ಬಿಪಿನ್ ರಾವತ್ ಮತ್ತು ಇತರರಿಗೆ ಮೊದಲು ತಮಿಳುನಾಡಿನಲ್ಲಿ ಗೌರವ ನಮನ

ಇದಕ್ಕೂ ಮುನ್ನ ಬಿಪಿನ್​ ರಾವತ್​ ಮತ್ತು ಇತರರಿಗೆ ಮೊದಲು ತಮಿಳುನಾಡಿನಲ್ಲಿ ಗೌರವ ನಮನ ಸಲ್ಲಿಸಲಾಗುತ್ತೆ. ಬೆಳಗ್ಗೆ ಬೆಳಿಗ್ಗೆ 10ರಿಂದ 11ರವೇಳೆಗೆ ವೆಲ್ಲಿಂಗ್ಟನ್ ಕ್ಯಾಂಪ್ ನಲ್ಲಿ ಗೌರವ ನಮನ ಸಲ್ಲಿಸಲಾಗುತ್ತೆ.

ಜನರಲ್​ ಬಿಪಿನ್ ರಾವತ್​

ಜನರಲ್​ ಬಿಪಿನ್ ರಾವತ್​

  • Share this:
ಯಾರೂ ಉಹಿಸಲಾಗದಂತ ಅತ್ಯಂತ ಕೆಟ್ಟ ದುರ್ವಿಧಿಯಲ್ಲಿ ದೇಶ ರಕ್ಷಣಾ ಮುಖ್ಯಸ್ಥ ಬಿಪಿನ್​ ರಾವತ್ ಸೇರಿದಂತೆ 12 ಮಂದಿಯನ್ನು ಕಳೆದುಕೊಂಡಿದೆ. ತಮಿಳುನಾಡಿನ ಕುನೂರ್​​ನಲ್ಲಿ ನಿನ್ನೆ ಮಧ್ಯಾಹ್ನ ನಡೆದ ಸೇನಾ ಹೆಲಿಕಾಪ್ಟರ್​ ದುರಂತದಲ್ಲಿ ಸೇನಾ ಸಿಬ್ಬಂದಿ ಮುಖ್ಯಸ್ಥ (CDS) ಬಿಪಿನ್​ ರಾವತ್ (Bipin Rawat) ಮೃತಪಟ್ಟಿದ್ದಾರೆ. ಒಬ್ಬರು ಮಾತ್ರ ಪವಾಡಸದೃಶ ರೀತಿಯಲ್ಲಿ ಗಂಭೀರವಾಗಿ ಗಾಯಗೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ.  ಚಾಪರ್ ಅಪಘಾತದಲ್ಲಿ ದುರ್ಮರಣವನ್ನಪ್ಪಿರುವ ಬಿಪಿನ್ ರಾವತ್ ಅಂತ್ಯಕ್ರಿಯೆ ನಾಳೆ ದೆಹಲಿ ಕಂಟೋನ್ಮೆಂಟ್‌ ಪ್ರದೇಶದಲ್ಲಿ ನಡೆಯಲಿದೆ. ಇಂದು ಸಂಜೆ ಬಿಪಿನ್‌ ರಾವತ್ ಹಾಗೂ ಪತ್ನಿ ಮಧುಲಿಕಾ ಪಾರ್ಥಿವ ಶರೀರವನ್ನು ದೆಹಲಿಗೆ ಶಿಫ್ಟ್‌ ಮಾಡಲಿದ್ದಾರೆ.ನಾಳೆ ಬೆಳಗ್ಗೆ 11ರಿಂದ ಮಧ್ಯಾಹ್ನ 2ರವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಿಡಿಎಸ್‌ ಬಿಪಿನ್‌ ರಾವತ್‌, ಪತ್ನಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗುವ ಬಗ್ಗೆ ಮಾಹಿತಿ ನೀಡಲಾಗಿದೆ.

ಇದಕ್ಕೂ ಮುನ್ನ ಬಿಪಿನ್​ ರಾವತ್​ ಮತ್ತು ಇತರರಿಗೆ ಮೊದಲು ತಮಿಳುನಾಡಿನಲ್ಲಿ ಗೌರವ ನಮನ ಸಲ್ಲಿಸಲಾಗುತ್ತೆ. ಬೆಳಗ್ಗೆ ಬೆಳಿಗ್ಗೆ 10ರಿಂದ 11ರವೇಳೆಗೆ ವೆಲ್ಲಿಂಗ್ಟನ್ ಕ್ಯಾಂಪ್ ನಲ್ಲಿ ಗೌರವ ನಮನ ಸಲ್ಲಿಸಲಾಗುತ್ತೆ. ಇದಾದ ಬಳಿಕ ಪಾರ್ಥಿವ ಶರೀರಗಳನ್ನು ದೆಹಲಿಗೆ ರವಾನೆ ಮಾಡಲಾಗುತ್ತೆ ಸಂತ ತಮಿಳುನಾಡು ಸರ್ಕಾರ ತಿಳಿಸಿದೆ. ತಮಿಳುನಾಡು ಸರ್ಕಾರದ ಪರವಾಗಿ ಸಿಎಂ ಸ್ಟಾಲಿನ್ ಅವರಿಂದ ಗೌರವ ನಮನ ಸಲ್ಲಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಸೂಲೂರು ವಾಯುನೆಲೆಯಿಂದ ಪಾರ್ಥೀವ ಶರೀರ ದೆಹಲಿಗೆ ರವಾನೆಯಾಗಲಿದೆ.  ಸಂಜೆ 4 ಗಂಟೆ ವೇಳೆಗೆ ದೆಹಲಿ ಪಾರ್ಥೀವ ಶರೀರಗಳು ತಲುಪಲಿದೆ.  ಬಳಿಕ ಕುಟುಂಬದವರಿಗೆ ಪಾರ್ಥೀವ ಶರೀರಗಳ ಹಸ್ತಾಂತರ ಮಾಡಲಾಗುತ್ತೆ.

ನಾಳೆ ಸಂಜೆ ಅಂತ್ಯಕ್ರಿಯೆ

ಬಿಪಿನ್​ ರಾವತ್​ ಅವರನ್ನು ಮೆರವಣಿಗೆ ಮೂಲಕ ಕರೆದುಕೊಂಡು ಹೋಗಿ ಅಂತ್ಯಕ್ರಿಯೆ ನೇರವೇರಿಸಲಾಗುತ್ತೆ. ಬಿಪಿನ್‌ ನಿವಾಸ ಕಾಮರಾಜ್‌ ಮಾರ್ಗದಿಂದ ಮೆರವಣಿಗೆ ಶುರು ಆಗಲಿದೆ. ಬ್ರಾರ್ ಸ್ಕ್ವೇರ್ ಸ್ಮಶಾನದವರೆಗೆ ಮೆರವಣಿಗೆ ನಡೆಯಲಿದೆ. ನಾಳೆ ಸಂಜೆ ಬ್ರಾರ್ ಸ್ಕ್ವೇರ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ದೆಹಲಿಯ ಕಂಟೋನ್ಮೆಂಟ್‌ ಪ್ರದೇಶದಲ್ಲಿರುವ ಚಿತಾಗಾರದಲ್ಲಿ ಅಂತಿಮ ವಿಧಿವಿಧಾನ ನಡೆಯಲಿದೆ.ಹೆಲಿಕಾಪ್ಟರ್​ ದುರಂತದ ಬಗ್ಗೆ ಸಂಸತ್​ನಲ್ಲಿ ಇಂದು ವಿವರಣೆ ನೀಡಲಾಗುವ ಬಗ್ಗೆ ತಿಳಿಸಲಾಗಿದೆ. ಲೋಕಸಭೆ, ರಾಜ್ಯಸಭೆಯಲ್ಲಿ ವಿವರಣೆ ನೀಡಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್​ ಇಂದು ವಿವರಣೆ ನೀಡಲಿದ್ದಾರೆ.

ಇದನ್ನು ಓದಿ : ಹೆಲಿಕಾಪ್ಟರ್​ ಪತನದಲ್ಲಿ ಸಿಡಿಎಸ್​ ಬಿಪಿನ್​ ರಾವತ್​ ಸಾವು

ಹೆಲಿಕಾಪ್ಟರ್ ಪತನವಾದ ಸ್ಥಳಕ್ಕೆ ವಿ.ಆರ್. ಚೌಧರಿ

ಹೆಲಿಕಾಪ್ಟರ್ ಪತನವಾದ ಸ್ಥಳಕ್ಕೆ ವಾಯು ಸೇನಾ ಮುಖ್ಯಸ್ಥ  ವಿ.ಆರ್. ಚೌಧರಿ ಭೇಟಿ ನೀಡಿದ್ದಾರೆ. ಘಟನೆಯ ಬಗ್ಗೆ ವಿ.ಆರ್​​.ಚೌಧರಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಹೆಲಿಕಾಪ್ಟರ್​ ಪತನ ಹೇಗಾಯ್ತು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.  ಹೆಲಿಕಾಪ್ಟರ್‌ ದುರಂತದಲ್ಲಿ ಸಿಡಿಎಸ್​ ಬಿಪಿನ್​ ರಾವತ್ ನಿಧನ ಹಿನ್ನೆಲೆಯಲ್ಲಿ ಉತ್ತರಾಖಂಡ್‌ನಲ್ಲಿ ಮೂರು ದಿನಗಳ ಕಾಲ ಶೋಕಾಚಾರಣೆ ಘೋಷಣೆ ಮಾಡಲಾಗಿದೆ. ಉತ್ತರಾಖಂಡ್​ನ ಪೌರಿಯಲ್ಲಿ ಬಿಪಿನ್ ರಾವತ್ ಜನಿಸಿದ್ದರು. ಹೀಗಾಗಿ ಉತ್ತರಾಖಂಡ್​ನಲ್ಲಿ ಮೂರು ದಿನಗಳ ಶೋಕಾಚರಣೆ ಇರಲಿದೆ.

ಇದನ್ನು ಓದಿ: Gen Bipin Rawat ಬಗ್ಗೆ ಮಡಿಕೇರಿಯ ಲೆಫ್ಟಿನೆಂಟ್ ಜನರಲ್ ಪ್ರಸಾದ್​ ಭಾವುಕ ಮಾತುಗಳು..!

ಸೇನಾ ಕುಟುಂಬದಿಂದ ಬಂದವರು ರಾವತ್​​

ಜನರಲ್ ಬಿಪಿನ್ ರಾವತ್ ಶಿಮ್ಲಾದ ಸೇಂಟ್ ಎಡ್ವರ್ಡ್ ಸ್ಕೂಲ್ ಮತ್ತು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿ. ಅವರ ತಂದೆಯ ಆಜ್ಞೆಯಂತೆ ಬಿಪಿನ್​ ರಾವತ್​ 16 ಡಿಸೆಂಬರ್ 1978 ರಂದು ಪದಾತಿದಳದ ಇಲವಂತ್​ ಗೂರ್ಕ ರೈಫಲ್ಸ್‌ನ ಐದನೇ ಬೆಟಾಲಿಯನ್‌ಗೆ ನಿಯೋಜಿಸಲ್ಪಟ್ಟರು.ಡೆಹ್ರಾಡೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಯಿಂದ ಪದವಿ ಪಡೆದಾಗ, ಅವರು ಗೌರವಾನ್ವಿತ 'ಸ್ವರ್ಡ್ ಆಫ್ ಆನರ್' ಪ್ರಶಸ್ತಿಯನ್ನು ಪಡೆದರು. ಜನರಲ್ ಯುದ್ಧ ಮತ್ತು ಸಂಘರ್ಷದ ಸಂದರ್ಭಗಳಲ್ಲಿ ದೀರ್ಘ ಸೇವಾ ಅನುಭವ ಅವರಿಗೆ ಇದೆ.
Published by:Vasudeva M
First published: