ಅಮ್ಮ, ಅಯ್ಯನಿಲ್ಲದೆ ತಮಿಳುನಾಡು ಅತಂತ್ರ!


Updated:August 10, 2018, 10:40 PM IST
ಅಮ್ಮ, ಅಯ್ಯನಿಲ್ಲದೆ ತಮಿಳುನಾಡು ಅತಂತ್ರ!
ಕರುಣಾನಿಧಿ

Updated: August 10, 2018, 10:40 PM IST
ನ್ಯೂಸ್​ 18 ಕನ್ನಡ

ಚೆನ್ನೈ(ಆ.10): ದ್ರಾವಿಡ ನೆಲ ತಮಿಳುನಾಡು ಈಗ ನಾವಿಕರಿಲ್ಲದ ಹಡಗು ಥರ ಇದೆ. ಜಯಲಲಿತಾ ಬೆನ್ನಲ್ಲೇ ಕರುಣಾನಿಧಿ ಕೂಡ ಹೊರಟೋಗಿದ್ದಾರೆ. ಐದು ದಶಕ ತಮಿಳುನಾಡನ್ನು ಆಳಿದ ಇಬ್ಬರು ದಿಗ್ಗಜ ನಾಯಕರು ಈಗ ಮರಿನಾ ಬೀಚ್​ನಲ್ಲಿ ಕಣ್ಮರೆಯಾಗಿದ್ದಾರೆ. ಹಾಗಾದರೆ ಮುಂದೇನು ಎನ್ನುವುದೇ ತಮಿಳು ರಾಜಕಾರಣ ಹಾಗೂ ತಮಿಳು ಜನರ ಮುಂದಿರುವ ದೊಡ್ಡ ಪ್ರಶ್ನೆ.

ಕಳೆದ 50 ವರ್ಷಗಳಲ್ಲಿ ಇಬ್ಬರೇ ಇಬ್ಬರು ವ್ಯಕ್ತಿಗಳಿಗೆ ಕೇಂದ್ರಿಕೃತವಾಗಿತ್ತು ತಮಿಳುನಾಡು ರಾಜಕಾರಣ. ಒಂದಾ ಕರುಣಾನಿಧಿ, ಇಲ್ಲಾ ಜಯಲಲಿತಾ. ಈಗ ಇಬ್ಬರೂ ಇಲ್ಲ. ಇಷ್ಟು ವರ್ಷ ಈ ಇಬ್ಬರೇ ಎಲ್ಲವನ್ನ ಡಿಸೈಡ್ ಮಾಡಿದ್ದರು. ಆದರೆ ಕರುಣಾನಿಧಿ ಕೊನೆಯಿಸಿರೆಳೆದ ಬಳಿಕ ಇಡೀ ಚಿತ್ರಣ ಬದಲಾಗಿದೆ. ತೀರ್ಮಾನ ತೆಗೆದುಕೊಳ್ಳುವ ಲೀಡರ್​ಗಳೇ ಇಲ್ಲದೇ ತಮಿಳುನಾಡು ಕಂಗೆಟ್ಟು ಕುಳಿತಿದೆ.

ಜಯಲಲಿತಾ ಪಕ್ಷದಲ್ಲಿ ಉತ್ತರಾಧಿಕಾರಿ ಇಲ್ಲ. ಸರ್ಕಾರ ಅಡಕತ್ತರಿಯಲ್ಲಿ ನಡೀತಿದೆ. ಡಿಎಂಕೆ ಪಕ್ಷದ ಉತ್ತರಾಧಿಕಾರಿಯಾಗಿ ಸ್ಟಾಲಿನ್ ಇದ್ದರೂ ಕಲೈಙರ್ ಥರ ಪಕ್ಷ ಮುನ್ನಡೆಸಲು ಶಕ್ತರಾ ಅನ್ನೋದೇ ಪ್ರಶ್ನೆ. ಜೊತೆಗೆ ಡಿಎಂಕೆನಲ್ಲಿ ಕುಟುಂಬ ಕಲಹನೂ ನಡೀತಿದೆ. ಅಲ್ದೆ ಡಿಎಂಕೆಯ ಹಳೇ ನಾಯಕರು ಸ್ಟಾಲಿನ್ ನಾಯಕತ್ವ ಒಪ್ಪುತ್ತಾರಾ? ರೆಬೆಲ್ ಲೀಡರ್ ಸ್ಟಾಲಿನ್ ಅಣ್ಣ ಆಳಗಿರಿ ಸುಮ್ಮನಿರ್ತಾರಾ ಎನ್ನುವ ಅನುಮಾನನೂ ಇವೆ.

ಸದ್ಯ ಸ್ಟಾಲಿನ್ ಹಾಗೂ ಎಐಎಡಿಎಂಕೆ ಪಕ್ಷಕ್ಕೆ ಸವಾಲಾಗಿರುವುದು ಎರಡು ಉಪಚುನಾವಣೆ. ಕರುಣಾನಿಧಿ ನಿಧನದಿಂದ ತೆರವಾಗಿರುವ ತಿರುವಾರೂರ್ ಹಾಗೂ ಅಣ್ಣಾಡಿಎಂಕೆ ಶಾಸಕ ಎಕೆ ಬೋಸ್ ನಿಧನದಿಂದ ಮಧುರೈನ ತಿರ್ಪರನ್​ಕುಂದ್ರಂ ಅಸೆಂಬ್ಲಿಗೆ ಬೈ ಎಲೆಕ್ಷನ್ ನಡೆಯಲಿದೆ. ಇಲ್ಲಿ ಗೆದ್ದರಷ್ಟೇ ಸ್ಟಾಲಿನ್ ಲೀಡರ್​ಶಿಫ್​ಗೆ ಬಲ ಸಿಗುತ್ತೆ. ಅಣ್ಣಾಡಿಎಂಕೆ ಸರ್ಕಾರ ಸ್ಥಿರತೆಗೂ ಈ ಫಲಿತಾಂಶ ಮುಖ್ಯ.

ಇನ್ನೊಂದೆಡೆ ತಮಿಳುನಾಡು ರಾಜಕಾರಣಕ್ಕೆ ನುಸುಳಲು ಬಿಜೆಪಿ, ಕಾಂಗ್ರೆಸ್ ಕೂಡ ಪ್ರಯತ್ನ ಮಾಡ್ತಿದೆ. ಮತ್ತೊಂದೆಡೆ ಟಿಟಿವಿ ದಿನಕರನ್​​ ಜಯಲಲಿತಾ ಉತ್ತರಾಧಿಕಾರಿಗೆ ಫೈಟ್ ಮಾಡ್ತಿದ್ದಾರೆ. ಇದೆಲ್ಲಕ್ಕಿಂತ ಮುಖ್ಯವಾಗಿರೋದು ಸೂಪರ್ ಸ್ಟಾರ್ ರಜಿನಿಕಾಂತ್ ಹಾಗೂ ನಟ ಕಮಲ್ ಹಾಸನ್ ರಾಜಕೀಯ ಎಂಟ್ರಿ. ಇವೆಲ್ಲವೂ ಸ್ಟಾಲಿನ್​​ಗೆ ದೊಡ್ಡ ಸವಾಲೇ. ಒಟ್ನಲ್ಲಿ ತಮಿಳುನಾಡು ರಾಜಕಾರಣ ಈ ಹಿಂದಿನಂತೆ ಇರಲ್ಲ ಅನ್ನೋದು ಪಕ್ಕಾ.
First published:August 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ