Tamilnadu: ವರುಣನ ಅಬ್ಬರಕ್ಕೆ ಪತರುಗುಟ್ಟಿದ ತಮಿಳುನಾಡು: ಮುಂದಿನ 3 ಗಂಟೆಯಲ್ಲಿ ಮತ್ತೆ ಭಾರೀ ಮಳೆ!

Tamilnadu: ಮುಂದಿನ ಮೂರು ಗಂಟೆಗಳಲ್ಲಿ ತಮಿಳುನಾಡಿನ ತಿರುವಳ್ಳೂರು(Tiruvallur) , ಚೆನ್ನೈ(Chennai), ಚೆಂಗಲ್ಪಟ್ಟು(Chengalpattu) ಮತ್ತು ಕಾಂಚೀಪುರಂ(Kanchipuram) ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(Indian Meteorological Department) ಮುನ್ಸೂಚನೆ ನೀಡಿದೆ.

ಮುಂದಿನ 3 ಗಂಟೆಯಲ್ಲಿ ಮತ್ತೆ ಮಳೆ ಅಬ್ಬರ

ಮುಂದಿನ 3 ಗಂಟೆಯಲ್ಲಿ ಮತ್ತೆ ಮಳೆ ಅಬ್ಬರ

  • Share this:
ತಮಿಳುನಾಡಿ(Tamilnadu)ನಲ್ಲಿ ಸುರಿದ ಭಾರಿ ಮಳೆಯಿಂದ(Heavy Rainfall) ಈಗಾಗಲೇ ಜನ ಪರದಾಡುವಂತಾಗಿದೆ. ಮನೆಗಳೆಲ್ಲ ನೀರಿನಿಂದ ತುಂಬಿಹೋಗಿದೆ. ಎಲ್ಲೆ ನೋಡಿದರೂ ಅಲ್ಲಿ ನೀರು ತುಂಬುಕೊಂಡಿದೆ. ಕರೆಂಟ್​ ಇಲ್ಲದೆ, ಸರಿಯಾದ ಊಟ(Food) ಇಲ್ಲದೇ ಅಲ್ಲಿನ ಜನ ನಲುಗಿಹೋಗಿದ್ದಾರೆ. ಇದರ ಮಧ್ಯೆ ಮುಂದಿನ ಮೂರು ಗಂಟೆಗಳಲ್ಲಿ ತಮಿಳುನಾಡಿನ ತಿರುವಳ್ಳೂರು(Tiruvallur) , ಚೆನ್ನೈ(Chennai), ಚೆಂಗಲ್ಪಟ್ಟು(Chengalpattu) ಮತ್ತು ಕಾಂಚೀಪುರಂ(Kanchipuram) ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(Indian Meteorological Department) ಮುನ್ಸೂಚನೆ ನೀಡಿದೆ.  ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಮುಂದಿನ ಎರಡು ದಿನಗಳ ಕಾಲ ರಾಜ್ಯದಲ್ಲಿ ಮಳೆ ಮುಂದುವರೆಯುವ ನಿರೀಕ್ಷೆ ಇದೆ.ಈಗಾಗಲೇ ಪ್ರವಾಹದಿಂದ ಅಲ್ಲಿನ ಜನಜೀವನ ಅಸ್ತವ್ಯಸ್ತವಾಗಿದೆ. ಮತ್ತಷ್ಟು ಮಳೆಯಾದರೆ ಇನ್ನೂ ಸಂಕಷ್ಟ ಹೆಚ್ಚಾಗಲಿದೆ. 

ಇಂದು ಸಂಜೆ ವೇಳೆಗೆ ಭಾರೀ ಮಳೆ

ಇಂದು ಸಂಜೆಯ ವೇಳೆಗೆ ಹವಾಮಾನ ವ್ಯವಸ್ಥೆಯು ಉತ್ತರ ತಮಿಳುನಾಡು ಮತ್ತು ಪಕ್ಕದ ದಕ್ಷಿಣ ಆಂಧ್ರಪ್ರದೇಶದ ಕರಾವಳಿಯ ಕಾರೈಕಲ್ ಮತ್ತು ಶ್ರೀಹರಿಕೋಟಾ ನಡುವಿನ ಪುದುಚೇರಿಯನ್ನು ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ತಮಿಳುನಾಡಿನ ಕಡಲೂರು, ಕಲ್ಲಕುರಿಚಿ, ವಿಲ್ಲುಪುರಂ, ರಾಣಿಪೇಟ್, ವೆಲ್ಲೂರು, ತಿರುವಣ್ಣಾಮಲೈ, ಕನ್ಯಾಕುಮಾರಿ, ತಿರುನೆಲ್ವೇಲಿ ಮತ್ತು ಥೆಂಕಾಸಿ ಜಿಲ್ಲೆಗಳಲ್ಲಿ ಮತ್ತು ಪುದುಚೇರಿಯ ಪ್ರತ್ಯೇಕ ಸ್ಥಳಗಳಲ್ಲಿ ಸಾಧಾರಣ ಮಳೆಯಾಗಲಿದೆ. ಈ ಮುನ್ನ ಬುಧವಾರ ಸಹ ರಾಜ್ಯದಲ್ಲಿ ಭಾರೀ ಮಳೆಯಾಗಿದೆ. ಇನ್ನೂ  ಸಾವಿನ ಸಂಖ್ಯೆ 12 ಏರಿಕೆಯಾಗಿದೆ.

20 ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​

ಹವಾಮಾನ ಮುನ್ಸೂಚನೆಯ ಹಿನ್ನೆಲ್ಲೇ ಇಂದು, ಚೆನ್ನೈ ಸೇರಿದಂತೆ ತಮಿಳುನಾಡಿನ 20 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಇಂದು ಭಾರೀ ಮಳೆಯಾಗುವ ಮುನ್ಸೂಚನೆ ಬೆನ್ನಲ್ಲೇ ತಮಿಳುನಾಡು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಟಿಎನ್‍ಎಸ್‍ಡಿಎಂಎ) ತೂತುಕುಡಿ, ವಿಲ್ಲಿಪುರಂ, ತಿರುನೆಲ್ವೇಲಿ, ನಾಗಪಟ್ಟಿಣಂ, ಕಡಲೂರು ಮತ್ತು ಚೆಂಗಲ್‍ಪೆಟ್ಟು ಜಿಲ್ಲೆಗಳಲ್ಲಿ ಪ್ರವಾಹ ಎಚ್ಚರಿಕೆ ನೀಡಿದೆ. ಜನರು ಆದಷ್ಟು ಎಚ್ಚರದಿಂದ ಇರುವಂತೆ ಮನವಿ ಮಾಡಿದ್ದಾರೆ. ಅನಾವಶ್ಯಕವಾಗಿ ಮನೆಯಿಂದ ಹೊರಬಾರದಂತೆ ತಾಕೀತು ಮಾಡಲಾಗಿದೆ.

ಇದನ್ನು ಓದಿ: ತಮಿಳುನಾಡಿನಲ್ಲಿ ಇಂದು ಮತ್ತು ನಾಳೆ ಕೂಡ ರೆಡ್​ ಆಲರ್ಟ್​; ಚೆನ್ನೈ ಜನರಿಗೆ ಎಚ್ಚರಿಕೆ ಸೂಚನೆ

ಇಂದೂ ಶಾಲೆಗಳಿಗೆ ರಜೆ

ಹವಾಮಾನ ಇಲಾಖೆಯ ಸಲಹೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ಇಂದು ಚೆನ್ನೈ, ಕಾಂಚೀಪುರಂ, ತಿರುವಳ್ಳೂರು, ಚೆಂಗೆಲ್‍ಪೇಟ್, ಕಡಲೂರು, ನಾಗಪಟ್ಟಿಣಂ, ತಂಜಾವೂರು, ತಿರುವರೂರು ಮತ್ತು ಮೈಲಾಡುತುರೈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ.   ಹವಾಮಾನ ವೈಪರೀತ್ಯದಿಂದಾಗಿ ಚೆನ್ನೈಗೆ ಆಗಮಿಸುವ ಮತ್ತು ಚೆನ್ನೈನಿಂದ ಹೊರಡುವ ನಾಲ್ಕು ವಿಮಾನಗಳನ್ನು ಬುಧವಾರ ರದ್ದುಗೊಳಿಸಲಾಗಿದೆ.

6 ಜಿಲ್ಲೆಗಳಲ್ಲಿ ಪ್ರವಾಹದ ಎಚ್ಚರಿಕೆ

ತಮಿಳುನಾಡು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಟಿಎನ್‌ಎಸ್‌ಡಿಎಂಎ) ತೂತುಕುಡಿ, ವಿಲ್ಲುಪುರಂ, ತಿರುನೆಲ್ವೇಲಿ, ನಾಗಪಟ್ಟಣಂ, ಕಡಲೂರು ಮತ್ತು ಚೆಂಗಲ್‌ಪೆಟ್ಟು ಜಿಲ್ಲೆಗಳಿಗೆ ಇಂದು ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ. 6 ಜಿಲ್ಲೆಗಳಲ್ಲಿ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಇಲ್ಲಿನ ಜನರನ್ನು ಆದಷ್ಟು ಬೇರೆಡೆಗೆ  ಸ್ಥಳಾಂತರ ಮಾಡುವ ಕಾರ್ಯ ನಡೆಯುತ್ತಿದೆ.

ಇದನ್ನು ಓದಿ: ಭಾರೀ ಮಳೆಯಿಂದ ಚೆನ್ನೈ ಸೇರಿದಂತೆ 3 ಜಿಲ್ಲೆಗಳಲ್ಲಿ ಶಾಲೆಗೆ ರಜೆ ಘೋಷಣೆ​; ಪ್ರಧಾನಿಯಿಂದ ಅಗತ್ಯ ನೆರವಿನ ಭರವಸೆ

ರಣ ಮಳೆಯಿಂದ 530 ಮನೆಗಳಿಗೆ ಹಾನಿ 

ಕಳೆದ ಕೆಲವು ದಿನಗಳಿಂದ ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರ ಪರಿಣಾಮ ಐದು ಜನರು ಸಾವನ್ನಪ್ಪಿದ್ದಾರೆ, 530 ಮನೆಗಳಿಗೆ ಹಾನಿಯಾಗಿದೆ.ಕಷ್ಟ ಪಟ್ಟಯ ಕೂಲಿ ನಾಲಿ ಮಾಡಿ ಕಟ್ಟಿಕೊಂಡಿದ್ದ ಅದೆಷ್ಟೋ ಗುಡಿಸಲುಗಳು ಕೂಡ ವರುಣನ ಅಬ್ಬರಕ್ಕೆ ಚೆಲ್ಲಾಪಿಲ್ಲಿಯಾಗಿ ಕೊಚ್ಚಿಕೊಂಡು ಹೋಗಿದೆ. ಇಲ್ಲಿನ ಜನರು ದಿಕ್ಕುತೋಚದೇ ಕಣ್ಣೀರಿಡುತ್ತಿದ್ದಾರೆ.

ಅಮ್ಮ ಕ್ಯಾಂಟಿನ್​ ಮೂಲಕ ಉಚಿತ ಆಹಾರ

ಮಳೆಯಿಂದ ಹಾನಿಗೊಳಗಾದ ನಿರಾಶ್ರಿತರಿಗಾಗಿ 169 ಪರಿಹಾರ ಕೇಂದ್ರಗಳು ತೆರೆಯಲಾಗಿದೆ. ಅಮ್ಮ ಕ್ಯಾಂಟೀನ್ ಮೂಲಕ ಹಾನಿಗೊಳಗಾದವರಿಗೆ ಉಚಿತ ಆಹಾರವನ್ನು ನೀಡಲಾಗುತ್ತಿದೆ.  ಚೆನ್ನೈ ಕಾರ್ಪೊರೇಷನ್ ತಗ್ಗು ಪ್ರದೇಶಗಳಲ್ಲಿನ ಸಮುದಾಯಗಳಿಗೆ ಆಹಾರ ಪ್ಯಾಕೆಟ್​ಗಳನ್ನು ವಿತರಿಸಲಾಗುತ್ತಿದೆ.  ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಚೆನ್ನೈನ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಆಹಾರ ವಿತರಿಸಿದರು.
Published by:Vasudeva M
First published: