HOME » NEWS » National-international » TAMILNADU EX MINISTER INTIMIDATED BY TAKING PORNOGRAPHIC FILM NOMADS FILM ACTRESS COMPLAINS MAK

Love Sex Dhoka: ಖ್ಯಾತ ನಟಿಯನ್ನು ಲೈಂಗಿಕವಾಗಿ ಬಳಸಿಕೊಂಡು, ಅಶ್ಲೀಲ ಫೋಟೊ ತೋರಿಸಿ ಬೆದರಿಕೆ: ಮಾಜಿ ಸಚಿವನ ಮೇಲೆ ದೂರು

ನನ್ನ ಅಶ್ಲೀಲ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವು ದಾಗಿಯೂ, ಕೊಲೆ ಮಾಡಿಸುವುದಾಗಿಯೂ ತಮಿಳುನಾಡಿನ ಮಾಜಿ ಸಚಿವ ಮಣಿಗಂಡನ್ ಬೆದರಿಕೆ ಹಾಕುತ್ತಿದ್ದಾರೆ ಎಂದು ನಟಿ ಶಾಂತಿನಿ ದೇವಾ ದೂರು ನೀಡಿದ್ದಾರೆ.

news18-kannada
Updated:May 28, 2021, 5:05 PM IST
Love Sex Dhoka: ಖ್ಯಾತ ನಟಿಯನ್ನು ಲೈಂಗಿಕವಾಗಿ ಬಳಸಿಕೊಂಡು, ಅಶ್ಲೀಲ ಫೋಟೊ ತೋರಿಸಿ ಬೆದರಿಕೆ: ಮಾಜಿ ಸಚಿವನ ಮೇಲೆ ದೂರು
ನಟಿ ಶಾಂತಿನಿ ದೇವ ಮತ್ತು ಮಾಜಿ ಸಚಿವ ಮಣಿಗಂಡನ್.
  • Share this:
ಚೆನ್ನೈ (ಮೇ 28); ತಮಿಳುನಾಡಿನ ಈ ಹಿಂದಿನ ಎಡಿಎಂಕೆ ಸರ್ಕಾರದಲ್ಲಿ ಸಚಿವರಾಗಿದ್ದ ಮಣಿಗಂಡನ್, ಮದುವೆಯಾಗುವುದಾಗಿ ನಂಬಿಸಿ ನನ್ನ ಜೊತೆ 5 ವರ್ಷಗಳ ಕಾಲ ರಹಸ್ಯ ಜೀವನ ನಡೆಸಿದ್ದಾರೆ. ಅಲ್ಲದೆ, ಈ ವೇಳೆ ಅವರು ನನ್ನ ಹಲವು ಅಶ್ಲೀಲ ಪೋಟೋ-ವಿಡಿಯೋಗಳನ್ನು ತೆಗೆದಿದ್ದು, ಈಗ ಫೋಟೋಗಳನ್ನು ಮುಂದಿಟ್ಟು ನನಗೆ ಬೆದರಿಕೆ ಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದಾಗಿ ಬೆದರಿಸುತ್ತಿದ್ದಾರೆ ಎಂದು ಆರೋಪಿಸಿ ತಮಿಳು ಚಿತ್ರ ನಟಿ ಶಾಂತಿನಿ ದೇವಾ ಎಂಬವರು ಚೆನ್ನೈ ಪೊಲೀಸ್ ಆಯುಕ್ತರಿಗೆ ಇಂದು ದೂರು ನೀಡಿದ್ದಾರೆ. ದೂರಿನ ಬೆನ್ನಿಗೆ ತಮಿಳುನಾಡು ರಾಜಕಾರಣದಲ್ಲಿ ದೊಡ್ಡ ಕೋಲಾಹಲವೆದ್ದಿದೆ ಎನ್ನಲಾಗುತ್ತಿದೆ.

ಈ ಹಿಂದೆ ತಮಿಳುನಾಡಿನಲ್ಲಿ ಚಿನ್ನಮ್ಮ ಶಶಿಕಲಾ ಲಂಚ ಪ್ರಕರಣದಲ್ಲಿ ಜೈಲು ಪಾಲಾದಾಗ, ಅಂದಿನ ಸಿಎಂ ಎಡಪ್ಪಾಡಿ ಕೆ. ಪಳನಿಸ್ವಾಮಿ ಸರ್ಕಾರದಲ್ಲಿ ನಮಗೆ ವಿಶ್ವಾಸ ಇಲ್ಲ ಎಂದು ಆರೋಪಿಸಿ ಟಿಟಿವಿ ದಿನಕರನ್ ಬೆಂಬಲಿತ 18 ಜನ ಶಾಸಕರು ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು. ತದನಂತರ ಆ ಎಲ್ಲಾ ಶಾಸಕರ ಅಧಿಕಾರವನ್ನೂ ನ್ಯಾಯಾಲಯ ಮೊಟಕುಗೊಳಿಸಿ, ಅವರನ್ನು ಅನರಹರು ಎಂದು ಘೋಷಿಸಿತ್ತು. ಈ 18 ಜನ ಶಾಸಕರು ಮತ್ತು ಸಚಿವರಲ್ಲಿ ಆರೋಪಿ ಮಣಿಗಂಡನ್ ಸಹ ಒಬ್ಬರು ಎಂಬುದು ಉಲ್ಲೇಖಾರ್ಹ.

ನಟಿ ಶಾಂತಿನಿ ದೇವಾ ತಾನು ಓರ್ವ ನಟಿಯಾಗಬೇಕು ಎಂಬ ಆಸೆಯಿಂದ ಚೆನ್ನೈಗೆ ಬಂದವರು. ಆದರೆ, ಅವರಿಗೆ ಸಿನಿಮಾದಲ್ಲಿ ಒಳ್ಳೆಯ ಅವಕಾಶಗಳು ಲಭ್ಯವಾಗಿಲ್ಲ. ಈ ಸಂದರ್ಭದಲ್ಲಿ ಸಚಿವ ಮಣಿಗಂಡನ್ ಪರಿಚಯವಾಗಿದೆ. ಆತ ಈಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದಾರೆ. ಇಬ್ಬರೂ 5 ವರ್ಷ ಒಟ್ಟಿಗೆ ಜೀವನವನ್ನೂ ಮಾಡಿದ್ದಾರೆ. ಆರೋಪಿ ಮಣಿಗಂಡನ್​ ನಟಿಗೆ ಮನೆಯನ್ನೂ ಕೊಡಿಸಿದ್ದಾರೆ. ಆದರೆ, ನಟಿ ಶಾಂತಿನಿ ಇದೀಗ ತನ್ನನ್ನು ಮದುವೆಯಾಗುವಂತೆ ಮಣಿಗಂಡನನ್ನು ಪೀಡಿಸಿದ್ದಾಳೆ. ಆದರೆ, ಇದಕ್ಕೆ ಒಪ್ಪದ ಮಣಿಗಂಡನ್ ಆಕೆಯ ಅಶ್ಲೀಲ ಪೋಟೋ ಹಾಗೂ ವಿಡಿಯೋಗಳನ್ನು ತೋರಿಸಿ ಬೆದರಿಕೆ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದಲ್ಲದೆ, "ಪೋಟೋಗಳನ್ನು ತಾನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವು ದಾಗಿಯೂ, ಕೊಲೆ ಮಾಡಿಸುವುದಾಗಿಯೂ ಮಾಜಿ ಸಚಿವ ಮಣಿಗಂಡನ್ ತನಗೆ ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ ಅವರ ಮೇಲೆ ಎಫ್ಐಆರ್ ದಾಖಲಿಸಿ ವಿಚಾರಣೆ ನಡೆಸಬೇಕು ಮತ್ತು ಅವರ ಬಳಿ ಇರುವ ನನ್ನ ಅಶ್ಲೀಲ ಪೋಟೋ ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡಬೇಕು" ಎಂದು ನಟಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Rahul Gandhi: ದೇಶದಲ್ಲಿ ಕೊರೋನಾ ಅಲೆ ವ್ಯಾಪಕವಾಗಲು ಪ್ರಧಾನಿ ಮೋದಿಯ ನೌಟಂಕಿ ನಾಟಕಗಳೇ ಕಾರಣ; ರಾಹುಲ್ ಗಾಂಧಿ

ತಮಿಳಿನಲ್ಲಿ 2009 ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಎನಿಸಿಕೊಂಡ "ನಾಡೋಡಿಗಳ್" ಎಂಬ ಚಿತ್ರದಲ್ಲಿ ನಟಿಸುವ ಮೂಲಕ ನಟಿ ಶಾಂತಿನಿ ದೇವಾ ಭರವಸೆಗಳೊಂದಿಗೆ ಸಿನಿ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದ್ದರು. ಈ ಚಿತ್ರವನ್ನು ಕನ್ನಡದಲ್ಲಿ ರಿಮೇಕ್ ಮಾಡಲಾಗಿದ್ದು, ಹುಡುಗರು ಎಂಬ ಶೀರ್ಷೀಕೆಯಲ್ಲಿ ಪುನೀತ್ ರಾಜ್​ ಕುಮಾರ್​, ಶ್ರಿನಗರ ಕಿಟ್ಟಿ ಮತ್ತು ಲೂಸ್ ಮಾದ ನಟಿಸಿದ್ದರು. ಈ ಚಿತ್ರ ಕರ್ನಾಟಕದಲ್ಲೂ ಸೂಪರ್ ಹಿಟ್ ಆಗಿತ್ತು.

ಇದನ್ನೂ ಓದಿ: Yaas Cyclone: ಯಾಸ್ ಚಂಡಮಾರುತದ ಬಗ್ಗೆ ಪ್ರಧಾನಿ ಮೋದಿ ಜತೆಗೆ ಪರಿಶೀಲನಾ ಸಭೆ ಸಿಎಂ ಮಮತಾ ಬ್ಯಾನರ್ಜಿ ಗೈರು!ಈ ಚಿತ್ರದ ನಂತರ ನಟಿ ಶಾಂತಿನಿ 2ಜಿ ಸ್ಪೆಕ್ಟ್ರಂ ಎಂಬ ಚಿತ್ರದಲ್ಲೂ ನಟಿಸಿದ್ದರು. ಆದರೆ, ಆನಂತರ ಅವರಿಗ ಯಾವುದೇ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕರಲಿಲ್ಲ. ಇಂತಹ ಸಂದರ್ಭದಲ್ಲಿ ಸಚಿವ ಮಣಿಗಂಡನ್ ಪರಿಚಯವಾಗಿದೆ. ಆದರೆ, ಈ ಪರಿಚಯ ಕೊನೆಗೆ ಲವ್​ ಸೆಕ್ಸ್ಟ್​ ದೋಖಾ ಪ್ರಕರಣವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿರುವುದು ಮಾತ್ರ ವಿಪರ್ಯಾಸ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by: MAshok Kumar
First published: May 28, 2021, 4:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories