POCSO Act: 10ನೇ ತರಗತಿ ವಿದ್ಯಾರ್ಥಿ ಮದುವೆಯಾದ ಮಹಿಳಾ ಶಿಕ್ಷಕಿ; ಪೋಕ್ಸೋ ಕಾಯ್ದೆ ಅಡಿ ಬಂಧನ

ಅಪ್ರಾಪ್ತನ ಮದುವೆಯಾದ (Marriage) ಹಿನ್ನಲೆ ಶಿಕ್ಷಕಿ ವಿರುದ್ಧ ಪೊಲೀಸರು ಇದೀಗೆ ಪೋಕ್ಸೋ ಕಾಯ್ದೆ ಅಡಿ  ಪ್ರಕರಣ ಕೂಡ ದಾಖಲಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಚೆನ್ನೈ (ಡಿ. 30): ಪ್ರೀತಿ ಕುರುಡು. ಅದಕ್ಕೆ ವಯಸ್ಸಿನ ಹಂಗಿಲ್ಲ ಎನ್ನುತ್ತಾರೆ. ಇದಕ್ಕೆ ನಿದರ್ಶನದಂತೆ ಅನೇಕರು ವಯಸ್ಸಿನ ಅಂತರದಲ್ಲಿ ಮದುವೆಯಾಗಿ ಸುಖವಾಗಿರುವುದನ್ನು ನೋಡಿದ್ದೇವೆ. ಆದರೆ, ಇಲ್ಲಿ ಯಾವ ಮಟ್ಟಿಗೆ ಪ್ರೀತಿ ಕುರುಡಾಗಿದೆ ಎಂದರೆ ಮಹಿಳಾ ಶಿಕ್ಷಕಿಯೊಬ್ಬರು (Lady Teacher) ತಾವು ಕಲಿಸುತ್ತಿದ್ದ 17 ವರ್ಷದ ಅಪ್ರಾಪ್ತ ಬಾಲಕನನ್ನೇ (Minor Boy) ಮದುವೆಯಾಗಿ ಈಗ ಪೊಲೀಸರ ಬಂಧನಕ್ಕೆ ಒಳಗಾಗಿದ್ದಾರೆ. ಅಪ್ರಾಪ್ತನ ಮದುವೆಯಾದ (Marriage) ಹಿನ್ನಲೆ ಶಿಕ್ಷಕಿ ವಿರುದ್ಧ ಪೊಲೀಸರು ಇದೀಗೆ ಪೋಕ್ಸೋ ಕಾಯ್ದೆ ಅಡಿ  ಪ್ರಕರಣ ಕೂಡ ದಾಖಲಿಸಿದ್ದಾರೆ.

    ಏನಿದು ಘಟನೆ
    ತಮಿಳುನಾಡಿನ ನಲ್ಲೂರು ಬಳಿಕ ಅರಿಯಲೂರಿನಲ್ಲಿ ಟ್ರೈನಿ ಶಿಕ್ಷಕಿಯೊಬ್ಬರು 10ನೇ ತರಗತಿ ವಿದ್ಯಾರ್ಥಿಯನ್ನು ವಿವಾಹವಾಗಿದ್ದಾರೆ. ತಾವು ಪಾಠ ಹೇಳಿಕೊಡುತ್ತಿದ್ದ ವಿದ್ಯಾರ್ಥಿಯ ಮೋಹಕ್ಕೆ ಶಿಕ್ಷಕಿ ಒಳಗಾಗಿದ್ದಾರೆ. ಅವರ ಪ್ರೀತಿಗೆ ಬಿದ್ದ ವಿದ್ಯಾರ್ಥಿ ಕೂಡ ಅವರು ಮಾತಿಗೆ ಮರುಳಾಗಿ ಪ್ರೇಮ ಪಾಶಕ್ಕೆ ಗುರಿಯಾಗಿದ್ದಾನೆ. ಇಬ್ಬರು ಪ್ರೀತಿಯಲ್ಲಿ ಬಿದ್ದ ಹಿನ್ನಲೆ ಮದುವೆಗೆ ಮುಂದಾಗಿದ್ದಾರೆ. ಆದರೆ, ಈ ವಿಷಯ ತಿಳಿದು ಮನೆಯವರು ವಿರೋಧಿಸಿದ್ದಾರೆ. ಕಡೆಗೆ ಏನು ಮಾಡಲು ತೋಚದ ಶಿಕ್ಷಕಿ ಅಪ್ರಾಪ್ತ ಬಾಲಕನೊಂದಿಗೆ ಗ್ರಾಮ ಬಿಟ್ಟು ಹೋಗಿ ಕಳೆದ ಅಕ್ಟೋಬರ್​ನಲ್ಲಿ ಮದುವೆಯಾಗಿದ್ದಾರೆ.

    ಆತ್ಮಹತ್ಯೆಗೆ ಮುಂದಾಗಿದ್ದ ಜೋಡಿ

    ಈ ರೀತಿ ಮದುವೆಯಾದ ಬಳಿಕ ಈ ವಿಷಯ ತಿಳಿದು ಇಬ್ಬರು ಮನೆಯ ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಬಳಿಕ ದಿಕ್ಕು ತೋಚದ ಶಿಕ್ಷಕಿ ಮತ್ತು ವಿದ್ಯಾರ್ಥಿ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಬಳಿಕ ನೆರೆಹೊರೆಯ ಸಮಯ ಪ್ರಜ್ಞೆಯಿಂದ ಅವರನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬದುಕುಳಿದಿದ್ದಾರೆ.

    ಶಿಕ್ಷಕಿ ಬಂಧಿಸಿದ ಪೊಲೀಸರು

    ಘಟನೆ ಬಳಿಕ ವಿದ್ಯಾರ್ಥಿ ಪೋಷಕರು ಶಿಕ್ಷಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಗ ನಾಪತ್ತೆಯಾಗಿದ್ದು, ಅಪ್ರಾಪ್ತನನ್ನು ಮದುವೆಯಾಗಿರುವ ಸಂಬಂಧ ತಿಳಿಸಿದ್ದಾರೆ. ಈ ವಿಷಯ ತಿಳಿದ ಪೊಲೀಸರು ಕಳೆದೆರಡು ದಿನಗಳ ಹಿಂದೆ ಶಿಕ್ಷಕಿಯನ್ನು ಪೋಕ್ಸೋ ಕಾಯ್ದೆ ಅಡಿ ಬಂಧಿಸಿದ್ದಾರೆ.

    ಚಿಕ್ಕಮಗಳೂರಲ್ಲೂ ನಡೆದಿತ್ತು ಇಂತಹ ಘಟನೆ
    ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಬಿಸಿಲೇಹಳ್ಳಿ ಗ್ರಾಮ ಯುವತಿಯೊಬ್ಬಳು ಫೇಸ್​​ಬುಕ್​​ನಲ್ಲಿ ಪರಿಚಯವಾದ ಅಪ್ರಾಪ್ತನನ್ನು ಮದುವೆಯಾಗಿರುವ ಕೂಡ ಕಳೆದೆರಡು ತಿಂಗಳ ಹಿಂದೆ ನಡೆದಿತು. ಬೆಂಗಳೂರು ಮೂಲದ 20 ವರ್ಷದ ಯುವತಿ ಮಡಿಕೇರಿಯ ವಿರಾಜಪೇಟೆಯಲ್ಲಿ ನರ್ಸಿಂಗ್ ಮಾಡುತ್ತಿದ್ದಳು.

    ಇದನ್ನು ಓದಿ: ಕಾಂಗ್ರೆಸ್ ಜಯಭೇರಿಗೆ ರಣದೀಪ್ ಸುರ್ಜೆವಾಲಾ ಶ್ಲಾಘನೆ

    ಕಡೂರು ತಾಲೂಕಿನ ಬ್ರಹ್ಮಸಮುದ್ರ ಗ್ರಾಮದ 17 ವರ್ಷದ ಯುವಕನ ಜೊತೆ ಸಾಮಾಜಿಕ ಜಾಲತಾಣದ ಮೂಲಕ ಸ್ನೇಹವಾಗಿತ್ತು. ಫೇಸ್ಬುಕ್ ಸ್ನೇಹ ಒಂದೆರಡು ವರ್ಷಗಳ ಬಳಿಕ ಪ್ರೀತಿಗೆ ತಿರುಗಿತ್ತು. 20 ವರ್ಷದ ಯುವತಿ, ಅಪ್ರಾಪ್ತ ಬಾಲಕ ಇಬ್ಬರೂ ವಿವಾಹವಾಗಲು ನಿರ್ಧರಿಸಿದ್ದರು. ಹುಡುಗಿ ಮನೆಯವರಿಗೆ ವಿಷಯ ತಿಳಿಸಿದಾಗ ಆಕೆಯ ಫೋಷಕರು ಮದುವೆಗೆ ವಿರೋಧಿಸಿದ್ದರು. ಈ ಇಬ್ಬರು ಕಳೆದ ಜೂನ್ 16ರಂದು ಅಂತರಘಟ್ಟಮ್ಮನ ದೇವಸ್ಥಾನದಲ್ಲಿ ಮದುವೆಯಾಗಿದ್ದರು.

    ಇದನ್ನು ಓದಿ: ಮಗಳು ಅರೆಸ್ಟ್.. ತಾಯಿಯ ಕೊಲೆಗೆ ಆಕೆಯ 3ನೇ ಗಂಡನೊಂದಿಗೆ ಕೈ ಜೋಡಿಸಿದ್ದಳಾ?

    ಮದುವೆ ಕಾನೂನು ಬದ್ಧ ಅಲ್ಲ ಎಂದ ಪೊಲೀಸರು

    ಇವರಿಬ್ಬರು ಫೇಸ್ ಬುಕ್ ಪರಿಚಯವಾಗಿ ಸ್ನೇಹ ಬೆಳೆಸಿಕೊಂಡು ನಂತರ ಚಾಟಿಂಗ್ ಮಾಡುತ್ತಲೇ ಲವ್ ಪ್ರೊಪೋಸ್ ಮಾಡಿಕೊಂಡಿದ್ದಾರೆ. ನಂತರ ಇಬ್ಬರು ಪ್ರೇಮಾಂಕುರ ಬೆಳೆದ ಮದುವೆ ಕೂಡ ಆಗಿದ್ದಾರೆ. ಆದ್ರೆ, ಇವರಿಬ್ಬರ ಫೇಸ್ ಬುಕ್ ಪ್ರೀತಿಗೆ ಕಾನೂನಿನ ತೊಡಕಾಗಿದೆ. ಈ ವಿಷಯ ತಿಳಿದ ಪೋಷಕರು ಬಾಲಕನಿಗೆ ತಿಳಿ ಹೇಳಿ ಪೋಷಕರ ಮನೆಗೆ ಕಳಿಸಿದ್ದರು. ಯುವಕನಿಗೆ ಈಗ 17 ವರ್ಷವಾಗಿದ್ದು, ಮದುವೆಗೆ ಕಾನೂನಾತ್ಮಕವಾಗಿ 21 ವರ್ಷವಾಗಲು ಇನ್ನೂ 4 ವರ್ಷಗಳು ಬೇಕಾಗಿದೆ. ಅಲ್ಲಿಯವರೆಗೆ ಇವರ ಮದುವೆ ಕಾನೂನಾತ್ಮಕವಾಗಿ ಊರ್ಜಿತವಾಗಲ್ಲ.
    Published by:Seema R
    First published: