ್ರಿಕನೇ ಕಾರಣ
    ಮೃತರನ್ನು 30 ವರ್ಷದ ಶಿಕ್ಷಕ ರಾಹುಲ್ ಮೀನಾ ಮತ್ತು 28 ವರ್ಷದ ಸೋನು ಕುನ್ವರ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ರಾಹುಲ್ ಮತ್ತು ಸೋನು ಇಬ್ಬರೂ ಪ್ರತ್ಯೇಕ ವ್ಯಕ್ತಿಗಳನ್ನು ಮದುವೆಯಾಗಿದ್ದರು. ಈ ಇಬ್ಬರ ಕುಟುಂಬದ ಸದಸ್ಯರೂ ಆಗಾಗ ಮಾಂತ್ರಿಕನನ್ನು ಭೇಟಿ ಮಾಡುತ್ತಿದ್ದರು. ಅಲ್ಲೇ ಇಬ್ಬರಿಗೂ ಪರಿಚಯವಾಯಿತು.


    ಅದೇ ಸಂದರ್ಭದಲ್ಲಿ ರಾಹುಲ್ ತಮ್ಮ ಹೆಂಡತಿಯೊಂದಿಗೆ ಆಗಾಗ ಜಗಳವಾಡಲು ಪ್ರಾರಂಭಿಸಿದ್ರು. ಇದರಿಂದ ಸಿಟ್ಟಿಗೆದ್ದ ರಾಹುಲ್ ಅವರ ಪತ್ನಿ ಮಾಂತ್ರಿಕನ ಸಹಾಯ ಕೇಳಿದ್ದರು.


    ಅಕ್ರಮ ಸಂಬಂಧದ ಬಗ್ಗೆ ಬಾಯ್ಬಿಟ್ಟ ಮಾಂತ್ರಿಕ!
    ಪೊಲೀಸರಿಗೆ ದೊರೆತ ಮಾಹಿತಿಯ ಪ್ರಕಾರ, ಮಾಂತ್ರಿಕ ಕಳೆದ ಏಳೆಂಟು ವರ್ಷಗಳಿಂದ ಇಲ್ಲಿ ವಾಸವಾಗಿದ್ದ. ಜನರಿಗೆ ತಾಯತ ತಯಾರಿಸಿ ಕೊಡುತ್ತಿದ್ದ. ಹೀಗಾಗಿ ಊರ ಜನರಿಗೆಲ್ಲ ಪರಿಚಯಸ್ಥನಾಗಿದ್ದ. ಹೀಗಾಗಿ ರಾಹುಲ್ ಪತ್ನಿಗೂ ಸಹ ಈ ಮಾಂತ್ರಿಕ ಚಿರಪತಿಚಿತನಾಗಿದ್ದ. ಹೀಗಾಗಿ ರಾಹುಲ್ ಮತ್ತು ಸೋನು ಅಕ್ರಮ ಸಂಬಂಧದ ಬಗ್ಗೆ ರಾಹುಲ್ ಪತ್ನಿಗೂ ಈ ಮಾಂತ್ರಿಕ ತಿಳಿಸಿಬಿಟ್ಟಿದ್ದ!


    ಇದನ್ನೂ ಓದಿ: Crime News: ಅಪ್ಪ, ಅಮ್ಮ, ಅಕ್ಕ, ಅಜ್ಜಿಯನ್ನು ಕೊಂದ 'ಕುಲಪುತ್ರ': ಮತ್ತೊಂದು ಕೊಲೆ ಪ್ರಕರಣಕ್ಕೆ ತತ್ತರಿಸಿದ ದೆಹಲಿ!


    ತನ್ನ ಮತ್ತು ಸೋನು ಸಂಬಂಧದ ಬಗ್ಗೆ ತನ್ನ ಹೆಂಡತಿಗೆ ಹೇಳಿದ್ದಾನೆ ಎಂದು ರಾಹುಲ್​ಗೆ ತಿಳಿದಿದೆ. ಸುಳ್ಳು ಕಿರುಕುಳ ಪ್ರಕರಣ ದಾಖಲಿಸಿ ಮಾನಹಾನಿ ಮಾಡುವುದಾಗಿ ಇಬ್ಬರು ತಾಂತ್ರಿಕನಿಗೆ ಬೆದರಿಕೆ ಹಾಕಿದ್ದಾರೆ. ಭಯದಿಂದ ಮಾಂತ್ರಿಕ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಸಂಚು ಹೂಡಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.


    ಏಕಾಂತ ಪ್ರದೇಶದಲ್ಲಿ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯ
    ಆರೋಪಿ ಮಾಂತ್ರಿಕ ಸುಮಾರು 50 ಟ್ಯೂಬ್‌ಗಳ ಸೂಪರ್‌ಗ್ಲೂ ಖರೀದಿಸಿ ಬಾಟಲಿಗೆ ಸುರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನವೆಂಬರ್ 15 ರ ಸಂಜೆ ರಾಹುಲ್ ಮತ್ತು ಸೋನು ಅವರನ್ನು ಕಾಡಿನಲ್ಲಿ ಏಕಾಂತ ಪ್ರದೇಶಕ್ಕೆ ಕರೆದು ಲೈಂಗಿಕ ಕ್ರಿಯೆ ನಡೆಸುವಂತೆ ಬೆದರಿಕೆ ಹಾಕಿದ್ದಾನೆ.


    ದೈಹಿಕವಾಗಿ ಬೆರೆತಾಗ ಫೆವಿಕ್ವಿಕ್ ಸುರಿದ ಮಾಂತ್ರಿಕ
    ಪೊಲೀಸರ ಪ್ರಕಾರ, ಇಬ್ಬರು ದೈಹಿಕವಾಗಿ ಬೆರೆತಾಗ ಮಾಂತ್ರಿಕ ಫೆವಿಕ್ವಿಕ್ ಬಾಟಲಿಯನ್ನು ಅವರ ಮೇಲೆ ಸುರಿದಿದ್ದಾನೆ. ಈ ಕೃತ್ಯದಲ್ಲಿ ತೊಡಗಿದ್ದಾಗ ಇಬ್ಬರನ್ನೂ ಕೊಲ್ಲುವುದು ಮಾಂತ್ರಿಕನ ಉದ್ದೇಶವಾಗಿತ್ತು. ಇದರಿಂದ ಜನರು ಅವರ ದೇಹವನ್ನು ಕಂಡುಕೊಂಡಾಗ ಅವರು ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದರು ಎಂದು ಪೊಲಿಸರು ತಿಳಿಸಿದ್ದಾರೆ.


    ಇದನ್ನೂ ಓದಿ: Explained: ಭಾರತದ ರಾಷ್ಟ್ರೀಯ ಲಾಂಛನ ಪತ್ತೆಹಚ್ಚಿದ್ದು ಜರ್ಮನ್ ಮೂಲದ ಎಂಜಿನಿಯರ್! ಕುತೂಹಲ ಹುಟ್ಟಿಸುತ್ತೆ ವಿವರ


    ಕಿತ್ತುಬಂತು ಖಾಸಗಿ ಅಂಗ!
    ಮಾಂತ್ರಿಕ ಈ ಇಬ್ಬರ ಮೇಲೆ ಫೆವಿಕ್ವಿಕ್ ಸುರಿದಾಗ ರಾಹುಲ್ ಮತ್ತು ಸೋನು ಸ್ವಲ್ಪ ಸಮಯದವರೆಗೆ ಪರಸ್ಪರ ಅಂಟಿಕೊಂಡಿದ್ದರು. ಫೆವಿಕ್ವಿಕ್​ನಿಂದ ಅಂಟಿಹೋಗಿದ್ದ ಚರ್ಮವನ್ನು ಬೇರ್ಪಡಿಸಿಕೊಳ್ಳಲು ಇಬ್ಬರೂ ಎಳೆದುಕೊಂಡಿದ್ದಾರೆ. ಆಗ ಚರ್ಮ ಕಿತ್ತುಹೋಗಿದೆ. ರಾಹುಲ್ ಅವರ ದೇಹದಿಂದ ಖಾಸಗಿ ಅಂಗ ಬೇರ್ಪಟ್ಟಿದ್ದು, ಸೋನು ಅವರ ಖಾಸಗಿ ಅಂಗಗಳಿಗೂ ಗಾಯಗಳಾಗಿವೆ.

    Published by:ಗುರುಗಣೇಶ ಡಬ್ಗುಳಿ
    First published: