Jallikattu: ಜಲ್ಲಿಕಟ್ಟು ನಡೆಸಲು ತಮಿಳುನಾಡು ಸರ್ಕಾರ ಅನುಮತಿ, RTPCR ಟೆಸ್ಟ್ ಕಡ್ಡಾಯ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಕೋವಿಡ್-19 ಕಾರಣದಿಂದಾಗಿ, ಜಲ್ಲಿಕಟ್ಟು, ಮಂಜುವಿರಾಟ್ಟು ಮತ್ತು ವಡಮಡುಗಳಲ್ಲಿ ಕೇವಲ 300 ಮಂದಿ ಪಳಗಿಸುವವರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ

  • Share this:

ಭಾರತದಲ್ಲಿ ಕೋವಿಡ್ ಪ್ರಕರಣಗಳು ( Covid in India) ಒಂದು ಲಕ್ಷಕ್ಕೂ ಹೆಚ್ಚು ದಾಖಲಾಗಿದೆ. ಕೋವಿಡ್-19 ಹೊಸತಳಿ ಓಮೈಕ್ರಾನ್ (Omicron) 4 ಸಾವಿರಕ್ಕೂ ಹೆಚ್ಚು ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ರಾಜಸ್ಥಾನದಲ್ಲಿ ಮತ್ತು ಒಡಿಶಾದಲ್ಲಿ ಎರಡು ಓಮೈಕ್ರಾನ್ ಸಾವು ಸಂಭವಿಸಿದೆ. ದಿನೇ ದಿನೇ ಹೆಚ್ಚುತ್ತಿರುವ ಕೊರೋನಾದಿಂದಾಗಿ ಸಾಕಷ್ಟು ರಾಜ್ಯಗಳಲ್ಲಿ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯ ಕರ್ಫ್ಯೂ (Curfews ) ಹೇರಲಾಗಿದೆ. ಜನರ ದಟ್ಟಣೆ ಕಡಿಮೆ ಮಾಡಲು ಮಾಲ್ ರೆಸ್ಟೋರೆಂಟ್ ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಶತ 50ರಷ್ಟು ಮಂದಿ ಕಾರ್ಯ ನಿರ್ವಹಿಸುವಂತೆ ಸರ್ಕಾರ ಆದೇಶಿಸಿದೆ. ಮದುವೆಗೆ 50 ಮಂದಿಗೆ, ಅಂತ್ಯಸಂಸ್ಕಾರಕ್ಕೆ ಕೇವಲ 20 ಮಂದಿಗೆ ಮಾತ್ರ ಅವಕಾಶ ನೀಡುತ್ತಿದೆ. ಜೊತೆಗೆ ಜಾತ್ರೆ, ಸಭೆ, ಸಮಾರಂಭಗಳಿಗೂ ಸರ್ಕಾರ ಕಡಿವಾಣ ಹಾಕಿವೆ. ಈ ಎಲ್ಲಾ ಆದೇಶಗಳು ಎಂಕೆ ಸ್ಟ್ಯಾಲಿನ್ (MK Stalin) ನೇತೃತ್ವದ ತಮಿಳುನಾಡಿನಲ್ಲೂ (Tamil Nadu) ಮುಂದುವರೆದಿದೆ.


ಜಲ್ಲಿಕಟ್ಟುಗೆ ಅನುಮತಿ


ಜಲ್ಲಿಕಟ್ಟು ಅದೊಂದು ಸಾಂಪ್ರದಾಯಿಕ ಕ್ರೀಡೆ. ಇದನ್ನು ತಮಿಳುನಾಡಿನಲ್ಲಿ ಮಕರ ಸಂಕ್ರಾಂತಿ ಅಥವಾ ಪೊಂಗಲ್ ಹಬ್ಬದ ಸಂದರ್ಭದಲ್ಲಿ ಆಡಲಾಗುತ್ತದೆ. ಈ ಕ್ರೀಡೆಯಲ್ಲಿ ಸಾವಿರಾರರು ಮಂದಿ ಸೇರುವ ನಿರೀಕ್ಷೆ ಇರುತ್ತದೆ. ಇದನ್ನು ಮನಗಂಡ ತಮಿಳುನಾಡು ಸರ್ಕಾರ ಕಟ್ಟುನಿಟ್ಟಾದ ಕೋವಿಡ್-19 ಸುರಕ್ಷತಾ ಮಾನದಂಡಗಳೊಂದಿಗೆ ಪೊಂಗಲ್ ಹಬ್ಬದ ಸಂದರ್ಭದಲ್ಲಿ ರಾಜ್ಯದಲ್ಲಿ ಜನಪ್ರಿಯ ಸಾಂಪ್ರದಾಯಿಕ ಗೂಳಿ ಪಳಗಿಸುವ ಕ್ರೀಡೆಯಾದ ಜಲ್ಲಿಕಟ್ಟು ನಡೆಸಲು ಸೋಮವಾರ ಅನುಮತಿ ನೀಡಿದೆ.


ಜಲ್ಲಿಕಟ್ಟು ಕ್ರೀಡೆಯ 48 ಗಂಟೆಗಳ ಮೊದಲು ಆರ್‌ಟಿಪಿಸಿಆರ್ ಪರೀಕ್ಷೆಯ ಋಣಾತ್ಮಕ ವರದಿಯ ಜೊತೆಗೆ ಸಂಪೂರ್ಣ ಲಸಿಕೆ ಪಡೆದ ಪ್ರಮಾಣಪತ್ರವನ್ನು ನೀಡುವಂತೆ ಮತ್ತು ಗೂಳಿ ಮಾಲೀಕರು ಹಾಗೂ ಅವರ ಸಹಾಯಕರು ಮತ್ತು ಕ್ರೀಡೆಗಾಗಿ ತಮ್ಮ ಪ್ರಾಣಿಗಳನ್ನು ನೋಂದಾಯಿಸಿಕೊಳ್ಳುವುದನ್ನು ಸರ್ಕಾರವು ಕಡ್ಡಾಯಗೊಳಿಸಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಗುರುತಿನ ಚೀಟಿ ನೀಡಲಾಗುವುದು ಎಂದು ಸೋಮವಾರ ಹೊರಡಿಸಿದ ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ: Puneeth Rajkumar: ತಮಿಳುನಾಡು ಅಧಿವೇಶನದಲ್ಲೂ `ರಾಜರತ್ನ’ನಿಗೆ ಗೌರವ: ಮನಸ್ಸು ಏಕೋ ಭಾರ.. ಅಪ್ಪು ನೆನೆದು ನಾಯಕರು ಭಾವುಕ!


ಆಸನ ಸಾಮರ್ಥ್ಯ


ನೋಂದಣಿ ಸಮಯದಲ್ಲಿ ಗೂಳಿ ಮಾಲೀಕರು ಮತ್ತು ಅದರ ತರಬೇತುದಾರರಿಗೆ ಮಾತ್ರ ಅವಕಾಶವಿರುತ್ತದೆ. ಜಿಲ್ಲಾಡಳಿತವು ಒದಗಿಸಿದ ಮಾನ್ಯ ಗುರುತಿನ ಚೀಟಿ ಹೊಂದಿರುವವರಿಗೆ ಮಾತ್ರ ಅಖಾಡದೊಳಗೆ ಅವಕಾಶ ನೀಡಲಾಗುತ್ತದೆ" ಎಂದು ಸರ್ಕಾರ ಹೇಳಿದೆ. ಕಳೆದ ವರ್ಷದಂತೆ, ಜಲ್ಲಿಕಟ್ಟು 2022ಕ್ಕೆ, ಸರ್ಕಾರವು ತೆರೆದ ಸ್ಥಳಗಳಲ್ಲಿ ಪ್ರೇಕ್ಷಕರ ಸಂಖ್ಯೆಯನ್ನು 150 ಅಥವಾ ಆಸನ ಸಾಮರ್ಥ್ಯದ ಶೇಕಡಾ 50ಕ್ಕೆ (ಯಾವುದು ಕಡಿಮೆಯೋ ಅದು) ನಿರ್ಬಂಧಿಸಿದೆ.


300 ಮಂದಿ ಪಳಗಿಸುವವರಿಗೆ ಅವಕಾಶ
ವೀಕ್ಷಕರು ಜಲ್ಲಿಕಟ್ಟು ಕ್ರೀಡೆಗೆ ಎರಡು ದಿನಗಳ ಮೊದಲು ಆರ್‌ಟಿಪಿಸಿಆರ್ ಋಣಾತ್ಮಕ ವರದಿ ಮತ್ತು ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿರುವ ಕೋವಿಡ್-19 ಪ್ರಮಾಣಪತ್ರ ತೋರಿಸಿ ಭಾಗವಹಿಸಬೇಕು ಎಂದು ಸರ್ಕಾರದ ಆದೇಶವು ಹೇಳಿದೆ ಮತ್ತು ಕಟ್ಟುನಿಟ್ಟಾದ ಸಾಮಾಜಿಕ ಅಂತರ ಸೇರಿದಂತೆ ಕೋವಿಡ್ ಮಾನದಂಡಗಳನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದೆ.


ಜಲ್ಲಿಕಟ್ಟುಗಳಲ್ಲಿ ಭಾಗವಹಿಸುವ ಗೂಳಿಗಳಿಗೆ ಹಾನಿ ಮಾಡದಂತೆ ಸಂಘಟಕರು ಮತ್ತು ಭಾಗವಹಿಸುವವರಿಗೆ ನಿರ್ದೇಶನ ನೀಡಿದೆ. ಕೋವಿಡ್-19 ಕಾರಣದಿಂದಾಗಿ, ಜಲ್ಲಿಕಟ್ಟು, ಮಂಜುವಿರಾಟ್ಟು ಮತ್ತು ವಡಮಡುಗಳಲ್ಲಿ ಕೇವಲ 300 ಮಂದಿ ಪಳಗಿಸುವವರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ" ಎಂದು ಅದು ಹೇಳಿದೆ.


ಜಲ್ಲಿಕಟ್ಟು ಕ್ರೀಡೆ ಹೇಗಿರುತ್ತದೆ?
ಕನ್ನಡದಲ್ಲಿ ಗೂಳಿ ಕಾಳಗ ಎಂದು ಕರೆಸಿಕೊಳ್ಳುವ ಈ ಕ್ರೀಡೆ ತಮಿಳುನಾಡಿನ ಬಹುಮುಖ್ಯ ಗ್ರಾಮೀಣ ಕ್ರೀಡೆ ಬರೀ ಕ್ರೀಡೆಯಷ್ಟೇ ಅಲ್ಲದೆ ತಮಿಳುನಾಡಿನ ಸಂಕ್ರಾಂತಿ ಹಬ್ಬದ ಒಂದು ಸಾಂಸ್ಕೃತಿಕ ಆಚರಣೆಯೂ ಕೂಡ. ಚೆನ್ನಾಗಿ ಕೊಬ್ಬಿದ ಹೋರಿಯೊಂದನ್ನು ಮೊದಲೇ ತಯಾರಾಗಿ ನಿಂತ ಜನಗಳ ಗುಂಪಿಗೆ ಹಗ್ಗವಿಲ್ಲದೆ ಬಿಡಲಾಗುತ್ತದೆ.


ಇದನ್ನೂ ಓದಿ: Thanjavur: ಬ್ಯಾಂಕ್ ಲಾಕರ್​​ನಲ್ಲಿ ₹500 ಕೋಟಿ ಮೌಲ್ಯದ ಲಿಂಗ ಪತ್ತೆ: ಏನಿದರ ರಹಸ್ಯ?


ಗೂಳಿಯನ್ನು ಹಗ್ಗ ಬಿಚ್ಚಿ ಬಿಟ್ಟ ತಕ್ಷಣ ನೆರೆದಿರುವ ಜನರ ಹರ್ಷೋದ್ಗಾರ, ಕೇಕೆ ಮುಗಿಲು ಮುಟ್ಟುತ್ತದೆ. ಇದನ್ನು ಕಂಡ ಹೋರಿ ನಿಗದಿತ ಬಯಲಿನಲ್ಲಿ ಓಡಾಲಾರಂಭಿಸುತ್ತದೆ. ಅದರ ಮೇಲೆ ಎರಗುವ ಉತ್ಸಾಹಿ ತರುಣರು, ಯುವಕರು ಹೋರಿಯ ಭುಜ ಹಿಡಿದುಕೊಂಡು ಹೋರಿಯನ್ನು ಒಂದು ಕಡೆ ನಿಲ್ಲಿಸಬೇಕು. ಹಾಗೆ ನಿಲ್ಲಿಸುವಲ್ಲಿ ಯಾರು ಸಫಲರಾಗುತ್ತಾರೋ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಅವರಿಗೆ ಇನ್ನಿಲ್ಲದ ಮನ್ನಣೆ, ಗೌರವ ಸಿಗುತ್ತದೆ.ಕ್ರೀಡೆಯಲ್ಲಿ ಯಶಸ್ವಿಯಾಗಿ ಹೋರಿಯನ್ನು ನಿಯಂತ್ರಿಸಿದವರಿಗೆ ವಿಶೇಷ ಬಹುಮಾನಗಳನ್ನು ನೀಡಲಾಗುತ್ತದೆ.

Published by:vanithasanjevani vanithasanjevani
First published: