HOME » NEWS » National-international » TAMILNADU CM PALANISWAMI ANNOUNCED A GOLD LOAN WAIVER SESR

Gold Loan Waiver: ಕೃಷಿ ಸಾಲದ ಬಳಿಕ ಚಿನ್ನದ ಮೇಲಿನ ಸಾಲ ಮನ್ನಾ ಘೋಷಿಸಿದ ತಮಿಳುನಾಡು ಸಿಎಂ

ರೈತರು, ಬಡವರು ಸಹಕಾರಿ ಬ್ಯಾಂಕ್​ನಲ್ಲಿ ಇರಿಸಿದ್ದ ಆರು ಸವೆರನ್​ ಚಿನ್ನದ ಮೇಲಿನ ಸಾಲ ಮನ್ನಾ ಆಗಲಿದೆ ಎಂದು ಅವರು ಘೋಷಿಸಿದ್ದಾರೆ.

news18-kannada
Updated:February 26, 2021, 4:45 PM IST
Gold Loan Waiver: ಕೃಷಿ ಸಾಲದ ಬಳಿಕ ಚಿನ್ನದ ಮೇಲಿನ ಸಾಲ ಮನ್ನಾ ಘೋಷಿಸಿದ ತಮಿಳುನಾಡು ಸಿಎಂ
ಚಿನ್ನ
  • Share this:
ಚೆನ್ನೈ (ಫೆ. 26): ಅಧಿಕಾರ ಚುಕ್ಕಾಣಿ ಹಿಡಿಯುವ ಮುನ್ನ ಸಾಮಾನ್ಯವಾಗಿ ರಾಜಕೀಯ ಪಕ್ಷಗಳು ಮತದಾರರ ಸೆಳೆಯಲು ವಿವಿಧ ಸಾಲ ಮನ್ನಾ ಘೋಷಣೆ ಮಾಡುವುದು ಸಹಜ. ಸದ್ಯ ನೆರೆಯ ತಮಿಳುನಾಡಿನಲ್ಲಿ ಕೂಡ ಚುನಾವಣಾ ಪ್ರಚಾರದ ಕಾವೇರಿದ್ದು, ಮತದಾರರ ಸೆಳೆಯಲು ರಾಜಕೀಯ ನಾಯಕರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇಂದು ತಮಿಳುನಾಡು ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಮತದಾನ ದಿನಾಂಕ ಘೋಷಣೆಯಾಗಲಿದೆ. ಚುನಾವಣಾ ಆಯೋಗ ಮತದಾನದ ದಿನ ಘೋಷಣೆ ಮಾಡಿದ ಕ್ಷಣದಿಂದ ಇಲ್ಲಿ ನೀತಿ ಸಂಹಿತೆ ಜಾರಿಯಾಗಲಿದೆ. ಇದೇ ಹಿನ್ನಲೆ ಘೋಷಣೆಗೆ ಕೆಲವು ಗಂಟೆಗಳ ಮುನ್ನ ಮತದಾರರ ಸೆಳೆಯಲು ಮುಂದಾದ ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಚಿನ್ನದ ಸಾಲ ಮನ್ನಾ ಘೋಷಣೆ ಹೊರಡಿಸಿದ್ದಾರೆ.

ರೈತರು ಹಾಗೂ ಬಡವರು ತಮ್ಮ ಕಷ್ಟಕಾಲದಲ್ಲಿ ಚಿನ್ನ ಅಡವಿಡ್ಡು ಪಡೆದ ಹಣದ ಸಾಲ ಮನ್ನಾ ಆಗಲಿದೆ ಎಂದು ಅವರು ತಿಳಿಸಿದ್ದಾರೆ. ರೈತರು, ಬಡವರು ಸಹಕಾರಿ ಬ್ಯಾಂಕ್​ನಲ್ಲಿ ಇರಿಸಿದ್ದ ಆರು ಸವೆರನ್​ ಚಿನ್ನದ ಮೇಲಿನ ಸಾಲ ಮನ್ನಾ ಆಗಲಿದೆ ಎಂದು ಅವರು ಘೋಷಿಸಿದ್ದಾರೆ. ಸಂಜೆ ನಾಲ್ಕು ಗಂಟೆಗೆ ಈ ಘೋಷಣೆಯನ್ನು ಅವರು ಹೊರಡಿಸಿದ್ದು, 4.30ಕ್ಕೆ ಚುನಾವಣಾ ಆಯೋಗ ಮತದಾನದ ದಿನಾಂಕ ಬಿಡುಗಡೆ ಮಾಡಲಿದೆ ಎಂದು ಎನ್​ಡಿಟಿವಿ ವರದಿ ಮಾಡಿದೆ.

ಇದನ್ನು ಓದಿ: ಈ ಗಜೇಂದ್ರನ ಬೆಲೆ ಬರೋಬ್ಬರಿ 61 ಲಕ್ಷ ರೂಪಾಯಿ; ಇದು ಸಾಮಾನ್ಯ ಕೋಣವಲ್ಲ

ಕೋವಿಡ್​ನಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾದ ಬಡವರು ತಮ್ಮ ಬಳಿಯಿದ್ದ ಚಿನ್ನವನ್ನು ಅಡವಿಟ್ಟು ಜೀವನ ನಿರ್ವಹಣೆ ಮಾಡಲು ವಿಶೇಷ ಚಿನ್ನದ ಸಾಲ ಯೋಜನೆ ಘೋಷಿಸಲಾಗಿತ್ತು. ಇದಕ್ಕಾಗಿ ತಮಿಳುನಾಡು ರಾಜ್ಯದ ಅಪೆಕ್ಸ್​ ಬ್ಯಾಂಕ್​​ನಿಂದ ಕೋವಿಡ್​ ಪರಿಹಾರ ಕ್ರಮದ ಆಧಾರದ ಮೇಲೆ ಸಾಲ ಮಂಜೂರು ಮಾಡಲಾಗಿತ್ತು. ಶೇ. 6ರಷ್ಟು ಬಡ್ಡಿದರದಲ್ಲಿ ಈ ಸಾಲವನ್ನು ನೀಡಲಾಗಿತ್ತು.

ಕೋವಿಡ್​ ಸಂದರ್ಭದಲ್ಲಿ ನೀಡಲಾದ ಕಡಿಮೆ ಬಡ್ಡಿದರ ಈ ಸಾಲದ ಯೋಜನೆಯಲ್ಲಿ 25 ಸಾವಿರದಿಂದ 1 ಲಕ್ಷದವರೆಗೆ ಸಾಲವನ್ನೂ ನೀಡಲಾಗಿದೆ. ಈ ಹಣವನ್ನು ಮೂರು ತಿಂಗಳಿನಲ್ಲಿ ಹಿಂದಿರುಗಿಸಬೇಕು ಎಂದು ಯೋಜನೆಯಲ್ಲಿ ತಿಳಿಸಲಾಗಿತ್ತು.
ಈ ಹಿಂದೆ ಮುಖ್ಯಮಂತ್ರಿ ಕೆ ಪಳನಿಸ್ವಾಮಿ ರಾಜ್ಯದ 16 ಲಕ್ಷ ರೈತರ ಸುಮಾರು 12, 000 ಕೋಟಿ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದರು. ಈ ವೇಳೆ ಮಾತನಾಡಿದ್ದ ಅವರು ಕೃಷಿಕರ ಸಮಸ್ಯೆಯನ್ನು ಬಗೆಹರಿಸುವುದು ತಮ್ಮ ಮೊದಲ ಆದ್ಯ ಕರ್ತವ್ಯ ಎಂದು ಅವರು ತಿಳಿಸಿದ್ದರು.
Published by: Seema R
First published: February 26, 2021, 4:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories