Ban on Firecrackers| 'ಪಟಾಕಿ ಮೇಲಿನ ನಿಷೇಧವನ್ನು ಪರಿಶೀಲಿಸಿ'; 4 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಎಂ.ಕೆ. ಸ್ಟಾಲಿನ್!

ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಸೂಚಿಸಿರುವ ನಿರ್ದೇಶನಗಳಿಗೆ ಅನುಸಾರವಾಗಿ ಪಟಾಕಿ ಮಾರಾಟಕ್ಕೆ ಅನುಮತಿ ನೀಡುವಂತೆ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಮ್ಮ ಪತ್ರದಲ್ಲಿ ದೆಹಲಿ, ಒಡಿಶಾ, ರಾಜಸ್ಥಾನ ಮತ್ತು ಹರಿಯಾಣ ಸರ್ಕಾರಗಳನ್ನು ಕೇಳಿಕೊಂಡಿದ್ದಾರೆ ಎನ್ನಲಾಗಿದೆ.

ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್

ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್

 • Share this:
  ಚೆನ್ನೈ (ಅಕ್ಟೋಬರ್​16); ತಮಿಳುನಾಡಿನ (Tamilnadu) ಪ್ರಮುಖ ಉದ್ಯಮಗಳ ಪೈಕಿ ಪಟಾಕಿ (Firecrackers) ಉದ್ಯಮಕ್ಕೆ ಅಗ್ರಸ್ಥಾನವಿದೆ. ತಮಿಳುನಾಡಿನ ಶಿವಕಾಶಿ (Shivakashi) ಜಿಲ್ಲೆ ಪಟಾಕಿ ಉದ್ಯಮಗಳಿಗೆ ವಿಶ್ವಖ್ಯಾತಿ ಹೊಂದಿದೆ. ಈ ಜಿಲ್ಲೆಯಲ್ಲಿ ಸಾವಿರಾರು ಪಟಾಕಿ ಗುಡಿ ಕೈಗಾರಿಕೆಗಳಿದ್ದು, ಪ್ರತಿ ವರ್ಷ ಸಾವಿರಾರು ಕೋಟಿ ಮೌಲ್ಯದ ಪಟಾಕಿ ವಸ್ತುಗಳನ್ನು ದೇಶ ಮತ್ತು ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ. ಆದರೆ, ಇತ್ತೀಚೆಗೆ ದೆಹಲಿ (Delhi), ಒಡಿಶಾ(Odisha), ರಾಜಸ್ಥಾನ (Rajasthan) ಮತ್ತು ಹರಿಯಾಣ (Hariyana) ಸರ್ಕಾರಗಳು ತಮ್ಮ ರಾಜ್ಯದಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಿವೆ. ದೀಪಾವಳಿ (Dipavali) ಹತ್ತಿರವಾಗಿರುವ ಇಂತಹ ಸಂದರ್ಭದಲ್ಲಿ ಈ ನಾಲ್ಕೂ ಸರ್ಕಾರಗಳ ನಿರ್ಧಾರ ತಮಿಳುನಾಡಿನ ಪಟಾಕಿ ಉತ್ಪಾದಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದು, ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ (MK Stalin), ಈ ರಾಜ್ಯಗಳು ಜಾರಿಗೆ ತಂದಿರುವ ಪಟಾಕಿ ನಿಷೇಧದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿ ಪತ್ರ ಬರೆದಿದ್ದಾರೆ.

  ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಸೂಚಿಸಿರುವ ನಿರ್ದೇಶನಗಳಿಗೆ ಅನುಸಾರವಾಗಿ ಪಟಾಕಿ ಮಾರಾಟಕ್ಕೆ ಅನುಮತಿ ನೀಡುವಂತೆ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಮ್ಮ ಪತ್ರದಲ್ಲಿ ದೆಹಲಿ, ಒಡಿಶಾ, ರಾಜಸ್ಥಾನ ಮತ್ತು ಹರಿಯಾಣ ಸರ್ಕಾರಗಳನ್ನು ಕೇಳಿಕೊಂಡಿದ್ದಾರೆ ಎನ್ನಲಾಗಿದೆ.

  ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ವಲಯದ ಮೇಲೆ ಕೋವಿಡ್ -19 ಸಾಂಕ್ರಾಮಿಕ ಬೀರಿರುವ ಕೆಟ್ಟ ಪರಿಣಾಮದ ಬಗ್ಗೆ ತನ್ನ ಕಳವಳವನ್ನು ವ್ಯಕ್ತಪಡಿಸಿದ ಸ್ಟಾಲಿನ್, ಪಟಾಕಿ ಉದ್ಯಮವನ್ನು ಅವಲಂಬಿಸಿರುವ ಸುಮಾರು ಎಂಟು ಲಕ್ಷ ಕಾರ್ಮಿಕರ ಜೀವನವು ಪಟಾಕಿ ನಿಷೇಧದಿಂದಾಗಿ ಸಂಕಷ್ಟದಲ್ಲಿದೆ ಎಂದಿದ್ದಾರೆ.

  ಪಟಾಕಿ ಬ್ಯಾನ್ ಮಾಡಿರುವ ದೆಹಲಿ, ಒಡಿಶಾ, ರಾಜಸ್ಥಾನ ಮತ್ತು ಹರಿಯಾಣ ರಾಜ್ಯಗಳ ವಾಯುಮಾಲಿನ್ಯದ ಕಾಳಜಿ ನನಗೆ ಅರ್ಥವಾಗುತ್ತದೆ. ಮಾನ್ಯ ಸುಪ್ರೀಂ ಕೋರ್ಟ್ ಈಗಾಗಲೇ ಕೆಲವು ವರ್ಗಗಳ ಮಾಲಿನ್ಯಕಾರಕ ಪಟಾಕಿಗಳನ್ನು ನಿಷೇಧಿಸಿದೆ. ಹಾಗಾಗಿ ಈಗ, ಕಡಿಮೆ ಪ್ರಮಾಣದ ಹೊರಸೂಸುವಿಕೆಯ ಹಸಿರು ಪಟಾಕಿಗಳನ್ನು ತಯಾರಿಸಲಾಗುತ್ತಿದೆ ಎಂಬುದನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ಆದ್ದರಿಂದ ಪಟಾಕಿಗಳ ಮೇಲಿನ ಸಂಪೂರ್ಣ ನಿಷೇಧವು ಸಮಂಜಸವಲ್ಲ ಎಂದು ಸ್ಟಾಲಿನ್ ಬರೆದಿದ್ದಾರೆ.

  ಇದೇ ರೀತಿಯಾಗಿ ಉಳಿದ ರಾಜ್ಯಗಳು ಸಹ ಬ್ಯಾನ್ ಮಾಡಿದರೆ ಇಡೀ ಉದ್ಯಮವನ್ನೆ ಮುಚ್ಚಬೇಕಾದ ಪರಿಸ್ಥಿತಿ ಬರುತ್ತದೆ. ಇದರಿಂದ ಸುಮಾರು 8 ಲಕ್ಷ ಜನರ ಜೀವನೋಪಾಯ ಅಪಾಯಕ್ಕೆ ಸಿಲುಕಲಿದೆ. ಪಟಾಕಿಗಳನ್ನು ಸಿಡಿಸುವುದು ಭಾರತೀಯ ಹಬ್ಬಗಳ, ವಿಶೇಷವಾಗಿ ದೀಪಾವಳಿಯ ಅವಿಭಾಜ್ಯ ಅಂಗವಾಗಿದೆ ಎಂದು ನೀವು ಕೂಡ ಒಪ್ಪುತ್ತೀರಿ. ಪರಿಸರ, ಜೀವನೋಪಾಯ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಸಮರ್ಪಕ ಗೌರವ ನೀಡುವ ಸಮತೋಲಿತ ವಿಧಾನವು ಸಾಧ್ಯವಿದೆ ಮತ್ತು ಅಗತ್ಯವಾಗಿದೆ ಎಂದು ಸ್ಟಾಲಿನ್ ಪ್ರತಿಪಾದಿಸಿದ್ದಾರೆ.

  ಇದನ್ನೂ ಓದಿ: Manmohan Singh| ಏಮ್ಸ್​ನಲ್ಲಿ ಕೇಂದ್ರ ಆರೋಗ್ಯ ಸಚಿವ ಮಾಂಡವೀಯ ನಡವಳಿಕೆಗೆ ಮನಮೋಹನ್ ಸಿಂಗ್ ಮಗಳು ಬೇಸರ

  ನಗರಗಳಲ್ಲಿ ಕೋವಿಡ್ -19 ಕಾರಣಕ್ಕೆ ಎಲ್ಲಾ ಪಟಾಕಿಗಳ ಸಂಪೂರ್ಣ ನಿಷೇಧಿಸಿರುವ ಎನ್‌ಜಿಟಿಯ ನಿಲುವು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಜುಲೈನಲ್ಲಿ ವಜಾಗೊಳಿಸಿತ್ತು. ಜೊತೆಗೆ ಆಯಾ ನಗರಗಳಲ್ಲಿ ಗಾಳಿಯ ಗುಣಮಟ್ಟದ ಸೂಚ್ಯಂಕದ (AQI) ವರ್ಗವನ್ನು ಆಧರಿಸಿ ಪಟಾಕಿಗಳ ಮಾರಾಟ ಮತ್ತು ಬಳಕೆಗೆ ಅಧಿಕಾರಿಗಳು ಅವಕಾಶ ನೀಡಬಹುದು ಎಂದು ಹೇಳಿತ್ತು. ಆದರೂ ಪಟಾಕಿ ಉತ್ಪಾದನೆಗೆ ಅನುಮತಿ ನೀಡಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪಟಾಕಿ ಸಿಡಿಸುವ ಮೂಲಕ ಆಚರಿಸಲು ಬಯಸುವ ಜನರು AQI ಆಧರಿಸಿ ಅಧಿಕಾರಿಗಳ ಅನುಮತಿಯೊಂದಿಗೆ ಸಿಡಿಸಬಹುದು ಎಂದು ನ್ಯಾಯಾಲಯ ಹೇಳಿದೆ. 

  ಇದನ್ನೂ ಓದಿ: CWC Meeting: ಇಂದು ಎಐಸಿಸಿ ಅಧ್ಯಕ್ಷೀಯ ಚುನಾವಣೆಗೆ ದಿನಾಂಕ ಪ್ರಕಟ ಸಾಧ್ಯತೆ

  ಆದರೆ, ದೆಹಲಿ, ಒಡಿಶಾ, ರಾಜಸ್ಥಾನ ಮತ್ತು ಹರಿಯಾಣ ಸರ್ಕಾರಗಳು ಪಟಾಕಿ ಸಿಡಿಸುವುದನ್ನೇ ಸಂಪೂರ್ಣವಾಗಿ ನಿಷೇಧಿಸಿರುವುದು ದೀಪಾವಳಿ ಹಿನ್ನೆಲೆಯಲ್ಲಿ ಹಲವು ಹಿಂದೂ ಪರ ಸಂಘಟನೆಗಳ ಕಣ್ಣನ್ನೂ ಕೆಂಪಾಗಿಸಿದೆ ಎನ್ನಲಾಗಿದೆ. ಹೀಗಾಗಿ ಈ ನಾಲ್ಕು ರಾಜ್ಯಗಳು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.
  Published by:MAshok Kumar
  First published: