ಬೆಂಗಳೂರು: ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ಚಿನಮ್ಮ ಈಗ ಕನ್ನಡ ಭಾಷೆ ಪ್ರಿಯೆ. ಹೌದು, ಶಶಿಕಲಾ ಕನ್ನಡ ಮಾತಾಡುವುದು, ಬರೆಯುವುದು, ಓದುವುದನ್ನು ಕಲಿತಿದ್ದಾರೆ. ಮೊದ ಮೊದಲು ಭಾಷಾ ಸಮಸ್ಯೆಯಿಂದ ಜೈಲಿನ ಸಿಬ್ಬಂದಿಗೂ ಸಮಸ್ಯೆಯಾಗಿತ್ತು. ಆದರೆ ಈಗ ಅಧಿಕಾರಿಗಳು, ಸಿಬ್ಬಂದಿ ಮತ್ತು ಸಹ ಕೈದಿಗಳ ಜೊತೆ ಶಶಿಕಲಾ ಅವರು ಕನ್ನಡದಲ್ಲೇ ಮಾತನಾಡುತ್ತಾರಂತೆ.
ಜೊತೆಗೆ ಕೃಷಿ ಬಗ್ಗೆ ತುಂಬಾ ಆಸಕ್ತಿ ಹೊಂದಿರುವ ಶಶಿಕಲಾ ಜೈಲಲ್ಲಿ ಅರ್ಧ ಎಕರೆ ಜಮೀನಿನಲ್ಲಿ ಬೇಸಾಯ ಮಾಡಿದ್ದು, ಅರ್ಧ ಎಕರೆ ಜಮೀನಿನಲ್ಲಿ ಒಂದು ಟನ್ ಪಪ್ಪಾಯ ಬೆಳೆದಿದ್ದಾರೆ. ಸ್ವತಃ ಗುದ್ದಲಿ ಹಿಡಿದು ಪಪ್ಪಾಯ ನೆಟ್ಟು ಮಿಶ್ರ ಬೆಳೆ ಪದ್ದತಿಯಲ್ಲಿ ಬೆಳೆ ತೆಗೆದಿದ್ದಾರೆ. ಪಪ್ಪಾಯ, ತೊಗರಿ, ಬೀನ್ಸ್, ಬದನೆಕಾಯಿ, ನುಗ್ಗೆಕಾಯಿ ಬೆಳೆದಿದ್ದಾರೆ.
ಇದಷ್ಟೇ ಅಲ್ಲದೇ ಸ್ಯಾರಿ ಡಿಸೈನ್ಸ್ , ಬಳೆ, ಸರದ ತಯಾರಿಕೆಯಲ್ಲೂ ಶಶಿಕಲಾ ಎತ್ತಿದ ಕೈ. ಸರದ ಮಣಿ ಜೋಡಿಕೆಯ ವಿವಿಧ ಡಿಸೈನ್ಸ್ ಸಹ ಮಾಡಿದ್ದಾರೆ .ಬೆಳಗ್ಗೆ ತೋಟದ ಕೆಲಸ, ಮಧ್ಯಾಹ್ನ ಡಿಸೈನ್ಸ್, ಸಂಜೆ ಪೂಜೆ ಧ್ಯಾನ ಮಾಡುವುದು ಶಶಿಕಲಾ ಅವರ ದಿನಚರಿಯಾಗಿದೆ. ಮಹಿಳಾ ಬ್ಯಾರಕ್ ಹೋಗುವ ದಾರಿಯುದ್ದಕ್ಕೂ ಕೆಂಪು ಗುಲಾಬಿ ಗಿಡ ಹಾಕಿಸಿದ್ದಾರೆ. 150 ಕೆಂಪು ಗುಪಾಬಿ ಗಿಡ ನೆಟ್ಟಿದ್ದು, ಬ್ಯಾರಕ್ ಎಲ್ಲವೂ ಸ್ವಚ್ಚತೆಗೆ ಶಶಿಕಲಾ ಆದ್ಯತೆ ನೀಡಿದ್ದಾರೆ. ಸದ್ಯ ಇನ್ನೊಂದು ತಿಂಗಳಲ್ಲಿ ಶಶಿಕಲಾ ಜೈಲಿಂದ ಬಿಡುಗಡೆ ಆಗುತ್ತಿದ್ದಾರೆ. ಈ ನಡುವೆ ಜೈಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಬಳಿ ಸಂಯಮದಿಂದ ವರ್ತಿಸಿರುವುದುಎಲ್ಲರ ಮೆಚ್ಚುಗೆಗೆ ಪಾತ್ರರಾಗಿದೆ.
ಇದನ್ನು ಓದಿ: ತಮಿಳುನಾಡಿನ ವಿಧಾನಸಭಾ ಚುನಾವಣೆ ಬೆನ್ನಲ್ಲೇ ಶಶಿಕಲಾ ಬಿಡುಗಡೆಗೆ ಸಿದ್ದತೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ