HOME » NEWS » National-international » TAMILNADU GOVERNMENT EXEMPTS HANDICAPPED WORKERS FROM ATTENDING OFFICE DUE TO SURGE IN CORONA CASES STG SKTV

Coronavirus: ಕೊರೊನಾ ಆರ್ಭಟ ಹೆಚ್ಚಳ, ದಿವ್ಯಾಂಗ ನೌಕರರಿಗೆ ಕಚೇರಿಗೆ ಹಾಜರಾಗದಂತೆ ವಿನಾಯಿತಿ ನೀಡಿದ ತಮಿಳುನಾಡು ಸರ್ಕಾರ

ತಮಿಳುನಾಡಿನಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ತನ್ನ ದಿವ್ಯಾಂಗ ನೌಕರರನ್ನು ಕಚೇರಿಗೆ ಹಾಜರಾಗದಂತೆ ವಿನಾಯಿತಿ ನೀಡಿದೆ. ಕೋವಿಡ್ -19 ಉಲ್ಬಣವನ್ನು ಗಮನದಲ್ಲಿಟ್ಟುಕೊಂಡು ದಿವ್ಯಾಂಗ ನೌಕರರು ಮೇ 6 ರಿಂದ ಜೂನ್ 20 ರವರೆಗೆ ಕಚೇರಿಗೆ ಬರಬೇಕಾಗಿಲ್ಲ ಎಂದು ವಿಕಲ ಚೇತನರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ವಿಜಯರಾಜ್ ಕುಮಾರ್ ಅವರ ಆದೇಶದ ಪ್ರಕಾರ ತಿಳಿಸಲಾಗಿದೆ.

news18-kannada
Updated:May 6, 2021, 5:37 PM IST
Coronavirus: ಕೊರೊನಾ ಆರ್ಭಟ ಹೆಚ್ಚಳ, ದಿವ್ಯಾಂಗ ನೌಕರರಿಗೆ ಕಚೇರಿಗೆ ಹಾಜರಾಗದಂತೆ ವಿನಾಯಿತಿ ನೀಡಿದ ತಮಿಳುನಾಡು ಸರ್ಕಾರ
ಸಾಂದರ್ಭಿಕ ಚಿತ್ರ
  • Share this:
Covid 19: ದೇಶದಲ್ಲಿ ಕೊರೊನಾ ವೈರಸ್‌ ಎರಡನೇ ಅಲೆಯಿಂದ ದಿನೇ ದಿನೇ ಸೋಂಕಿತರು ಹೆಚ್ಚಾಗುತ್ತಿದ್ದು, ಬಲಿಯಾಗುವವರ ಸಂಖ್ಯೆಯೂ ಏರುತ್ತಲೇ ಇದೆ. ಇದರಿಂದ ಹಲವು ರಾಜ್ಯ ಸರ್ಕಾರಗಳು ಕರ್ಫ್ಯೂ, ನಿರ್ಬಂಧ, ಜನತಾ ಲಾಕ್‌ಡೌನ್‌, ಸಂಪೂರ್ಣ ಲಾಕ್‌ಡೌನ್‌ ಮುಂತಾದ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೆ, ಸರ್ಕಾರಿ ಕಚೇರಿಗಳಲ್ಲಿ ಶೇ. 50 ರಷ್ಟು ನೌಕರರು ಮಾತ್ರ ಕಚೇರಿಗೆ ಬರುವಂತೆ ಹಲವು ರಾಜ್ಯಗಳಲ್ಲಿ ತೀರ್ಮಾನಿಸಲಾಗಿದೆ. ಈ ಮಧ್ಯೆ, ತಮಿಳುನಾಡು ಸರ್ಕಾರ ಸರ್ಕಾರಿ ನೌಕರರಿಗೆ ಕಚೇರಿಗೆ ಬರದಂತೆ ವಿನಾಯಿತಿ ನೀಡಿದೆ. ಆದರೆ, ಇದು ಕೇವಲ ವಿಕಲಚೇತನರಿಗೆ ಮಾತ್ರ ಅನ್ವಯವಾಗುತ್ತದೆ. ಕೊರೊನಾ ಸೋಂಕಿನ ಅಪಾಯ, ಸಾವಿನ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇರುವುದರಿಂದ ಅಲ್ಲಿನ ರಾಜ್ಯ ಸರ್ಕಾರ ಈ ಪ್ರಶಂಸನೀಯ ನಿರ್ಧಾರ ತೆಗೆದುಕೊಂಡಿದೆ.

ತಮಿಳುನಾಡಿನಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ತನ್ನ ದಿವ್ಯಾಂಗ ನೌಕರರನ್ನು ಕಚೇರಿಗೆ ಹಾಜರಾಗದಂತೆ ವಿನಾಯಿತಿ ನೀಡಿದೆ. ಕೋವಿಡ್ -19 ಉಲ್ಬಣವನ್ನು ಗಮನದಲ್ಲಿಟ್ಟುಕೊಂಡು ದಿವ್ಯಾಂಗ ನೌಕರರು ಮೇ 6 ರಿಂದ ಜೂನ್ 20 ರವರೆಗೆ ಕಚೇರಿಗೆ ಬರಬೇಕಾಗಿಲ್ಲ ಎಂದು ವಿಕಲ ಚೇತನರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ವಿಜಯರಾಜ್ ಕುಮಾರ್ ಅವರ ಆದೇಶದ ಪ್ರಕಾರ ತಿಳಿಸಲಾಗಿದೆ. ದಿವ್ಯಾಂಗ ನೌಕರರ ವಿವಿಧ ಸಂಸ್ಥೆಗಳ ಸದಸ್ಯರು ಈ ಆದೇಶಕ್ಕೆ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು.

“ಇಂತಹ ಆದೇಶವನ್ನು ತಂದಿದ್ದಕ್ಕಾಗಿ ವಿಕಲ ಚೇತನರು ನಿಜವಾಗಿಯೂ ಸರ್ಕಾರ ಮತ್ತು ಅಧಿಕಾರಿಗಳಿಗೆ ಕೃತಜ್ಞರಾಗಿರುತ್ತೇವೆ. ನಮ್ಮಂತಹ ಜನರ ಬಗ್ಗೆ ನಮ್ಮ ಸರ್ಕಾರ ವಹಿಸಿರುವ ಕಾಳಜಿ ಅನುಕರಣೀಯವಾಗಿದೆ ಮತ್ತು ಈ ಕ್ರಮಕ್ಕೆ ನಾವು ಪೂರ್ಣ ಹೃದಯದಿಂದ ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇವೆ'' ಎಂದು ಐಎಎನ್‌ಎಸ್‌ನೊಂದಿಗೆ ಮಾತನಾಡುವಾಗ ತಮಿಳುನಾಡಿನ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಕಲ ಚೇತನರ ಸರ್ಕಾರಿ ನೌಕರರ ಸಂಘಟನೆಯ ಕೆ.ಆರ್. ಮಾಣಿಕ್ಯಂ ಹೇಳಿದರು.

ಇನ್ನು, ಕೇಂದ್ರ ಸರ್ಕಾರವು ಈ ಸಂಬಂಧ ಈಗಾಗಲೇ ಆದೇಶ ಹೊರಡಿಸಿದೆ. ದಿವ್ಯಾಂಗರನ್ನು ಕಚೇರಿಗೆ ಹಾಜರಾಗದಂತೆ ವಿನಾಯಿತಿ ನೀಡುವಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ ಎಂಬುದನ್ನು ಗಮನಿಸಬಹುದು.
Youtube Video

ಕೋವಿಡ್ -19 ಪ್ರಕರಣಗಳು ತಮಿಳುನಾಡು ರಾಜ್ಯದಲ್ಲೂ ಹೆಚ್ಚುತ್ತಿದ್ದು, ಮಂಗಳವಾರ ಹೊಸದಾಗಿ 21,228 ಸೋಂಕಿತರು ಪತ್ತೆಯಾಗಿದ್ದಾರೆ. ಅಲ್ಲದೆ, ಸಾವಿನ ಸಂಖ್ಯೆ 144 ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆ ಅಂಗವೈಕಲ್ಯ ಹೊಂದಿರುವವರ ಸುರಕ್ಷತೆಯ ಮೇಲೆ ರಿಸ್ಕ್‌ ತೆಗೆದುಕೊಳ್ಳಲು ಬಯಸುವುದಿಲ್ಲ ಎಂದು ಸರ್ಕಾರ ಹೇಳಿದೆ. ತಮಿಳುನಾಡಿನ ರಾಜ್ಯ ಸರ್ಕಾರವು ಮೇ 6 ರಿಂದ ಮೇ 30 ರವರೆಗೆ ಹೊಸ ಕೋವಿಡ್ -19 ನಿರ್ಬಂಧಗಳನ್ನು ಜಾರಿಗೊಳಿಸುವುದಾಗಿ ಸೋಮವಾರ ಘೋಷಿಸಿತ್ತು. ಅದು ಗುರುವಾರದಿಂದ (ಮೇ 6) ಜಾರಿಗೆ ಬಂದಿದೆ.
Published by: Soumya KN
First published: May 6, 2021, 5:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories