HOME » NEWS » National-international » TAMILNADU ASSEMBLY RESULT K ANNAMALAI TRAILING IN ARAVAKURICHI SESR

K Annamalai: ಗೆಲುವಿಗೆ ಹರಸಾಹಸ ನಡೆಸುತ್ತಿರುವ ಅಣ್ಣಾಮಲೈ ; ಕರ್ನಾಟಕದ ಜನಪ್ರಿಯತೆ ಹಿಡಿಯಲಿಲ್ಲ ಕೈ

ಅರವಕುರಿಚ್ಚಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಅವರು ತಮ್ಮ ಡಿಎಂಕೆ ಪ್ರತಿಸ್ಪರ್ಧಿ ಎದುರು ಹಿನ್ನಡೆ ಅನುಭವಿಸಿದ್ದಾರೆ

news18-kannada
Updated:May 2, 2021, 3:05 PM IST
K Annamalai: ಗೆಲುವಿಗೆ ಹರಸಾಹಸ ನಡೆಸುತ್ತಿರುವ ಅಣ್ಣಾಮಲೈ ; ಕರ್ನಾಟಕದ ಜನಪ್ರಿಯತೆ ಹಿಡಿಯಲಿಲ್ಲ ಕೈ
ಅರವಕುರಿಚ್ಚಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಅವರು ತಮ್ಮ ಡಿಎಂಕೆ ಪ್ರತಿಸ್ಪರ್ಧಿ ಎದುರು ಹಿನ್ನಡೆ ಅನುಭವಿಸಿದ್ದಾರೆ
  • Share this:
 ಸಿಂಗಂ ಎಂದೇ ಕನ್ನಡಿಗರ ಮನಗೆದಿದ್ದವರು ಮಾಜಿ ಐಪಿಎಸ್​ ಅಧಿಕಾರಿ ಕೆ ಅಣ್ಣಾಮಲೈ. ಖಡಕ್​ ಪೊಲೀಸ್​ ಅಧಿಕಾರಿಯಾಗಿ ಹೆಸರು ಮಾಡಿದ್ದ ಅವರು, ಉತ್ತಂಗದ ಸ್ಥಾನದಲ್ಲಿದ್ದಾಗ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯದಲ್ಲಿ ಅದೃಷ್ಟಕ್ಕೆ ಇಳಿದಿದ್ದರು. ಆದರೆ, ಕರ್ನಾಟಕದ ಅವರ ಜನಪ್ರಿಯತೆಯ ಮೋಡಿ ಸ್ವತಃ ನೆಲದಲ್ಲಿ ಕೆಲಸ ಮಾಡಿಲ್ಲ. ಅರವಕುರಿಚ್ಚಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಅವರು ತಮ್ಮ ಡಿಎಂಕೆ ಪ್ರತಿಸ್ಪರ್ಧಿ ಎದುರು ಹಿನ್ನಡೆ ಅನುಭವಿಸಿದ್ದಾರೆ. ಡಿಎಂಕೆಯ ಎನ್​ ಆರ್​ ಇಳಂಗೊ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅಣ್ಣಾಮಲೈಗಿಂತ 200 ಮತಗಳ ಅಂತರದಲ್ಲಿ ಮುಂದಿದ್ದಾರೆ. ಮಧ್ಯಾಹ್ನ 12ಗಂಟೆ ಹೊತ್ತಿಗೆ ಅಣ್ಣಾಮಲೈ 25,17 ಮತ ಪಡೆದು ಕೊಂಚ ಹಿನ್ನಡೆ ಕಾಯ್ದುಕೊಂಡರೆ, ಇಳಂಗೊ 2717 ಮತ ಪಡೆದಿದ್ದಾರೆ.

ಐಪಿಎಸ್​ ಹುದ್ದೆ ತೊರೆದ ಬಳಿಕ ಕೃಷಿ ಮೂಲಕ ಹಲವು ಯುವ ಜನತೆಯನ್ನು ಅವರು ಸೆಳೆದಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಯೂಥ್​ ಐಕಾನ್​ ಆಗುವ ಮೂಲಕ ಅನೇಕ ಯುವಜನತೆಗೆ ಸ್ಪೂರ್ತಿಯಾಗಿದ್ದರು. ತಮ್ಮ ಹುಟ್ಟೂರಾದ ಅರವುಕುರಿಚಿಯಲ್ಲಿ ನಾವೇ ನಾಯಕರು ಎಂಬ ಸಾಮಾಜಿಕ ಚಳುವಳಿ ಮೂಲಕ ಗಮನಸೆಳೆದಿದ್ದರು.

ಕೆ ಅಣ್ಣಾಮಲೈ ಎದುರಾಳಿ ಡಿಎಂಕೆ ಅಭ್ಯರ್ಥಿ ಇಳಂಗೊ ಪ್ರಬಲ ಅಭ್ಯರ್ಥಿಯಾಗಿದ್ದಾರೆ. ಅವರಷ್ಟೇ ಅಲ್ಲದೇ ಕಣದಲ್ಲಿ ಮಕ್ಕಳ ನಿಧಿ ಮಯ್ಯಮ್​ ನಿಂದ ಮೊಹಮ್ಮದ್​ ಹನ್ಸಿಫ್​ ಶಹೀಲ್​, ಎಎಂಎಂಎಕೆ ಯಿಂದ ಪಿಎಸ್​ನ್​ ತಂಗವೇಲ್​ ಸೇರಿದಂತೆ ಇತರೆ ಪಕ್ಷದ ಪ್ರಬಲ ಅಭ್ಯರ್ಥಿಗಳು ಕೂಡ ಕಣದಲ್ಲಿದ್ದಾರೆ. ಕ್ಷೇತ್ರದ ಮುಸ್ಲಿಂರು ಮತ್ತು ಪರಿಶಿಷ್ಟ ಜಾತಿಗಳ ಮತಗಳು ಡಿಎಂಕೆ ಪಾಲಾಗುವ ಸಾಧ್ಯತೆ ಎಂಬ ಲೆಕ್ಕಾಚಾರ ಇದೆ.

ಚುನಾವಣಾ ಪ್ರಚಾರದಲ್ಲಿಯೂ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಅಣ್ಣಾಮಲೈ ಕ್ಷೇತ್ರದ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.
ಕಣಕ್ಕೆ ಇಳಿಯುವ ಮೊದಲೇ ಅಣ್ಣಾಮಲೈ ಕ್ಷೇತ್ರದ ಕುರಿತು ಸಾಕಷ್ಟು ಆಳ ಅಧ್ಯಯನ ನಡೆಸಿದ್ದರು. ಕ್ಷೇತ್ರದ ಸ್ಥಳೀಯ ಜನರ ಸೆಳೆಯಲು ಅಣ್ಣಾಮಲೈ ಮ್ಯಾರಥಾನ್​, ರಂಗೋಲಿ ಸ್ಪರ್ಧೆ ಸೇರಿದಂತೆ ಹಲವು ಜನಪ್ರಿಯ ಕಾರ್ಯಗಳನ್ನು ಆಯೋಜಿಸುವ ಮೂಲಕ ಕ್ಷೇತ್ರದ ಜನರಿಗೆ ಸಾಕಷ್ಟು ಹತ್ತಿರವಾಗುವ ಪ್ರಯತ್ನ ನಡೆಸಿದ್ದರು. ಸೈಕಲ್​ ಸವಾರಿ ಮೂಲಕ ಕ್ಷೇತ್ರದ ಯುವಕರನ್ನು ಹುರಿದುಂಬಿಸಿದ್ದರು.

ಇದನ್ನು ಓದಿ: ಪಶ್ಚಿಮ ಬಂಗಾಳದಲ್ಲಿ TMC, ತಮಿಳುನಾಡಲ್ಲಿ DMKಗೆ ಮುನ್ನಡೆ; ಮುಗ್ಗರಿಸುತ್ತಾ ಬಿಜೆಪಿ?

ಐಐಟಿ ಕಾನ್​ಪುರ್​ನಲ್ಲಿ ಓದಿದ ಅವರು ಕರ್ನಾಟಕ ಐಪಿಎಸ್ ಕೇಡರ್ ಆಫೀಸರ್ ಆಗಿದ್ದ ಅವರು ಚಿಕ್ಕಮಗಳೂರು, ಉಡುಪಿ ಜಿಲ್ಲೆಯಲ್ಲಿ ಎಸ್​ಪಿಯಾಗಿ ಕಾರ್ಯ ನಿರ್ವಹಿಸಿದ್ದರು ಖಡಕ್ ಅಧಿಕಾರಿ ಎಂದೇ ಖ್ಯಾತರಾಗಿದ್ದ ಅವರನ್ನು ಕರ್ನಾಟಕ ಸಿಂಗಂ  ಎಂದೇ ಗುರುತಿಸಲಾಗಿತ್ತು. ಇದಿಂಗೂ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯತೆ ಹೊಂದಿರುವ ಅವರು ಏಕಾಏಕಿ ತಮ್ಮ ಪೊಲೀಸ್​ ಸೇವೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಧುಮುಕಿದ್ದರು.  ಕ್ಷೇತ್ರದ ಯುವಕರಿಗೆ ಸ್ಪೂರ್ತಿ ಸೆಲೆಯಾಗಿರುವ ಅಣ್ಣಾಮಲೈ ಈಗಾಗಲೇ ತಾವು ಸೋತರು ರಾಜಕೀಯದಿಂದ ವಿಮುಖರಾಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇದು ತಮ್ಮ ಮೊದಲ ಚುನಾವಣೆಯಾಗಿದ್ದು, ಸೋಲು ಯಾವುದೇ ರೀತಿ ತಮ್ಮನ್ನು ಕಂಗೆಡಿಸುವುದಿಲ್ಲ. ರಾಜಕೀಯದಲ್ಲಿ ಹೊಸ ಬದಲಾವಣೆ ತರುವ ಉದ್ದೇಶದಿಂದ ನಾನು ಇಲ್ಲಿಗೆ ಬಂದಿದ್ದೇನೆ. ಜನರಿಗೆ ನನ್ನ ಸೇವೆ ನಿರಂತರವಾಗಿದ್ದು, ತಮಿಳುನಾಡು ರಾಜಕೀಯದಲ್ಲಿ ಹೊಸ ಬದಲಾವಣೆ ತರುತ್ತೇನೆ ಎಂಬ ವಿಶ್ವಾಸವನ್ನು ಅವರು ಹೊಂದಿದ್ದಾರೆ.ಇನ್ನು ಹಲವು ಸುತ್ತುಗಳು ಏಣಿಕೆ ಬಾಕಿ ಇದೆ. ಸದ್ಯ ಕೇವಲ 200 ಅಂತರದ ಮತಗಳ ಹಿನ್ನಡೆ ಸಾಧಿಸಿರುವ ಅಣ್ಣಾಮಲೈ ಮುಂದಿನ ಸುತ್ತಿನ ಮತ ಏಣಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡರು ಅಚ್ಚರಿ ಇಲ್ಲ ಎನ್ನಲಾಗಿದೆ.
Published by: Seema R
First published: May 2, 2021, 2:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories