• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ತಮಿಳುನಾಡು: ಭ್ರಷ್ಟಾಚಾರ ನಿಗ್ರಹ ದಳದ ದಾಳಿ; ಕಾನೂನು ಸಮಿತಿ ರಚಿಸಿಕೊಂಡ ಎಐಎಡಿಎಂಕೆ ನಾಯಕರು

ತಮಿಳುನಾಡು: ಭ್ರಷ್ಟಾಚಾರ ನಿಗ್ರಹ ದಳದ ದಾಳಿ; ಕಾನೂನು ಸಮಿತಿ ರಚಿಸಿಕೊಂಡ ಎಐಎಡಿಎಂಕೆ ನಾಯಕರು

ಎಐಡಿಎಂಕೆ ನಾಯಕರಾದ ಪಳನಿಸ್ವಾಮಿ- ಪನ್ನೀರ ಸೆಲ್ವಂ

ಎಐಡಿಎಂಕೆ ನಾಯಕರಾದ ಪಳನಿಸ್ವಾಮಿ- ಪನ್ನೀರ ಸೆಲ್ವಂ

ಮಾಜಿ ಸಚಿವ ವೇಲುಮಣಿಯವರಿಗೆ ಸೇರಿದ ಕೊಯಮತ್ತೂರು, ಚೆನ್ನೈ, ದಿಂಡಿಗುಲು ಮತ್ತು ಕಾಂಚೀಪುರಂಗಳಲ್ಲಿ ದಾಳಿ ಮಾಡಿ ಎಫ್ಐಆರ್ ದಾಖಲಿಸಲಾಗಿದೆ.  ವೇಲುಮಣಿ, ಅವರ ಸಹೋದರ ಪಿ ಅನ್ಬರಸನ್ ಮತ್ತು ಇತರ 15 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

  • Share this:

 ಕೊಯಮತ್ತೂರು ಭಾಗದ ಹಿರಿಯ ನಾಯಕ ಎಸ್‌ಪಿ ವೇಲುಮಣಿ ಅವರ ಮೇಲೆ ಭ್ರಷ್ಟಾಚಾರ ಆರೋಪದ ಮೇಲೆ ನಡೆದಿರುವ  ದಾಳಿಯ ಹಿನ್ನೆಲೆಯಲ್ಲಿ ಡಿಎಂಕೆ ಸರ್ಕಾರದ ಈ ದ್ವೇಷ ರಾಜಕಾರಣಕ್ಕೆ ಕಾನೂನುಬದ್ಧವಾಗಿ ಪ್ರತಿಕ್ರಿಯಿಸಲು ಎಐಎಡಿಎಂಕೆ ಹಿರಿಯ ನಾಯಕರೆಲ್ಲಾ ಸೇರಿ ಸಮಿತಿಯನ್ನು ಸ್ಥಾಪಿಸಿರುವುದಾಗಿ ಹೇಳಿದೆ.

"ಈ ಸಮಿತಿಯು ಡಿಎಂಕೆ ಸರ್ಕಾರದ ರಾಜಕೀಯ ಪ್ರೇರಿತ ಆರೋಪ, ದಾಳಿ ಹಾಗೂ ಇತರೇ ಸಂಗತಿಗಳನ್ನು ಕಾನೂನುಬದ್ಧವಾಗಿ ಎದುರಿಸಲಾಗುವುದು" ಎಂದು ಪಕ್ಷವು ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದೆ.


ಆರು ಸದಸ್ಯರ ಸಮಿತಿಯನ್ನು ಮಾಜಿ ಮೀನುಗಾರಿಕೆ ಸಚಿವ ಮತ್ತು ವಕ್ತಾರ ಡಿ ಜಯಕುಮಾರ್ ನೇತೃತ್ವ ವಹಿಸಿದ್ದಾರೆ. ಸಮಿತಿಯು ಈ ಹಿಂದೆ ಪಕ್ಷ ಎದುರಿಸಿದ್ದ ಕಾನೂನು ಪ್ರಕರಣಗಳ ಕುರಿತು ಸಮಾಲೋಚನೆಯಲ್ಲಿ ಭಾಗಿಯಾಗಿದ್ದ ಮುಖಂಡರಾದ ತಲವಾಯಿ ಸುಂದರಂ, ಸಿ ವೆ ಷಣ್ಮುಗಂ (ಮಾಜಿ ಕಾನೂನು ಸಚಿವ), ಬಾಬು ಮುರುಗವೇಲ್, ಐಎಸ್ ಇಂಬಾದುರೈ ಮತ್ತು ಪಿಎಚ್ ಮನೋಜ್ ಪಾಂಡಿಯನ್ ಅವರನ್ನು ಒಳಗೊಂಡಿದೆ.


 ಹಿಂದಿನ ಸರ್ಕಾರದ ಅವಧಿಯಲ್ಲಿ  ವೇಲುಮಣಿ ಕುಟುಂಬವು ಗುತ್ತಿಗೆಯನ್ನು ಪಡೆಯುವಲ್ಲಿ ಟೆಂಡರ್ ನಿಯಮ ಉಲ್ಲಂಘನೆ  ಮಾಡಿದೆ ಹಾಗೂ ಭಾರೀ ಭ್ರಷ್ಟಾಚಾರ ಎಸಗಿದೆ ಇವರ ವಿರುದ್ದ ಕ್ರಮ ಕೈಗೊಳ್ಳಿ ಎಂದು ಅರಪ್ಪೋರ್ ಇಯಕ್ಕಂನ ಮುಖ್ಯಸ್ಥ ವೇಲುಮಣಿ ದೂರು ಸಲ್ಲಿಸಿದ್ದರು. ಆದ ಕಾರಣ ಇವರ ಮೇಲೆ ದಾಳಿ ಉಂಟಾಗಿತ್ತು, ಈ ಎಲ್ಲಾ ಬೆಳವಣಿಗೆ ನಡೆದ ನಂತರ ಮಾಜಿ ಆಡಳಿತ ಪಕ್ಷವು ಸಮಿತಿಯನ್ನು ಸ್ಥಾಪಿಸಿದೆ.


ಬೃಹತ್ ಚೆನ್ನೈ ಮತ್ತು ಕೊಯಮತ್ತೂರು ಕಾರ್ಪೊರೇಶನ್‌ಗಳಲ್ಲಿ ಸರಕು/ಸೇವೆಗಳ ಟೆಂಡರ್ ಕೆಲಸಗಳ ನಿರ್ಮಾಣ ಮತ್ತು ಪೂರೈಕೆಯನ್ನು ನೀಡುವಲ್ಲಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪದ ಮೇಲೆ ಜಾಗೃತ ಮತ್ತು ಭ್ರಷ್ಟಾಚಾರ ವಿರೋಧಿ ನಿರ್ದೇಶನಾಲಯ(ಡಿವಿಎಸಿ)ಎಡಿಎಂಕೆ ಮಾಜಿ ಸಚಿವ ಎಸ್ ಪಿ ವೇಲುಮಣಿ ಅವರಿಗೆ ಸೇರಿದ ಆಸ್ತಿಪಾಸ್ತಿಗಳ ಮೇಲೆ ಮಂಗಳವಾರ ದಾಳಿ ನಡೆಸಿತ್ತು.


ಮಾಜಿ ಸಚಿವ ವೇಲುಮಣಿಯವರಿಗೆ ಸೇರಿದ ಕೊಯಮತ್ತೂರು, ಚೆನ್ನೈ, ದಿಂಡಿಗುಲು ಮತ್ತು ಕಾಂಚೀಪುರಂಗಳಲ್ಲಿ ದಾಳಿ ಮಾಡಿ ಎಫ್ಐಆರ್ ದಾಖಲಿಸಲಾಗಿದೆ.  ವೇಲುಮಣಿ, ಅವರ ಸಹೋದರ ಪಿ ಅನ್ಬರಸನ್ ಮತ್ತು ಇತರ 15 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.


ಮಾಜಿ ಸಚಿವ ವೇಲುಮಣಿ ಮತ್ತು ಇತರರ ವಿರುದ್ಧ ಸೆಕ್ಷನ್ 120ಬಿ ಆರ್/ಡಬ್ಲ್ಯು 420, ಐಪಿಸಿ ಸೆಕ್ಷನ್ 409 ಮತ್ತು ಸೆಕ್ಷನ್ಸ್ 13(2) ಆರ್/ಡಬ್ಲ್ಯು 13(1ಹೆಚ್ ಸಿ) ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆ 13(1)(ಡಿ), 1988 ಆರ್/ಡಬ್ಲ್ಯು 109 ಐಪಿಸಿಯಡಿ ಕೇಸು ದಾಖಲಾಗಿದೆ.


ಇದನ್ನೂ ಓದಿ:  USA: ನ್ಯೂಯಾರ್ಕ್‌ನ ಮೊದಲ ಮಹಿಳಾ ಗವರ್ನರ್ ಆದ ಕ್ಯಾತಿ ಹೊಚುಲ್

top videos


    ವೇಲುಮಣಿ ಮತ್ತು ಬೃಹತ್ ಚೆನ್ನೈ ನಗರ, ಕೊಯಮತ್ತೂರು ನಗರದ ಕಾರ್ಪೊರೇಷನ್‌ಗಳ ಇತರ ಮತ್ತು ಅಧಿಕಾರಿಗಳು, 2014 ರಿಂದ 2018 ರ ಅವಧಿಯಲ್ಲಿ ಬಸ್ ಪಥದ ರಸ್ತೆ,  ಚರಂಡಿ ನಿರ್ಮಾಣ ಒಪ್ಪಂದಗಳಲ್ಲಿ ಅವೈಜ್ಞಾನಿಕವಾಗಿ ಟೆಂಡರ್‌ಗಳನ್ನು ನೀಡಿದ್ದರು. ಬೃಹತ್ ಚೆನ್ನೈ ಮತ್ತು ಕೊಯಮತ್ತೂರು ನಗರ ಪಾಲಿಕೆಗಳಲ್ಲಿನ ಆರೋಗ್ಯ ಇಲಾಖೆಗೆ ಸಿಬ್ಬಂದಿಯನ್ನು ಹೊರಗುತ್ತಿಗೆ ನೀಡುವುದು ಮತ್ತು ಕಾನೂನಿನಿಂದ ಸ್ಥಾಪಿಸಲಾದ ಕಾರ್ಯವಿಧಾನವನ್ನು ಉಲ್ಲಂಘಿಸುವ ಮೂಲಕ ಮತ್ತು ಸರ್ಕಾರದ ಸಾರ್ವಜನಿಕ ಹಣವನ್ನು ವಂಚನೆ ಮತ್ತು ಕ್ರಿಮಿನಲ್ ದುರುಪಯೋಗಕ್ಕೆ ಒಳಪಡಿಸಲಾಗಿದೆ ಎಂದು ಡಿವಿಎಸಿ ಎಫ್ಐಆರ್ ನಲ್ಲಿ ದಾಖಲಿಸಿದೆ.


    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

    First published: